A A A A A

ಹೆಚ್ಚುವರಿ: [ನರಭಕ್ಷಕತೆ]


ಯೆರೆಮೀಯನ ಗ್ರಂಥ ೧೯:೯
ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು.

ಯೆಜೆಕಿಯೇಲನ ೫:೧೦
ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.

ಯಾಜಕಕಾಂಡ ೨೬:೨೯
ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ.

ಅರಸುಗಳು ೨ ೬:೨೮-೨೯
[೨೮] ಅರಸನು ಅವಳಿಗೆ--ನಿನ್ನ ದುಃಖ ವೇನು ಅಂದನು. ಅದಕ್ಕವಳು--ಈ ಸ್ತ್ರೀಯು ನನಗೆ ಹೇಳಿದ್ದೇನಂದರೆ--ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು; ನಾಳೆ ನನ್ನ ಮಗನನ್ನು ತಿನ್ನೋಣ ಅಂದಳು.[೨೯] ಹಾಗೆಯೇ ನಾನು ನನ್ನ ಮಗನನ್ನು ಬೇಯಿಸಿ ತಿಂದೆವು. ಮಾರನೇ ದಿವಸದಲ್ಲಿ ನಾನು ಅವಳಿಗೆ--ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು ಅಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ ಅಂದಳು.

ಪ್ರಲಾಪಗಳು ೪:೧೦
ಕನಿಕರ ತುಂಬಿದ ಹೆಂಗಸರ ಕೈಗಳು ಅವರ ಸ್ವಂತ ಮಕ್ಕಳನ್ನೇ ಬೇಯಿಸಿದವು; ಇವರು ನನ್ನ ಜನರ ಮಗಳ ನಾಶದಲ್ಲಿ ಅವರಿಗೆ ಆಹಾರ ವಾದರು.

ಪ್ರಲಾಪಗಳು ೨:೨೦
ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?

ಧರ್ಮೋಪದೇಷಕಾಂಡ ೨೮:೫೩-೫೭
[೫೩] ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ.[೫೪] ನಿನ್ನಲ್ಲಿ ಮೃದುವಾದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಯಾವನೋ ಅವನ ಕಣ್ಣು ತನ್ನ ಸಹೋದರನ ಕಡೆಗೂ ತನ್ನ ಮಗ್ಗುಲಲ್ಲಿರುವ ತನ್ನ ಹೆಂಡತಿಯ ಕಡೆಗೂ ಅವನು ಉಳಿಸಿಕೊಳ್ಳುವ ಮಕ್ಕಳ ಕಡೆಗೂ ಕಠಿಣವಾಗುವದು.[೫೫] ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ತನಗೆ ಸಾಕಾಗುವದಿಲ್ಲ ಅಂದುಕೊಂಡು ಅವನು ತಿನ್ನುವ ತನ್ನ ಮಕ್ಕಳ ಮಾಂಸದಲ್ಲಿ ಅವರೊಳಗೆ ಒಬ್ಬನಿಗಾದರೂ ಏನೂ ಕೊಡುವದಿಲ್ಲ.[೫೬] ನಿನ್ನಲ್ಲಿ ಮೃದುವಾದವಳೂ ಬಹಳ ಸೂಕ್ಷ್ಮಗುಣವುಳ್ಳವಳೂ ಯಾವಳೋ ಮೃದುತನ ದಿಂದಲೂ ಸೂಕ್ಷ್ಮಗುಣದಿಂದಲೂ ನೆಲಕ್ಕೆ ಅಂಗಾಲನ್ನು ನಿಲ್ಲಿಸಲಾರದವಳು ಯಾವಳೋ ಅವಳು ತನ್ನ ಮಗ್ಗುಲ ಲ್ಲಿರುವ ಗಂಡನ ಕಡೆಗೂ ತನ್ನ ಮಗನ, ಮಗಳ ಕಡೆಗೂ[೫೭] ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು.

ಆದಿಕಾಂಡ ೧:೨೬-೨೭
[೨೬] ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.[೨೭] ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು, ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು. ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು.

ಕೊರಿಂಥಿಯರಿಗೆ ೨ ೫:೮
ನಾವು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವದು ಉತ್ತಮವೆಂದು ಆಶಿಸಿ ಭರವಸವುಳ್ಳವರಾಗಿದ್ದೇವೆ.

