A A A A A
×

ಕನ್ನಡ ಬೈಬಲ್ (KNCL) 2016

ನ್ಯಾಯಸ್ಥಾಪಕರು ೫

ಆ ದಿನ ದೆಬೋರಳು ಮತ್ತು ಅಬೀನೋವಮನ ಮಗ ಬಾರಾಕನು ಈ ಗೀತೆಯನ್ನು ಹಾಡಿದರು:
ಪಣತೊಟ್ಟಿದ್ದರು ಇಸ್ರಯೇಲಿನ ವೀರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;
ಅರಸರೇ, ಕೇಳಿ! ಪ್ರಭುಗಳೇ, ಕಿವಿಗೊಡಿ; ನಾ ಕಟ್ಟುವೆನು ಕವಿತೆಯನು ಸರ್ವೇಶ್ವರನಿಗೆ ನಾ ಭಜಿಸಿ ಹಾಡುವೆನು ಇಸ್ರಯೇಲರಾ ದೇವನಿಗೆ;
ಎದೋಮ್ಯರ ಪ್ರಾಂತ್ಯದಿಂದ, ಸೇಯೀರ ಗುಡ್ಡದಿಂದ ಹೇ ಸರ್ವೇಶ್ವರಾ, ನೀ ಹೊರಟು ಬರುವಾಗ ಕಂಪಿಸಿತು ಭೂಮಿ, ಹನಿಗರೆಯಿತು ಆಗಸ ಮಳೆಸುರಿಸಿತು ಮೇಘಮಂಡಲ.
ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿ ಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.
ಅನಾತನ ಮಗ ಶಮ್ಗರನ ಕಾಲದಲ್ಲಿ, ಯಾಯೇಲನ ದಿನಗಳಲಿ ನಿಂತುಹೋಯಿತು ಸಂಚಾರ ರಾಜಮಾರ್ಗಗಳಲಿ, ನಡೆದರು ಪಯಣಿಗರು ಸೀಳುದಾರಿಗಳಲಿ.
ದೆಬೋರಾ, ಇಸ್ರಯೇಲರ ತಾಯಿಯಂತೆ ನೀ ಬರುವ ಮುನ್ನ ಪಾಳುಬಿದ್ದಿದ್ದವು ಇಸ್ರಯೇಲ ಗ್ರಾಮಗಳೆಲ್ಲ.
ಆರಿಸಿಕೊಂಡಿದ್ದರು ಜನರು ಅನ್ಯ ದೇವತೆಗಳನು ಊರಬಾಗಿಲವರೆಗೆ ಬಂದಿತು ಕದನಕಾಳಗಗಳು ಇರಲಿಲ್ಲ ಗುರಾಣಿ, ಭರ್ಜಿಗಳಾವು ಓರ್ವರಲ್ಲೂ ಇಸ್ರಯೇಲರಾ ನಾಲ್ವತ್ತು ಸಾವಿರ ಸೈನಿಕರಲ್ಲೂ.
ಇಸ್ರಯೇಲಿನಾ ನಾಯಕರೊಡನೆ ಸೇರಿ ಸ್ವೇಚ್ಛೆಯಿಂದ ಸೈನ್ಯಸೇರಿದಾ ಜನರೊಡಗೂಡಿ ನಾ ನಲಿದು ಹಾಡುವೆನು, ಮಾಡಿರಿ ನೀವು ಸರ್ವೇಶ್ವರನ ಗುಣಗಾನವನು;
೧೦
ಬಿಳೀ ಕತ್ತೆಗಳ ಮೇಲೆ ಸವಾರಿ ಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತಿರುವವರೇ, ಮಾಡಿರಿ ಗಾನ, ಮಾಡಿರಿ ಗುಣಗಾನ, ಓ ಪಯಣಿಗರೇ.
೧೧
ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.
೧೨
ಎಚ್ಚರಗೊಳ್ಳು, ಎಚ್ಚರಗೊಳ್ಳು, ದೆಬೋರಾ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಮಾಡು ನೀ ಗುಣಗಾನ, ಬಾರಾಕನೇ, ಏಳು; ಅಬೀನೋವಮನ ಮಗನೇ, ಏಳು, ಸೆರೆಹಿಡಿದವರನು ನೀ ಸಾಗಿಸಿಕೊಂಡು ಹೋಗು.
೧೩
ಚದರಿಹೋದವರು ಕೂಡಿಬಂದರು ನಾಯಕರ ಬಳಿಗೆ ಸರ್ವೇಶ್ವರನ ಶೂರಜನರು ವೀರರಂತೆ ನೆರೆದುಬಂದರು ನನ್ನ ಸಹಾಯಕ್ಕೆ.
