A A A A A
×

ಕನ್ನಡ ಬೈಬಲ್ (KNCL) 2016

ಸಮುವೇಲನು ೧ ೨

ಹನ್ನಳು ಹೀಗೆಂದು ಭಜಿಸಿದಳು: “ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ ನನಗಿತ್ತಿರುವನಾ ಸಂತಸದಾಯಕ ಮುಕ್ತಿ.
ಸರ್ವೇಶ್ವರನಂಥ ಪರಮಪಾವನನಿಲ್ಲ ನಿನ್ನ ಹೊರತು ದೇವಾ, ಬೇರೆ ದೇವನಿಲ್ಲ; ನಮ್ಮ ದೇವನಿಗೆ ಸಮನಾದ ಆಶ್ರಯದುರ್ಗವಿಲ್ಲ.
ಇನ್ನು ನಿಲ್ಲಲಿ ಗರ್ವದ ಮಾತು ಬಾಯಿಂದ ಬರದಿರಲಿ ಸೊಕ್ಕಿನ ಸೊಲ್ಲು; ಸರ್ವೇಶ್ವರನಾದ ದೇವನೇ ಸರ್ವಜ್ಞನು. ಮಾನವಕ್ರಿಯೆಗಳ ತೂಕ ನೋಡುವಾತನವನು.
ಮುರಿದು ಬಿದ್ದಿವೆ ಶೂರರ ಬಿಲ್ಲುಬಾಣಗಳು ದುರ್ಬಲರಾದರೋ ಶೌರ್ಯದ ನಡುಕಟ್ಟಿ ನಿಂತಿಹರು.
ಉಂಡು ಸುಖದಿಂದಿರುವರು ಹಸಿವುಗೊಂಡವರು ಹೊಟ್ಟೆಗಾಗಿ ಕೂಲಿಮಾಡುತ್ತಿಹರು ತೃಪ್ತರಿದ್ದವರು. ಬಂಜೆ ಹೆರುವಳು ಆರೇಳು ಮಕ್ಕಳನು ಒಬ್ಬಂಟಿಗಳಾಗಿರುವಳು ಮಕ್ಕಳಿವೆ ಎಂದವಳು.
ಜೀವಕೊಡುವವನು, ತೆಗೆದುಕೊಳ್ಳುವವನು ಆ ಸರ್ವೇಶ್ವರನೇ ಪಾತಾಳಕ್ಕಿಳಿಸುವವನು, ಮೇಲಕ್ಕೆಳೆದುಕೊಳ್ಳುವವನು ಆತನೇ.
ಬಡತನ, ಸಿರಿತನ ಕೊಡುವವನು ಆ ಸರ್ವೇಶ್ವರನೇ ತಗ್ಗಿಸುವವನು, ಹೆಚ್ಚಿಸುವವನು ಆತನೇ.
ಎತ್ತುವನಾತ ದೀನರನು ಧೂಳಿಂದ, ದರಿದ್ರರನು ತಿಪ್ಪೆಯಿಂದ. ಕುಳ್ಳರಿಸುವನವರನು ಅಧಿಪತಿಗಳ ಸಮೇತ ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ. ಕಾರಣ-ಭೂಮಿಯ ಆಧಾರಸ್ತಂಭಗಳು ಸರ್ವೇಶ್ವರನವೇ ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ.
ಕಾಯುವನಾತ ತನ್ನ ಭಕ್ತರನು ಹೆಜ್ಜೆ ಹೆಜ್ಜೆಗು ದುರುಳರಾದರೋ ಮುಳುಗಿ ಮೌನ ತಾಳುವರು ಅಂಧಕಾರದೊಳು. ಕೇವಲ ಭುಜಬಲದಿಂದ ಜಯಹೊಂದಲಾರನು ನರಮಾನವನು!
