A A A A A

ಏಂಜಲ್ಸ್ ಮತ್ತು ರಾಕ್ಷಸರು: [ಬೀಲ್ಜೆಬಬ್]


ಮತ್ತಾಯನು ೧೨:೨೪
ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು.

ಮಾರ್ಕನು ೩:೨೨
ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.

ಮತ್ತಾಯನು ೧೦:೨೫
ಶಿಷ್ಯನು ತನ್ನ ಗುರುವಿನಂತೆಯೂ ಸೇವಕನು ತನ್ನ ಯಜಮಾನನಂತೆಯೂ ಇರುವದು ಸಾಕು; ಮನೆಯ ಯಜಮಾನನನ್ನೇ ಅವರು ಬೆಲ್ಜೆಬೂಲನೆಂದು ಕರೆದರೆ ಅವನ ಮನೆಯವರನ್ನು ಇನ್ನೂ ಎಷ್ಟೋ ಹೆಚ್ಚಾಗಿ ಕರೆಯುವರಲ್ಲವೇ?

ಮತ್ತಾಯನು ೧೨:೨೭
ಮತ್ತು ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವರು.

ಲೂಕನು ೧೧:೧೫-೧೯
[೧೫] ಆದರೆ ಅವರಲ್ಲಿ ಕೆಲವರು--ದೆವ್ವಗಳ ಅಧಿಪತಿಯಾದ ಬೆಲ್ಜೆ ಬೂಲನಿಂದ ಅವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.[೧೬] ಬೇರೆಯವರು ಆತನನ್ನು ಶೋಧಿಸುವವ ರಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸುವಂತೆ ಆತನನ್ನು ಕೇಳಿದರು.[೧೭] ಆದರೆ ಆತನು ಅವರ ಅಲೋಚನೆಗಳನ್ನು ತಿಳಿದವನಾಗಿ ಅವರಿಗೆ--ತನ್ನಲ್ಲಿ ವಿರೋಧವಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುವದು; ಒಂದು ಮನೆಯು ತನಗೆ ವಿರೋಧವಾಗಿ ವಿಭಾಗಿಸಲ್ಪಟ್ಟರೆ ಅದು ಬಿದ್ದು ಹೋಗುವದು.[೧೮] ಸೈತಾನನು ಸಹ ತನಗೆ ವಿರೋಧವಾಗಿ ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನ ರಾಜ್ಯವು ನಿಲ್ಲುವದು ಹೇಗೆ? ಯಾಕಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಹೊರಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.[೧೯] ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯ ತೀರಿಸುವವರಾಗಿರುವರು.

ಅರಸುಗಳು ೨ ೧:೧-೩
[೧] ಅಹಾಬನು ಸತ್ತ ತರುವಾಯ ಮೋವಾಬ್ಯರು ಇಸ್ರಾಯೇಲ್ಯರಿಗೆ ವಿರೋಧವಾಗಿ ತಿರುಗಿ ಬಿದ್ದರು.[೨] ಇದಲ್ಲದೆ ಅಹಜ್ಯನು ಸಮಾರ್ಯ ದಲ್ಲಿರುವ ತನ್ನ ಮೇಲು ಮಾಳಿಗೆಯ ಜಾಲರು ಕಿಟಿಕಿ ಯಿಂದ ಬಿದ್ದು ರೋಗಿಷ್ಟನಾದದರಿಂದ ಸೇವಕರನ್ನು ಕರೆದು--ನೀವು ಎಕ್ರೋನಿನ ದೇವರಾದ ಬಾಳ್ಜೆಬೂಬನ ಬಳಿಗೆ ಹೋಗಿ--ನಾನು ಈ ರೋಗದಿಂದ ವಾಸಿಯಾ ಗುವೇನೋ ಇಲ್ಲವೋ ಎಂದು ವಿಚಾರಿಸಲು ಅವರನ್ನು ಕಳುಹಿಸಿದನು.[೩] ಆದರೆ ಕರ್ತನ ದೂತನು ತಿಷ್ಬೀಯ ನಾದ ಎಲೀಯನಿಗೆ--ನೀನೆದ್ದು ಸಮಾರ್ಯದ ಅರಸನ ಸೇವಕರಿಗೆ ಎದುರಾಗಿ ಹೋಗಿ ಅವರಿಗೆ ಹೇಳಬೇಕಾ ದದ್ದೇನಂದರೆ--ಇಸ್ರಾಯೇಲ್ಯರಲ್ಲಿ ದೇವರು ಇಲ್ಲದೆ ಇರುವದರಿಂದಲೋ ನೀವು ಎಕ್ರೋನಿನ ದೇವ ರಾದ ಬಾಳ್ಜೆಬೂಬನನ್ನು ವಿಚಾರಿಸಲು ಹೋಗುತ್ತೀರಿ?

