A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಪೇತ್ರನು ೨ ೨ಇಸ್ರಯೇಲ್ ಜನರಲ್ಲೇ ಕಪಟ ಪ್ರವಾದಿಗಳು ಕಾಣಿಸಿಕೊಂಡರು. ಅಂತೆಯೇ, ನಿಮ್ಮಲ್ಲೂ ಸುಳ್ಳುಬೋಧಕರು ಕಾಣಿಸಿಕೊಳ್ಳುವರು. ಹಾನಿಕರವಾದ ದುರ್ಬೋಧನೆಗಳನ್ನು ಗೋಪ್ಯವಾಗಿ ಪ್ರಸರಿಸುವರು. ಒತ್ತೆಯಿಟ್ಟು ತಮ್ಮನ್ನು ರಕ್ಷಿಸಿದ ಒಡೆಯನನ್ನೇ ಅರಿಯೆವೆಂದು ನಿರಾಕರಿಸುವರು. ಹೀಗೆ ತಮ್ಮ ವಿನಾಶವನ್ನು ತಾವೇ ಬೇಗನೆ ಬರಮಾಡಿಕೊಳ್ಳುವರು.
ಇಷ್ಟಾದರೂ ಅವರ ಅನೈತಿಕಮಾರ್ಗವನ್ನೇ ಅನೇಕರು ಅನುಸರಿಸುವರು. ಅವರ ದೆಸೆಯಿಂದ ಇತರರು ಸತ್ಯಮಾರ್ಗವನ್ನು ಅವಹೇಳನ ಮಾಡುವರು.
ಅವರು ದ್ರವ್ಯಾಶೆಪೀಡಿತರಾಗಿ ಕಟ್ಟುಕತೆಗಳನ್ನು ಹೇಳುತ್ತಾ ನಿಮ್ಮಿಂದ ಲಾಭಗಳಿಸುವರು. ದೀರ್ಘಕಾಲದಿಂದ ಅವರಿಗಾಗಿ ಸಿದ್ಧವಾಗಿರುವ ದಂಡನೆಯ ತೀರ್ಪು ಸಮೀಪಿಸುತ್ತಿದೆ. ಅವರನ್ನು ನಾಶಗೊಳಿಸುವವರೇನೂ ನಿದ್ರಿಸುತ್ತಿಲ್ಲ.
ಪಾಪಮಾಡಿದ ದೇವದೂತರನ್ನೂ ದೇವರು ದಂಡಿಸದೆ ಬಿಡಲಿಲ್ಲ. ಅವರನ್ನು ನರಕಕ್ಕೆ ದಬ್ಬಿದರು. ಅಂತಿಮ ತೀರ್ಪಿನ ದಿನವನ್ನು ಎದುರುನೋಡುತ್ತಾ ಕಾದಿರುವಂತೆ, ಕಾರಿರುಳ ಕೂಪದಲ್ಲಿ ಕೂಡಿಹಾಕಿದರು.
ಪುರಾತನ ಕಾಲದ ಜನರನ್ನೂ ಸಹ ದೇವರು ದಂಡಿಸದೆ ಬಿಡಲಿಲ್ಲ. ನೀತಿಮಾರ್ಗವನ್ನು ಸಾರಿದ ನೋವನನ್ನು ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಕಾಪಾಡಿ, ದುರ್ಜನರಿಂದ ಕೂಡಿದ್ದ ಜಗತ್ತಿನ ಮೇಲೆ ಜಲಪ್ರಳಯವನ್ನು ಬರಮಾಡಿದರು.
ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಕೂಡ ದೇವರು ಬಿಡಲಿಲ್ಲ. ದುರ್ಜನರಿಗೆ ಬರಲಿರುವ ದುರ್ಗತಿ ಏನೆಂದು ಸೂಚಿಸುವುದಕ್ಕಾಗಿ ಆ ಪಟ್ಟಣಗಳನ್ನು ಸುಟ್ಟು ಭಸ್ಮಮಾಡಿದರು.
ಆದರೆ, ಆ ದುರ್ಜನರ ಅನೈತಿಕ ನಡವಳಿಕೆಯನ್ನು ಕಂಡು ಅತಿಯಾಗಿ ಮನನೊಂದಿದ್ದ ಲೋತ ಎಂಬ ಸತ್ಪುರುಷನನ್ನು ಸಂರಕ್ಷಿಸಿದರು.
ಆತನು ಆ ದುರ್ಜನರ ನಡುವೆ ಬಾಳುತ್ತಾ ಅವರ ದುಷ್ಕೃತ್ಯಗಳನ್ನು ಕಂಡು ಕೇಳುತ್ತಿದ್ದಾಗ, ಅವನ ನಿರ್ಮಲ ಹೃದಯ ದಿನೇದಿನೇ ಅತೀವ ವೇದನೆಯನ್ನು ಅನುಭವಿಸುತ್ತಿತ್ತು.
