A A A A A
×

ಕನ್ನಡ ಬೈಬಲ್ (KNCL) 2016

ಯೊಹೋಶುವ ೧೦

ಯೆಹೋಶುವನು ಆಯಿ ನಗರವನ್ನು ಅದರ ಅರಸನನ್ನು ಹಿಡಿದು ಜೆರಿಕೋವನ್ನೂ ಅದರ ಅರಸನನ್ನೂ ಹೇಗೋ ಹಾಗೆ ಸಂಹರಿಸಿಬಿಟ್ಟನೆಂದು ಜೆರುಸಲೇಮಿನ ಅರಸ ಅದೋನೀಚೆದೆಕನು ತಿಳಿದುಕೊಂಡನು.
ಆಯಿ ನಗರಕ್ಕಿಂತ ದೊಡ್ಡದೂ ಒಂದು ರಾಜಧಾನಿಯಷ್ಟು ಶ್ರೇಷ್ಠವೂ ಆಗಿದ್ದ ಗಿಬ್ಯೋನ್ ನಗರದಲ್ಲಿ ಇರುವ ಜನರೆಲ್ಲರು ಯುದ್ಧವೀರರಾಗಿದ್ದರೂ ಇಸ್ರಯೇಲರ ನಡುವೆ ಜೀವದಿಂದುಳಿಯಲು ಅವರ ಸಂಗಡ ಸಂಧಾನ ಮಾಡಿಕೊಂಡಿದ್ದಾರೆ ಎಂಬುದನ್ನು ಕೂಡ ಕೇಳಿ ಅವನು ಬಹಳವಾಗಿ ಭಯಪಟ್ಟನು.
ಆದುದರಿಂದ ಹೆಬ್ರೋನಿನ ಅರಸ ಹೋಹಾಮ್, ಯರ್ಮೂತಿನ ಅರಸ ಪಿರಾಮ್, ಲಾಕೀಷಿನ ಅರಸ ಯಾಫೀಯ, ಎಗ್ಲೋನಿನ ಅರಸ ದೆಬೀರ್ ಇವರ ಬಳಿಗೆ ದೂತರನ್ನು ಕಳುಹಿಸಿದನು.
“ನೀವು ಬಂದು ನನಗೆ ಸಹಾಯಮಾಡಿ, ನಾವು ಯೆಹೋಶುವನೊಂದಿಗೂ ಇಸ್ರಯೇಲರೊಂದಿಗೂ ಒಪ್ಪಂದ ಮಾಡಿಕೊಂಡು ಗಿಬ್ಯೋನ್ಯರನ್ನು ಸೋಲಿಸೋಣ,” ಎಂದು ಹೇಳಿಕಳಿಸಿದನು.
ಅಂತೆಯೇ ಜೆರುಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್, ಎಗ್ಲೋನ್ ಎಂಬ ನಗರಗಳ ಐದುಮಂದಿ ಅಮೋರಿಯ ರಾಜರು ದಂಡೆತ್ತಿ ಕೂಡಿಬಂದರು. ಗಿಬ್ಯೋನಿಗೆ ಮುತ್ತಿಗೆ ಹಾಕಿ ಯುದ್ಧಮಾಡಿದರು.
ಗಿಬ್ಯೋನ್ಯರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ದೂತರನ್ನು ಕಳಿಸಿದರು. “ನಿಮ್ಮ ಸೇವಕರಾದ ನಮ್ಮನ್ನು ಕೈಬಿಡಬೇಡಿ, ಬೇಗನೆ ಬಂದು ಸಹಾಯ ಮಾಡಿ. ನಮಗೆ ವಿರುದ್ಧ ಕೂಡಿಬಂದಿರುವ ಈ ಬೆಟ್ಟದ ಸೀಮೆಯ ಎಲ್ಲ ಅಮೋರಿಯ ರಾಜರಿಂದ ನಮ್ಮನ್ನು ತಪ್ಪಿಸಿ,” ಎಂದು ಬೇಡಿಕೊಂಡರು.
