A A A A A

ಹೆಚ್ಚುವರಿ: [ಅಸಹ್ಯ]


ದಾನಿಯೇಲನ ೧೧:೩೧
ಉತ್ತರದ ರಾಜನು ಜೆರುಸಲೇಮಿನ ಪವಿತ್ರಾಲಯವನ್ನು ಹೊಲಸು ಮಾಡಲು ತನ್ನ ಸೈನಿಕರನ್ನು ಕಳುಹಿಸುವನು. ದೈನಂದಿನ ಯಜ್ಞಗಳನ್ನು ಅರ್ಪಿಸದಂತೆ ಅವರು ತಡೆಯುವರು. ಆಮೇಲೆ ಅವರು ವಿನಾಶಕಾರಿಯಾದ ಅಸಹ್ಯ ವಸ್ತುವನ್ನು ಪ್ರತಿಷ್ಠಾಪಿಸುವರು.

ದಾನಿಯೇಲನ ೧೨:೧೧
“ನಿತ್ಯಹೋಮವು ನಿಲ್ಲಿಸಲ್ಪಟ್ಟು ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಒಂದು ಸಾವಿರದ ಇನ್ನೂರ ತೊಂಭತ್ತು ದಿನಗಳು ಕಳೆಯಬೇಕು.

ಧರ್ಮೋಪದೇಷಕಾಂಡ ೨೨:೫
“ಹೆಂಗಸು ಗಂಡಸರ ಬಟ್ಟೆ ಧರಿಸಿಕೊಳ್ಳಬಾರದು, ಗಂಡಸು ಹೆಂಗಸರ ಬಟ್ಟೆ ಧರಿಸಬಾರದು. ಇದು ಯೆಹೋವನ ದೃಷ್ಟಿಯಲ್ಲಿ ಅಸಹ್ಯ.

ಧರ್ಮೋಪದೇಷಕಾಂಡ ೨೩:೧೮
ಸೂಳೆತನದಿಂದ ಗಳಿಸಿದ ಹಣವನ್ನು ನಿಮ್ಮ ದೇವರಾದ ಯೆಹೋವನ ವಿಶೇಷ ವಾಸಸ್ಥಾನಕ್ಕೆ ತೆಗೆದುಕೊಂಡು ಬರಬಾರದು. ಒಬ್ಬನು ತಾನು ಹೊತ್ತುಕೊಂಡ ಹರಕೆಯನ್ನು ಆ ಹಣದಿಂದ ಪೂರೈಸಕೂಡದು. ಯಾಕೆಂದರೆ ಲೈಂಗಿಕ ಪಾಪದಲ್ಲಿ ತಮ್ಮ ದೇಹಗಳನ್ನು ಮಾರುವವರನ್ನು ನಿಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ; ಲೈಂಗಿಕ ಪಾಪಗಳ ಆದಾಯದಿಂದ ಬಂದ ಹಣದಿಂದ ಖರೀದಿ ಮಾಡಿದ ಕಾಣಿಕೆಗಳನ್ನು ಆತನು ದ್ವೇಷಿಸುತ್ತಾನೆ.

ಧರ್ಮೋಪದೇಷಕಾಂಡ ೨೪:೪
See verse 3

ಯೆಶಾಯನ ೧:೧೩
ಮ್ಮ ಅಯೋಗ್ಯವಾದ ಯಜ್ಞಗಳನ್ನು ನನ್ನ ಬಳಿಗೆ ತರಬೇಡಿ; ನಿಮ್ಮ ಧೂಪವು ನನಗೆ ಅಸಹ್ಯ; ನಿಮ್ಮ ಅಮಾವಾಸ್ಯೆಯನ್ನಾಗಲಿ ಹಬ್ಬವನ್ನಾಗಲಿ ಸಬ್ಬತ್ತನ್ನಾಗಲಿ ನಾನು ಸಹಿಸಲಾರೆ. ನಿಮ್ಮ ಪವಿತ್ರಕೂಟಗಳಲ್ಲಿ ನೀವು ಮಾಡುವ ದುಷ್ಟತನವನ್ನು ನಾನು ಸಹಿಸಲಾರೆ.

ಯಾಜಕಕಾಂಡ ೭:೧೮
ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು.

