A A A A A
×

ಕನ್ನಡ ಬೈಬಲ್ (KNCL) 2016

ಸಮುವೇಲನು ೧ ೧೯

ದಾವೀದನನ್ನು ಕೊಲ್ಲಬೇಕೆಂದು ಸೌಲನು ತನ್ನ ಮಗ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.
ಆದುದರಿಂದ ಅವನು ದಾವೀದನಿಗೆ, “ನನ್ನ ತಂದೆ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾರೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಿಗ್ಗೆ ಒಂದು ಗುಟ್ಟಾದ ಸ್ಥಳದಲ್ಲಿ ಅಡಗಿಕೊಂಡಿರು.
ನನ್ನ ತಂದೆಯ ಬಳಿಯಲ್ಲಿದ್ದು ನಿನ್ನ ಬಗ್ಗೆ ಅವರೊಡನೆ ಮಾತಾಡಿ ಗೊತ್ತಾದ ವಿಷಯವನ್ನು ನೀನು ಅವಿತುಕೊಂಡಿರುವ ಸ್ಥಳಕ್ಕೆ ಬಂದು ತಿಳಿಸುವೆನು,” ಎಂದು ಹೇಳಿದನು.
ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. “ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವು ನಿಮ್ಮ ಹಿತಕ್ಕಾಗಿಯೇ.
ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯರನ್ನು ಕೊಂದನು; ಸರ್ವೇಶ್ವರ ಇಸ್ರಯೇಲರಿಗೆ ಮಹಾ ಜಯವನ್ನುಂಟುಮಾಡಿದರು. ನೀವೂ ಅದನ್ನು ನೋಡಿ ಸಂತೋಷಪಟ್ಟಿರಿ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿ ಅಪರಾಧಕ್ಕೆ ನೀವೇಕೆ ಗುರಿ ಆಗುತ್ತೀರಿ?” ಎಂದನು.
ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. “ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ,” ಎಂದು ಪ್ರಮಾಣಮಾಡಿದನು.
ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರೆದುತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲೇ ಇರುವಂತೆ ಏರ್ಪಾಡಾಯಿತು.
ಫಿಲಿಷ್ಟಿಯರು ಮತ್ತೆ ಯುದ್ಧಕ್ಕೆ ಬಂದಾಗ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಪೂರ್ತಿಯಾಗಿ ಸೋಲಿಸಿ ಓಡಿಸಿಬಿಟ್ಟನು.
ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಆಗ ಸರ್ವೇಶ್ವರನಿಂದ ಬಂದ ದುರಾತ್ಮವೊಂದು ಅವನನ್ನು ಆವರಿಸಿತು.
೧೦
ಒಡನೆ ಕಿನ್ನರಿಯನ್ನು ಬಾರಿಸುತ್ತಿದ್ದ ದಾವೀದನನ್ನು ಗೋಡೆಗೆ ಕಚ್ಚಿಕೊಳ್ಳುವಂತೆ ತಿವಿಯಬೇಕೆಂದು ಅವನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಫಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.
೧೧
ಸೌಲನು ಕೂಡಲೆ ದೂತರನ್ನು ಕರೆಯಿಸಿ, “ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕು,” ಎಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ, “ನೀವು ಈ ರಾತ್ರಿಯೇ ತಪ್ಪಿಸಿಕೊಳ್ಳದೆ ಇದ್ದರೆ ನಾಳೆ ಬೆಳಿಗ್ಗೆ ಹತರಾಗುವಿರಿ,” ಎಂದು ಹೇಳಿ
೧೨
ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಿದಳು. ಅವನು ಓಡಿಹೋಗಿ ತಪ್ಪಿಸಿಕೊಂಡನು.
೧೩
ಅನಂತರ ಆಕೆ ಗೊಂಬೆಯೊಂದನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಮಾಡಿದ ತಲೆದಿಂಬನ್ನು ಇಟ್ಟು ಕಂಬಳಿಯನ್ನು ಹೊದಿಸಿದಳು.
೧೪
ಸೌಲನ ದೂತರು ದಾವೀದನನ್ನು ಹಿಡಿಯುವುದಕ್ಕೆ ಬಂದಾಗ ಅವಳು, “ಅವರಿಗೆ ಮೈ ಚೆನ್ನಾಗಿಲ್ಲ,” ಎಂದು ಹೇಳಿ ಕಳುಹಿಸಿದಳು.