ಆಗ ಯೆಹೋಶುವ ಎಲ್ಲಾ ಯೋಧರ ಮತ್ತು ಯುದ್ಧವೀರರ ಸಮೇತ ಗಿಲ್ಗಾಲಿನಿಂದ ಹೊರಟರು.
ಸರ್ವೇಶ್ವರ ಸ್ವಾಮಿ ಯೆಹೋಶುವನಿಗೆ, “ಹೆದರಬೇಡ, ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವುದಿಲ್ಲ,” ಎಂದರು.
ಯೆಹೋಶುವನು ಗಿಲ್ಗಾಲ್ ಬಿಟ್ಟು ರಾತ್ರಿಯೆಲ್ಲಾ ಪ್ರಯಾಣ ಮಾಡಿ ತಟ್ಟನೆ ಅವರ ಮೇಲೆ ಬಿದ್ದನು.
೧೦
ಆ ಅಮೋರಿಯರಲ್ಲಿ ಇಸ್ರಯೇಲರ ಬಗ್ಗೆ ಸರ್ವೇಶ್ವರ ಭಯ ಹುಟ್ಟಿಸಿದರು. ಆದುದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್ ಹೋರೋನ್ ಎಂಬ ಮೇಡು ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೆ ಅವರನ್ನು ಹಿಂದಟ್ಟಿ ಸಂಹರಿಸಿದನು.
೧೧
ಅವರು ಇಸ್ರಯೇಲರಿಗೆ ಬೆಂಗೊಟ್ಟು ಬೇತ್ ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ಮುಟ್ಟುವವರೆಗೂ ಸರ್ವೇಶ್ವರ ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಈ ಕಾರಣ ಅನೇಕರು ಸತ್ತರು. ಇಸ್ರಯೇಲರ ಕತ್ತಿಗೆ ಈಡಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚುಮಂದಿ.
೧೨
ಸರ್ವೇಶ್ವರ ಅಮೋರಿಯರನ್ನು ಇಸ್ರಯೇಲರಿಗೆ ವಶಪಡಿಸಿದ ದಿನದಂದು ಯೆಹೋಶುವನು ಸರ್ವೇಶ್ವರನಲ್ಲಿ ಒಂದು ವಿಜ್ಞಾಪನೆ ಮಾಡಿ ಇಸ್ರಯೇಲರ ಕಣ್ಮುಂದೆಯೇ, “ಸೂರ್ಯನೇ, ನೀ ನಿಲ್ಲು ಗಿಬ್ಯೋನಿನಲ್ಲೇ; ಚಂದ್ರನೇ, ನೀ ನಿಲ್ಲು ಅಯ್ಯಾಲೋನ್ ಕಣಿವೆಯಲ್ಲೇ” ಎಂದು ಆಜ್ಞಾಪಿಸಿದನು.
೧೩
ಇಸ್ರಯೇಲರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಇದನ್ನು ‘ಯಾಷಾರ್’ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯ ಮುಳುಗಲು ಆತುರಪಡದೆ ಹೆಚ್ಚುಕಡಿಮೆ ಒಂದು ದಿನವೆಲ್ಲ ಆಕಾಶದ ಮಧ್ಯದಲ್ಲೆ ನಿಂತಿತು.
೧೪
ಆ ಪ್ರಕಾರ ಹಿಂದೆಯಾಗಲಿ ಮುಂದೆಯಾಗಲಿ ಸರ್ವೇಶ್ವರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟಂಥ ದಿವಸ ಇಲ್ಲವೇ ಇಲ್ಲ! ಸರ್ವೇಶ್ವರಸ್ವಾಮಿ ತಾವೇ ಇಸ್ರಯೇಲರ ಪರವಾಗಿ ಯುದ್ಧಮಾಡುತ್ತಿದ್ದರು.
