A A A A A
×

ಕನ್ನಡ ಬೈಬಲ್ (KNCL) 2016

ಯೊಹೋಶುವ ೮

ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ಅಂಜಬೇಡ, ಕಳವಳಗೊಳ್ಳಬೇಡ; ಯೋಧರೆಲ್ಲರನ್ನು ನಿನ್ನೊಡನೆ ಕರೆದುಕೊಂಡು ಆಯಿಗೆ ಹೋಗು. ಆಯಿ ಎಂಬ ಊರಿನ ರಾಜ, ಪ್ರಜೆ, ನಗರ, ನಾಡು ಇವೆಲ್ಲವನ್ನು ನಿನಗೆ ಕೊಟ್ಟಿದ್ದೇನೆ, ಹೋಗು.
ಜೆರಿಕೋವಿಗೂ ಅದರ ಅರಸನಿಗೂ ಮಾಡಿದಂತೆಯೇ ಆಯಿಗೂ ಅದರ ಅರಸನಿಗೂ ಮಾಡು. ಆದರೆ ಕೊಳ್ಳೆಯನ್ನೂ ಪಶುಪ್ರಾಣಿಗಳನ್ನೂ ಈ ಸಾರಿ ನೀವೇ ಇಟ್ಟುಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಆ ಊರಿನ ಹಿಂಬದಿಯಲ್ಲಿ ಹೊಂಚುಹಾಕಿಕೊಂಡಿರಲಿ,” ಎಂದು ಆಜ್ಞಾಪಿಸಿದರು.
ಅಂತೆಯೇ ಯೆಹೋಶುವನು ಯೋಧರೆಲ್ಲರ ಸಹಿತವಾಗಿ ಆಯಿಗೆ ಹೊರಡಲು ಸಿದ್ಧನಾದನು. ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿಕೊಂಡನು.
ಅವರಿಗೆ, “ನೀವು ನಗರದ ಹಿಂಭಾಗದಲ್ಲಿ ಹೊಂಚುಹಾಕಿ ಕುಳಿತಿರಬೇಕು. ನಗರದಿಂದ ಬಹುದೂರವಾಗಿರಬೇಡಿ. ಎಲ್ಲರೂ ಸಿದ್ಧವಾಗಿರಿ.
ನಾನು ಮತ್ತು ನನ್ನ ಸಂಗಡದವರೆಲ್ಲರು ನಗರದ ಸಮೀಪಕ್ಕೆ ಹೋಗುತ್ತೇವೆ. ಆಯಿಯ ಜನರು ಮುಂಚಿನಂತೆ ನಮ್ಮೊಡನ ಯುದ್ಧಕ್ಕೆ ಬರುವರು. ಕೂಡಲೆ ನಾವು ಅಲ್ಲಿಂದ ಓಡಿಹೋಗುತ್ತೇವೆ.
‘ಇವರು ಮುಂಚಿನಂತೆ ನಮಗೆ ಹೆದರಿ ಓಡಿಹೋಗುತ್ತಿದ್ದಾರೆ’ ಎಂದು ಭಾವಿಸಿ, ಅವರು ನಮ್ಮನ್ನು ಹಿಂದಟ್ಟುವರು. ನಾವು ಓಡುತ್ತಲೇ ಇರುತ್ತೇವೆ.
ನಾವು ಮತ್ತು ಅವರು ನಗರಕ್ಕೆ ದೂರವಾದ ಮೇಲೆ ನೀವು ಹೊಂಚಿ ನೋಡುವ ಸ್ಥಳದಿಂದ ಎದ್ದು ನಗರದೊಳಗೆ, ನುಗ್ಗಿ ಅದನ್ನು ಸ್ವಾಧೀನ ಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನಿಮ್ಮ ಕೈಗೆ ಒಪ್ಪಿಸುವರು.
ನೀವು ನಗರವನ್ನು ಹಿಡಿದ ಕೂಡಲೇ ಅದಕ್ಕೆ ಬೆಂಕಿ ಹೊತ್ತಿಸಿರಿ. ಸರ್ವೇಶ್ವರನ ಮಾತಿನಂತೆ ನಡೆಯಿರಿ. ಇದೇ ನಾನು ನಿಮಗೆ ಕೊಡುವ ಆಜ್ಞೆ,” ಎಂದು ಹೇಳಿ ಅವರನ್ನು ರಾತ್ರಿಯಲ್ಲೇ ಕಳಿಸಿದನು.
