೧ |
ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು. |
೨ |
ಅವನ ಹಿರಿಯ ಮಗನ ಹೆಸರು ಯೋವೇಲ್, ಎರಡನೇ ಮಗನ ಹೆಸರು ಅಬೀಯ; ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು. |
೩ |
ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚ ತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪು ಮಾಡುತ್ತಿದ್ದರು. |
೪ |
ಆದುದರಿಂದ ಇಸ್ರಯೇಲರ ಹಿರಿಯರೆಲ್ಲರೂ ಕೂಡಿ ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದು, |
೫ |
“ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು. |
೬ |
‘ನ್ಯಾಯಸ್ಥಾಪನೆಗಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಡಿ’ ಎಂಬ ಮಾತಿಗೆ ಸಮುವೇಲನು ದುಃಖಪಟ್ಟನು. ಸರ್ವೇಶ್ವರನನ್ನು ಪ್ರಾರ್ಥಿಸಿದನು. |
೭ |
ಸರ್ವೇಶ್ವರ ಅವನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆ ಬೇಡವೆನ್ನುತ್ತಾರೆ. |
೮ |
ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿದೆ. ಅಂದಿನಿಂದ ಇಂದಿನವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಪೂಜಿಸಿದರು. ನನಗೆ ಹೇಗೆ ಮಾಡಿದರೋ ಹಾಗೆಯೇ ನಿನಗೂ ಮಾಡುತ್ತಾರೆ. |
೯ |
ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟು ಘನವಾದುದೆಂಬುದನ್ನು ಅವರಿಗೆ ತಿಳಿಸಿ ಎಚ್ಚರಿಸದೆ ಇರಬೇಡ,” ಎಂದು ಹೇಳಿದರು. |
೧೦ |
ಸಮುವೇಲನು ಅರಸಬೇಕೆಂದು ಕೋರಿದ ಜನರಿಗೆ, |
೧೧ |
ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ; ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವರ ರಥಗಳ ಮುಂದೆ ಓಡಬೇಕಾಗುವುದು. |
೧೨ |
ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾಶದಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು. |
೧೩ |
ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳದ್ರವ್ಯ ಮಾಡುವುದಕ್ಕೂ, ಅಡಿಗೆ ಮಾಡುವುದಕ್ಕೂ, ರೊಟ್ಟಿ ಸುಡುವುದಕ್ಕೂ ನೇಮಿಸಿಕೊಳ್ಳುವನು. |
೧೪ |
ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಎಣ್ಣೆ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು. |
೧೫ |
ನಿಮ್ಮ ಧಾನ್ಯದ್ರಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಪರಿವಾರದವರಿಗೂ ಕೊಡುವನು. |
೧೬ |
ನಿಮ್ಮ ದಾಸದಾಸಿಯರನ್ನು ಹಾಗು ಉತ್ತಮವಾದ ಎತ್ತುಕತ್ತೆಗಳನ್ನು ತನಗಾಗಿ ದುಡಿಸಿಕೊಳ್ಳುವನು. |
೧೭ |
ಕುರಿಹಿಂಡುಗಳಲ್ಲೂ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವೂ ಅವನಿಗೆ ಗುಲಾಮರಾಗಿರಬೇಕು. |
೧೮ |
ಆಗ, ನೀವು ಆರಿಸಿಕೊಂಡ ಅರಸನ ನಿಮಿತ್ತ, ಆ ದಿನದಲ್ಲಿ ಬೇಸತ್ತು ಸರ್ವೇಶ್ವರನಿಗೆ ಮೊರೆಯಿಡುವಿರಿ; ಆಗ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ,” ಎಂದನು. |
೧೯ |
ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ ಹೋದರು. “ಅದಿರಲಿ; ನಮಗೆ ಅರಸನನ್ನು ಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು. |
೨೦ |
ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು. |
೨೧ |
ಸಮುವೇಲನು ಜನರ ಈ ಎಲ್ಲ ಮಾತುಗಳನ್ನು ಸರ್ವೇಶ್ವರನಿಗೆ ತಿಳಿಸಿದನು. |
೨೨ |
ಸರ್ವೇಶ್ವರ ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು,” ಎಂದರು. ಆಗ ಸಮುವೇಲನು ಇಸ್ರಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ,” ಎಂದು ಅಪ್ಪಣೆಕೊಟ್ಟನು.