೧೦
ಚದರಿಹೋಗುವರು ಸರ್ವೇಶ್ವರನ ವಿರೋಧಿಗಳು ಆಗಸದಿಂದಾತ ಅವರ ವಿರುದ್ಧ ಗರ್ಜಿಸಲು! ನ್ಯಾಯ ತೀರಿಸುವನಾತ ಜಗದ ಕಟ್ಟಕಡೆಯವರೆಗೆ ಶಕ್ತಿಸಾಮರ್ಥ್ಯವನೀವನು ತಾ ನೇಮಿಸಿದರಸನಿಗೆ ಏರಿಸುವನು ತನ್ನಭಿಷಿಕ್ತನ ಒಲುಮೆಯನು ಉನ್ನತಿಗೆ.
೧೧
ಎಲ್ಕಾನನು ರಾಮಾದಲ್ಲಿದ್ದ ತನ್ನ ಮನೆಗೆ ಹಿಂದಿರುಗಿದನು. ಹುಡುಗ ಸಮುವೇಲನು ಯಾಜಕ ಏಲಿಯನ ಕೈಕೆಳಗಿದ್ದು ಸರ್ವೇಶ್ವರನ ಸೇವೆಮಾಡುತ್ತಾ ಬಂದನು.
೧೨
ಏಲಿಯ ಮಕ್ಕಳು ಮಹಾದುಷ್ಟರು. ಅವರು ಸರ್ವೇಶ್ವರನನ್ನು ಲಕ್ಷಿಸುತ್ತಿರಲಿಲ್ಲ.
೧೩
ಬಲಿಯರ್ಪಿಸುವುದಕ್ಕೆ ಬಂದ ಜನರಲ್ಲೂ ಯಾಜಕರಾದ ಇವರು ಸರಿಯಾಗಿ ವರ್ತಿಸುತ್ತಿರಲಿಲ್ಲ; ಬಲಿಮಾಂಸ ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲ ಹಿಡಿದು ಬರುತ್ತಿದ್ದನು.
೧೪
ಅದನ್ನು ಮಾಂಸ ಬೇಯುತ್ತಿದ್ದ ಕೊಪ್ಪರಿಗೆಯಲ್ಲಾಗಲಿ, ಭಾಂಡದಲ್ಲಾಗಲಿ, ತಪ್ಪಲೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚಿ ಅದಕ್ಕೆ ಸಿಕ್ಕಿದೆಲ್ಲವನ್ನು ಯಾಜಕನಿಗೆಂದು ಹೇಳಿ ತೆಗೆದುಕೊಳ್ಳುತ್ತಿದ್ದನು. ಶಿಲೋವಿಗೆ ಬರುವ ಇಸ್ರಯೇಲರೆಲ್ಲರಿಗು ಹೀಗೆಯೇ ಮಾಡುತ್ತಿದ್ದರು.
೧೫
ಇದಲ್ಲದೆ, ಕೊಬ್ಬನ್ನು ಹೋಮಮಾಡುವುದಕ್ಕೆ ಮುಂಚೆಯೇ ಯಾಜಕನ ಆಳು ಬಂದು ಬಲಿಯರ್ಪಿಸುತ್ತಿದ್ದವನಿಗೆ, “ಹುರಿಯತಕ್ಕ ಮಾಂಸವನ್ನು ಯಾಜಕನಿಗೆ ಕೊಡು; ನೀವು ಬೇಯಿಸಿದ ಮಾಂಸವನ್ನು ಅವರು ತೆಗೆದುಕೊಳ್ಳುವುದಿಲ್ಲ; ಅವರಿಗೆ ಹಸಿ ಮಾಂಸವೇ ಬೇಕು,” ಎನ್ನುತ್ತಿದ್ದನು.
೧೬
ಬಲಿಯರ್ಪಿಸುತ್ತಿದ್ದವನು ಅವನಿಗೆ, “ಮೊದಲು ಕೊಬ್ಬನ್ನು ಹೋಮಮಾಡೋಣ; ಅನಂತರ ನಿನಗೆ ಬೇಕಾದುದನ್ನು ತೆಗೆದುಕೊಳ್ಳುವಿಯಂತೆ,” ಎಂದು ಹೇಳಿದಾಗ, “ಕೂಡದು, ಈಗಲೇ ಬೇಕು; ಇಲ್ಲವಾದರೆ ಬಲಾತ್ಕಾರದಿಂದ ತೆಗೆದುಕೊಳ್ಳುತ್ತೇನೆ,” ಎಂದು ಪೀಡಿಸುತ್ತಿದ್ದನು.