ಅವರು ಹೊಂಚುಹಾಕುವ ಸಲುವಾಗಿ ಬೇತೇಲಿಗೂ ಆಯಿಗೂ ನಡುವೆ ಆಯಿಯ ಪಶ್ಚಿಮಕ್ಕೆ ಹೋಗಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯಲ್ಲಿ ಜನರ ಮಧ್ಯೆ ಕಳೆದನು.
१०
ಬೆಳಿಗ್ಗೆ ಅವನೆದ್ದು ಇಸ್ರಯೇಲರ ಹಿರಿಯರ ಸಂಗಡ ಸೈನ್ಯವನ್ನು ಕೂಡಿಸಿ ಅವರ ಮುಂದೆ ಆಯಿಗೆ ಹೊರಟನು.
११
ಅವನೊಂದಿಗಿದ್ದ ಯೋಧರೆಲ್ಲರು ನಗರದ ಸಮೀಪಕ್ಕೆ ಏರಿಬಂದು ಅದರ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಅವರಿಗೂ ಆಯಿಗೂ ನಡುವೆ ಒಂದು ಕಣಿವೆ ಇತ್ತು.
१२
ಯೆಹೋಶುವ ಸುಮಾರು ಐದು ಸಾವಿರ ಜನರನ್ನು ಆರಿಸಿಕೊಂಡು ಬೇತೇಲಿಗೂ ಆಯಿಗೂ ನಡುವೆ ನಗರದ ಪಶ್ಚಿಮದಲ್ಲಿ ಹೊಂಚಿನೋಡುವುದಕ್ಕಾಗಿ ಇರಿಸಿದನು.
१३
ನಗರದ ಉತ್ತರದಲ್ಲಿದ್ದ ಸಮಸ್ತ ಸೈನ್ಯವನ್ನು, ನಗರದ ಪಶ್ಚಿಮದಲ್ಲಿ ಹೊಂಚಿನೋಡುತ್ತಿದ್ದ ಸೈನ್ಯವನ್ನು ಕ್ರಮಪಡಿಸಿದ ನಂತರ ಅವನು ಆ ರಾತ್ರಿಯನ್ನು ಕಣಿವೆಯಲ್ಲಿ ಕಳೆದನು.
१४
ಬೆಳಿಗ್ಗೆ ಆಯಿ ಊರಿನರಸನು ಈ ಸಮಾಚಾರವನ್ನು ತಿಳಿದು ತ್ವರೆಯಾಗಿ ಜನರೆಲ್ಲರ ಸಹಿತ ಇಸ್ರಯೇಲರ ಸಂಗಡ ಯುದ್ಧಮಾಡಲು ಹೊರಟನು. ಅವನೂ ಅವನ ಜನರೂ ಅರಾಬಾ ಎಂಬ ಸ್ಥಳಕ್ಕೆ ಎದುರಾಗಿದ್ದ ಆ ಕಣಿವೆಗೆ ಬಂದರು. ನಗರದ ಹಿಂಭಾಗದಲ್ಲಿ ಹೊಂಚಿ ನೋಡುತ್ತಿರುವವರ ವಿಷಯ ಅವನಿಗೆ ಗೊತ್ತಿರಲಿಲ್ಲ.
१५
ಯೆಹೋಶುವನೂ ಅವನ ಸಂಗಡ ಇದ್ದ ಇಸ್ರಯೇಲರೆಲ್ಲರೂ ತಾವು ಸೋತವರೋ ಎಂಬಂತೆ ಅರಣ್ಯಮಾರ್ಗವಾಗಿ ಓಡತೊಡಗಿದರು.
१६
ಆಯಿ ನಗರದವರು ಊರಿನಲ್ಲಿದ್ದ ತಮ್ಮ ಎಲ್ಲ ಜನರನ್ನು ಕರೆದುಕೊಂಡು ಯೆಹೋಶುವನನ್ನು ಹಿಂದಟ್ಟುತ್ತಾ ನಗರದಿಂದ ದೂರದೂರ ಆದರು.