೧೪
ಬಂದರು ಅಮಾಲೇಕ್ಯರ ಪ್ರದೇಶದೊಳು ನೆಲೆಗೊಂಡ ಎಫ್ರಯೀಮ್ಯರು, ಅವರೊಂದಿಗೆ ಬಂದರು ಬೆನ್ಯಾಮೀನ್ಯರು, ಮಾಕೀರನ ಗೋತ್ರದ ಪ್ರಧಾನರು, ಜೆಬುಲೂನ್ ಕುಲದೊಳು ದಂಡಧಾರಿಗಳಾದ ಸೇನಾನಾಯಕರು.
೧೫
ಇಸ್ಸಾಕಾರ್ ಕುಲಪ್ರಭುಗಳು ಬಂದರು ದೆಬೋರಳ ಜೊತೆಯಲ್ಲಿ, ಆಗಮಿಸಿದನು ಬಾರಾಕನು ಇಸ್ಸಾಕಾರ್ಯರ ಸಂಗಡದಲಿ, ಇವನ ಹೆಜ್ಜೆಹಿಡಿದು ಬಂದರು ಅವರೆಲ್ಲರು ತವಕದಲಿ.
೧೬
ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.
೧೭
ಗಿಲ್ಯಾದರು ಉಳಿದರು ಜೋರ್ಡನಿನ ಆಚೆಯಲ್ಲೇ ದಾನ್ ಕುಲದವರು ಉಳಿಯರೇಕೆ, ಹಡಗುಗಳಲ್ಲೇ? ಅಶೇರ್ ಕುಲದವರೋ ಅಂಟುಕೊಂಡರು ತಮ್ಮ ರೇವುಗಳಿಗೇ ನೆಮ್ಮದಿಯಾಗಿ ಕೂತುಬಿಟ್ಟರು ಸಮುದ್ರತೀರದಲ್ಲೆ.
೧೮
ಅಂಥವರಲ್ಲ ಈ ಜೆಬುಲೂನ್ಯರು, ನಫ್ತಾಲ್ಯರು ಪ್ರಾಣವನ್ನೇ ಮುಡಿಪಾಗಿಟ್ಟರು ರಣಭೂಮಿಯೊಳು.
೧೯
ಎದ್ದುಬಂದು ಯುದ್ಧ ಮಾಡಿದರು ಅರಸುಗಳು ಕೂಡಿಬಂದು ಕಾದಾಡಿದರು ಕಾನಾನ್ಯ ರಾಜರುಗಳು ಮೆಗಿದ್ದೋ ನದಿಗಳ ಬಳಿ ತಾನಾಕದೊಳು ಆದರೆ ಗಿಟ್ಟಲಿಲ್ಲ ಅವರಿಗೆ ಬೆಳ್ಳಿದ್ರವ್ಯಗಳೇನು!
೨೦
ಕದನವಾಡಿದವು ತಾರೆಗಳು ಆಗಸದಿಂದಲೆ ಯುದ್ಧಮಾಡಿದವು ಸೀಸೆರನ ವಿರುದ್ಧ ತಮ್ಮಾ ಪಥದಿಂದಲೆ.
೨೧
ಶತ್ರುಗಳನು ಕೊಚ್ಚಿಕೊಂಡು ಹೋಯಿತು ಪೂರ್ವಪ್ರಸಿದ್ಧವಾದ ಆ ಕೀಷೋನ್ ಹೊಳೆಯು. ನನ್ನ ಮನವೇ, ನೀ ಧೈರ್ಯದಿಂದ ಮುಂದೆ ಸಾಗು.
೨೨
ನೆಲ ಕಂಪಿಸಿತು ಕುದುರೆಗಳ ಭರದೌಡಿನಿಂದ ಸುತ್ತಿಗೆಯಂತಹ ಆ ಕಾಲುಗಳ ಪೆಟ್ಟಿನಿಂದ
೨೩
‘ಶಾಪಹಾಕಿರಿ ಮೇರೋಜ್ ಊರಿಗೆ, ಅದರ ನಿವಾಸಿಗಳಿಗೆ ಬರಲಿಲ್ಲ ಅವರು ಯುದ್ಧವೀರರ ಜೊತೆಗೆ ಸರ್ವೇಶ್ವರನ ಸಹಾಯಕ್ಕೆ. ಶಪಿಸಿರಿ ಅವರನ್ನು’ ಎಂದು ಕರೆಗೊಟ್ಟನು ಸರ್ವೇಶ್ವರನ ದೂತನೆ.