೧೭
ಹೀಗೆ ಸರ್ವೇಶ್ವರನ ನೈವೇದ್ಯವನ್ನು ತುಚ್ಛವಾಗಿ ಕಾಣುತ್ತಿದ್ದುದರಿಂದ ದೇವರ ದೃಷ್ಟಿಯಲ್ಲಿ ಏಲಿಯ ಮಕ್ಕಳ ಪಾಪ ಘೋರವಾಗಿತ್ತು.
೧೮
ಬಾಲಕನಾದ ಸಮುವೇಲನು ‘ಏಫೋದ’ ಎಂಬ ಪ್ರತ್ಯೇಕ ಮಡಿಯಂಗಿಯನ್ನು ತೊಟ್ಟುಕೊಂಡು ಸರ್ವೇಶ್ವರನ ಸಾನ್ನಿಧ್ಯಸೇವೆಯನ್ನು ಮಾಡುತ್ತಿದ್ದನು.
೧೯
ಅವನ ತಾಯಿ ಪ್ರತಿವರ್ಷ ಗಂಡನ ಜೊತೆಯಲ್ಲಿ ಬಲಿಯನ್ನು ಅರ್ಪಿಸುವುದಕ್ಕೆ ಬಂದಾಗ ಒಂದು ಚಿಕ್ಕ ನಿಲುವಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
೨೦
ಎಲ್ಕಾನನಿಗೆ ಏಲಿ, “ನೀನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ನಿನಗೆ ಬೇರೆ ಮಕ್ಕಳಾಗಲಿ!” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.
೨೧
ಸರ್ವೇಶ್ವರನ ಅನುಗ್ರಹ ಹನ್ನಳಿಗೆ ಲಭಿಸಿತು. ಆಕೆಗೆ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಾದುವು. ಬಾಲಕ ಸಮುವೇಲನು ಸರ್ವೇಶ್ವರನ ಸನ್ನಿಧಿಯಲ್ಲಿ ಬೆಳೆದು ದೊಡ್ಡವನಾದನು.
೨೨
ಈಗ ಏಲಿ ಬಹಳ ಮುದುಕನಾಗಿದ್ದ. ತನ್ನ ಮಕ್ಕಳು ಇಸ್ರಯೇಲ್ ಜನರಿಗೆ ಮಾಡುತ್ತಿದ್ದುದೆಲ್ಲಾ ಅವನ ಕಿವಿಗೆ ಬೀಳುತ್ತಿತ್ತು. ದೇವದರ್ಶನದ ಗುಡಾರದ ಬಾಗಿಲಿನಲ್ಲಿ ಕೆಲಸಮಾಡುತ್ತಿದ್ದ ಸ್ತ್ರೀಯರೊಡನೆ ಮಲಗುತ್ತಿದ್ದಾರೆಂಬುದನ್ನೂ ಕೇಳಿದ್ದ.
೨೩
ಆದುದರಿಂದ ಅವರಿಗೆ, “ಜನರೆಲ್ಲರು ನಿಮ್ಮ ದುಷ್ಕೃತ್ಯಗಳ ಬಗ್ಗೆ ದೂರುವುದನ್ನು ಕೇಳಿದ್ದೇನೆ. ಹೀಗೇಕೆ ಮಾಡುತ್ತೀರಿ?
೨೪
ಮಕ್ಕಳೇ, ಹೀಗೆ ಮಾಡಬಾರದು. ನೀವು ಸರ್ವೇಶ್ವರನ ಜನರನ್ನು ದುರ್ಮಾರ್ಗಕ್ಕೆ ಎಳೆಯುತ್ತಿದ್ದೀರೆಂದು ಕೇಳಿದ್ದೇನೆ. ಇದು ಸರಿಯಲ್ಲ.
