A A A A A

Анђели и ђаволи: [Анђели чувари]


1 Коринћанима ೪:೯
Јер мислим да Бог нас апостоле најстражње постави, као оне који су на смрт осуђени; јер бисмо гледање и свету и анђелима и људима.

1 Јованова ೪:೧
ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ.

Дела Aпостолска ೮:೨೬
ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.

Дела Aпостолска ೧೨:೧೫
ಆ ವಿಶ್ವಾಸಿಗಳು ಆಕೆಗೆ, “ನಿನಗೆ ಹುಚ್ಚು ಹಿಡಿದಿದೆ!” ಎಂದರು. ಆದರೆ ಅವಳು ತಾನು ಹೇಳುತ್ತಿರುವುದು ನಿಜವೆಂದು ಒತ್ತಿಹೇಳಿದಳು. ಆದ್ದರಿಂದ ಅವರು, “ಅವನು ಪೇತ್ರನ ದೂತನಿರಬೇಕು” ಎಂದು ಹೇಳಿದರು.

Колошанима ೨:೧೮
ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ.

Данило ೯:೨೧
ನಾನು ಪ್ರಾರ್ಥಿಸುತ್ತಿದ್ದಾಗ ಗಬ್ರಿಯೇಲನೆಂಬ ಪುರುಷನು ನನ್ನಲ್ಲಿಗೆ ಬಂದನು. ಗಬ್ರಿಯೇಲನನ್ನೇ ನಾನು ದರ್ಶನದಲ್ಲಿ ಕಂಡಿದ್ದೆನು. ಗಬ್ರಿಯೇಲನು ವೇಗವಾಗಿ ಹಾರುತ್ತಾ ಸಾಯಂಕಾಲದ ನೈವೇದ್ಯದ ಸಮಯದಲ್ಲಿ ನನ್ನ ಬಳಿಗೆ ಬಂದನು.

Осија ೧೦:೧೩
ಆದರೆ ನೀನು ದುಷ್ಟತನವನ್ನು ಬಿತ್ತಿ ಸಂಕಟವೆಂಬ ಬೆಳೆಯನ್ನು ಕೊಯ್ದಿರುವೆ. ನಿನ್ನ ಸುಳ್ಳಿನ ಪ್ರತಿಫಲವನ್ನು ತಿಂದಿರುವೆ. ಯಾಕೆಂದರೆ ನೀನು ನಿನ್ನ ಸಾಮರ್ಥ್ಯ ಮತ್ತು ನಿನ್ನ ಸೈನ್ಯದ ಮೇಲೆ ಭರವಸವಿಟ್ಟಿರುವೆ.

Осија ೧೨:೧
ಎಫ್ರಾಯೀಮ್ ಸಮಯವನ್ನು ಹಾಳು ಮಾಡುತ್ತಿದ್ದಾನೆ. ಇಸ್ರೇಲು ದಿನವಿಡೀ ಗಾಳಿಯನ್ನು ಹಿಮ್ಮೆಟ್ಟುತ್ತಿದ್ದಾನೆ. ಜನರು ಹೆಚ್ಚೆಚ್ಚಾಗಿ ಸುಳ್ಳು ಹೇಳುತ್ತಿದ್ದಾರೆ; ಹೆಚ್ಚೆಚ್ಚಾಗಿ ಕದಿಯುತ್ತಾರೆ. ಅಶ್ಶೂರ್ಯದವರೊಂದಿಗೆ ಒಪ್ಪಂದ ಮಾಡಿರುತ್ತಾರೆ. ತಮ್ಮ ಆಲೀವ್ ಎಣ್ಣೆಯನ್ನು ಈಜಿಪ್ಟಿಗೆ ಕೊಂಡೊಯ್ಯುತ್ತಿದ್ದಾರೆ.

Јеврејима ೧:೧೪
ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.

Јеврејима ೧೩:೨
ಅತಿಥಿಸತ್ಕಾರ ಮಾಡಿರಿ. ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.

