A A A A A

ಕೆಟ್ಟ ಅಕ್ಷರ: [ಬೆದರಿಸುವಿಕೆ]


ಯೊವಾನ್ನನು ೧ ೨:೯
ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.

ಯೊವಾನ್ನನು ೧ ೩:೧೫
ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.

ತಿಮೊಥೇಯನಿಗ ೨ ೧:೭
ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ.

ಧರ್ಮೋಪದೇಷಕಾಂಡ ೩೧:೬
ಬಲವಾಗಿರ್ರಿ; ಧೈರ್ಯವಾಗಿರ್ರಿ; ಭಯಪಡಬೇಡಿರಿ; ಅವರಿಗೆ ಹೆದರಬೇಡಿರಿ; ನಿನ್ನ ದೇವರಾದ ಕರ್ತನು ತಾನೇ ನಿನ್ನ ಸಂಗಡ ಹೋಗುತ್ತಾನೆ; ಆತನು ನಿನ್ನನ್ನು ಬಿಡುವದಿಲ್ಲ, ವಿಸರ್ಜಿಸುವದೂ ಇಲ್ಲ ಎಂದು ಹೇಳಿದನು.

ಎಫೆಸಿಯರಿಗೆ ೪:೨೯
ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.

ಎಫೆಸಿಯರಿಗೆ ೬:೧೨
ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ.

ಯಾಜಕಕಾಂಡ ೧೯:೧೮
ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು.

ಮತ್ತಾಯನು ೫:೧೧
ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು.

ಜ್ಞಾನೋಕ್ತಿಗಳು ೧೭:೯
ದೋಷ ವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇ ಕಿಸುತ್ತಾನೆ.

ಜ್ಞಾನೋಕ್ತಿಗಳು ೨೨:೧೦
ಪರಿಹಾಸ್ಯ ಮಾಡುವವ ನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವದು; ಹೌದು, ವಿವಾದವೂ ನಿಂದೆಯೂ ನಿಂತುಹೋಗು ವವು.

ಜ್ಞಾನೋಕ್ತಿಗಳು ೨೪:೧೬
ನೀತಿ ವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡಿಗೆ ಬೀಳುವನು.

ಕೀರ್ತನೆಗಳು ೧೩೮:೭
ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ ನೀನು ನನ್ನನ್ನು ಬದುಕಿಸಿ ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈಯನ್ನು ಚಾಚುತ್ತೀ; ನಿನ್ನ ಬಲಗೈ ನನ್ನನ್ನು ರಕ್ಷಿಸುತ್ತದೆ.ಕರ್ತನು ನನಗಿ ರುವದನ್ನು ಸಿದ್ದಿಗೆ ತರುತ್ತಾನೆ; ಕರ್ತನೇ, ನಿನ್ನ ಕೃಪೆಯು ಎಂದೆಂದಿಗೂ ಅದೆ; ನಿನ್ನ ಸ್ವಂತ ಕೈಕೆಲಸಗಳನ್ನು ತೊರೆದುಬಿಡಬೇಡ.

ರೋಮನರಿಗೆ ೨:೧
ಆದದರಿಂದ ಓ ಮನುಷ್ಯನೇ, ತೀರ್ಪು ಮಾಡುವ ನೀನು ಯಾವನಾಗಿದ್ದರೂ ನೆವವಿಲ್ಲದವನಾಗಿದ್ದೀ; ಹೇಗೆಂದರೆ ಬೇರೊಬ್ಬನಿಗೆ ತೀರ್ಪು ಮಾಡುವ ನೀನು ಅಂಥವುಗಳನ್ನೇ ಮಾಡುವವ ನಾದ್ದರಿಂದ ನಿನ್ನಷ್ಟಕ್ಕೆ ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು.

ರೋಮನರಿಗೆ ೧೨:೧೮-೧೯
[೧೮] ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ.[೧೯] ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.

ರೋಮನರಿಗೆ ೧೨:೨೦-೨೧
[೨೦] ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.[೨೧] ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.

ಲೂಕನು ೬:೨೭-೨೮
[೨೭] ಆದರೆ ಕೇಳುವವರಾದ ನಿಮಗೆ ನಾನು ಹೇಳುವ ದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ.[೨೮] ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ ಮತ್ತು ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.

ಮತ್ತಾಯನು ೫:೪೪-೪೫
[೪೪] ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ.[೪೫] ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.

ಯೆಶಾಯನ ೪೧:೧೧-೧೩
[೧೧] ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು;[೧೨] ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು.[೧೩] ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.

ಮತ್ತಾಯನು ೫:೩೮-೪೧
[೩೮] ಇದಲ್ಲದೆ--ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸು ಎಂದು ಹೇಳಿರುವದನ್ನು ನೀವು ಕೇಳಿದ್ದೀರಿ.[೩೯] ಆದರೆ ನಾನು ನಿಮಗೆ ಹೇಳುವದೇನಂದರೆ--ನೀವು ಕೆಟ್ಟದ್ದನ್ನು ಎದುರಿಸಬೇಡಿರಿ; ಯಾವನಾದರೂ ನಿನ್ನ ಬಲ ಗೆನ್ನೆಯ ಮೇಲೆ ಹೊಡೆದರೆ ಮತ್ತೊಂದನ್ನು ಸಹ ಅವನಿಗೆ ತಿರುಗಿಸು.[೪೦] ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು.[೪೧] ಮತ್ತು ಯಾವನಾದರೂ ಒಂದು ಮೈಲು ಹೋಗುವಂತೆ ನಿನ್ನನ್ನು ಬಲವಂತ ಮಾಡಿದರೆ ಅವನೊಂದಿಗೆ ಎರಡು ಮೈಲು ಹೋಗು.

ಕೀರ್ತನೆಗಳು ೩೪:೧೨-೧೮
[೧೨] ಒಳ್ಳೆಯದನ್ನು ನೋಡುವಂತೆ ದಿವಸಗಳನ್ನು ಪ್ರೀತಿ ಮಾಡಿ, ಜೀವವನ್ನು ಕೋರುವ ಮನುಷ್ಯನು ಯಾರು?[೧೩] ಕೇಡಿನಿಂದ ನಿನ್ನ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ಕಾಯಿ.[೧೪] ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾ ಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.[೧೫] ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.[೧೬] ಕೇಡನ್ನು ಮಾಡುವವರ ಜ್ಞಾಪಕವನ್ನು ಭೂಮಿ ಯೊಳಗಿಂದ ಕಡಿದುಹಾಕುವದಕ್ಕೆ ಕರ್ತನ ಮುಖವು ಅವರಿಗೆ ವಿರೋಧವಾಗಿದೆ.[೧೭] ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.[೧೮] ಮುರಿದ ಹೃದಯದವರಿಗೆ ಕರ್ತನು ಸವಿಾಪವಾಗಿದ್ದಾನೆ; ಜಜ್ಜಿದ ಆತ್ಮವನ್ನು ರಕ್ಷಿಸುತ್ತಾನೆ.

Kannada Bible BSI 2016
Copyright © 2016 by The Bible Society of India. All rights reserved worldwide