A A A A A

ಒಳ್ಳೆಯ ಅಕ್ಷರ: [ಇಂದ್ರಿಯನಿಗ್ರಹ]


ಕೊರಿಂಥಿಯರಿಗೆ ೨ ೧೨:೨೧
ಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.

ತಿಮೊಥೇಯನಿಗ ೨ ೨:೨೨
ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.

ಪ್ರೇಷಿತರ ೧೫:೨೦
ಆದರೆ ಅವರು ವಿಗ್ರಹಗಳ ಮಲಿನತೆಯನ್ನೂ ಜಾರತ್ವವನ್ನೂ ಕುತ್ತಿಗೆ ಹಿಸುಕಿ ಕೊಂದವುಗಳನ್ನೂ ರಕ್ತವನ್ನೂ ವಿಸ ರ್ಜಿಸಬೇಕೆಂದು ನಾವು ಅವರಿಗೆ ಬರೆಯುವೆವು.

ಕೊಲೊಸ್ಸೆಯರಿಗೆ ೩:೫
ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ.

ಎಫೆಸಿಯರಿಗೆ ೫:೩
ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು.

ಗಲಾತ್ಯರಿಗೆ ೫:೧೯
ಶರೀರದ ಕೃತ್ಯಗಳು ಸ್ಪಷ್ಟವಾಗಿ ತೋರಿಬಂದಿವೆ; ಅವು ಯಾವವೆಂದರೆ--ವ್ಯಭಿಚಾರ ಜಾರತ್ವ ಅಶುದ್ಧತ್ವ ಬಂಡುತನ

ಕೊರಿಂಥಿಯರಿಗೆ ೧ ೬:೧೮-೧೯
[೧೮] ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ. ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರತಾಗಿವೆ. ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪವನ್ನು ಮಾಡುತ್ತಾನೆ.[೧೯] ಏನು? ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಆಲಯವಾಗಿದೆಯೆಂಬದು ನಿಮಗೆ ತಿಳಿಯದೋ? ನೀವು ನಿಮ್ಮ ಸ್ವಂತ ಸೊತ್ತಲ್ಲ;ನೀವು ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟವರಾಗಿದ್ದೀರಿ; ಆದದರಿಂದ ದೇವರ ಸೊತ್ತಾಗಿರುವ ನಿಮ್ಮ ದೇಹದಲ್ಲಿಯೂ ನಿಮ್ಮ ಆತ್ಮದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ.

ಕೊರಿಂಥಿಯರಿಗೆ ೧ ೭:೨
ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ.

ಕೊರಿಂಥಿಯರಿಗೆ ೧ ೧೦:೧೩
ಮನುಷ್ಯನಿಗೆ ಸಾಮಾನ್ಯ ವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ; ಆದರೆ ದೇವರು ನಂಬಿಗಸ್ತನು; ನೀವು ಸಹಿಸುವದಕ್ಕಿಂತ ಹೆಚ್ಚಿನ ಶೋಧನೆಯನ್ನು ಆತನು ನಿಮಗೆ ಬರಮಾಡುವದಿಲ್ಲ; ಆದರೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧ

ಪೇತ್ರನು ೧ ೨:೧೧
ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಹಿಬ್ರಿಯರಿಗೆ ೧೩:೪
ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.

ಯೂದನು ೧:೭
ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.

ಮತ್ತಾಯನು ೫:೮
ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.

ಜ್ಞಾನೋಕ್ತಿಗಳು ೩೧:೩೦
ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.

ರೋಮನರಿಗೆ ೧೨:೧
ಆದದರಿಂದ ಸಹೋದರರೇ, ನೀವು ನಿಮ್ಮ ದೇಹಗಳನ್ನು ಪರಿಶುದ್ಧವೂ ದೇವರಿಗೆ ಮೆಚ್ಚಿಕೆಯೂ ಆಗಿರುವ ಸಜೀವಯಜ್ಞವಾಗಿ ಸಮರ್ಪಿಸ ಬೇಕೆಂದು ದೇವರ ಕರುಣೆಯಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ನಿಮ್ಮ ಯೋಗ್ಯವಾದ ಸೇವೆ ಯಾಗಿದೆ.

ರೋಮನರಿಗೆ ೧೩:೧೩
ದುಂದೌತನ ಕುಡಿಕತನಗಳಲ್ಲಾಗಲಿ ಕಾಮವಿಲಾಸ ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೇಕಿಚ್ಚು ಗಳಲ್ಲಿಯಾಗಲಿ ಇರದೆ ಹಗಲು ಹೊತ್ತಿಗೆ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.ನೀವು ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ಥೆಸೆಲೋನಿಯರಿಗೆ ೧ ೪:೩-೪
[೩] ದೇವರ ಚಿತ್ತವೇನಂದರೆ, ನೀವು ಶುದ್ಧರಾಗಿರಬೇಕೆಂಬದೇ; ಆದದರಿಂದ ಹಾದರಕ್ಕೆ ದೂರವಾಗಿರಬೇಕು.[೪] ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಿಂದಲೂ ಘನತೆ ಯಿಂದಲೂ ತನ್ನ ದೇಹವನ್ನು ಕಾಪಾಡಿಕೊಳ್ಳಲು ತಿಳಿಯಬೇಕು.

ಗಲಾತ್ಯರಿಗೆ ೫:೧೯-೨೧
[೧೯] ಶರೀರದ ಕೃತ್ಯಗಳು ಸ್ಪಷ್ಟವಾಗಿ ತೋರಿಬಂದಿವೆ; ಅವು ಯಾವವೆಂದರೆ--ವ್ಯಭಿಚಾರ ಜಾರತ್ವ ಅಶುದ್ಧತ್ವ ಬಂಡುತನ[೨೦] ವಿಗ್ರಹಾರಾಧನೆ ಮಾಟ ಹಗೆತನ ಮತಭೇದ ಹೊಟ್ಟೇಕಿಚ್ಚು ಸಿಟ್ಟು ಜಗಳ ಒಳಸಂಚು ಭಿನ್ನಾಭಿಪ್ರಾಯಗಳು[೨೧] ಅಸೂಯೆ ಗಳು ಕೊಲೆಗಳು ಕುಡುಕತನ ದುಂದೌತನ ಈ ಮೊದಲಾದವುಗಳೇ; ಇಂಥ ಕೃತ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.

ಆದಿಕಾಂಡ ೩೯:೭-೧೦
[೭] ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು.[೮] ಆದರೆ ಅವನು ಅದಕ್ಕೆ ಒಪ್ಪದೆ ತನ್ನ ಯಜಮಾನನ ಹೆಂಡತಿಗೆ--ಇಗೋ, ನನ್ನ ಯಜಮಾನನು ತನ್ನ ಮನೆಯಲ್ಲಿರು ವದನ್ನು ತಿಳುಕೊಳ್ಳದೆ ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ.[೯] ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು.[೧೦] ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು.

Kannada Bible BSI 2016
Copyright © 2016 by The Bible Society of India. All rights reserved worldwide