ಲೂಕನು ೧೧:೧೮
ಸೈತಾನನು ಸಹ ತನಗೆ ವಿರೋಧವಾಗಿ ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನ ರಾಜ್ಯವು ನಿಲ್ಲುವದು ಹೇಗೆ? ಯಾಕಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಹೊರಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ.

ಮಾರ್ಕನು ೩:೨೦-೩೦
[೨೦] ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು.[೨೧] ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು. ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು.[೨೨] ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.[೨೩] ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?[೨೪] ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು.[೨೫] ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ನಿಲ್ಲಲಾರದು.[೨೬] ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು.[೨೭] ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು.[೨೮] ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು;[೨೯] ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು.[೩೦] ಯಾಕಂದರೆ ಅವರು--ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು.

ಅರಸುಗಳು ೨ ೧:೧೬
ಹಾಗೆಯೇ ಅವನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋಗಿ ಅವನಿಗೆ--ಆತನ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರು ಇಲ್ಲವೆಂದು ನೀನು ಎಕ್ರೋ ನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸಲು ಜನ ರನ್ನು ಕಳುಹಿಸಿದ ಕಾರಣ ನೀನು ಏರಿದ ಮಂಚ ದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆ ಅಂದನು.

ಆದಿಕಾಂಡ ೧:೧
ದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.

ಮತ್ತಾಯನು ೯:೩೪
ಆದರೆ ಪರಿಸಾಯರು-- ದೆವ್ವಗಳ ಅಧಿಪತಿಯಿಂದ ಇವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.

ಪ್ರಕಟನೆ ೨೧:೨೦
ಐದನೆಯದು ಗೋಮೇಧಿಕ. ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಕೆಂಗಿತ್ತಳೆ, ಹನ್ನೆರಡನೆ ಯದು ನೀಲಸ್ಪಟಿಕ.

ಯೋಬನ ೨:೧೧
ಇದಲ್ಲದೆ ಯೋಬನ ಮೂವರು ಸ್ನೇಹಿತರು ಅವನ ಮೇಲೆ ಬಂದ ಈ ಎಲ್ಲಾ ಕೇಡನ್ನು ಕುರಿತು ಕೇಳಿ ತಮ್ಮ ತಮ್ಮ ಸ್ಥಳಗಳಿಂದ ಬಂದರು. ಅವರಾ ರಂದರೆ; ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು; ಇವರು ಅವನಿಗೋಸ್ಕರ ಗೋಳಾಡುವದಕ್ಕೂ ಅವನನ್ನು ಸಂತೈ ಸುವದಕ್ಕೂ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡರು.

ಅರಸುಗಳು ೨ ೧:೬
ಅವರು ಅವನಿಗೆ ಹೇಳಿದ್ದೇನಂದರೆ--ಒಬ್ಬ ಮನು ಷ್ಯನು ಎದುರಾಗಿ ಬಂದು ನಮಗೆ--ನೀವು ನಿಮ್ಮನ್ನು ಕಳುಹಿಸಿದ ಅರಸನ ಬಳಿಗೆ ತಿರುಗಿ ಹೋಗಿ-- ಇಸ್ರಾ ಯೇಲ್ಯರಲ್ಲಿ ದೇವರು ಇಲ್ಲದೆ ಇರುವದರಿಂದಲೋ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸುವದಕ್ಕೆ ಕಳುಹಿಸುವದೇನು? ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆಂಬದಾಗಿ ಅವನಿಗೆ ಹೇಳಿರಿ ಅಂದನು.

ಯೊವಾನ್ನನು ೧:೧
ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.

ಲೂಕನು ೧೧:೧೯
ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯ ತೀರಿಸುವವರಾಗಿರುವರು.