ಲೂಕನು ೧೬:೧೯-೨೬
[೧೯] ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.[೨೦] ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು.[೨೧] ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.[೨೨] ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು.[೨೩] ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.[೨೪] ಅವನು--ತಂದೆಯಾದ ಅಬ್ರಹಾ ಮನೇ, ನನ್ನ ಮೇಲೆ ಕರುಣೆ ಇಟ್ಟು ಲಾಜರನು ತನ್ನ ತುದಿಬೆರಳನ್ನು ನೀರಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡುವಂತೆ ಅವನನ್ನು ಕಳುಹಿಸು; ಯಾಕಂದರೆ ನಾನು ಈ ಉರಿಯಲ್ಲಿ ಯಾತನೆಪಡುತ್ತಾ ಇದ್ದೇನೆ ಎಂದು ಕೂಗಿ ಹೇಳಿದನು.[೨೫] ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.[೨೬] ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟ ಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಗಾಧ ಸ್ಥಾಪಿಸಿಯದೆ ಅಂದನು.

ಪ್ರಕಟನೆ ೨೦:೧೧-೧೫
[೧೧] ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು.[೧೨] ಇದಲ್ಲದೆ ಸತ್ತವರಾದ ಚಿಕ್ಕವರೂ ದೊಡ್ಡವರೂ ದೇವರ ಮುಂದೆ ನಿಂತಿರುವದನ್ನು ನಾನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಜೀವಗ್ರಂಥವೆಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ[೧೩] ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.[೧೪] ಆಮೇಲೆ ಮೃತ್ಯುವೂ ನರಕವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಇದೇ ಎರಡನೆಯ ಮರಣವು.ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.[೧೫] ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

ಧರ್ಮೋಪದೇಷಕಾಂಡ ೨೮:೫೩
ಆಗ ಮುತ್ತಿಗೆಯಲ್ಲಿಯೂ ನಿನ್ನ ಶತ್ರುಗಳು ನಿನಗೆ ಮಾಡುವ ಇಕ್ಕಟ್ಟಿನಲ್ಲಿಯೂ ನಿನ್ನ ಗರ್ಭದ ಫಲವನ್ನೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಕುಮಾರ ಕುಮಾರ್ತೆಯರ ಮಾಂಸವನ್ನೂ ತಿನ್ನುವಿ.

ಕೊರಿಂಥಿಯರಿಗೆ ೧ ೧೪:೩೪-೩೫
[೩೪] ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ.[೩೫] ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವದು ನಾಚಿಗೆಗೆಟ್ಟದ್ದಾಗಿದೆ.

ಲೂಕನು ೧:೩೭
ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ ಎಂದು ಹೇಳಿ ದನು.

ಯೊವಾನ್ನನು ೧:೧
ಆದಿಯಲ್ಲಿ ವಾಕ್ಯವಿದ್ದನು; ಆ ವಾಕ್ಯವು ದೇವರೊಂದಿಗೆ ಇದ್ದನು; ಆ ವಾಕ್ಯವು ದೇವರಾಗಿದ್ದನು.

ಧರ್ಮೋಪದೇಷಕಾಂಡ ೨೮:೫೭
ತನ್ನ ಕಾಲುಗಳ ನಡುವೆಯಿಂದ ಬರುವ ಶಿಶುವಿನ ಕಡೆಗೂ ತಾನು ಹೆತ್ತಮಕ್ಕಳ ಕಡೆಗೂ ಕಠಿಣ ಕಣ್ಣುಳ್ಳವಳಾಗಿರುವಳು; ಯಾಕಂದರೆ ಎಲ್ಲಾದರ ಕೊರತೆಯಲ್ಲಿಯೂ ಮುತ್ತಿಗೆಯಲ್ಲಿಯೂ ನಿನ್ನ ಶತ್ರು ನಿನಗೆ ನಿನ್ನ ಬಾಗಲುಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ ಅವರನ್ನು ಗುಪ್ತವಾಗಿ ತಿಂದು ಬಿಡುವಳು.