೧೫
ಯೆಹೋಶುವನು ಇಸ್ರಯೇಲರೆಲ್ಲರೊಂದಿಗೆ ಗಿಲ್ಗಾಲಿನ ಪಾಳೆಯಕ್ಕೆ ಹಿಂದಿರುಗಿದನು.
೧೬
ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗವಿಯಲ್ಲಿ ಅವಿತುಕೊಂಡರು.
೧೭
ಜನರು ಯೆಹೋಶುವನಿಗೆ, “ಆ ಐದುಮಂದಿ ನಮಗೆ ಸಿಕ್ಕಿದ್ದಾರೆ. ಅವರು ಮಕ್ಕೇದದ ಗವಿಯಲ್ಲಿ ಅವಿತುಕೊಂಡಿದ್ದಾರೆ,” ಎಂದು ತಿಳಿಸಿದರು.
೧೮
ಆಗ ಯೆಹೋಶುವನು ಅವರಿಗೆ, “ಆ ಗವಿಯ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿ ಕಾಯುವುದಕ್ಕೆ ಕೆಲವರನ್ನಿಡಿ. ನೀವಾದರೋ ಅಲ್ಲೇ ನಿಂತುಕೊಳ್ಳಬೇಡಿ. ಬೇಗನೆ ಹಿಂದಟ್ಟಿ ಹಿಂದಾದ ವ್ಯಕ್ತಿಗಳನ್ನು ಹತಮಾಡುತ್ತಾ ಹೋಗಿ.
೧೯
ಅವರನ್ನು ಅವರ ನಗರಗಳಲ್ಲಿ ಸೇರಗೊಡಿಸಬೇಡಿ. ನಿಮ್ಮ ದೇವರಾದ ಸರ್ವೇಶ್ವರ ಅವರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾರಲ್ಲವೆ?” ಎಂದನು.
೨೦
ಹೀಗೆ ಯೆಹೋಶುವನು ಹಾಗೂ ಇಸ್ರಯೇಲರು ಅವರನ್ನು ಸಂಪೂರ್ಣವಾಗಿ ಸೋಲಿಸಿ ಸಂಹರಿಸಿದರು. ಕೆಲವರು ಮಾತ್ರ ತಪ್ಪಿಸಿಕೊಂಡು ಕೋಟೆಕೊತ್ತಲಗಳಿದ್ದ ಪಟ್ಟಣಗಳನ್ನು ಸೇರಿಕೊಂಡರು.
೨೧
ಇಸ್ರಯೇಲರಾದರೋ ಮಕ್ಕೇದದಲ್ಲಿದ್ದ ಯೆಹೋಶುವನ ಬಳಿಗೆ ಸುರಕ್ಷಿತವಾಗಿ ಬಂದರು. ಇಸ್ರಯೇಲರ ವಿರುದ್ಧ ಯಾರೊಬ್ಬನೂ ನಾಲಿಗೆ ಮಸೆಯಲಿಲ್ಲ.
೨೨
ಅನಂತರ ಯೆಹೋಶುವನು ಜನರಿಗೆ, “ಗವಿಯ ಬಾಯನ್ನು ತೆರೆದು ಆ ಐದು ಮಂದಿ ಅರಸರನ್ನು ನನ್ನ ಬಳಿಗೆ ತನ್ನಿ,” ಎಂದನು.
೨೩
ಅವರು ಹೋಗಿ ಜೆರುಸಲೇಮ್, ಹೆಬ್ರೋನ್, ಯರ್ಮೂತ್, ಲಾಕೀಷ್ ಮತ್ತು ಎಗ್ಲೋನ್ ಎಂಬ ನಗರಗಳ ಐದು ಮಂದಿ ಅರಸರನ್ನು ಗವಿಯಿಂದ ಎಳೆದು ಅವನ ಬಳಿಗೆ ತಂದರು.