|
Kannada Bible (KNCL) 2016 |
No Data |
|
|
|
|
|
|
|
|
|
|
ಸಮುವೇಲನು ೧ ೮:1 |
ಸಮುವೇಲನು ೧ ೮:2 |
ಸಮುವೇಲನು ೧ ೮:3 |
ಸಮುವೇಲನು ೧ ೮:4 |
ಸಮುವೇಲನು ೧ ೮:5 |
ಸಮುವೇಲನು ೧ ೮:6 |
ಸಮುವೇಲನು ೧ ೮:7 |
ಸಮುವೇಲನು ೧ ೮:8 |
ಸಮುವೇಲನು ೧ ೮:9 |
ಸಮುವೇಲನು ೧ ೮:10 |
ಸಮುವೇಲನು ೧ ೮:11 |
ಸಮುವೇಲನು ೧ ೮:12 |
ಸಮುವೇಲನು ೧ ೮:13 |
ಸಮುವೇಲನು ೧ ೮:14 |
ಸಮುವೇಲನು ೧ ೮:15 |
ಸಮುವೇಲನು ೧ ೮:16 |
ಸಮುವೇಲನು ೧ ೮:17 |
ಸಮುವೇಲನು ೧ ೮:18 |
ಸಮುವೇಲನು ೧ ೮:19 |
ಸಮುವೇಲನು ೧ ೮:20 |
ಸಮುವೇಲನು ೧ ೮:21 |
ಸಮುವೇಲನು ೧ ೮:22 |
|
|
|
|
|
|
ಸಮುವೇಲನು ೧ 1 / ಸಮು೧ 1 |
ಸಮುವೇಲನು ೧ 2 / ಸಮು೧ 2 |
ಸಮುವೇಲನು ೧ 3 / ಸಮು೧ 3 |
ಸಮುವೇಲನು ೧ 4 / ಸಮು೧ 4 |
ಸಮುವೇಲನು ೧ 5 / ಸಮು೧ 5 |
ಸಮುವೇಲನು ೧ 6 / ಸಮು೧ 6 |
ಸಮುವೇಲನು ೧ 7 / ಸಮು೧ 7 |
ಸಮುವೇಲನು ೧ 8 / ಸಮು೧ 8 |
ಸಮುವೇಲನು ೧ 9 / ಸಮು೧ 9 |
ಸಮುವೇಲನು ೧ 10 / ಸಮು೧ 10 |
ಸಮುವೇಲನು ೧ 11 / ಸಮು೧ 11 |
ಸಮುವೇಲನು ೧ 12 / ಸಮು೧ 12 |
ಸಮುವೇಲನು ೧ 13 / ಸಮು೧ 13 |
ಸಮುವೇಲನು ೧ 14 / ಸಮು೧ 14 |
ಸಮುವೇಲನು ೧ 15 / ಸಮು೧ 15 |
ಸಮುವೇಲನು ೧ 16 / ಸಮು೧ 16 |
ಸಮುವೇಲನು ೧ 17 / ಸಮು೧ 17 |
ಸಮುವೇಲನು ೧ 18 / ಸಮು೧ 18 |
ಸಮುವೇಲನು ೧ 19 / ಸಮು೧ 19 |
ಸಮುವೇಲನು ೧ 20 / ಸಮು೧ 20 |
ಸಮುವೇಲನು ೧ 21 / ಸಮು೧ 21 |
ಸಮುವೇಲನು ೧ 22 / ಸಮು೧ 22 |
ಸಮುವೇಲನು ೧ 23 / ಸಮು೧ 23 |
ಸಮುವೇಲನು ೧ 24 / ಸಮು೧ 24 |
ಸಮುವೇಲನು ೧ 25 / ಸಮು೧ 25 |
ಸಮುವೇಲನು ೧ 26 / ಸಮು೧ 26 |
ಸಮುವೇಲನು ೧ 27 / ಸಮು೧ 27 |
ಸಮುವೇಲನು ೧ 28 / ಸಮು೧ 28 |
ಸಮುವೇಲನು ೧ 29 / ಸಮು೧ 29 |
ಸಮುವೇಲನು ೧ 30 / ಸಮು೧ 30 |
ಸಮುವೇಲನು ೧ 31 / ಸಮು೧ 31 |