೨೫
ಮನುಷ್ಯನು ಮನುಷ್ಯನಿಗೆ ವಿರುದ್ಧ ಅಪರಾಧ ಮಾಡಿದರೆ ದೇವರು ಮಧ್ಯಸ್ಥಿಕೆಯನ್ನು ವಹಿಸುತ್ತಾರೆ. ಆದರೆ ಮನುಷ್ಯನು ಸರ್ವೇಶ್ವರನಿಗೆ ವಿರುದ್ಧ ಅಪರಾಧ ಮಾಡಿದರೆ ಮಧ್ಯಸ್ಥಿಕೆ ವಹಿಸುವವರಾರು?” ಎಂದು ಎಚ್ಚರಿಸಿದನು. ಆದರೂ ಅವರು ತಮ್ಮ ತಂದೆಯ ಮಾತಿಗೆ ಕಿವಿಗೊಡಲಿಲ್ಲ. ಎಂದೇ ಅವರನ್ನು ಕೊಲ್ಲಬೇಕೆಂಬುದು ಸರ್ವೇಶ್ವರನ ಚಿತ್ತವಾಗಿತ್ತು.
೨೬
ಬಾಲಕ ಸಮುವೇಲ ಈ ಮಧ್ಯೆ ಬೆಳೆಯುತ್ತಾ ಸರ್ವೇಶ್ವರನ ಹಾಗು ಮಾನವರ ಪ್ರೀತಿಗೆ ಪಾತ್ರನಾಗುತ್ತಿದ್ದನು.
೨೭
ಒಂದು ದಿನ ದೇವಭಕ್ತನೊಬ್ಬನು ಏಲಿಯ ಬಳಿಗೆ ಬಂದು, ಸರ್ವೇಶ್ವರನಿಂದ ಬಂದ ಈ ಸಮಾಚಾರವನ್ನು ತಿಳಿಸಿದನು: “ಇಸ್ರಯೇಲರು ಈಜಿಪ್ಟಿನಲ್ಲಿ ಫರೋಹನ ದಾಸತ್ವದಲ್ಲಿದ್ದಾಗ ನಾನು ನಿನ್ನ ಗೋತ್ರದವರಿಗೆ ಪ್ರತ್ಯಕ್ಷನಾದೆ;
೨೮
ಇಸ್ರಯೇಲರ ಕುಟುಂಬಗಳಲ್ಲೆಲ್ಲಾ ಅವರನ್ನೇ, ಯಾಜಕ ಸೇವಾವೃತ್ತಿಗೆ ಆರಿಸಿಕೊಂಡೆ: ಅಂದರೆ, ಬಲಿಯರ್ಪಿಸುವುದಕ್ಕೆ, ಧೂಪಾರತಿ ಎತ್ತುವುದಕ್ಕೆ ಹಾಗು ‘ಏಫೋದ’ನ್ನು ಧರಿಸಿಕೊಳ್ಳುವುದಕ್ಕೆ ಆರಿಸಿಕೊಂಡೆ; ಇಸ್ರಯೇಲರು ಅರ್ಪಿಸುವ ಬಲಿಶೇಷದ ಹಕ್ಕನ್ನೂ ಅವರಿಗೆ ಅನುಗ್ರಹಿಸಿದೆ.
೨೯
ಆದರೆ ನನ್ನ ಪ್ರಜೆ ಇಸ್ರಯೇಲರು ನನ್ನ ಆಜ್ಞಾನುಸಾರ ನನ್ನ ಮಂದಿರಕ್ಕೆ ತರುವ ಬಲಿದಾನಗಳ ಹಾಗು ನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿದ್ದೀರಿ. ಅವುಗಳ ಶ್ರೇಷ್ಠಭಾಗಗಳಿಂದ ನಿಮ್ಮನ್ನೇ ಕೊಬ್ಬಿಸಿಕೊಳ್ಳುತ್ತಿದ್ದೀರಿ; ಏಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೇ?