१७
ಇತ್ತ ಆಯಿಯಲ್ಲಿ ಹಾಗೂ ಬೇತೇಲಿನಲ್ಲಿ ಗಂಡಸರು ಇರಲಿಲ್ಲ. ಊರಬಾಗಿಲುಗಳನ್ನು ತೆರೆದಿಟ್ಟು ಎಲ್ಲರೂ ಇಸ್ರಯೇಲರನ್ನು ಹಿಂದಟ್ಟಿ ಹೋಗಿದ್ದರು.
१८
ಆಗ ಸರ್ವೇಶ್ವರ ಯೆಹೋಶುವನಿಗೆ, “ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿಕಡೆಗೆ ಚಾಚು. ಆ ನಗರವನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ,” ಎಂದರು. ಅವನು ಅಂತೆಯೇ ಚಾಚಿದನು.
१९
ಚಾಚಿದ ಕೂಡಲೆ ಹೊಂಚುಗಾರರು ತಾವಿದ್ದ ಸ್ಥಳದಿಂದ ಎದ್ದು ಓಡಿಬಂದು ನಗರದೊಳಕ್ಕೆ ನುಗ್ಗಿ ಒಡನೆ ಬೆಂಕಿ ಹೊತ್ತಿಸಿದರು.
२०
ಆಯಿಯ ಜನರು ಹಿಂದಿರುಗಿ ನೋಡಿದಾಗ ನಗರದ ಹೊಗೆ ಆಕಾಶಕ್ಕೆ ಏರುತ್ತಿತ್ತು. ಯಾವ ಮಾರ್ಗದಿಂದಲೂ ಅವರಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಏಕೆಂದರೆ ಅರಣ್ಯದ ಕಡೆಗೆ ಓಡಿಹೋಗುತ್ತಿದ್ದ ಇಸ್ರಯೇಲರು ಹಿಂದಟ್ಟಿ ಬರುವವರ ಕಡೆಗೆ ತಿರುಗಿದ್ದರು.
२१
ನಗರವು ಹೊಂಚುಗಾರರಿಗೆ ಸ್ವಾಧೀನವಾದುದನ್ನೂ ಹೊಗೆ ಆಕಾಶಕ್ಕೆ ಏರುತ್ತಿದ್ದುದನ್ನೂ ನೋಡಿದ ಯೆಹೋಶುವ ಹಾಗೂ ಇಸ್ರಯೇಲರು ಹಿಂದಿರುಗಿ ಆಯಿ ಜನರ ಮೇಲೆ ಬಿದ್ದರು.
२२
ನಗರಕ್ಕೆ ನುಗ್ಗಿದವರೂ ಹೊರಗೆ ಬಂದು ಆ ಜನರ ಮೇಲೆ ಎರಗಿದರು. ಹೀಗೆ ಆ ಕಡೆಯಿಂದಲೂ ಈ ಕಡೆಯಿಂದಲೂ ಇಸ್ರಯೇಲರ ಕೈಗೆ ಸಿಕ್ಕಿಬಿದ್ದರು. ಎಲ್ಲರನ್ನು ಸದೆಬಡಿಯಲಾಯಿತು. ಒಬ್ಬನಾದರೂ ಉಳಿಯಲಿಲ್ಲ. ಯಾವನೂ ತಪ್ಪಿಸಿಕೊಳ್ಳಲಿಲ್ಲ.
२३
ಆಯಿಯ ಅರಸನನ್ನು ಮಾತ್ರ ಜೀವಸಹಿತ ಹಿಡಿದು ಯೆಹೋಶುವನ ಬಳಿಗೆ ಕರೆದುಕೊಂಡು ಬಂದರು.
२४
ಇಸ್ರಯೇಲರು ತಮ್ಮನ್ನು ಅರಣ್ಯದವರೆಗೂ ಬೆನ್ನಟ್ಟಿ ಬಂದ ಆಯಿ ಜನರನ್ನು ಅಲ್ಲೇ ಕತ್ತಿಯಿಂದ ಸಂಹರಿಸಿದ ನಂತರ ಅವರೆಲ್ಲರು ನಗರಕ್ಕೆ ಹೋಗಿ ಅಲ್ಲಿದ್ದವರನ್ನೂ ಕೊಂದರು.