೧೫
ಸೌಲನು ಪುನಃ ತನ್ನ ಆಳುಗಳಿಗೆ, “ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ನನ್ನ ಬಳಿಗೆ ತೆಗೆದುಕೊಂಡು ಬನ್ನಿ, ಅವನನ್ನು ಕೊಂದುಹಾಕುತ್ತೇನೆ,” ಎಂದು ಆಜ್ಞಾಪಿಸಿದನು.
೧೬
ಅವರು ಹೋಗಿ ನೋಡಲು, ಮುಖದ ಕಡೆ ಮೇಕೆಕೂದಲಿನಿಂದ ಮಾಡಿದ ದಿಂಬಾಗಿತ್ತು. ಹಾಸಿಗೆಯ ಮೇಲಿದ್ದುದು ಒಂದು ಗೊಂಬೆಯೆಂದು ತಿಳಿದುಬಂದಿತು.
೧೭
ಸೌಲನು ಮೀಕಳಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲವೆ?” ಎನ್ನಲು, ಆಕೆ ಅವನಿಗೆ, “’ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ’ ಎಂದು ಹೇಳಿದ,” ಎಂದಳು.
೧೮
ಹೀಗೆ ದಾವೀದನು ತಪ್ಪಿಸಿಕೊಂಡು ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದನು. ಸೌಲನು ತನಗೆ ಮಾಡಿದ್ದೆಲ್ಲವನ್ನೂ ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ಒಂದು ಮಠದಲ್ಲಿ ವಾಸವಾಗಿ ಇದ್ದರು.
೧೯
ದಾವೀದನು ರಾಮಾದ ಮಠದಲ್ಲಿ ಇರುವುದು ಸೌಲನಿಗೆ ಗೊತ್ತಾಯಿತು.
೨೦
ಕೂಡಲೆ ಅವನನ್ನು ಹಿಡಿದುತರುವುದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿಸಮೂಹವು ಪರವಶವಾಗಿ ಮಾತಾಡುವುದನ್ನೂ ಸಮುವೇಲನು ಅವರ ನಾಯಕನಾಗಿ ನಿಂತಿರುವುದನ್ನೂ ಕಂಡರು. ಆಗ ದೇವರ ಆತ್ಮ ಅವರ ಮೇಲೆಯೂ ಬಂದಿತು; ಅವರೂ ಪರವಶರಾಗಿ ಮಾತಾಡತೊಡಗಿದರು.
೨೧
ಸೌಲನಿಗೆ ಈ ವರ್ತಮಾನ ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು. ಇವರೂ ಪರವಶರಾದರು. ಮೂರನೆಯ ಸಾರಿ ಇನ್ನೂ ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಇವರೂ ಪರವಶರಾದರು.
೨೨
ಆಗ ಸೌಲನು ತಾನೇ ರಾಮಾಕ್ಕೆ ಹೋಗಬೇಕೆಂದು ಹೊರಟು ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, “ಸಮುವೇಲ ಹಾಗು ದಾವೀದನು ಎಲ್ಲಿರುತ್ತಾರೆ?” ಎಂದು ವಿಚಾರಿಸಿದನು. ಜನರು, “ರಾಮಾದ ಮಠದಲ್ಲಿ ಇದ್ದಾರೆ,” ಎಂದು ಉತ್ತರಕೊಟ್ಟರು.
೨೩
ಅವನು ಅಲ್ಲಿಂದ ರಾಮಾದ ಮಠಕ್ಕೆ ಹೋಗುವಾಗ ದೇವರ ಆತ್ಮ ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವವರೆಗೆ ಪರವಶನಾಗಿ ಮಾತಾಡುತ್ತಾ ಹೋದನು.
೨೪
ಅಲ್ಲಿಗೆ ಸೇರಿದ ಮೇಲೆ, ಅವನೂ ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪರವಶನಾಗಿ ಮಾತಾಡುತ್ತಾ ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಆದುದರಿಂದ “ಏನು, ಸೌಲನೂ ಪ್ರವಾದಿಯಾಗಿಬಿಟ್ಟನೋ?” ಎಂಬ ಗಾದೆಯುಂಟಾಯಿತು.