೨೪
ಗುಡಾರಗಳಲಿ ವಾಸಿಸುವ ಸ್ತ್ರೀಯರಲ್ಲಿ ಯಾಯೇಲಳೆ ಭಾಗ್ಯವತಿ, ಹೌದು, ಅವಳೇ ಭಾಗ್ಯವತಿ, ಕೇನ್ಯನಾದ ಹೆಬೆರನ ಆ ಹೆಂಡತಿ.
೨೫
ನೀರು ಕೇಳಲು ಹಾಲು ಕೊಟ್ಟಳು ಉತ್ತಮ ಪಾತ್ರೆಯಲ್ಲಿ ಮೊಸರು ಕೊಟ್ಟಳು.
೨೬
ಗೂಟ ತೆಗೆದುಕೊಂಡಳು ಕೈಚಾಚಿ ಹಿಡಿದಳು ಬಲಗೈಯಲಿ ದೊಡ್ಡಕೊಡತಿ ಜಡಿದಳು ಸೀಸೆರನ ತಲೆಯನು ಬಡಿದಳಾ ಕೊಡತಿಯಿಂದ ಕಣತಲೆಗೇ ತಿವಿದು.
೨೭
ಬೊಗ್ಗಿಬಿದ್ದನು, ಉರುಳಿಬಿದ್ದನು, ಮುದುರಿಬಿದ್ದನವನು ಅವಳ ಕಾಲುಗಳ ಬಳಿ ಅಲ್ಲೆ ಸತ್ತುಬಿದ್ದನು.
೨೮
ಸೀಸೆರನ ತಾಯಿ ಇಣುಕಿ ನೋಡಿದಳು ಕಿಟಕಿಯಿಂದ ಕೂಗಿದಳು ಆ ಕಿಟಕಿಯ ಜಾಲರಿಗಳಿಂದ; ‘ಇಷ್ಟು ಹೊತ್ತಾಗಬೇಕೆ ರಥ ಬರುವುದಕ್ಕೆ? ಕುದುರೆಗಳ ಕಾಲುಗಳಿಗೆ ಇಷ್ಟು ಸಾವಕಾಶವೇಕೆ?’
೨೯
ಸಭ್ಯಸ್ತ್ರೀಯರೊಳು ಬುದ್ಧಿವಂತೆಯರು ಕೊಟ್ಟ ಉತ್ತರವನು ತನ್ನೊಳಗೇ ಮೆಲಕು ಹಾಕಿದ್ದಳು ಇಂತೆಂದುಕೊಂಡು:
೩೦
‘ನಿಶ್ಚಯವಾಗಿ ಸಿಕ್ಕಿರಬೇಕು ಅವರಿಗೆ ಕೊಳ್ಳೆ ಹಂಚಿಕೊಳ್ಳುತ್ತಿರಬೇಕು ಅದನು ತಮ್ಮತಮ್ಮಲ್ಲೆ ಪ್ರತಿಯೊಬ್ಬ ಸೈನಿಕನಿಗೆ ಒಬ್ಬೊಬ್ಬ ದಾಸಿಯರು ಸೀಸೆರನಿಗೊ, ಬಣ್ಣಬಣ್ಣವಾದ ಬಟ್ಟೆಬರೆಗಳು ವಿಚಿತ್ರ ಕಸೂತಿಹಾಕಿದ ಒಂದೆರಡು ವಸ್ತ್ರಗಳು, ಕಂಠಮಾಲೆಗಳು’.
೩೧
ಸರ್ವೇಶ್ವರನ ಶತ್ರುಗಳೆಲ್ಲರು ನಾಶವಾಗಲಿ ಇವರಂತೆ ಆತನ ಭಕ್ತರು ಬೆಳಗಲಿ ಉದಯಕಾಲದ ಸೂರ್ಯನಂತೆ! ನಾಡಿನಲಿ ನಾಲ್ವತ್ತು ವರ್ಷಕಾಲ ಶಾಂತಿ ನೆಲಸಿತ್ತು!