Јудина ೧:೬-೯
[೬] ದೇವದೂತರು ಅಧಿಕಾರವನ್ನು ಹೊಂದಿದ್ದರೂ ಅದನ್ನು ಉಳಿಸಿಕೊಳ್ಳಲಾರದೆ ಸ್ವಂತ ವಾಸಸ್ಥಾನವನ್ನು ಬಿಟ್ಟುಹೋದದ್ದನ್ನು ನೆನಸಿಕೊಳ್ಳಿರಿ. ಆದ್ದರಿಂದ ಪ್ರಭುವು ಈ ದೇವದೂತರನ್ನು ಅಂಧಕಾರದಲ್ಲಿಟ್ಟನು. ಅವರನ್ನು ಶಾಶ್ವತವಾದ ಬೇಡಿಗಳಿಂದ ಬಂಧಿಸಲಾಯಿತು. ಮಹಾದಿನದಂದು ಅವರಿಗೆ ತೀರ್ಪು ನೀಡುವುದಕ್ಕಾಗಿ ಆತನು ಅವರನ್ನು ಅಲ್ಲಿಟ್ಟಿದ್ದಾನೆ.[೭] ಸೊದೋಮ್ ಮತ್ತು ಗೊಮೋರ ನಗರಗಳನ್ನೂ ಅವುಗಳ ಸುತ್ತಲಿನ ಪಟ್ಟಣಗಳನ್ನೂ ನೆನಪು ಮಾಡಿಕೊಳ್ಳಿರಿ. ಅವುಗಳೂ ಆ ದೇವದೂತರಂತಾದವು. ಆ ಪಟ್ಟಣಗಳಲ್ಲಿ ಲೈಂಗಿಕ ಪಾಪಗಳು ಮತ್ತು ಕೆಟ್ಟಕಾರ್ಯಗಳು ತುಂಬಿಕೊಂಡಿದ್ದವು. ಅವರು ನಿತ್ಯವಾದ ಬೆಂಕಿಯ ದಂಡನೆಯಿಂದ ಸಂಕಟಪಡುವರು. ಅವರಿಗೆ ನೀಡಿದ ದಂಡನೆಯು ನಮಗೊಂದು ದೃಷ್ಟಾಂತವಾಗಿದೆ.[೮] ನಿಮ್ಮ ಸಭೆಯಲ್ಲಿ ಪ್ರವೇಶಿಸಿರುವ ಜನರಿಗೂ ಇದೇ ರೀತಿಯಾಗುವುದು. ಅವರ ಕನಸುಗಳೇ ಅವರಿಗೆ ಮಾರ್ಗದರ್ಶಿಯಾಗಿವೆ. ಅವರು ಪಾಪಗಳಿಂದಲೇ ತಮ್ನನ್ನು ಮಲಿನ ಮಾಡಿಕೊಳ್ಳುತ್ತಾರೆ. ಅವರು ಪ್ರಭುವಿನ ಅಧಿಕಾರವನ್ನು ತಿರಸ್ಕರಿಸುತ್ತಾರೆ; ಪ್ರಭಾವದಿಂದ ಕೂಡಿದ ದೇವದೂತರ ವಿರುದ್ಧ ಕೆಟ್ಟದ್ದನ್ನು ಹೇಳುತ್ತಾರೆ.[೯] ಪ್ರಧಾನ ದೇವದೂತನಾದ ಮಿಕಾಯೇಲನೂ ಸಹ ಹೀಗೆ ಮಾಡಲಿಲ್ಲ. ಮೋಶೆಯ ದೇಹವು ಯಾರಿಗೆ ಸೇರಬೇಕೆಂಬುದರ ಬಗ್ಗೆ ಮಿಕಾಯೇಲನು ಸೈತಾನನ ಬಗ್ಗೆ ದೂಷಣೆ ಮಾಡಲು ಧೈರ್ಯಗೊಳ್ಳದೆ, “ಪ್ರಭುವು ನಿನ್ನನ್ನು ದಂಡಿಸುತ್ತಾನೆ” ಎಂದು ಹೇಳಿದನು.

Лука ೧೬:೨೨
“ಸ್ವಲ್ಪ ಸಮಯದ ನಂತರ ಲಾಜರನು ಸತ್ತನು. ದೇವದೂತರು ಲಾಜರನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಒಂದು ದಿನ ಐಶ್ವರ್ಯವಂತನೂ ಸತ್ತನು. ಅವನಿಗೆ ಸಮಾಧಿ ಮಾಡಲಾಯಿತು.

Матеја ೧೮:೧೦
“ಎಚ್ಚರವಾಗಿರಿ! ಈ ಚಿಕ್ಕ ಮಕ್ಕಳಿಗೆ ಬೆಲೆಯೇ ಇಲ್ಲವೆಂದು ನೆನೆಸಬೇಡಿ. ಇವರಿಗಾಗಿ ಪರಲೋಕದಲ್ಲಿ ದೂತರನ್ನು ನೇಮಿಸಲಾಗಿದೆ. ಆ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಸಮ್ಮುಖದಲ್ಲಿ ಇರುತ್ತಾರೆ. 

Псалми ೩೪:೭
ಯೆಹೋವನ ಭಕ್ತರ ಸುತ್ತಲೂ ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.

Псалми ೯೧:೧೧
ನೀನು ಹೋದಲ್ಲೆಲ್ಲಾ ನಿನ್ನನ್ನು ಕಾಯಲು ಆತನು ತನ್ನ ದೂತರಿಗೆ ಆಜ್ಞಾಪಿಸುವನು.

Псалми ೧೦೩:೨೦
ದೇವದೂತರೇ, ಆತನ ಮಾತಿಗೆ ಕಿವಿಗೊಡುವವರೇ, ಆತನ ಆಜ್ಞೆಗಳಿಗೆ ವಿಧೇಯರಾಗುವ ಬಲಿಷ್ಠ ಸೈನಿಕರೇ, ಯೆಹೋವನನ್ನು ಕೊಂಡಾಡಿರಿ.

Откривење ೫:೧೧
ನಂತರ ನಾನು ನೋಡಿದಾಗ, ಅನೇಕ ದೇವದೂತರ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು.

Откривење ೧೯:೧೦
ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.

Захарија ೫:೯
ಆ ಬಳಿಕ ನಾನು ಮೇಲಕ್ಕೆ ನೋಡಿದಾಗ ಕೊಕ್ಕರೆಯಂತೆ ರೆಕ್ಕೆಗಳಿರುವ ಎರಡು ಸ್ತ್ರೀಯರನ್ನು ಕಂಡೆನು. ಅವರು ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು.

Kannada Bible 1934
Public Domain: 1934