ಯಾಜಕಕಾಂಡ ೧೮:೨೨
“ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು. ಅದು ಭಯಂಕರ ಪಾಪ!

ಜ್ಞಾನೋಕ್ತಿಗಳು ೧೧:೧
ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೋ ಆತನನ್ನು ಸಂತೋಷಗೊಳಿಸುತ್ತವೆ.

ಜ್ಞಾನೋಕ್ತಿಗಳು ೧೧:೨೦
ಕೆಡುಕರು ಯೆಹೋವನಿಗೆ ಅಸಹ್ಯರು. ಆದರೆ ಸನ್ಮಾರ್ಗಿಗಳು ಆತನ ಮೆಚ್ಚಿಕೆಗೆ ಪಾತ್ರರಾಗಿದ್ದಾರೆ.

ಜ್ಞಾನೋಕ್ತಿಗಳು ೧೨:೨೨
ಸುಳ್ಳುಗಾರರು ಯೆಹೋವನಿಗೆ ಅಸಹ್ಯ. ಆದರೆ ಸತ್ಯವಂತರು ಆತನಿಗೆ ಇಷ್ಟಕರ.

ಜ್ಞಾನೋಕ್ತಿಗಳು ೧೫:೮
ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.

ಜ್ಞಾನೋಕ್ತಿಗಳು ೧೫:೨೬
ಯೆಹೋವನು ದುರಾಲೋಚನೆಗಳನ್ನು ದ್ವೇಷಿಸುವನು; ಕನಿಕರದ ಮಾತುಗಳಲ್ಲಾದರೋ ಸಂತೋಷಪಡುವನು.

ಜ್ಞಾನೋಕ್ತಿಗಳು ೧೬:೫
ಗರ್ವಿಷ್ಠರು ಯೆಹೋವನಿಗೆ ಅಸಹ್ಯ. ಆ ಗರ್ವಿಷ್ಠರಿಗೆ ಯೆಹೋವನ ದಂಡನೆ ಖಂಡಿತ.

ಜ್ಞಾನೋಕ್ತಿಗಳು ೧೭:೧೫
ನಿರಪರಾಧಿಗಾಗುವ ದಂಡನೆಯೂ ಅಪರಾಧಿಗಾಗುವ ಬಿಡುಗಡೆಯೂ ಯೆಹೋವನಿಗೆ ಅಸಹ್ಯ.

ಜ್ಞಾನೋಕ್ತಿಗಳು ೨೦:೧೦
ಮೋಸದ ತಕ್ಕಡಿಗಳೂ ಮೋಸದ ಅಳತೆಮಾಪಕಗಳೂ ಯೆಹೋವನಿಗೆ ಅಸಹ್ಯ.

ಜ್ಞಾನೋಕ್ತಿಗಳು ೨೦:೨೩
ಯೆಹೋವನಿಗೆ ಅನ್ಯಾಯದ ಅಳತೆಮಾಪಕವು ಅಸಹ್ಯ; ಮೋಸದ ತಕ್ಕಡಿಗಳು ಅಪರಾಧ.

ಜ್ಞಾನೋಕ್ತಿಗಳು ೨೮:೯
ದೇವರ ಉಪದೇಶವನ್ನು ತಿರಸ್ಕರಿಸುವವನ ಪ್ರಾರ್ಥನೆಯನ್ನು ದೇವರೂ ತಿರಸ್ಕರಿಸುವನು.

ಪ್ರಕಟನೆ ೨೧:೨೭
ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

ಮಾರ್ಕನು ೧೩:೧೪
“ವಿನಾಶವನ್ನು ಉಂಟುಮಾಡುವ ಭಯಂಕರ ವಸ್ತುವನ್ನು ನೀವು ನೋಡುತ್ತೀರಿ. ಇದು ನಿಂತುಕೊಳ್ಳಬಾರದಂಥ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುವವನು ಇದರ ಅರ್ಥವನ್ನು ತಿಳಿದುಕೊಳ್ಳಬೇಕು) ಆ ಸಮಯದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಬೇಕು.