२५
ಆ ದಿನ ಆಯಿ ಜನರಲ್ಲಿ ಸತ್ತ ಗಂಡಸರ ಮತ್ತು ಹೆಂಗಸರ ಸಂಖ್ಯೆ ಹನ್ನೆರಡು ಸಾವಿರ.
२६
ಆ ನಗರದವರೆಲ್ಲರು ಹತರಾಗುವವರೆಗೆ ಯೆಹೋಶುವ ಈಟಿ ಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ.
२७
ಸರ್ವೇಶ್ವರ ಯೆಹೋಶುವನಿಗೆ ಆಜ್ಞಾಪಿಸಿದಂತೆಇಸ್ರಯೇಲರು ಆ ನಗರದಿಂದ ಪಶುಪ್ರಾಣಿ ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು.
२८
ಯೆಹೋಶುವನು ಆಯಿ ನಗರವನ್ನು ಸುಟ್ಟು ಅದು ಎಂದಿಗೂ ಮರಳಿ ಕಟ್ಟಲಾಗದಂತೆ ಹಾಳುದಿಬ್ಬವಾಗಿಸಿಬಿಟ್ಟನು. ಅದು ಇಂದಿನವರೆಗೂ ಹಾಗೆಯೆ ಉಳಿದಿದೆ.
२९
ಆಯಿಯ ಅರಸನನ್ನು ಸಂಜೆಯವರೆಗೂ ಮರಕ್ಕೆ ನೇತುಹಾಕಿಸಿದನು. ಸೂರ್ಯನು ಅಸ್ತಮಿಸುತ್ತಲೆ ಅವನ ಶವವನ್ನು ಕೆಳಗಿಳಿಸಿ ಅದನ್ನು ಊರಬಾಗಿಲಿನಲ್ಲಿ ಹಾಕಿಸಿ ಅದರ ಮೇಲೆ ಕಲ್ಲಿನ ದೊಡ್ಡ ರಾಶಿಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ.
३०
ಸರ್ವೇಶ್ವರನ ದಾಸ ಮೋಶೆ ಇಸ್ರಯೇಲರಿಗೆ ಆಜ್ಞಾಪಿಸಿದ್ದಂತೆ ಹಾಗೂ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಯೆಹೋಶುವನು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಏಬಾಲ್ ಬೆಟ್ಟದಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಯಾವ ಕಬ್ಬಿಣವೂ ಮುಟ್ಟದ ಹುಟ್ಟುಕಲ್ಲುಗಳಿಂದಲೇ ಅದನ್ನು ಕಟ್ಟಿಸಿದನು.
३१
ಜನರು ಅದರ ಮೇಲೆ ಸರ್ವೇಶ್ವರನಿಗೆ ದಹನ ಹೋಮಬಲಿಗಳನ್ನೂ ಸಮಾಧಾನಬಲಿಗಳನ್ನೂ ಸಮರ್ಪಿಸಿದರು.
३२
ಯೆಹೋಶುವನು ಅಲ್ಲಿದ್ದ ಕಲ್ಲುಗಳ ಮೇಲೆ ಜನರೆಲ್ಲರ ಸಮಕ್ಷಮದಲ್ಲಿ ಮೋಶೆಯ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದನು.
३३
ಎಲ್ಲ ಇಸ್ರಯೇಲರು, ಅಂದರೆ ಹಿರಿಯರು, ಅಧಿಕಾರಿಗಳು, ನ್ಯಾಯಾಧಿಪತಿಗಳು, ಅನ್ಯದೇಶೀಯರು ಹಾಗೂ ಸ್ವದೇಶೀಯರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಎಡಬಲಗಳಲ್ಲಿ ನಿಂತರು. ಆ ಮಂಜೂಷವನ್ನು ಹೊತ್ತ ಲೇವಿಯರಾದ ಯಾಜಕರಿಗೆ ಅಭಿಮುಖರಾಗಿ ನಿಂತರು. ಗೆರಿಜ್ಜೀಮ್ ಬೆಟ್ಟದ ಕಡೆ ಅರ್ಧಜನ, ಏಬಾಲ್ ಬೆಟ್ಟದ ಕಡೆ ಅರ್ಧಜನ, ಹೀಗೆ ಸರ್ವೇಶ್ವರನ ದಾಸ ಮೋಶೆ ಮೊದಲೇ ಹೇಳಿದ್ದಂತೆ ಆಶೀರ್ವಾದಗಳನ್ನು ಪಡೆಯುವುದಕ್ಕೋಸ್ಕರ ನಿಂತರು.