ತಿಮೊಥೇಯನಿಗ ೧ ೨:೧೧-೧೫
[೧೧] ಸ್ತ್ರೀಯು ಮೌನವಾಗಿದ್ದು ಪೂರ್ಣ ವಿಧೇಯಳಾಗಿ ಕಲಿಯಬೇಕು.[೧೨] ಆದರೆ ಉಪದೇಶ ಮಾಡುವದ ಕ್ಕಾಗಲೀ ಪುರುಷರ ಮೇಲೆ ಅಧಿಕಾರ ನಡಿಸುವದ ಕ್ಕಾಗಲೀ ಸ್ತ್ರೀಗೆ ನಾನು ಅಪ್ಪಣೆಕೊಡುವದಿಲ್ಲ; ಆಕೆಯು ಮೌನವಾಗಿರಬೇಕು.[೧೩] ಮೊದಲು ನಿರ್ಮಿತನಾದ ವನು ಆದಾಮನಲ್ಲವೇ, ಆಮೇಲೆ ಹವ್ವಳು;[೧೪] ಇದ ಲ್ಲದೆ ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು.ಆದರೂ ಅವರು ಸ್ವಸ್ಥ ಬುದ್ಧಿಯಿಂದೊಡಗೂಡಿದ ನಂಬಿಕೆಯ ಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಆಕೆಯು ಮಗುವನ್ನು ಹೆರುವದರಲ್ಲಿ ರಕ್ಷಣೆ ಹೊಂದುವಳು.[೧೫] ಆದರೂ ಅವರು ಸ್ವಸ್ಥ ಬುದ್ಧಿಯಿಂದೊಡಗೂಡಿದ ನಂಬಿಕೆಯ ಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಆಕೆಯು ಮಗುವನ್ನು ಹೆರುವದರಲ್ಲಿ ರಕ್ಷಣೆ ಹೊಂದುವಳು.

ತಿಮೊಥೇಯನಿಗ ೧ ೫:೩-೧೬
[೩] ನಿಜವಾಗಿಯೂ ವಿಧವೆಯಾಗಿರುವವರನ್ನು ಗೌರ ವಿಸು; ಅವರು ವಿಧವೆಯರಾಗಿದ್ದಾರಲ್ಲಾ.[೪] ಆದರೆ ಯಾವ ವಿಧವೆಗಾದರೂ ಮಕ್ಕಳಾಗಲಿ, ಮೊಮ್ಮಕ್ಕಳಾ ಗಲಿ, ಇದ್ದರೆ ಅವರೇ ಮೊದಲು ತಮ್ಮ ಮನೆಯಲ್ಲಿ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪ ಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಯೋಗ್ಯವಾದದ್ದೂ ಮೆಚ್ಚಿಕೆಯಾದದ್ದೂ ಆಗಿದೆ.[೫] ನಿಜವಾಗಿಯೂ ದಿಕ್ಕಿಲ್ಲದ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳ ಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.[೬] ಆದರೆ ಭೋಗಿಯಾಗಿರುವ ವಿಧವೆಯು ಬದುಕಿರು ವಾಗಲೂ ಸತ್ತವಳೇ.[೭] ಅವರು ನಿಂದೆಗೆ ಗುರಿಯಾಗ ದಂತೆ ಇವುಗಳನ್ನು ಆಜ್ಞಾಪಿಸು.[೮] ಯಾವನಾದರೂ ಸ್ವಂತದವರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ನಂಬಿಕೆಯನ್ನು ಅಲ್ಲಗಳೆ ದವನು ನಂಬದವನಿಗಿಂತ ಕೆಟ್ಟವನೂ ಆಗಿದ್ದಾನೆ.[೯] ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿದ್ದ ವಿಧವೆಯರನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬೇಡ. ಅಂಥವಳಾ ದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ[೧೦] ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ[೧೧] ಆದರೆ ಯೌವನಸ್ಥ ವಿಧವೆಯರನ್ನು ಲೆಕ್ಕಕ್ಕೆ ಸೇರಿಸಬೇಡ; ಯಾಕಂದರೆ ಅವರು ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದಿಸಿ ಮದುವೆ ಮಾಡಿಕೊಳ್ಳಬೇಕೆಂದು ಇಷ್ಟಪ ಟ್ಟಾರು.[೧೨] ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ತೊರೆದು ದಂಡನೆಗೆ ಗುರಿಯಾಗಿದ್ದಾರೆ.[೧೩] ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ.[೧೪] ಆದದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ನಡಿಸುವದೇ ನನ್ನ ಅಪೇಕ್ಷೆ; ಹಾಗೆ ಮಾಡುವದ ರಿಂದ ವಿರೋಧಿಯ ನಿಂದೆಗೆ ಆಸ್ಪದಕೊಡದೆ ಇರುವರು.[೧೫] ಇಷ್ಟರೊಳಗೆ ಕೆಲವರು ದಾರಿಬಿಟ್ಟು ಸೈತಾನನನ್ನು ಹಿಂಬಾಲಿಸಿದ್ದಾರೆ.[೧೬] ನಂಬುವವರಾದ ಪುರುಷನ ಇಲ್ಲವೆ ಸ್ತ್ರೀಯ ಅಧೀನತೆಯಲ್ಲಿ ವಿಧವೆಯರಿದ್ದರೆ ಅವರೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯಮಾಡಬೇಕಾಗಿರುವದರಿಂದ ವಿಧವೆಯರು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

