೧ |
ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ; ನಾಲ್ಕುಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತಿದ್ದರು. ಭೂಮಿಯ ಮೇಲಾಗಲಿ, ಸಮುದ್ರದ ಮೇಲಾಗಲಿ, ಮರಗಳ ಮೇಲಾಗಲಿ ಗಾಳಿಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿಯನ್ನು ಅವರು ತಡೆಹಿಡಿದಿದ್ದರು. |
೨ |
ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ: |
೩ |
“ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು. |
೪ |
ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಮಂದಿ. ಅವರ ಬಿಡಿ ಸಂಖ್ಯೆ ಹೀಗಿತ್ತು: |
೫ |
ಯೂದನ ಕುಲದಿಂದ ಹನ್ನೆರಡು ಸಾವಿರ ರೂಬೇನನ ಕುಲದಿಂದ ಹನ್ನೆರಡು ಸಾವಿರ ಗಾದನ ಕುಲದಿಂದ ಹನ್ನೆರಡು ಸಾವಿರ |
೬ |
ಅಷೇರನ ಕುಲದಿಂದ ಹನ್ನೆರಡು ಸಾವಿರ ನೆಫ್ತಲೀಮನ ಕುಲದಿಂದ ಹನ್ನೆರಡು ಸಾವಿರ ಮನಸ್ಸೆಯ ಕುಲದಿಂದ ಹನ್ನೆರಡು ಸಾವಿರ |
೭ |
ಸಿಮೆಯೋನನ ಕುಲದಿಂದ ಹನ್ನೆರಡು ಸಾವಿರ ಲೇವಿಯ ಕುಲದಿಂದ ಹನ್ನೆರಡು ಸಾವಿರ ಇಸ್ಸಾಕರನ ಕುಲದಿಂದ ಹನ್ನೆರಡು ಸಾವಿರ |
೮ |
ಜೆಬುಲೋನನ ಕುಲದಿಂದ ಹನ್ನೆರಡು ಸಾವಿರ ಜೋಸೆಫನ ಕುಲದಿಂದ ಹನ್ನೆರಡು ಸಾವಿರ ಬೆನ್ಯಮೀನನ ಕುಲದಿಂದ ಹನ್ನೆರಡು ಸಾವಿರ. |
೯ |
ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ; ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. |
೧೦ |
ಅವರು ಗಟ್ಟಿಯಾದ ಧ್ವನಿಯಿಂದ: “ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ,” ಎಂದು ಹಾಡಿದರು. |
೧೧ |
ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರಮಾಡಿ, |
೧೨ |
“ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ, ಆಮೆನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. |
೧೩ |
ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಪ್ರಶ್ನಿಸಿದನು. |
೧೪ |
ಅದಕ್ಕೆ ನಾನು, “ಸ್ವಾಮೀ ನೀವೇ ಬಲ್ಲಿರಿ,” ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: “ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ. |
೧೫ |
‘ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ. |
೧೬ |
ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ. |
೧೭ |
ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ', “ ಎಂದು ನನಗೆ ತಿಳಿಸಿದನು.
|
Kannada Bible (KNCL) 2016 |
No Data |
|
|
|
|
|
|
|
|
|
|
ಪ್ರಕಟನೆ ೭:1 |
ಪ್ರಕಟನೆ ೭:2 |
ಪ್ರಕಟನೆ ೭:3 |
ಪ್ರಕಟನೆ ೭:4 |
ಪ್ರಕಟನೆ ೭:5 |
ಪ್ರಕಟನೆ ೭:6 |
ಪ್ರಕಟನೆ ೭:7 |
ಪ್ರಕಟನೆ ೭:8 |
ಪ್ರಕಟನೆ ೭:9 |
ಪ್ರಕಟನೆ ೭:10 |
ಪ್ರಕಟನೆ ೭:11 |
ಪ್ರಕಟನೆ ೭:12 |
ಪ್ರಕಟನೆ ೭:13 |
ಪ್ರಕಟನೆ ೭:14 |
ಪ್ರಕಟನೆ ೭:15 |
ಪ್ರಕಟನೆ ೭:16 |
ಪ್ರಕಟನೆ ೭:17 |
|
|
|
|
|
|
ಪ್ರಕಟನೆ 1 / ಪ್ರಕ 1 |
ಪ್ರಕಟನೆ 2 / ಪ್ರಕ 2 |
ಪ್ರಕಟನೆ 3 / ಪ್ರಕ 3 |
ಪ್ರಕಟನೆ 4 / ಪ್ರಕ 4 |
ಪ್ರಕಟನೆ 5 / ಪ್ರಕ 5 |
ಪ್ರಕಟನೆ 6 / ಪ್ರಕ 6 |
ಪ್ರಕಟನೆ 7 / ಪ್ರಕ 7 |
ಪ್ರಕಟನೆ 8 / ಪ್ರಕ 8 |
ಪ್ರಕಟನೆ 9 / ಪ್ರಕ 9 |
ಪ್ರಕಟನೆ 10 / ಪ್ರಕ 10 |
ಪ್ರಕಟನೆ 11 / ಪ್ರಕ 11 |
ಪ್ರಕಟನೆ 12 / ಪ್ರಕ 12 |
ಪ್ರಕಟನೆ 13 / ಪ್ರಕ 13 |
ಪ್ರಕಟನೆ 14 / ಪ್ರಕ 14 |
ಪ್ರಕಟನೆ 15 / ಪ್ರಕ 15 |
ಪ್ರಕಟನೆ 16 / ಪ್ರಕ 16 |
ಪ್ರಕಟನೆ 17 / ಪ್ರಕ 17 |
ಪ್ರಕಟನೆ 18 / ಪ್ರಕ 18 |
ಪ್ರಕಟನೆ 19 / ಪ್ರಕ 19 |
ಪ್ರಕಟನೆ 20 / ಪ್ರಕ 20 |
ಪ್ರಕಟನೆ 21 / ಪ್ರಕ 21 |
ಪ್ರಕಟನೆ 22 / ಪ್ರಕ 22 |