ಹೀಗೆ, ಸಜ್ಜನರನ್ನು ಸಂಕಟಶೋಧನೆಗಳಿಂದ ಸಂರಕ್ಷಿಸಲು, ದುರ್ಜನರನ್ನು ಅಂತಿಮ ನ್ಯಾಯತೀರ್ಪಿನ ದಿನದವರೆಗೂ ಶಿಕ್ಷಾವಸ್ಥೆಯಲ್ಲಿರಿಸಲು ಪ್ರಭುವಿಗೆ ತಿಳಿದಿದೆ.
೧೦
ಮುಖ್ಯವಾಗಿ, ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಬಲಿಯಾಗಿರುವವರನ್ನು ಮತ್ತು ದೇವರ ಅಧಿಕಾರವನ್ನು ತೃಣೀಕರಿಸುವವರನ್ನು ಅವರು ಶಿಕ್ಷಿಸದೆ ಬಿಡುವುದಿಲ್ಲ.
೧೧
ಈ ಕಳ್ಳಬೋಧಕರು ಉದ್ಧಟರು, ಸ್ವೇಚ್ಛಾಪರರು, ಸ್ವರ್ಗನಿವಾಸಿಗಳನ್ನು ದೂಷಿಸುವವರು. ದೇವದೂತರು ಶಕ್ತಿಯಲ್ಲಿ ಮತ್ತು ಪರಾಕ್ರಮದಲ್ಲಿ ಶ್ರೇಷ್ಠರಾಗಿದ್ದರೂ ಸಹ ಈ ಸ್ವರ್ಗನಿವಾಸಿಗಳನ್ನು ಪ್ರಭುವಿನ ಮುಂದೆ ದೂಷಿಸುವುದೂ ಇಲ್ಲ, ಖಂಡಿಸುವುದೂ ಇಲ್ಲ.
೧೨
ಸಹಜ ಪ್ರವೃತ್ತಿಯಿಂದ ಬೇಟೆಗಾಗಿಯೂ ಕೊಲೆಗಾಗಿಯೂ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತೆ ಬಾಳುವ ಈ ದುರ್ಬೋಧಕರಾದರೋ ತಮಗೆ ತಿಳಿಯದವುಗಳನ್ನು ದೂಷಣೆಮಾಡುತ್ತಾರೆ. ಆ ಪ್ರಾಣಿಗಳು ನಾಶವಾಗುವಂತೆಯೇ ಇವರೂ ನಾಶವಾಗುತ್ತಾರೆ.
೧೩
ತಾವು ಮಾಡಿದ ಕೇಡಿಗೆ ಪ್ರತಿಯಾಗಿ ಕೇಡನ್ನೇ ಪಡೆಯುತ್ತಾರೆ. ಇವರು ಹಾಡುಹಗಲಿನಲ್ಲೇ ಏನುಬೇಕಾದರೂ ಮಾಡಿ, ದೈಹಿಕ ವ್ಯಾಮೋಹಗಳನ್ನು ತಣಿಸುವುದೇ ಸುಖವೆಂದು ಎಣಿಸುತ್ತಾರೆ. ವಂಚಕರಾದ ಇವರು ಪ್ರೇಮಭೋಜನಗಳಲ್ಲಿ ನಿಮ್ಮ ಸಂಗಡ ಸೇರಿ ತಿಂದುಕುಡಿಯುವಾಗ ನಿಮಗೆ ಕಳಂಕವನ್ನೂ ಮಾನನಷ್ಟವನ್ನೂ ತರುತ್ತಾರೆ.
೧೪
ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು!
೧೫
ಇವರು ಹಾದಿತಪ್ಪಿದವರು, ಸನ್ಮಾರ್ಗವನ್ನು ತ್ಯಜಿಸಿದವರು; ಬೆಯೋರನ ಮಗ ಬಿಳಾಮನ ದಾರಿಯನ್ನು ಹಿಡಿದವರು.
೧೬
ಬಿಳಾಮನು ಅನೀತಿಯಿಂದ ಹಣಗಳಿಸಿದ ಲಾಭಕೋರ; ತನ್ನ ಅಕ್ರಮಕ್ಕೆ ತಕ್ಕ ದಂಡನೆಯನ್ನು ಅನುಭವಿಸಿದವನು. ಮೂಕ ಹೇಸರಗತ್ತೆಯೊಂದು ಮಾನವನಂತೆ ಮಾತಾಡಿ ಈ ಪ್ರವಾದಿಯ ಮೂರ್ಖತನಕ್ಕೆ ತಡೆಹಾಕಿತು.