ವಿಮೋಚನಾಕಾಂಡ ೬:೨೩
ಆರೋನನು ಅವ್ಮೆಾನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬ ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ--ನಾದಾಬ್‌ ಅಬೀಹೂ ಎಲ್ಲಾಜಾರ್‌ ಈತಾಮಾರ್‌ ಇವರನ್ನು ಹೆತ್ತಳು.

ಲೂಕನು ೩:೧
ಕೈಸರನಾದ ತಿಬೇರಿಯನ ಆಳಿಕೆಯ ಕಾಲದ ಹದಿನೈದನೇ ವರುಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾ ಯಕ್ಕೆ ಚತುರಾಧಿಪತಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾ ಧಿಪತಿಯೂ

ಆದಿಕಾಂಡ ೧೦:೧೦
ಶಿನಾರ್‌ ದೇಶದಲ್ಲಿರುವ ಬಾಬೆಲ್‌ ಯೆರೆಕ್‌ ಅಕ್ಕದ್‌ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.

ಆದಿಕಾಂಡ ೧೪:೧
ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಸಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಜನಾಂಗಗಳ ಅರಸನಾದ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನಂದರೆ,

ಧರ್ಮೋಪದೇಷಕಾಂಡ ೧೪:೫
ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ ಕೊಂಡಗುರಿ.

ರೂತಳು ೧:೨
ಆ ಮನುಷ್ಯನ ಹೆಸರು ಎಲೀಮೆಲೆ ಕನು; ಅವನ ಹೆಂಡತಿಯ ಹೆಸರು ನೊವೊಮಿ; ಅವನ ಕುಮಾರ ರಲ್ಲಿ ಒಬ್ಬನ ಹೆಸರು ಮಹ್ಲೋ ನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಇವರು ಎಫ್ರಾತ್ಯರಾದ ಯೆಹೂದದ ಬೇತ್ಲೆಹೇಮಿನವ ರಾಗಿದ್ದರು. ಇವರು ಮೋವಾಬ್‌ ದೇಶಕ್ಕೆ ಬಂದು, ಅಲ್ಲಿ ವಾಸವಾಗಿದ್ದರು.

ನೆಹೆಮೀಯಾ ೧:೧
ಹಕಲ್ಯನ ಮಗನಾದ ನೆಹೆವಿಾಯನ ಮಾತುಗಳು. ಇಪ್ಪತ್ತನೇ ವರುಷದ ಕಿಸ್ಲೇವ್‌ ತಿಂಗಳಲ್ಲಿ ನಾನು ಶೂಷನ್‌ ಅರಮನೆಯಲ್ಲಿ ರುವಾಗ ಏನಾಯಿತಂದರೆ, ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯೂ ಯೆಹೂದದಲ್ಲಿದ್ದ ಕೆಲವರು ಬಂದರು.

ಎಸ್ತೆರಳು ೧:೧
ಅಹಷ್ವೇರೋಷನ ದಿವಸಗಳಲ್ಲಿ ಆದದ್ದುಆ ಅಹಷ್ವೇರೋಷನು ಭಾರತ ಮೊದ ಲ್ಗೊಂಡು ಕೂಷಿನವರೆಗೂ ಇರುವ ನೂರ ಇಪ್ಪತ್ತೇಳು ಪ್ರಾಂತ್ಯಗಳನ್ನು ಆಳಿದನು;

ಅರಸುಗಳು ೧ ೧:೨
ಆದದರಿಂದ ಅವನ ಸೇವಕರು ಅವನಿಗೆ--ಅರಸನಾದ ನಮ್ಮ ಒಡೆಯನಿ ಗೋಸ್ಕರ ಕನ್ನಿಕೆಯನ್ನು ಹುಡುಕುವೆವು; ಅವಳು ಅರಸನ ಬಳಿಯಲ್ಲಿ ನಿಂತು ಅವನನ್ನು ಆದರಿಸಿ ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ ಅವನ ಮಗ್ಗುಲಲ್ಲಿ ಮಲಗಲಿ ಅಂದರು.

ಪ್ರಕಟನೆ ೧೬:೧೬
ಅವನು ಅವರನ್ನು ಇಬ್ರಿಯ ಭಾಷೆಯಲ್ಲಿ ಹರ್ಮಗೆದೋನ್‌ ಎಂದು ಕರೆಯಲ್ಪಟ್ಟ ಸ್ಥಳಕ್ಕೆ ಕೂಡಿಸುವನು.