೨೪
ತಂದ ಮೇಲೆ ಯೆಹೋಶುವನು ಎಲ್ಲಾ ಇಸ್ರಯೇಲರನ್ನು ಕರೆಸಿ ತನ್ನ ಜೊತೆಯಲ್ಲಿ ಬಂದಿದ್ದ ಸೇನಾಧಿಪತಿಗಳಿಗೆ, “ಹತ್ತಿರ ಬಂದು ಆ ಅರಸರ ಕೊರಳಿನ ಮೇಲೆ ನಿಮ್ಮ ಪಾದಗಳನ್ನಿಡಿ,” ಎಂದು ಹೇಳಿದನು. ಅಂತೆಯೇ ಅವರು ಹತ್ತಿರ ಬಂದು ಕುತ್ತಿಗೆಯ ಮೇಲೆ ಕಾಲಿಟ್ಟರು.
೨೫
ಆಗ ಅವನು ಅವರಿಗೆ, “ಅಂಜಬೇಡಿ, ಕಳವಳಗೊಳ್ಳಬೇಡಿ, ಸ್ಥಿರಚಿತ್ತರಾಗಿರಿ, ಧೈರ್ಯದಿಂದಿರಿ. ನಿಮ್ಮೊಡನೆ ಯುದ್ಧಕ್ಕೆ ಬರುವ ಎಲ್ಲ ಶತ್ರುಗಳಿಗೂ ಸರ್ವೇಶ್ವರ ಹೀಗೆಯೇ ಮಾಡುವರು,” ಎಂದು ಹೇಳಿದರು.
೨೬
ಅನಂತರ ಆ ಅರಸರನ್ನು ಕೊಲ್ಲಿಸಿ ಐದು ಮರಗಳಿಗೆ ನೇತುಹಾಕಿಸಿದನು. ಅವರ ಶವಗಳು ಸಾಯಂಕಾಲದವರೆಗೂ ಅಲ್ಲೇ ತೂಗಾಡುತ್ತಿದ್ದವು.
೨೭
ಸೂರ್ಯಾಸ್ತಮಾನದ ಹೊತ್ತಿಗೆ ಜನರು ಯೆಹೋಶುವನ ಅಪ್ಪಣೆಯಂತೆ ಅವುಗಳನ್ನು ಮರಗಳಿಂದ ಕೆಳಗಿಳಿಸಿ ಅವರು ಅಡಗಿಕೊಂಡಿದ್ದ ಗವಿಯಲ್ಲೇ ಹಾಕಿ ಅದರ ಬಾಯಿಗೆ ದೊಡ್ಡ ಕಲ್ಲುಗಳನ್ನು ಹೊರಳಿಸಿದರು. ಆ ಕಲ್ಲುಗಳು ಇಂದಿನವರೆಗೂ ಅಲ್ಲೇ ಇವೆ.
೨೮
ಅದೇ ದಿನ ಯೆಹೋಶುವನು ಮಕ್ಕೆದವನ್ನು ಸ್ವಾಧೀನಪಡಿಸಿಕೊಂಡನು. ಅದರ ರಾಜನನ್ನೂ ಪ್ರಜೆಗಳೆಲ್ಲರನ್ನೂ ಕತ್ತಿಗೆ ತುತ್ತಾಗಿಸಿದನು.
೨೯
ಯೆಹೋಶುವನು ಜನರೆಲ್ಲರ ಸಮೇತ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
೩೦
ಸರ್ವೇಶ್ವರ ಅದನ್ನೂ ಅದರ ಅರಸನನ್ನೂ ಇಸ್ರಯೇಲರ ಕೈವಶಮಾಡಿದರು. ಅವರು ಅದರಲ್ಲಿದ್ದ ಜನರಲ್ಲಿ ಒಬ್ಬನನ್ನೂ ಉಳಿಸದೆ ಎಲ್ಲರನ್ನೂ ಕತ್ತಿಗೆ ತುತ್ತಾಗಿಸಿದರು. ಜೆರಿಕೋವಿನ ಅರಸನಿಗಾದ ಗತಿಯೇ ಇವರ ಅರಸನಿಗೂ ಆಯಿತು.
