A A A A A
×

ಕನ್ನಡ ಬೈಬಲ್ (KNCL) 2016

ನ್ಯಾಯಸ್ಥಾಪಕರು ೩

ಕಾನಾನ್ಯರೊಡನೆ ನಡೆದ ಯುದ್ಧಗಳಲ್ಲಿ ಒಂದರಲ್ಲೂ ಪಾಲ್ಗೊಳ್ಳದೆ ಇದ್ದ ಇಸ್ರಯೇಲರನ್ನು ಪರೀಕ್ಷಿಸುವುದಕ್ಕೂ
ಇಸ್ರಯೇಲ್ ಸಂತತಿಯವರಲ್ಲಿ ಯುದ್ಧವಿದ್ಯೆ ಅರಿಯದವರಿಗೆ ಅದನ್ನು ಕಲಿಸುವುದಕ್ಕೂ ಸರ್ವೇಶ್ವರ ಆ ನಾಡಿನಲ್ಲೇ ಉಳಿಸಿದ ಅನ್ಯಜನಾಂಗದವರು ಇವರು:
ಐದುಮಂದಿ ಫಿಲಿಷ್ಟಿಯ ಪ್ರಭುಗಳು, ಸರ್ವಕಾನಾನ್ಯರು, ಸಿದೋನ್ಯರು, ಲೆಬನೋನ್ ಪರ್ವತದಲ್ಲಿ ಬಾಳ್ ಹೆರ್ಮೋನ್ ಬೆಟ್ಟದಿಂದ ಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು.
ತಾವು ಮೋಶೆಯ ಮೂಲಕ ಇವರ ಪೂರ್ವಜರಿಗೆ ವಿಧಿಸಿದ ಆಜ್ಞೆಗಳನ್ನು ಇಸ್ರಯೇಲರು ಕೈಗೊಂಡು ನಡೆಯುವರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳುವುದಕ್ಕಾಗಿ ಸರ್ವೇಶ್ವರ ಅವರನ್ನು ಉಳಿಸಿದರು.
ಇಸ್ರಯೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ
ಅವರ ಕನ್ಯೆಯರನ್ನು ತಾವು ತಂದು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು ಅವರ ದೇವತೆಗಳನ್ನು ಪೂಜಿಸಿದರು.
ಇಸ್ರಯೇಲರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟರು. ಅವರ ದೃಷ್ಟಿಯಲ್ಲಿ ದ್ರೋಹಿಗಳಾದರು.
ಆದುದರಿಂದ ಸರ್ವೇಶ್ವರ ಇಸ್ರಯೇಲರ ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮ್ ಎಂಬವನಿಗೆ ಮಾರಿಬಿಟ್ಟರು. ಈ ಕಾರಣ ಇಸ್ರಯೇಲರು ಎಂಟು ವರ್ಷಗಳವರೆಗೆ ಅವನಿಗೆ ಗುಲಾಮರಾಗಿದ್ದರು.
ಇಸ್ರಯೇಲರು ಮೊರೆಯಿಟ್ಟಾಗ ಅವರನ್ನು ಬಿಡುಗಡೆ ಮಾಡಲು ಸರ್ವೇಶ್ವರ ಒಬ್ಬ ವ್ಯಕ್ತಿಯನ್ನು ಎಬ್ಬಿಸಿದರು; ಆತನೇ ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲ್.
೧೦
ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನು ಇಸ್ರಯೇಲರಿಗೆ ನ್ಯಾಯ ದೊರಕಿಸಲು ಯುದ್ಧಕ್ಕೆ ಹೊರಟನು. ಎರಡು ನದಿಗಳ ಮಧ್ಯೆಯಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮನನ್ನು ಸರ್ವೇಶ್ವರ ಆತನ ಕೈಗೊಪ್ಪಿಸಿದ್ದರಿಂದ ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.
೧೧
ನಾಡಿನಲ್ಲಿ ನಾಲ್ವತ್ತು ವರ್ಷಗಳ ಕಾಲ ನೆಮ್ಮದಿ ನೆಲಸಿತ್ತು. ತರುವಾಯ ಕೆನಜನ ಮಗ ಒತ್ನೀಯೇಲನು ಮರಣ ಹೊಂದಿದನು.