೩೦
ನಿನ್ನ ಗೋತ್ರದವರೂ ಸಂತಾನದವರೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಯೇಲರ ದೇವರಾದ ಸರ್ವೇಶ್ವರನೆಂಬ ನಾನು ಈಗ ತಿಳಿಸುವುದನ್ನು ಕೇಳು: ಇನ್ನು ಇದೆಲ್ಲ ನನ್ನಿಂದ ದೂರ ತೊಲಗಲಿ; ನನ್ನನ್ನು ಸನ್ಮಾನಿಸುವವನನ್ನು ನಾನು ಸನ್ಮಾನಿಸುವೆನು; ನನ್ನನ್ನು ಉಪೇಕ್ಷಿಸುವವನನ್ನು ನಾನು ತಿರಸ್ಕರಿಸುವೆನು.
೩೧
ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರಲಿವೆ. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ.
೩೨
ನಿನ್ನ ವೈರಿಯೇ ನನ್ನ ಮಂದಿರದಲ್ಲಿ ಸೇವೆಮಾಡುವುದನ್ನು ನೀನು ನೋಡುವೆ. ಇಸ್ರಯೇಲರಿಗೆ ಸರ್ವಶುಭವನ್ನು ದಯಪಾಲಿಸುವೆನು; ಆದರೆ ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದೇ ಇಲ್ಲ.
೩೩
ನನ್ನ ಸಾನ್ನಿಧ್ಯ ಸೇವೆಯಿಂದ ನಿಮ್ಮಲ್ಲಿ ಒಬ್ಬನನ್ನು ಉಳಿಸಿ ಮಿಕ್ಕವರನ್ನು ತೆಗೆದುಹಾಕುವೆನು. ಉಳಿಸಲಾದವನು ಕೂಡ ಕುರುಡನಾಗಿ ನಿನ್ನ ವ್ಯಥೆಗೆ ಕಾರಣನಾಗುವನು. ನಿನ್ನ ಸಂತಾನದವರೆಲ್ಲರು ಕತ್ತಿಯಿಂದ ಸಾಯುವರು.
೩೪
ಇದೆಲ್ಲಾ ನೆರವೇರುವುದು ಎಂಬುದಕ್ಕೆ ಗುರುತಾಗಿ ನಿನ್ನ ಮಕ್ಕಳಾದ ಹೊಫ್ನಿ ಹಾಗು ಫೀನೆಹಾಸ್ ಒಂದೇ ದಿನದಲ್ಲಿ ಸಾಯುವರು.
೩೫
ನನ್ನ ಹೃನ್ಮನಗಳಿಗೆ ಸರಿಯಾದುದನ್ನೇ ಮಾಡುವ ಒಬ್ಬ ಶ್ರದ್ಧೆಯುಳ್ಳ ಯಾಜಕನನ್ನು ಎಬ್ಬಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.
೩೬
ನಿನ್ನ ಮನೆಯಲ್ಲಿ ಅಳಿದು ಉಳಿದವರು ಬಂದು ಅವನ ಮುಂದೆ ಅಡ್ಡಬೀಳುವರು; ‘ನಮಗೊಂದು ಬೆಳ್ಳಿಕಾಸನ್ನಾದರೂ ರೊಟ್ಟಿ ಚೂರನ್ನಾದರೂ ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ದೇವಸ್ಥಾನದ ಸೇವೆಯಲ್ಲಿ ಯಾವುದಕ್ಕಾದರು ನಮ್ಮನ್ನು ಸೇರಿಸಿಕೋ’ ಎಂದು ಬೇಡಿಕೊಳ್ಳುವರು\.