ನ್ಯಾಯಸ್ಥಾಪಕರು ೫:1
ನ್ಯಾಯಸ್ಥಾಪಕರು ೫:2
ನ್ಯಾಯಸ್ಥಾಪಕರು ೫:3
ನ್ಯಾಯಸ್ಥಾಪಕರು ೫:4
ನ್ಯಾಯಸ್ಥಾಪಕರು ೫:5
ನ್ಯಾಯಸ್ಥಾಪಕರು ೫:6
ನ್ಯಾಯಸ್ಥಾಪಕರು ೫:7
ನ್ಯಾಯಸ್ಥಾಪಕರು ೫:8
ನ್ಯಾಯಸ್ಥಾಪಕರು ೫:9
ನ್ಯಾಯಸ್ಥಾಪಕರು ೫:10
ನ್ಯಾಯಸ್ಥಾಪಕರು ೫:11
ನ್ಯಾಯಸ್ಥಾಪಕರು ೫:12
ನ್ಯಾಯಸ್ಥಾಪಕರು ೫:13
ನ್ಯಾಯಸ್ಥಾಪಕರು ೫:14
ನ್ಯಾಯಸ್ಥಾಪಕರು ೫:15
ನ್ಯಾಯಸ್ಥಾಪಕರು ೫:16
ನ್ಯಾಯಸ್ಥಾಪಕರು ೫:17
ನ್ಯಾಯಸ್ಥಾಪಕರು ೫:18
ನ್ಯಾಯಸ್ಥಾಪಕರು ೫:19
ನ್ಯಾಯಸ್ಥಾಪಕರು ೫:20
ನ್ಯಾಯಸ್ಥಾಪಕರು ೫:21
ನ್ಯಾಯಸ್ಥಾಪಕರು ೫:22
ನ್ಯಾಯಸ್ಥಾಪಕರು ೫:23
ನ್ಯಾಯಸ್ಥಾಪಕರು ೫:24
ನ್ಯಾಯಸ್ಥಾಪಕರು ೫:25
ನ್ಯಾಯಸ್ಥಾಪಕರು ೫:26
ನ್ಯಾಯಸ್ಥಾಪಕರು ೫:27
ನ್ಯಾಯಸ್ಥಾಪಕರು ೫:28
ನ್ಯಾಯಸ್ಥಾಪಕರು ೫:29
ನ್ಯಾಯಸ್ಥಾಪಕರು ೫:30
ನ್ಯಾಯಸ್ಥಾಪಕರು ೫:31
ನ್ಯಾಯಸ್ಥಾಪಕರು 1 / ನ್ಯಾಯ 1
ನ್ಯಾಯಸ್ಥಾಪಕರು 2 / ನ್ಯಾಯ 2
ನ್ಯಾಯಸ್ಥಾಪಕರು 3 / ನ್ಯಾಯ 3
ನ್ಯಾಯಸ್ಥಾಪಕರು 4 / ನ್ಯಾಯ 4
ನ್ಯಾಯಸ್ಥಾಪಕರು 5 / ನ್ಯಾಯ 5
ನ್ಯಾಯಸ್ಥಾಪಕರು 6 / ನ್ಯಾಯ 6
ನ್ಯಾಯಸ್ಥಾಪಕರು 7 / ನ್ಯಾಯ 7
ನ್ಯಾಯಸ್ಥಾಪಕರು 8 / ನ್ಯಾಯ 8
ನ್ಯಾಯಸ್ಥಾಪಕರು 9 / ನ್ಯಾಯ 9
ನ್ಯಾಯಸ್ಥಾಪಕರು 10 / ನ್ಯಾಯ 10
ನ್ಯಾಯಸ್ಥಾಪಕರು 11 / ನ್ಯಾಯ 11
ನ್ಯಾಯಸ್ಥಾಪಕರು 12 / ನ್ಯಾಯ 12
ನ್ಯಾಯಸ್ಥಾಪಕರು 13 / ನ್ಯಾಯ 13
ನ್ಯಾಯಸ್ಥಾಪಕರು 14 / ನ್ಯಾಯ 14
ನ್ಯಾಯಸ್ಥಾಪಕರು 15 / ನ್ಯಾಯ 15
ನ್ಯಾಯಸ್ಥಾಪಕರು 16 / ನ್ಯಾಯ 16
ನ್ಯಾಯಸ್ಥಾಪಕರು 17 / ನ್ಯಾಯ 17
ನ್ಯಾಯಸ್ಥಾಪಕರು 18 / ನ್ಯಾಯ 18
ನ್ಯಾಯಸ್ಥಾಪಕರು 19 / ನ್ಯಾಯ 19
ನ್ಯಾಯಸ್ಥಾಪಕರು 20 / ನ್ಯಾಯ 20
ನ್ಯಾಯಸ್ಥಾಪಕರು 21 / ನ್ಯಾಯ 21