A A A A A

ಗಣಿತ ಚಿಹ್ನೆಗಳು: [ಸಂಖ್ಯೆ ೩]


ತಿಮೊಥೇಯನಿಗ ೧ ೨:೫
ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;

ತಿಮೊಥೇಯನಿಗ ೨ ೩:೧೬
ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

ಪ್ರೇಷಿತರ ೧೭:೨೮
ಆತನಲ್ಲಿಯೇ ನಾವು ಜೀವಿಸುತ್ತೇವೆ ಚಲಿಸುತ್ತೇವೆ ಇರುತ್ತೇವೆ. ನಿಮ್ಮ ಸ್ವಂತ ಕವಿಗಳಲ್ಲಿಯೂ ಕೆಲವರು--ನಾವೂ ಆತನ ಸಂತಾನದವರೇ ಎಂಬ ದಾಗಿ ಹೇಳಿದ್ದಾರೆ.

ಕೊಲೊಸ್ಸೆಯರಿಗೆ ೨:೯
ಕ್ರಿಸ್ತನಲ್ಲಿಯೇ ದೈವತ್ವ ಸರ್ವಸಂಪೂರ್ಣತೆಯು ಶಾರೀ ರಕವಾಗಿ ವಾಸಮಾಡುತ್ತದೆ.

ವಿಮೋಚನಾಕಾಂಡ ೩:೧೪
ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕು ಅಂದನು.

ಆದಿಕಾಂಡ ೧:೨೬
ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.

ಹಿಬ್ರಿಯರಿಗೆ ೪:೧೨
ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.

ಯೊವಾನ್ನನು ೪:೨೪
ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.

ಯಾಜಕಕಾಂಡ ೧೯:೨೮
ಸತ್ತವರಿ ಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು, ನಿಮ್ಮ ಮೇಲೆ ಯಾವ ಚಿನ್ಹೆಗಳನ್ನೂ ಮುದ್ರಿಸಿಕೊಳ್ಳ ಬಾರದು; ನಾನೇ ಕರ್ತನು.

ಮತ್ತಾಯನು ೧೨:೪೦
ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.

ಪ್ರಕಟನೆ ೧:೪
ಯೋಹಾನನು ಆಸ್ಯದಲ್ಲಿರುವ ಏಳು ಸಭೆಗ ಳಿಗೆ--ಇರುವಾತನೂ ಇದ್ದಾತನೂ ಬರುವಾತನೂ ಆಗಿರುವಾತನಿಂದಲೂ ಆತನ ಸಿಂಹಾಸನದ ಮುಂದಿ ರುವ ಏಳು ಆತ್ಮಗಳಿಂದಲೂ ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದು ಬಂದಾತನೂ ಭೂರಾಜರ ಪ್ರಭುವೂ ಆಗಿರುವ ಯೇಸು ಕ್ರಿಸ್ತ ನಿಂದ

ತೀತನಿಗೆ ೧:೧೨
ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳೂ ಹೊಟ್ಟೇಬಾಕರೂ ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.

ಕೊರಿಂಥಿಯರಿಗೆ ೧ ೧೫:೩೩
ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.

ಯೊವಾನ್ನನು ೧ ೫:೭-೯
[೭] ಪರಲೋಕದಲ್ಲಿ ಸಾಕ್ಷಿಕೊಡುವವರು ಮೂವರಿದ್ದಾರೆ; ಅವರು ಯಾರಂದರೆ ತಂದೆಯು, ವಾಕ್ಯವು ಮತ್ತು ಪರಿಶುದ್ಧಾತ್ಮನು; ಮೂವರಾಗಿರುವ ಇವರು ಒಂದಾಗಿದ್ದಾರೆ.[೮] ಆತ್ಮ ನೀರು ರಕ್ತ ಈ ಮೂವರು ಭೂಮಿಯ ಮೇಲೆ ಸಾಕ್ಷಿ ಹೇಳುತ್ತಾರೆ; ಈ ಮೂವರು ಒಂದೇಯಾಗಿ ಒಪ್ಪಿಕೊಳ್ಳುತ್ತಾರೆ.[೯] ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಯಾಕಂದರೆ ತನ್ನ ಮಗನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.

ಯೊವಾನ್ನನು ೩:೧೬-೧೮
[೧೬] ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು.[೧೭] ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು.[೧೮] ಆತನ ಮೇಲೆ ನಂಬಿಕೆ ಇಡುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬಿಕೆಯಿಡದವನಿಗೆ ಆಗಲೇ ತೀರ್ಪಾಯಿತು; ಯಾಕಂದರೆ ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.

Kannada Bible BSI 2016
Copyright © 2016 by The Bible Society of India. All rights reserved worldwide