ಸಮುವೇಲನು ೧ ೧೯:1
ಸಮುವೇಲನು ೧ ೧೯:2
ಸಮುವೇಲನು ೧ ೧೯:3
ಸಮುವೇಲನು ೧ ೧೯:4
ಸಮುವೇಲನು ೧ ೧೯:5
ಸಮುವೇಲನು ೧ ೧೯:6
ಸಮುವೇಲನು ೧ ೧೯:7
ಸಮುವೇಲನು ೧ ೧೯:8
ಸಮುವೇಲನು ೧ ೧೯:9
ಸಮುವೇಲನು ೧ ೧೯:10
ಸಮುವೇಲನು ೧ ೧೯:11
ಸಮುವೇಲನು ೧ ೧೯:12
ಸಮುವೇಲನು ೧ ೧೯:13
ಸಮುವೇಲನು ೧ ೧೯:14
ಸಮುವೇಲನು ೧ ೧೯:15
ಸಮುವೇಲನು ೧ ೧೯:16
ಸಮುವೇಲನು ೧ ೧೯:17
ಸಮುವೇಲನು ೧ ೧೯:18
ಸಮುವೇಲನು ೧ ೧೯:19
ಸಮುವೇಲನು ೧ ೧೯:20
ಸಮುವೇಲನು ೧ ೧೯:21
ಸಮುವೇಲನು ೧ ೧೯:22
ಸಮುವೇಲನು ೧ ೧೯:23
ಸಮುವೇಲನು ೧ ೧೯:24
ಸಮುವೇಲನು ೧ 1 / ಸಮು೧ 1
ಸಮುವೇಲನು ೧ 2 / ಸಮು೧ 2
ಸಮುವೇಲನು ೧ 3 / ಸಮು೧ 3
ಸಮುವೇಲನು ೧ 4 / ಸಮು೧ 4
ಸಮುವೇಲನು ೧ 5 / ಸಮು೧ 5
ಸಮುವೇಲನು ೧ 6 / ಸಮು೧ 6
ಸಮುವೇಲನು ೧ 7 / ಸಮು೧ 7
ಸಮುವೇಲನು ೧ 8 / ಸಮು೧ 8
ಸಮುವೇಲನು ೧ 9 / ಸಮು೧ 9
ಸಮುವೇಲನು ೧ 10 / ಸಮು೧ 10
ಸಮುವೇಲನು ೧ 11 / ಸಮು೧ 11
ಸಮುವೇಲನು ೧ 12 / ಸಮು೧ 12
ಸಮುವೇಲನು ೧ 13 / ಸಮು೧ 13
ಸಮುವೇಲನು ೧ 14 / ಸಮು೧ 14
ಸಮುವೇಲನು ೧ 15 / ಸಮು೧ 15
ಸಮುವೇಲನು ೧ 16 / ಸಮು೧ 16
ಸಮುವೇಲನು ೧ 17 / ಸಮು೧ 17
ಸಮುವೇಲನು ೧ 18 / ಸಮು೧ 18
ಸಮುವೇಲನು ೧ 19 / ಸಮು೧ 19
ಸಮುವೇಲನು ೧ 20 / ಸಮು೧ 20
ಸಮುವೇಲನು ೧ 21 / ಸಮು೧ 21
ಸಮುವೇಲನು ೧ 22 / ಸಮು೧ 22
ಸಮುವೇಲನು ೧ 23 / ಸಮು೧ 23
ಸಮುವೇಲನು ೧ 24 / ಸಮು೧ 24
ಸಮುವೇಲನು ೧ 25 / ಸಮು೧ 25
ಸಮುವೇಲನು ೧ 26 / ಸಮು೧ 26
ಸಮುವೇಲನು ೧ 27 / ಸಮು೧ 27
ಸಮುವೇಲನು ೧ 28 / ಸಮು೧ 28
ಸಮುವೇಲನು ೧ 29 / ಸಮು೧ 29
ಸಮುವೇಲನು ೧ 30 / ಸಮು೧ 30
ಸಮುವೇಲನು ೧ 31 / ಸಮು೧ 31