ಯೆಶಾಯನ ೩೪:೧೪
ಮರುಭೂಮಿಯ ಕಾಡು ಮೃಗಗಳು ಸಹ ದ್ವೀಪದ ಕಾಡುಮೃಗಗಳೊಂದಿಗೆ ಸಂಧಿಸುವವು; ದೆವ್ವವು ತನ್ನ ಜೊತೆಯನ್ನು ಕೂಗು ವದು; ಅಲ್ಲಿ ಚೀರುಗೂಬೆಯು ಸಹ ವಿಶ್ರಮಿಸಿಕೊಂಡು ಉಪಶಮನ ಸ್ಥಳವನ್ನು ಕಂಡುಕೊಳ್ಳುವದು.

ಮತ್ತಾಯನು ೨೨:೩೭
ಯೇಸು ಅವ ನಿಗೆ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.

ಮಾರ್ಕನು ೩:೧-೬
[೧] ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು.[೨] ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.[೩] ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು.[೪] ಆತನು ಅವರಿಗೆ --ಸಬ್ಬತ್‌ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.[೫] ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.[೬] ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.

ಮಾರ್ಕನು ೧೦:೪೬-೫೨
[೪೬] ತರುವಾಯ ಅವರು ಯೆರಿಕೋವಿಗೆ ಬಂದರು; ಆತನು ತನ್ನ ಶಿಷ್ಯರೊಡನೆಯೂ ಬಹುಸಂಖ್ಯೆಯ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗನಾದ ಕುರುಡ ಬಾರ್ತಿಮಾಯನು ಹೆದ್ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆಬೇಡು ತ್ತಿದ್ದನು.[೪೭] ಆತನು ನಜರೇತಿನ ಯೇಸು ಎಂದು ಅವನು ಕೇಳಿದಾಗ ಕೂಗಲಾರಂಭಿಸಿ--ಯೇಸುವೇ, ದಾವೀದನಕುಮಾರನೇ, ನನ್ನನ್ನು ಕರುಣಿಸು ಅಂದನು.[೪೮] ಅವನು ಸುಮ್ಮನಿರುವಂತೆ ಅನೇಕರು ಅವನಿಗೆ ಖಂಡಿತವಾಗಿ ಹೇಳಿದರು; ಆದರೆ ಅವನು ಇನ್ನೂ ಹೆಚ್ಚಾಗಿ--ದಾವೀದನಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿದನು.[೪೯] ಆಗ ಯೇಸು ನಿಂತುಕೊಂಡು ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು ಅವರು ಆ ಕುರುಡನನ್ನು ಕರೆದು--ಸಮಾಧಾನವಾಗಿರು; ಏಳು, ಆತನು ನಿನ್ನನ್ನು ಕರೆಯುತ್ತಾನೆ ಎಂದು ಅವನಿಗೆ ಹೇಳಿದರು.[೫೦] ಅವನು ತನ್ನ ಉಡುಪನ್ನು ತೆಗೆದುಹಾಕಿ ಎದ್ದು ಯೇಸುವಿನ ಬಳಿಗೆ ಬಂದನು.[೫೧] ಯೇಸು ಅವನಿಗೆ--ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ--ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು ಅಂದನು.ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.[೫೨] ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.

ದಾನಿಯೇಲನ ೧:೭
ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್‌ನೆಂದೂ ವಿಾಶಾಯೇಲನನ್ನು ಮೇಶಕ್‌ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು.

ನ್ಯಾಯಸ್ಥಾಪಕರು ೪:೬
ಅವಳು ಕೆದೆಷ್‌ ನಫ್ತಾಲಿಯಲ್ಲಿರುವ ಅಬೀನೋವ ಮನ ಮಗನಾದ ಬಾರಾಕನನ್ನು ಕರೇಕಳುಹಿಸಿ ಅವನ ಸಂಗಡ--ನಿನಗೆ ಇಸ್ರಾಯೇಲ್‌ ದೇವರಾದ ಕರ್ತನು ಆಜ್ಞಾಪಿಸಿದ್ದೇನಂದರೆ--ನೀನು ನಫ್ತಾಲಿಯ ಮಕ್ಕಳ ಲ್ಲಿಯೂ ಜೆಬುಲೂನನ ಮಕ್ಕಳಲ್ಲಿಯೂ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್‌ ಬೆಟ್ಟಕ್ಕೆ ಹೋಗು.

ಅರಸುಗಳು ೨ ೧೯:೩೭
ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.