೩೧
ಅಲ್ಲಿಂದ ಯೆಹೋಶುವನು ಇಸ್ರಯೇಲರ ಸಹಿತ ಲಾಕೀಷಿಗೆ ಹೋಗಿ ಮುತ್ತಿಗೆ ಹಾಕಿ ಯುದ್ಧಮಾಡಿದನು.
೩೨
ಸರ್ವೇಶ್ವರ ಇದನ್ನೂ ಇಸ್ರಯೇಲರ ಕೈಗೊಪ್ಪಿಸಿದರು. ಎಂದೇ ಅವರು ಅದನ್ನು ಎರಡನೆಯ ದಿನದಲ್ಲಿ ಸ್ವಾಧೀನಮಾಡಿಕೊಂಡು ಅದನ್ನೂ ಅದರ ಜನರನ್ನೂ ಸಂಹರಿಸಿಬಿಟ್ಟರು. ಲಿಬ್ನದವರಿಗಾದ ಗತಿಯೇ ಇವರಿಗೂ ಆಯಿತು.
೩೩
ಇದಲ್ಲದೆ ಯೆಹೋಶುವನು ಲಾಕೀಷಿನವರ ಸಹಾಯಕ್ಕೆ ಬಂದ ಗೆಜೆರಿನ ಅರಸನಾದ ಹೋರಾಮನನ್ನೂ ಅವನ ಪ್ರಜೆಗಳೆಲ್ಲರನ್ನೂ ಸದೆಬಡಿದನು. ಒಬ್ಬನೂ ಉಳಿಯಲಿಲ್ಲ.
೩೪
ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಯೇಲರೆಲ್ಲರ ಸಹಿತ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
೩೫
ಅವರು ಅದೇ ದಿನದಲ್ಲಿ ಅದನ್ನು ಹಿಡಿದು ಲಾಕೀಷಿನಲ್ಲಿ ಮಾಡಿದಂತೆಯೇ ಅದನ್ನೂ ಅದರ ಜನರೆಲ್ಲರನ್ನೂ ಕೊಂದು ನಾಶಮಾಡಿದರು.
೩೬
ಅನಂತರ ಯೆಹೋಶುವನು ಮತ್ತು ಇಸ್ರಯೇಲರು ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರುದ್ಧ ಯುದ್ಧಮಾಡಿದರು.
೩೭
ಅದಕ್ಕೂ ಅದಕ್ಕೆ ಸೇರಿದ ಊರುಗಳನ್ನೂ ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಗೆ ಈಡಾಗಿಸಿದರು. ಎಗ್ಲೋನಿನಲ್ಲಿ ಹೇಗೋ ಹಾಗೆಯೇ ಇಲ್ಲಿಯೂ ಒಬ್ಬನನ್ನೂ ಉಳಿಸಲಿಲ್ಲ. ನಗರವನ್ನೂ ಜನರನ್ನೂ ನಾಶಮಾಡಿದರು.
೩೮
ಅಲ್ಲಿಂದ ಯೆಹೋಶುವನು ಹಾಗು ಎಲ್ಲ ಇಸ್ರಯೇಲರು ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು.
೩೯
ಅದನ್ನು ಹಾಗು ಅದಕ್ಕೆ ಸೇರಿದ ಊರುಗಳನ್ನು ಹಿಡಿದುಕೊಂಡರು. ಅದರ ರಾಜಪ್ರಜೆಗಳೆಲ್ಲರನ್ನೂ ಕತ್ತಿಯಿಂದ ನಾಶಮಾಡಿದರು. ಒಬ್ಬನನ್ನೂ ಉಳಿಸಲಿಲ್ಲ. ಹೆಬ್ರೋನಿಗೂ ಅದರ ಅರಸನಿಗೂ ಆದ ಗತಿಯೇ ದೆಬೀರಿಗೂ ಅದರ ಅರಸನಿಗೂ ಆಯಿತು.