३४
ಅನಂತರ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದ ಹಾಗು ಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು.
३५
ಮೋಶೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಮಹಿಳೆಯರಿಗೂ ಮಕ್ಕಳಿಗೂ ಅನ್ಯದೇಶೀಯರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು.
ಯೊಹೋಶುವ ೮:1
ಯೊಹೋಶುವ ೮:2
ಯೊಹೋಶುವ ೮:3
ಯೊಹೋಶುವ ೮:4
ಯೊಹೋಶುವ ೮:5
ಯೊಹೋಶುವ ೮:6
ಯೊಹೋಶುವ ೮:7
ಯೊಹೋಶುವ ೮:8
ಯೊಹೋಶುವ ೮:9
ಯೊಹೋಶುವ ೮:10
ಯೊಹೋಶುವ ೮:11
ಯೊಹೋಶುವ ೮:12
ಯೊಹೋಶುವ ೮:13
ಯೊಹೋಶುವ ೮:14
ಯೊಹೋಶುವ ೮:15
ಯೊಹೋಶುವ ೮:16
ಯೊಹೋಶುವ ೮:17
ಯೊಹೋಶುವ ೮:18
ಯೊಹೋಶುವ ೮:19
ಯೊಹೋಶುವ ೮:20
ಯೊಹೋಶುವ ೮:21
ಯೊಹೋಶುವ ೮:22
ಯೊಹೋಶುವ ೮:23
ಯೊಹೋಶುವ ೮:24
ಯೊಹೋಶುವ ೮:25
ಯೊಹೋಶುವ ೮:26
ಯೊಹೋಶುವ ೮:27
ಯೊಹೋಶುವ ೮:28
ಯೊಹೋಶುವ ೮:29
ಯೊಹೋಶುವ ೮:30
ಯೊಹೋಶುವ ೮:31
ಯೊಹೋಶುವ ೮:32
ಯೊಹೋಶುವ ೮:33
ಯೊಹೋಶುವ ೮:34
ಯೊಹೋಶುವ ೮:35
ಯೊಹೋಶುವ 1 / यहोशू 1
ಯೊಹೋಶುವ 2 / यहोशू 2
ಯೊಹೋಶುವ 3 / यहोशू 3
ಯೊಹೋಶುವ 4 / यहोशू 4
ಯೊಹೋಶುವ 5 / यहोशू 5
ಯೊಹೋಶುವ 6 / यहोशू 6
ಯೊಹೋಶುವ 7 / यहोशू 7
ಯೊಹೋಶುವ 8 / यहोशू 8
ಯೊಹೋಶುವ 9 / यहोशू 9
ಯೊಹೋಶುವ 10 / यहोशू 10
ಯೊಹೋಶುವ 11 / यहोशू 11
ಯೊಹೋಶುವ 12 / यहोशू 12
ಯೊಹೋಶುವ 13 / यहोशू 13
ಯೊಹೋಶುವ 14 / यहोशू 14
ಯೊಹೋಶುವ 15 / यहोशू 15
ಯೊಹೋಶುವ 16 / यहोशू 16
ಯೊಹೋಶುವ 17 / यहोशू 17
ಯೊಹೋಶುವ 18 / यहोशू 18
ಯೊಹೋಶುವ 19 / यहोशू 19
ಯೊಹೋಶುವ 20 / यहोशू 20
ಯೊಹೋಶುವ 21 / यहोशू 21
ಯೊಹೋಶುವ 22 / यहोशू 22
ಯೊಹೋಶುವ 23 / यहोशू 23
ಯೊಹೋಶುವ 24 / यहोशू 24