೧೨
ಇಸ್ರಯೇಲರು ಮತ್ತೆ ಸರ್ವೆಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ಮೋವಾಬ್ಯರ ಅರಸ ಎಗ್ಲೋನನನ್ನು ಇಸ್ರಯೇಲರಿಗೆ ವಿರುದ್ಧ ಸರ್ವೇಶ್ವರ ಬಲಪಡಿಸಿದರು.
೧೩
ಎಗ್ಲೋನನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಬಂದು ಇಸ್ರಯೇಲರನ್ನು ಸೋಲಿಸಿ ಖರ್ಜೂರ ನಗರವನ್ನು ಗೆದ್ದುಕೊಂಡನು.
೧೪
ಹದಿನೆಂಟು ವರ್ಷಕಾಲ ಇಸ್ರಯೇಲರು ಅವನಿಗೆ ಗುಲಾಮರಾಗಿದ್ದರು.
೧೫
ಆಗ ಇಸ್ರಯೇಲರು ಸರ್ವೇಶ್ವರನಿಗೆ ಮೊರೆಯಿಟ್ಟರು. ಅವರನ್ನು ಬಿಡುಗಡೆ ಮಾಡಲು ಬೆನ್ಯಾಮೀನ್ ಕುಲದ ಗೇರನ ಮಗ ಏಹೂದನನ್ನು ವಿಮೋಚಕನಾಗಿ ಕಳುಹಿಸಲಾಯಿತು. ಅವನೊಬ್ಬ ಎಡಚ. ಇಸ್ರಯೇಲರು ಅವನ ಮುಖಾಂತರ ಮೋವಾಬ್ಯರ ಅರಸ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಕಳುಹಿಸಿದರು.
೧೬
ಅವನು ತನಗಾಗಿ ಒಂದುವರೆ ಅಡಿ ಉದ್ದವಾದ ಇಬ್ಬಾಯಿ ಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಒಳಗೆ, ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋದನು.
೧೭
ಮೋವಾಬ್ಯರ ಅರಸ ಎಗ್ಲೋನನಿಗೆ ಕಾಣಿಕೆಯನ್ನು ಒಪ್ಪಿಸಿದನು. ಎಗ್ಲೋನನು ಬಹಳ ದಪ್ಪನಾದ ವ್ಯಕ್ತಿ.
೧೮
ಏಹೂದನು ಕಾಣಿಕೆಯನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತು ತಂದ ಆಳುಗಳನ್ನು ಕಳುಹಿಸಿಬಿಟ್ಟನು.
೧೯
ತಾನಾದರೋ ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದವರೆಗೆ ಹೋಗಿ, ಹಿಂದಿರುಗಿ ಎಗ್ಲೋನನ ಬಳಿಗೆ ಬಂದನು; “ಅರಸರೇ, ತಮಗೆ ತಿಳಿಸಬೇಕಾದ ಒಂದು ರಹಸ್ಯ ವಿಷಯವಿದೆ,” ಎಂದನು. ಆಗ ಅರಸ, “ನಿಶ್ಯಬ್ದ” ಎಂದನು. ಅವನ ಸೇವಕರೆಲ್ಲರು ಅಲ್ಲಿಂದ ಹೊರಗೆ ಹೋದರು.
೨೦
ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಬಂದನು; “ನಿಮಗೆ ತಿಳಿಸಬೇಕಾದ ಒಂದು ದೈವೋಕ್ತಿ ಇದೆ,” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದು ನಿಂತನು.
೨೧
ಆಗ ಏಹೂದನು ಎಡಗೈ ಚಾಚಿ, ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯನ್ನು ತಿವಿದನು.
೨೨
ಆ ಕತ್ತಿ ಹಿಡಿಯ ಸಮೇತ ಹೊಟ್ಟೆಯನ್ನು ಹೊಕ್ಕಿತು. ಏಹೂದನು ಕತ್ತಿಯನ್ನು ಹೊರಗೆ ತೆಗೆಯಲಿಲ್ಲ. ಬೊಜ್ಜು ಅದನ್ನು ಮುಚ್ಚಿಕೊಂಡಿತ್ತು. ಮಲ ಹೊರಗೆ ಬಂದಿತು.