ಸಮುವೇಲನು ೧ ೨:1
ಸಮುವೇಲನು ೧ ೨:2
ಸಮುವೇಲನು ೧ ೨:3
ಸಮುವೇಲನು ೧ ೨:4
ಸಮುವೇಲನು ೧ ೨:5
ಸಮುವೇಲನು ೧ ೨:6
ಸಮುವೇಲನು ೧ ೨:7
ಸಮುವೇಲನು ೧ ೨:8
ಸಮುವೇಲನು ೧ ೨:9
ಸಮುವೇಲನು ೧ ೨:10
ಸಮುವೇಲನು ೧ ೨:11
ಸಮುವೇಲನು ೧ ೨:12
ಸಮುವೇಲನು ೧ ೨:13
ಸಮುವೇಲನು ೧ ೨:14
ಸಮುವೇಲನು ೧ ೨:15
ಸಮುವೇಲನು ೧ ೨:16
ಸಮುವೇಲನು ೧ ೨:17
ಸಮುವೇಲನು ೧ ೨:18
ಸಮುವೇಲನು ೧ ೨:19
ಸಮುವೇಲನು ೧ ೨:20
ಸಮುವೇಲನು ೧ ೨:21
ಸಮುವೇಲನು ೧ ೨:22
ಸಮುವೇಲನು ೧ ೨:23
ಸಮುವೇಲನು ೧ ೨:24
ಸಮುವೇಲನು ೧ ೨:25
ಸಮುವೇಲನು ೧ ೨:26
ಸಮುವೇಲನು ೧ ೨:27
ಸಮುವೇಲನು ೧ ೨:28
ಸಮುವೇಲನು ೧ ೨:29
ಸಮುವೇಲನು ೧ ೨:30
ಸಮುವೇಲನು ೧ ೨:31
ಸಮುವೇಲನು ೧ ೨:32
ಸಮುವೇಲನು ೧ ೨:33
ಸಮುವೇಲನು ೧ ೨:34
ಸಮುವೇಲನು ೧ ೨:35
ಸಮುವೇಲನು ೧ ೨:36
ಸಮುವೇಲನು ೧ 1 / ಸಮು೧ 1
ಸಮುವೇಲನು ೧ 2 / ಸಮು೧ 2
ಸಮುವೇಲನು ೧ 3 / ಸಮು೧ 3
ಸಮುವೇಲನು ೧ 4 / ಸಮು೧ 4
ಸಮುವೇಲನು ೧ 5 / ಸಮು೧ 5
ಸಮುವೇಲನು ೧ 6 / ಸಮು೧ 6
ಸಮುವೇಲನು ೧ 7 / ಸಮು೧ 7
ಸಮುವೇಲನು ೧ 8 / ಸಮು೧ 8
ಸಮುವೇಲನು ೧ 9 / ಸಮು೧ 9
ಸಮುವೇಲನು ೧ 10 / ಸಮು೧ 10
ಸಮುವೇಲನು ೧ 11 / ಸಮು೧ 11
ಸಮುವೇಲನು ೧ 12 / ಸಮು೧ 12
ಸಮುವೇಲನು ೧ 13 / ಸಮು೧ 13
ಸಮುವೇಲನು ೧ 14 / ಸಮು೧ 14
ಸಮುವೇಲನು ೧ 15 / ಸಮು೧ 15
ಸಮುವೇಲನು ೧ 16 / ಸಮು೧ 16
ಸಮುವೇಲನು ೧ 17 / ಸಮು೧ 17
ಸಮುವೇಲನು ೧ 18 / ಸಮು೧ 18
ಸಮುವೇಲನು ೧ 19 / ಸಮು೧ 19
ಸಮುವೇಲನು ೧ 20 / ಸಮು೧ 20
ಸಮುವೇಲನು ೧ 21 / ಸಮು೧ 21
ಸಮುವೇಲನು ೧ 22 / ಸಮು೧ 22
ಸಮುವೇಲನು ೧ 23 / ಸಮು೧ 23
ಸಮುವೇಲನು ೧ 24 / ಸಮು೧ 24
ಸಮುವೇಲನು ೧ 25 / ಸಮು೧ 25
ಸಮುವೇಲನು ೧ 26 / ಸಮು೧ 26
ಸಮುವೇಲನು ೧ 27 / ಸಮು೧ 27
ಸಮುವೇಲನು ೧ 28 / ಸಮು೧ 28
ಸಮುವೇಲನು ೧ 29 / ಸಮು೧ 29
ಸಮುವೇಲನು ೧ 30 / ಸಮು೧ 30
ಸಮುವೇಲನು ೧ 31 / ಸಮು೧ 31