A A A A A
×

ಕನ್ನಡ ಬೈಬಲ್ (KNCL) 2016

ಯೊಹೋಶುವ ೬

ಜೆರಿಕೋದ ಜನರು ಇಸ್ರಯೇಲರಿಗೆ ಹೆದರಿ ತಮ್ಮ ನಗರದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದರು. ಯಾರೂ ಹೊರಗೆ ಬರುತ್ತಿರಲಿಲ್ಲ, ಒಳಗೆ ಹೋಗುತ್ತಿರಲಿಲ್ಲ.
ಆಗ ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನೋಡು, ನಾನು ಜೆರಿಕೋವನ್ನು, ಅದರ ಅರಸನನ್ನು ಹಾಗು ಅದರ ಯುದ್ಧವೀರರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ.
ನಿನ್ನ ಯೋಧರೆಲ್ಲ ಆರು ದಿವಸಗಳವರೆಗೆ ದಿನಕ್ಕೆ ಒಂದು ಸಾರಿ ನಗರವನ್ನು ಸುತ್ತಲಿ.
ಏಳುಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿವಸ ನೀವು ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ಕೊಂಬುಗಳನ್ನು ಊದಬೇಕು.
ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿ ಕೇಳುತ್ತಲೇ ನೀವೆಲ್ಲರು ಗಟ್ಟಿಯಾಗಿ ಕೇಕೆ ಹಾಕಿ ಆರ್ಭಟಿಸಿರಿ. ಆಗ ನಗರದ ಗೋಡೆ ತಾನೇ ತಾನಾಗಿ ಬಿದ್ದುಹೋಗುವುದು. ಆಗ ಪ್ರತಿಯೊಬ್ಬನು ನೆಟ್ಟಗೆ ಒಳನುಗ್ಗಬಹುದು,” ಎಂದು ಹೇಳಿದರು.
ನೂನನ ಮಗ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಸರ್ವೇಶ್ವರನ ಮಂಜೂಷದ ಮುಂದೆ ನಡೆಯಲಿ,” ಎಂದು ತಿಳಿಸಿದನು.
ಅಂತೆಯೆ ಜನರಿಗೆ, “ನೀವು ಮುಂದೆ ಹೋಗಿ ನಗರವನ್ನು ಸುತ್ತುವರೆಯಿರಿ. ಯುದ್ಧಸನ್ನದ್ಧರೆಲ್ಲರೂ ಸರ್ವೇಶ್ವರನ ಮಂಜೂಷದ ಮುಂದೆ ಹೋಗಲಿ,” ಎಂದು ಹೇಳಿದನು.
ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ ಸರ್ವೇಶ್ವರನ ಮುಂದೆ ನಡೆದರು. ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.
ಯುದ್ಧಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೇ ಇದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಕೊಂಬುಗಳು ಮೊಳಗುತ್ತಲೇ ಅವರು ಹೊರಟರು.
೧೦
ಯೆಹೋಶುವನು ಜನರಿಗೆ, “ನೀವು ಈಗ ಆರ್ಭಟಿಸಬಾರದು. ನಿಮ್ಮ ಧ್ವನಿ ಕೇಳಿಸದಿರಲಿ, ನಿಮ್ಮ ಬಾಯಿಂದ ಒಂದು ಮಾತೂ ಬರಕೂಡದು. ಆರ್ಭಟಿಸಿರೆಂದು ನಾನು ಹೇಳುವಾಗ ಮಾತ್ರ ನೀವು ಆರ್ಭಟಿಸಬೇಕು,” ಎಂದು ಆಜ್ಞಾಪಿಸಿದನು.
೧೧
ಸರ್ವೇಶ್ವರನ ಮಂಜೂಷವನ್ನು ಒಂದು ಸಾರಿ ನಗರ ಪ್ರದಕ್ಷಿಣೆ ಮಾಡಿಸಿದ ಮೇಲೆ, ಅವರು ಪಾಳೆಯಕ್ಕೆ ಹಿಂದಿರುಗಿ ಬಂದು ರಾತ್ರಿಯನ್ನು ಕಳೆದರು.
೧೨
ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು. ಯಾಜಕರು ಮಂಜೂಷವನ್ನು ಹೊತ್ತುಕೊಂಡು ಹೊರಟರು.
೧೩
ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಸರ್ವೇಶ್ವರನ ಮಂಜೂಷದ ಮುಂದೆ ನಡೆದರು. ಯುದ್ಧಸನ್ನದ್ಧರು ಅವರ ಮುಂದಿದ್ದರು. ಹಿಂಬದಿಯ ದಂಡು ಮಂಜೂಷದ ಹಿಂದಿತ್ತು. ಕೊಂಬುಗಳು ಮೊಳಗುತ್ತಲೇ ಅವರು ಹೊರಟರು.
೧೪
ಹೀಗೆ ಎರಡನೆಯ ದಿನದಲ್ಲೂ ನಗರವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು. ಆರು ದಿನ ಹೀಗೆಯೇ ಮಾಡಿದರು.