ಯೆಜೆಕಿಯೇಲನ ೨೩:೪
ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು.

ಯೆರೆಮೀಯನ ಗ್ರಂಥ ೧:೧
ಬೆನ್ಯಾವಿಾನನ ದೇಶದ ಅನಾತೋತಿನಲ್ಲಿದ್ದ ಯಾಜಕರಲ್ಲಿ ಒಬ್ಬನಾದ ಹಿಲ್ಕೀ ಯನ ಮಗನಾಗಿರುವ ಯೆರೆವಿಾಯನ ವಾಕ್ಯಗಳು.

ಆದಿಕಾಂಡ ೧೦:೨೨
ಶೇಮನ ಮಕ್ಕಳು ಯಾರಂದರೆ, ಏಲಾಮ್‌ ಅಶ್ಶೂರ್‌ ಅರ್ಪಕ್ಷದ್‌ ಲೂದ್‌ ಅರಾಮ್‌.

ಎಜ್ರನು ೪:೭
ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು.

ಮತ್ತಾಯನು ೧೦:೩
ಫಿಲಿಪ್ಪ, ಬಾರ್ತೊ ಲೊಮಾಯ, ತೋಮ, ಸುಂಕದವನಾದ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ, ತದ್ದಾಯನೆಂಬ ಅಡ್ಡ ಹೆಸರಿನ ಲೆಬ್ಬಾಯ,

ಪ್ರೇಷಿತರ ೨:೯
ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ,

ಯಾಜಕಕಾಂಡ ೧೧:೫
ಬೆಟ್ಟದ ಮೊಲವು ಮೇವನ್ನು ಮೆಲುಕು ಹಾಕುವದಾದರೂ ಅದರ ಗೊರಸು ಸೀಳಲ್ಪಟ್ಟಿಲ್ಲ, ಅದು ನಿಮಗೆ ಅಶುದ್ಧ ವಾಗಿರುವದು.

ಉಪದೇಷಕ ೧:೧
ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.

ವಿಮೋಚನಾಕಾಂಡ ೩೦:೩೪
ಕರ್ತನು ಮೋಶೆಗೆ--ನೀನು ಪರಿಮಳಗಳನ್ನು ಅಂದರೆ ಹಾಲುಮಡ್ಡಿ ಗುಗ್ಗುಲ ಗಂಧದ ಚೆಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಂಬ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.

ಯೋಬನ ೯:೯
ಸಪ್ತ ತಾರೆಗಳನ್ನೂ ಮೃಗಶಿರವನ್ನೂ ವೃಷಭ ರಾಶಿಯನ್ನೂ ದಕ್ಷಿಣದ ಕೋಣೆಗಳನ್ನೂ ಮಾಡಿದಾತನು ಆತನೇ.

ಪ್ರೇಷಿತರ ೬:೫
ಈ ಮಾತು ಸಮೂಹಕ್ಕೆಲ್ಲಾ ಒಪ್ಪಿಗೆಯಾಯಿತು; ಆಗ ಅವರು ನಂಬಿಕೆಯಿಂದಲೂ ಪವಿತ್ರಾತ್ಮನಿಂದಲೂ ಭರಿತನಾದ ಸ್ತೆಫನನೂ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿ ಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು

ಪ್ರಕಟನೆ ೧:೧೧
ಅದು--ನಾನೇ ಅಲ್ಫಾವೂ ಓಮೆಗವೂ ಮೊದಲನೆಯವನೂ ಕಡೆ ಯವನೂ ಆಗಿದ್ದೇನೆ; ನೀನು ನೋಡುವದನ್ನೂ ಪುಸ್ತಕದಲ್ಲಿ ಬರೆದು ಆಸ್ಯದಲ್ಲಿನ ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್‌, ಫಿಲದೆಲ್ಫಿಯ, ಲವೊದಿಕೀಯ ಎಂಬ ಈ ಏಳು ಸಭೆಗಳಿಗೆ ಅದನ್ನು ಕಳುಹಿಸಬೇಕೆಂದು ಹೇಳಿತು.

ಅರಸುಗಳು ೧ ೮:೧೩
ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.

ಮಾರ್ಕನು ೩:೨೩
ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?

ಯೊಹೋಶುವ ೨೪:೧೫
ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.

Kannada Bible BSI 2016
Copyright © 2016 by The Bible Society of India. All rights reserved worldwide