೨೩
ಏಹೂದನು ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ, ಅಗುಳಿ ಹಾಕಿ ಪಡಸಾಲೆಯ ಮೂಲಕ ಹೊರಟು ಹೋದನು.
೨೪
ತರುವಾಯ ಸೇವಕರು ಅಲ್ಲಿಗೆ ಬಂದು ಬಾಗಿಲಿಗೆ ಅಗುಳಿ ಹಾಕಿರುವುದನ್ನು ಕಂಡು, “ಅರಸ ತಂಪಾದ ಕೊಠಡಿಗೆ ಸೇರಿದ ಪಾಯಖಾನೆಗೆ ಹೋಗಿರಬೇಕೆಂದು,
೨೫
ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಅರಸ ಕದಗಳನ್ನು ತೆರೆಯದೆ ಇರುವುದನ್ನು ನೋಡಿ ಬೀಗದ ಕೈಯಿಂದ ತಾವೇ ಬಾಗಿಲು ತೆರೆದರು. ಇಗೋ, ಅವರ ಒಡೆಯ ನೆಲದ ಮೇಲೆ ಸತ್ತುಬಿದ್ದಿದ್ದನು!
೨೬
ಅವರು ಕಾಯ್ದಿದ್ದ ಸಮಯದಲ್ಲೇ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ನದಿ ದಾಟಿ
೨೭
ಸೆಯೀರಾ ಎಂಬಲ್ಲಿಗೆ ಬಂದು ಎಫ್ರಯಿಮ್ ಪರ್ವತಪ್ರದೇಶದಲ್ಲಿ ಕಹಳೆಯನ್ನು ಊದಿದನು. ಕೂಡಲೆ ಇಸ್ರಯೇಲರು ಅವನ ಬಳಿಗೆ ಬಂದು, ಗುಡ್ಡದಿಂದ ಇಳಿದು ಅವನ ಸಂಗಡ ಹೊರಟರು.
೨೮
ಏಹೂದನು ಅವರಿಗೆ ನಾಯಕನಾಗಿ, “ನನ್ನನ್ನು ಹಿಂಬಾಲಿಸಿ ಬನ್ನಿ; ಸರ್ವೇಶ್ವರ ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೊಪ್ಪಿಸಿದ್ದಾರೆ,” ಎಂದನು. ಅಂತೆಯೇ ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲ ಹಿಡಿದುಕೊಂಡು ಯಾರನ್ನೂ ದಾಟಗೊಡಲಿಲ್ಲ.
೨೯
ಅಂದು ಅವರು ಸುಮಾರು ಹತ್ತು ಸಾವಿರಮಂದಿ, ಪುಷ್ಠ ಹಾಗು ಪರಾಕ್ರಮಿಗಳಾದ ಮೋವಾಬ್ಯರನ್ನು ಸದೆಬಡಿದರು. ಒಬ್ಬನೂ ತಪ್ಪಿಸಿಕೊಳ್ಳಲಾಗಲಿಲ್ಲ.
೩೦
ಮೋವಾಬ್ಯರು ಇಸ್ರಯೇಲರಿಗೆ ಶರಣಾದರು; ನಾಡಿನಲ್ಲಿ ಎಂಬತ್ತು ವರ್ಷ ನೆಮ್ಮದಿ ಇತ್ತು.
೩೧
ಏಹೂದನ ಬಳಿಕ ಅನಾತನ ಮಗ ಶಮ್ಗರನು ಮುಂದೆಬಂದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಕೊಂದು ಇಸ್ರಯೇಲರನ್ನು ಕಾಪಾಡಿದನು.