೧೫
ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ನಗರವನ್ನು ಏಳುಸಾರಿ ಸುತ್ತಿದರು.
೧೬
ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಿದರು. ಯೆಹೋಶುವ ಜನರಿಗೆ, “ಆರ್ಭಟಿಸಿರಿ, ಸರ್ವೇಶ್ವರಸ್ವಾಮಿ ನಿಮಗೆ ಈ ನಗರವನ್ನು ಕೊಟ್ಟಿದ್ದಾರೆ.
೧೭
ಇದೂ ಇದರಲ್ಲಿರುವುದೆಲ್ಲವೂ ಸರ್ವೇಶ್ವರನಿಗೆ ಮೀಸಲಾಗಿ ಆಹುತಿಯಾಗತಕ್ಕದೆಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಸಂಗಡ ಮನೆಯಲ್ಲಿರುವವರೆಲ್ಲರು ಉಳಿಯಲಿ. ಏಕೆಂದರೆ ನಾವು ಕಳಿಸಿದ ಗೂಢಚಾರರನ್ನು ಅವಳು ಬಚ್ಚಿಟ್ಟಿದ್ದಳು.
೧೮
ನೀವಾದರೋ ಸರ್ವೇಶ್ವರನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ ಇಸ್ರಯೇಲರ ಪಾಳೆಯವೇ ಶಾಪಕ್ಕೆ ಗುರಿಯಾಗಿ ನಾಶವಾದೀತು.
೧೯
ಎಲ್ಲ ಬೆಳ್ಳಿ ಬಂಗಾರ ಹಾಗೂ ತಾಮ್ರ ಕಬ್ಬಿಣ ಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಮೀಸಲಾಗಿದ್ದು ಅವರ ಭಂಡಾರಕ್ಕೆ ಸೇರತಕ್ಕವುಗಳು,” ಎಂದನು.
೨೦
ಕೂಡಲೆ ಜನರು ಆರ್ಭಟಿಸಿದರು. ಕೊಂಬುಗಳು ಮೊಳಗಿದವು. ಕೊಂಬಿನ ಧ್ವನಿ ಕೇಳಿ ಜನರು ಇನ್ನೂ ಗಟ್ಟಿಯಾಗಿ ಆರ್ಭಟಿಸಿದರು. ನಗರದ ಗೋಡೆ ತಾನಾಗಿ ಬಿದ್ದುಹೋಯಿತು. ಪ್ರತಿ ಒಬ್ಬನೂ ನೆಟ್ಟಗೆ ನಗರಕ್ಕೆ ನುಗ್ಗಿದನು. ಅದು ಅವರ ಸ್ವಾಧೀನವಾಯಿತು.
೨೧
ಅಲ್ಲಿದ್ದ ಗಂಡಸರು, ಹೆಂಗಸರು, ಯುವಕರು, ಮುದುಕರು, ದನ ಕುರಿ, ಕತ್ತೆ ಇವುಗಳನ್ನೆಲ್ಲಾ ನಿಶ್ಯೇಷವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.
೨೨
ಯೆಹೋಶುವನು ಆ ನಾಡಿನಲ್ಲಿ ಬೇಹುಗಾರಿಕೆ ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದು, “ನೀವು ಆ ವೇಶ್ಯೆಯ ಮನೆಗೆ ಹೋಗಿ, ಅವಳಿಗೆ ಪ್ರಮಾಣ ಮಾಡಿದಂತೆ ಅವಳನ್ನೂ ಅವಳಿಗಿರುವುದೆಲ್ಲವನ್ನು ಹೊರಗೆ ತೆಗೆದುಕೊಂಡು ಬನ್ನಿ,” ಎಂದು ಹೇಳಿದನು.
೨೩
ಅಂತೆಯೇ ಅವರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಗಳನ್ನೂ ಸಹೋದರರನ್ನೂ ಅವಳಿಗಿದ್ದುದೆಲ್ಲವನ್ನೂ ಅವಳ ಎಲ್ಲಾ ಸಂಬಂಧಿಕರನ್ನೂ ಇಸ್ರಯೇಲರ ಪಾಳೆಯದ ಹೊರಗಡೆ ಸುಭದ್ರವಾಗಿರಿಸಿದರು.
೨೪
ಬಳಿಕ ನಗರವನ್ನೂ - ಅದರಲ್ಲಿದ್ದುದೆಲ್ಲವನ್ನೂ ಬೆಂಕಿಯಿಂದ ಸುಟ್ಟುಹಾಕಿದರು. ಆದರೆ ಬೆಳ್ಳಿ ಬಂಗಾರವನ್ನು, ಕಂಚುಕಬ್ಬಿಣಗಳ ಪಾತ್ರೆ ಸರ್ವೇಶ್ವರನ ಆಲಯದ ಭಂಡಾರಕ್ಕೆ ಒಪ್ಪಿಸಿದರು.