೧೭
ಈ ಕಳ್ಳಬೋಧಕರು ನೀರಿಲ್ಲದ ಬಾವಿಗಳು, ಬಿರುಗಾಳಿಯಿಂದ ಚದರಿಹೊಗುವ ಮಂಜುಮೋಡಗಳು, ಕಾರ್ಗತ್ತಲಿನ ಕಂದಕವೇ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.
೧೮
ದುರ್ಮಾರ್ಗಿಗಳ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರನ್ನು ಇವರು ಜಂಬದ ಸೊಕ್ಕುಮಾತುಗಳಿಂದ, ಮೂರ್ಖ ಹೇಳಿಕೆಗಳಿಂದ, ಭೋಗ-ವಿಲಾಸಗಳ ಬಲೆಯಿಂದ ವಶಪಡಿಸಿಕೊಳ್ಳುತ್ತಾರೆ.
೧೯
ತಾವೇ ದುರಭ್ಯಾಸಗಳಿಗೆ ಗುಲಾಮರಾಗಿದ್ದರೂ ತಾವು ವಶಪಡಿಸಿಕೊಂಡವರಿಗೆ ಸ್ವಾತಂತ್ರ್ಯವನ್ನು ತರುವ ಮಾತುಕೊಡುತ್ತಾರೆ. ಒಬ್ಬನು ಯಾವುದಕ್ಕೆ ಸೋಲುತ್ತಾನೋ ಅದಕ್ಕೆ ಅವನು ಗುಲಾಮನಾಗುತ್ತಾನೆ.
೨೦
ನಮ್ಮ ಪ್ರಭು ಹಾಗೂ ಉದ್ಧಾರಕರಾದ ಯೇಸುಕ್ರಿಸ್ತರನ್ನು ಕುರಿತ ಜ್ಞಾನದ ಮೂಲಕ ಕೆಲವರು ಲೋಕದ ಕಲ್ಮಶದಿಂದ ಪಾರಾಗಿ ನಿರ್ಮಲರಾಗುತ್ತಾರೆ. ಇಂಥವರು ಮರಳಿ ಅದರಲ್ಲೇ ಸಿಲುಕಿಕೊಂಡು ಅದಕ್ಕೆ ಗುಲಾಮರಾದರೆ ಅವರ ಅಂತಿಮ ಗತಿ ಮೊದಲ ಗತಿಗಿಂತಲೂ ಅಧೋಗತಿಯಾಗಿರುತ್ತದೆ.
೨೧
ಅವರು ನೀತಿಯ ಮಾರ್ಗವನ್ನು ಅರಿತುಕೊಂಡು ತಾವು ಸ್ವೀಕರಿಸಿದ ಪವಿತ್ರ ಆಜ್ಞೆಯನ್ನು ತಿರಸ್ಕರಿಸುವುದಕ್ಕಿಂತ ಅದನ್ನು ಅರಿಯದವರಾಗಿದ್ದರೆ ಒಳ್ಳೆಯದಾಗುತ್ತಿತ್ತು.
೨೨
“ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹೋಯಿತು,” ಮತ್ತು “ಮೈ ತೊಳೆದ ಹಂದಿ ಕೊಳಚೆಯಲ್ಲಿ ಹೊರಳಲು ಹೋಯಿತು,” ಎಂಬ ಈ ಗಾದೆಗಳು ಇವರಿಗೆ ಸರಿಯಾಗಿ ಅನ್ವಯಿಸುತ್ತವೆ.ಪೇತ್ರನು ೨ ೨:1
ಪೇತ್ರನು ೨ ೨:2
ಪೇತ್ರನು ೨ ೨:3
ಪೇತ್ರನು ೨ ೨:4
ಪೇತ್ರನು ೨ ೨:5
ಪೇತ್ರನು ೨ ೨:6
ಪೇತ್ರನು ೨ ೨:7
ಪೇತ್ರನು ೨ ೨:8
ಪೇತ್ರನು ೨ ೨:9
ಪೇತ್ರನು ೨ ೨:10
ಪೇತ್ರನು ೨ ೨:11
ಪೇತ್ರನು ೨ ೨:12
ಪೇತ್ರನು ೨ ೨:13
ಪೇತ್ರನು ೨ ೨:14
ಪೇತ್ರನು ೨ ೨:15
ಪೇತ್ರನು ೨ ೨:16
ಪೇತ್ರನು ೨ ೨:17
ಪೇತ್ರನು ೨ ೨:18
ಪೇತ್ರನು ೨ ೨:19
ಪೇತ್ರನು ೨ ೨:20
ಪೇತ್ರನು ೨ ೨:21
ಪೇತ್ರನು ೨ ೨:22


ಪೇತ್ರನು ೨ 1 / ಪೇ೨ 1
ಪೇತ್ರನು ೨ 2 / ಪೇ೨ 2
ಪೇತ್ರನು ೨ 3 / ಪೇ೨ 3