ಕೊರಿಂಥಿಯರಿಗೆ ೧ ೧೧:೨-೧೬
[೨] ಸಹೋದರರೇ, ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ಒಪ್ಪಿಸಿಕೊಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.[೩] ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.[೪] ಆದರೂ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ ಎಂದು ನೀವು ತಿಳಿಯಬೇಕೆಂದು ನಾನು ಅಪೇಕ್ಷಿಸುತ್ತೇನೆ.[೫] ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪ್ರತಿಯೊಬ್ಬ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.[೬] ಆದರೆ ತಲೆಯಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪ್ರತಿಯೊಬ್ಬ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಯಾಕಂದರೆ ಸ್ತ್ರೀಯು ಮುಸುಕಿಲ್ಲದಿರುವದೂ ತಲೆಬೋಳಿಸಿ ಕೊಂಡಿರುವದೂ ಒಂದೇ.[೭] ಆದರೆ ಪುರುಷನು ದೇವರ ಪ್ರತಿರೂಪವೂ ಪ್ರಭಾವವೂ ಆಗಿರುವದರಿಂದ ತಲೆಯನ್ನು ಮುಚ್ಚಿ ಕೊಳ್ಳಕೂಡದು; ಸ್ತ್ರೀಯಾದರೋ ಪುರುಷನ ಪ್ರಭಾವ ವಾಗಿದ್ದಾಳೆ.[೮] ಪುರುಷನು ಸ್ತ್ರೀಯಿಂದ ನಿರ್ಮಿತ ನಾಗಲಿಲ್ಲ; ಸ್ತ್ರೀಯು ಪುರುಷನಿಂದ ನಿರ್ಮಿತವಾದಳು.[೯] ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು.[೧೦] ಈ ಕಾರಣದಿಂದ ದೂತರ ನಿಮಿತ್ತವಾಗಿ ಸ್ತ್ರೀಗೆ ತನ್ನ ಶಿರಸ್ಸಿನ ಮೇಲೆ ಅಧಿಕಾರವಿರಬೇಕು.[೧೧] ಆದರೂ ಕರ್ತನಲ್ಲಿ ಸ್ತ್ರೀಯಿಲ್ಲದೆ ಪುರುಷನೂ ಪುರುಷನಿಲ್ಲದೆ ಸ್ತ್ರೀಯೂ ಇಲ್ಲ.[೧೨] ಸ್ತ್ರೀಯು ಪುರುಷನಿಂದ ಹೇಗೆ ಉತ್ಪತ್ತಿ ಯಾದಳೋ ಹಾಗೆಯೇ ಪುರುಷನೂ ಸ್ತ್ರೀ ಯಿಂದ ಉತ್ಪತ್ತಿಯಾದನು. ಸಮಸ್ತಕ್ಕೂ ದೇವರೇ ಮೂಲ ಕಾರಣನು.[೧೩] ನಿಮ್ಮೊಳಗೆ ನೀವೇ ತೀರ್ಪು ಮಾಡಿ ಕೊಳ್ಳಿರಿ; ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವದು ಯುಕ್ತವೋ?[೧೪] ಪುರುಷನು ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನ ಕರವಾಗಿದೆಯೆಂದು ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?[೧೫] ಆದರೆ ಸ್ತ್ರೀಯು ಕೂದಲು ಬೆಳೆಸಿಕೊಂಡರೆ ಅವಳಿಗೆ ಮುಸುಕಿಗೆ ಬದಲಾಗಿ ಕೊಡಲ್ಪಟ್ಟಿರುವದರಿಂದ ಅದು ಅವಳಿಗೆ ಗೌರವ ವಾಗಿದೆ;[೧೬] ಒಬ್ಬನು ವಾಗ್ವಾದ ಪ್ರಿಯನಾಗಿ ಕಾಣಿಸಿ ಕೊಂಡರೆ ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.

Kannada Bible BSI 2016
Copyright © 2016 by The Bible Society of India. All rights reserved worldwide