೨೫
ವೇಶ್ಯೆಯಾದ ರಾಹಾಬಳು, ಜೆರಿಕೋ ನಗರದಲ್ಲಿ ಸಂಚರಿಸಿ ನೋಡಲು ಬಂದಿದ್ದ ಯೆಹೋಶುವನ ಗೂಢಚಾರರನ್ನು ಬಚ್ಚಿಟ್ಟಿದ್ದರಿಂದ ಅವಳನ್ನೂ ಅವಳ ತಂದೆಯ ಮನೆಯವರನ್ನೂ ಅವಳಿಗಿದ್ದುದೆಲ್ಲವನ್ನೂ ಉಳಿಸಿದರು. ಅವಳು ಇಂದಿನವರೆಗೂ ಇಸ್ರಯೇಲರಲ್ಲೇ ವಾಸವಾಗಿದ್ದಾಳೆ.
೨೬
ಅದೇ ಸಮಯಕ್ಕೆ ಯೆಹೋಶುವನು ಇಸ್ರಯೇಲರಿಂದ ಪ್ರಮಾಣ ಮಾಡಿಸಿ ಅವರಿಗೆ, “ಜೆರಿಕೋ ಎಂಬ ಈ ನಗರವನ್ನು ಕಟ್ಟುವುದಕ್ಕೆ ಕೈಹಾಕುವವನು ಸರ್ವೇಶ್ವರನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ! ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ಹಿರಿಯ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರಿಯ ಮಗನನ್ನೂ ಕಳೆದುಕೊಳ್ಳಲಿ,” ಎಂದು ಹೇಳಿದನು.
೨೭
ಸರ್ವೇಶ್ವರಸ್ವಾಮಿ ಯೆಹೋಶುವನ ಸಂಗಡ ಇದ್ದುದರಿಂದ ಅವನ ಕೀರ್ತಿ ನಾಡಿನಲ್ಲೆಲ್ಲಾ ಹರಡಿತು.
ಯೊಹೋಶುವ ೬:1
ಯೊಹೋಶುವ ೬:2
ಯೊಹೋಶುವ ೬:3
ಯೊಹೋಶುವ ೬:4
ಯೊಹೋಶುವ ೬:5
ಯೊಹೋಶುವ ೬:6
ಯೊಹೋಶುವ ೬:7
ಯೊಹೋಶುವ ೬:8
ಯೊಹೋಶುವ ೬:9
ಯೊಹೋಶುವ ೬:10
ಯೊಹೋಶುವ ೬:11
ಯೊಹೋಶುವ ೬:12
ಯೊಹೋಶುವ ೬:13
ಯೊಹೋಶುವ ೬:14
ಯೊಹೋಶುವ ೬:15
ಯೊಹೋಶುವ ೬:16
ಯೊಹೋಶುವ ೬:17
ಯೊಹೋಶುವ ೬:18
ಯೊಹೋಶುವ ೬:19
ಯೊಹೋಶುವ ೬:20
ಯೊಹೋಶುವ ೬:21
ಯೊಹೋಶುವ ೬:22
ಯೊಹೋಶುವ ೬:23
ಯೊಹೋಶುವ ೬:24
ಯೊಹೋಶುವ ೬:25
ಯೊಹೋಶುವ ೬:26
ಯೊಹೋಶುವ ೬:27
ಯೊಹೋಶುವ 1 / ಯೊಹ 1
ಯೊಹೋಶುವ 2 / ಯೊಹ 2
ಯೊಹೋಶುವ 3 / ಯೊಹ 3
ಯೊಹೋಶುವ 4 / ಯೊಹ 4
ಯೊಹೋಶುವ 5 / ಯೊಹ 5
ಯೊಹೋಶುವ 6 / ಯೊಹ 6
ಯೊಹೋಶುವ 7 / ಯೊಹ 7
ಯೊಹೋಶುವ 8 / ಯೊಹ 8
ಯೊಹೋಶುವ 9 / ಯೊಹ 9
ಯೊಹೋಶುವ 10 / ಯೊಹ 10
ಯೊಹೋಶುವ 11 / ಯೊಹ 11
ಯೊಹೋಶುವ 12 / ಯೊಹ 12
ಯೊಹೋಶುವ 13 / ಯೊಹ 13
ಯೊಹೋಶುವ 14 / ಯೊಹ 14
ಯೊಹೋಶುವ 15 / ಯೊಹ 15
ಯೊಹೋಶುವ 16 / ಯೊಹ 16
ಯೊಹೋಶುವ 17 / ಯೊಹ 17
ಯೊಹೋಶುವ 18 / ಯೊಹ 18
ಯೊಹೋಶುವ 19 / ಯೊಹ 19
ಯೊಹೋಶುವ 20 / ಯೊಹ 20
ಯೊಹೋಶುವ 21 / ಯೊಹ 21
ಯೊಹೋಶುವ 22 / ಯೊಹ 22
ಯೊಹೋಶುವ 23 / ಯೊಹ 23
ಯೊಹೋಶುವ 24 / ಯೊಹ 24