ಮತ್ತಾಯನು ೨೪:೧೫
“ಭಯಂಕರವಾದ ನಾಶಕ್ಕೆ ಕಾರಣವಾದ ವಸ್ತುವೊಂದನ್ನು ಕುರಿತು ಪ್ರವಾದಿ ದಾನಿಯೇಲನು ಹೇಳಿದ್ದಾನೆ. ಈ ಭಯಂಕರವಾದ ವಸ್ತುವು ದೇವಾಲಯದ ಪರಿಶುದ್ಧ ಸ್ಥಳದಲ್ಲಿ ನಿಂತಿರುವುದನ್ನು ನೀವು ನೋಡುವಿರಿ. (ಇದನ್ನು ಓದುತ್ತಿರುವವನು ಇದರ ಅರ್ಥವನ್ನು ಗ್ರಹಿಸಿಕೊಳ್ಳಲಿ.)

ರೋಮನರಿಗೆ ೧:೨೬-೨೭
[೨೬] ಅವರು ಆ ರೀತಿ ವರ್ತಿಸಿದ್ದರಿಂದಲೇ, ದೇವರು ಅವರನ್ನು ನಾಚಿಕೆಕರವಾದ ಕಾಮಾಭಿಲಾಷೆಗೆ ಬಿಟ್ಟುಕೊಟ್ಟನು. ಅವರ ಸ್ತ್ರೀಯರು ಪುರಷರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ, ಸಲಿಂಗಕಾಮಿಗಳಾದರು.[೨೭] ಅದೇರೀತಿಯಲ್ಲಿ, ಪುರುಷರು ಸ್ತ್ರೀಯರೊಂದಿಗೆ ಪಡೆಯುತ್ತಿದ್ದ ಸಹಜವಾದ ಲೈಂಗಿಕ ಸಂಪರ್ಕವನ್ನು ನಿಲ್ಲಿಸಿ ಉದ್ರೇಕಗೊಂಡ ಸಲಿಂಗಕಾಮಿಗಳಾದರು. ಅವರು ತಮ್ಮ ದುರ್ನಡತೆಗೆ ತಕ್ಕ ದಂಡನೆಯನ್ನು ತಮ್ಮ ದೇಹಗಳಿಗೆ ಬರಮಾಡಿಕೊಂಡರು.

ಯಾಜಕಕಾಂಡ ೨೦:೧೨-೧೩
[೧೨] “ಒಬ್ಬನು ತನ್ನ ಸೊಸೆಯೊಡನೆ ಲೈಂಗಿಕ ಸಂಬಂಧ ಬೆಳೆಸಿದರೆ, ಅವರಿಬ್ಬರೂ ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ. ಅವರು ಬಹಳ ಕೆಟ್ಟದಾದ ಲೈಂಗಿಕ ಪಾಪವನ್ನು ಮಾಡಿದವರಾಗಿದ್ದಾರೆ.[೧೩] “ಒಬ್ಬನು ಸ್ತ್ರೀಯೊಂದಿಗೆ ಸಂಗಮಿಸುವಂತೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದರೆ, ಆಗ ಈ ಇಬ್ಬರೂ ಭಯಂಕರವಾದ ಪಾಪ ಮಾಡಿದವರಾಗಿದ್ದಾರೆ. ಅವರಿಗೆ ಮರಣಶಿಕ್ಷೆಯಾಗಬೇಕು. ಅವರು ಕೊಲ್ಲಲ್ಪಡಬೇಕು. ಅವರ ಮರಣಕ್ಕೆ ಅವರೇ ಜವಾಬ್ದಾರರಾಗಿದ್ದಾರೆ.

ಜ್ಞಾನೋಕ್ತಿಗಳು ೬:೧೬-೨೦
[೧೬] ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:[೧೭] ಗರ್ವದ ಕಣ್ಣು, ಸುಳ್ಳಾಡುವ ನಾಲಿಗೆ, ನಿರಪರಾಧಿಗಳನ್ನು ಕೊಲ್ಲುವ ಕೈ.[೧೮] ದುರಾಲೋಚನೆ ಮಾಡುವ ಹೃದಯ, ಕೇಡುಮಾಡಲು ಓಡುವ ಕಾಲು.[೧೯] ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.[೨೦] ನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ.

Kannada Bible 1934
Public Domain: 1934