ನ್ಯಾಯಸ್ಥಾಪಕರು ೩:1
ನ್ಯಾಯಸ್ಥಾಪಕರು ೩:2
ನ್ಯಾಯಸ್ಥಾಪಕರು ೩:3
ನ್ಯಾಯಸ್ಥಾಪಕರು ೩:4
ನ್ಯಾಯಸ್ಥಾಪಕರು ೩:5
ನ್ಯಾಯಸ್ಥಾಪಕರು ೩:6
ನ್ಯಾಯಸ್ಥಾಪಕರು ೩:7
ನ್ಯಾಯಸ್ಥಾಪಕರು ೩:8
ನ್ಯಾಯಸ್ಥಾಪಕರು ೩:9
ನ್ಯಾಯಸ್ಥಾಪಕರು ೩:10
ನ್ಯಾಯಸ್ಥಾಪಕರು ೩:11
ನ್ಯಾಯಸ್ಥಾಪಕರು ೩:12
ನ್ಯಾಯಸ್ಥಾಪಕರು ೩:13
ನ್ಯಾಯಸ್ಥಾಪಕರು ೩:14
ನ್ಯಾಯಸ್ಥಾಪಕರು ೩:15
ನ್ಯಾಯಸ್ಥಾಪಕರು ೩:16
ನ್ಯಾಯಸ್ಥಾಪಕರು ೩:17
ನ್ಯಾಯಸ್ಥಾಪಕರು ೩:18
ನ್ಯಾಯಸ್ಥಾಪಕರು ೩:19
ನ್ಯಾಯಸ್ಥಾಪಕರು ೩:20
ನ್ಯಾಯಸ್ಥಾಪಕರು ೩:21
ನ್ಯಾಯಸ್ಥಾಪಕರು ೩:22
ನ್ಯಾಯಸ್ಥಾಪಕರು ೩:23
ನ್ಯಾಯಸ್ಥಾಪಕರು ೩:24
ನ್ಯಾಯಸ್ಥಾಪಕರು ೩:25
ನ್ಯಾಯಸ್ಥಾಪಕರು ೩:26
ನ್ಯಾಯಸ್ಥಾಪಕರು ೩:27
ನ್ಯಾಯಸ್ಥಾಪಕರು ೩:28
ನ್ಯಾಯಸ್ಥಾಪಕರು ೩:29
ನ್ಯಾಯಸ್ಥಾಪಕರು ೩:30
ನ್ಯಾಯಸ್ಥಾಪಕರು ೩:31
ನ್ಯಾಯಸ್ಥಾಪಕರು 1 / ನ್ಯಾಯ 1
ನ್ಯಾಯಸ್ಥಾಪಕರು 2 / ನ್ಯಾಯ 2
ನ್ಯಾಯಸ್ಥಾಪಕರು 3 / ನ್ಯಾಯ 3
ನ್ಯಾಯಸ್ಥಾಪಕರು 4 / ನ್ಯಾಯ 4
ನ್ಯಾಯಸ್ಥಾಪಕರು 5 / ನ್ಯಾಯ 5
ನ್ಯಾಯಸ್ಥಾಪಕರು 6 / ನ್ಯಾಯ 6
ನ್ಯಾಯಸ್ಥಾಪಕರು 7 / ನ್ಯಾಯ 7
ನ್ಯಾಯಸ್ಥಾಪಕರು 8 / ನ್ಯಾಯ 8
ನ್ಯಾಯಸ್ಥಾಪಕರು 9 / ನ್ಯಾಯ 9
ನ್ಯಾಯಸ್ಥಾಪಕರು 10 / ನ್ಯಾಯ 10
ನ್ಯಾಯಸ್ಥಾಪಕರು 11 / ನ್ಯಾಯ 11
ನ್ಯಾಯಸ್ಥಾಪಕರು 12 / ನ್ಯಾಯ 12
ನ್ಯಾಯಸ್ಥಾಪಕರು 13 / ನ್ಯಾಯ 13
ನ್ಯಾಯಸ್ಥಾಪಕರು 14 / ನ್ಯಾಯ 14
ನ್ಯಾಯಸ್ಥಾಪಕರು 15 / ನ್ಯಾಯ 15
ನ್ಯಾಯಸ್ಥಾಪಕರು 16 / ನ್ಯಾಯ 16
ನ್ಯಾಯಸ್ಥಾಪಕರು 17 / ನ್ಯಾಯ 17
ನ್ಯಾಯಸ್ಥಾಪಕರು 18 / ನ್ಯಾಯ 18
ನ್ಯಾಯಸ್ಥಾಪಕರು 19 / ನ್ಯಾಯ 19
ನ್ಯಾಯಸ್ಥಾಪಕರು 20 / ನ್ಯಾಯ 20
ನ್ಯಾಯಸ್ಥಾಪಕರು 21 / ನ್ಯಾಯ 21