A A A A A

ಚರ್ಚ್: [ಯೇಸುವಿನ ಜನನ]


ಮತ್ತಾಯನು ೧:೧೮-೨೩
[೧೮] ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು.[೧೯] ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು.[೨೦] ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.[೨೧] ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.[೨೨] ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.[೨೩] ಆ ಮಾತೇನಂದರೆ -- ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು; ಅವರು ಆತನ ಹೆಸರನ್ನು ಇಮ್ಮಾನುವೇಲ್‌ ಎಂದು ಕರೆಯುವರು ಎಂಬದೇ. ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ.

ಲೂಕನು ೨:೭-೨೧
[೭] ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಗಳಿಂದ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಆತನನ್ನು ಗೋದ ಲಿಯಲ್ಲಿ ಮಲಗಿಸಿದಳು.[೮] ಆಗ ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು.[೯] ಇಗೋ, ಕರ್ತನ ದೂತನು ಅವರ ಬಳಿಗೆ ಬಂದನು. ಆಗ ಕರ್ತನ ಮಹಿಮೆಯು ಅವರ ಸುತ್ತಮುತ್ತಲೂ ಪ್ರಕಾಶಿ ಸಿತು; ಆದದರಿಂದ ಅವರು ಬಹಳವಾಗಿ ಹೆದರಿದರು.[೧೦] ಆದರೆ ದೂತನು ಅವರಿಗೆ--ಹೆದರಬೇಡಿರಿ; ಯಾಕಂದರೆ ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ.[೧೧] ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ.[೧೨] ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು.[೧೩] ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ--[೧೪] ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.[೧೫] ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.[೧೬] ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.[೧೭] ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು.[೧೮] ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.[೧೯] ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಆಲೋಚಿಸುತ್ತಿದ್ದಳು.[೨೦] ತಮಗೆ ತಿಳಿಸಲ್ಪಟ್ಟಂತೆ ಕುರುಬರು ತಾವು ಕೇಳಿದ್ದ ಮತ್ತು ನೋಡಿದ್ದ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ ಕೊಂಡಾಡುತ್ತಾ ಹಿಂದಿರುಗಿದರು.[೨೧] ಶಿಶುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಎಂಟು ದಿನಗಳು ಕಳೆದ ಮೇಲೆ ಆತನನ್ನು ಗರ್ಭಧರಿಸು ವದಕ್ಕಿಂತ ಮುಂಚಿತವಾಗಿ ದೂತನು ಹೆಸರಿಟ್ಟಂತೆಯೇ ಆತನು ಯೇಸು ಎಂದು ಕರೆಯಲ್ಪಟ್ಟನು.

ಮತ್ತಾಯನು ೨:೧-೧೨
[೧] ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --[೨] ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು.[೩] ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು.[೪] ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು.[೫] ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ--[೬] ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು.[೭] ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು[೮] ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು.[೯] ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ, ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು.[೧೦] ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು.[೧೧] ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು.[೧೨] ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು.

ಗಲಾತ್ಯರಿಗೆ ೪:೪
ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ

ಲೂಕನು ೨:೧-೪
[೧] ಆ ದಿನಗಳಲ್ಲಿ ಆದದ್ದೇನಂದರೆ ಲೋಕವೆಲ್ಲಾ ಖಾನೇಷುಮಾರಿ ಬರೆಯಿಸಿಕೊಳ್ಳಬೇಕೆಂದು ಕೈಸರನಾದ ಔಗುಸ್ತನಿಂದ ಆಜ್ಞೆಯು ಹೊರಟಿತು.[೨] ಕುರೇನ್ಯನು ಸಿರಿಯಾಕ್ಕೆ ಅಧಿಪತಿಯಾಗಿದ್ದಾಗ ಈ ಖಾನೇಷುಮಾರಿಯು ಮೊದಲನೆಯ ಸಾರಿ ನಡೆ ಯಿತು.[೩] ಆಗ ಎಲ್ಲರೂ ಖಾನೇಷುಮಾರಿ ಬರೆಯಿಸಿ ಕೊಳ್ಳುವದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಕ್ಕೆ ಹೋದರು.[೪] (ಯೋಸೇಫನು ದಾವೀದನ ಮನೆತನ ದವನೂ ವಂಶದವನೂ ಆಗಿದ್ದದರಿಂದ) ಅವನು ಸಹ ಗಲಿಲಾಯದ ನಜರೇತೆಂಬ ಪಟ್ಟಣದಿಂದ ಯೂದಾ ಯದಲ್ಲಿ ಬೇತ್ಲೆಹೇಮ್‌ ಎಂದು ಕರೆಯಲ್ಪಟ್ಟ ದಾವೀದನ ಪಟ್ಟಣಕ್ಕೆ

ಪ್ರಕಟನೆ ೧೨:೧-೫
[೧] ಪರಲೋಕದಲ್ಲಿ ಮಹಾ ಅದ್ಭುತವು ಕಾಣಿಸಿತು; ಅಲ್ಲಿ ಸೂರ್ಯನನ್ನು ಧರಿಸಿ ಕೊಂಡಿದ್ದ ಒಬ್ಬ ಸ್ತ್ರೀಯಿದ್ದಳು; ಆಕೆಯ ಕಾಲುಗಳ ಕೆಳಗೆ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು.[೨] ಆಕೆಯು ಗರ್ಭಿಣಿಯಾಗಿದ್ದು ಪ್ರಸವವೇದನೆಯಿಂದ ಹೆರುವದಕ್ಕೆ ಸಂಕಟಪಡುತ್ತಾ ಕೂಗುತ್ತಿದ್ದಳು.[೩] ಪರಲೋಕದಲ್ಲಿ ಮತ್ತೊಂದು ಅದ್ಭುತವು ಕಾಣಿಸಿತು; ಆಗ ಇಗೋ, ಕೆಂಪಾದ ಮಹಾ ಘಟಸರ್ಪವಿತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು; ಅದರ ತಲೆಗಳ ಮೇಲೆ ಏಳು ಕಿರೀಟಗಳಿದ್ದವು.[೪] ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರ ಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಹಾಕಿತು. ಹೆರುವದಕ್ಕೆ ಸಿದ್ಧವಾಗಿದ್ದ ಆ ಸ್ತ್ರೀಯು ಹೆತ್ತಕೂಡಲೆ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟ ಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.[೫] ಆಕೆ ಜನಾಂಗಗಳನ್ನೆಲ್ಲಾ ಕಬ್ಬಿಣದ ಕೋಲಿನಿಂದ ಆಳ ಬೇಕಾಗಿದ್ದ ಒಂದು ಗಂಡು ಮಗುವನ್ನು ಹೆತ್ತಳು; ಆ ಕೂಸು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.

Kannada Bible BSI 2016
Copyright © 2016 by The Bible Society of India. All rights reserved worldwide