೪೦
ಹೀಗೆ ಯೆಹೋಶುವನು ಮಲೆನಾಡಿನ ಪ್ರದೇಶ, ದಕ್ಷಿಣಪ್ರಾಂತ್ಯ, ಇಳಿಜಾರಿನ ಪ್ರದೇಶ, ಬೆಟ್ಟಗುಡ್ಡಗಳ ಬುಡ ಪ್ರದೇಶ ಇವುಗಳನ್ನು ಸ್ವತಂತ್ರಿಸಿಕೊಂಡು ಇವುಗಳ ರಾಜಪ್ರಜೆಗಳನ್ನು ಸಂಹರಿಸಿಬಿಟ್ಟನು. ಒಬ್ಬನನ್ನೂ ಉಳಿಸಲಿಲ್ಲ. ಇಸ್ರಯೇಲ್ ದೇವರಾದ ಸರ್ವೇಶ್ವರನ ಆಜ್ಞೆಯಂತೆ ಜೀವವಿರುವುದೆಲ್ಲವನ್ನು ಶಾಪನಾಶಕ್ಕೆ ಗುರಿಮಾಡಿದನು.
೪೧
ಕಾದೇಶ್ ಬರ್ನೇಯದಿಂದ ಗಾಜಾ ಊರಿನವರೆಗೂ ಗೋಷೆನ್ ಪ್ರಾಂತ್ಯದಿಂದ ಗಿಬ್ಯೋನಿನವರೆಗೂ ಎಲ್ಲರನ್ನು ಸೋಲಿಸಿದನು.
೪೨
ಇಸ್ರಯೇಲ್ ದೇವರಾದ ಸರ್ವೇಶ್ವರ ಅವರ ಪರವಾಗಿ ಯುದ್ಧಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು.
೪೩
ಇದಾದ ಮೇಲೆ ಯೆಹೋಶುವನು ಎಲ್ಲ ಇಸ್ರಯೇಲರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.
ಯೊಹೋಶುವ ೧೦:1
ಯೊಹೋಶುವ ೧೦:2
ಯೊಹೋಶುವ ೧೦:3
ಯೊಹೋಶುವ ೧೦:4
ಯೊಹೋಶುವ ೧೦:5
ಯೊಹೋಶುವ ೧೦:6
ಯೊಹೋಶುವ ೧೦:7
ಯೊಹೋಶುವ ೧೦:8
ಯೊಹೋಶುವ ೧೦:9
ಯೊಹೋಶುವ ೧೦:10
ಯೊಹೋಶುವ ೧೦:11
ಯೊಹೋಶುವ ೧೦:12
ಯೊಹೋಶುವ ೧೦:13
ಯೊಹೋಶುವ ೧೦:14
ಯೊಹೋಶುವ ೧೦:15
ಯೊಹೋಶುವ ೧೦:16
ಯೊಹೋಶುವ ೧೦:17
ಯೊಹೋಶುವ ೧೦:18
ಯೊಹೋಶುವ ೧೦:19
ಯೊಹೋಶುವ ೧೦:20
ಯೊಹೋಶುವ ೧೦:21
ಯೊಹೋಶುವ ೧೦:22
ಯೊಹೋಶುವ ೧೦:23
ಯೊಹೋಶುವ ೧೦:24
ಯೊಹೋಶುವ ೧೦:25
ಯೊಹೋಶುವ ೧೦:26
ಯೊಹೋಶುವ ೧೦:27
ಯೊಹೋಶುವ ೧೦:28
ಯೊಹೋಶುವ ೧೦:29
ಯೊಹೋಶುವ ೧೦:30
ಯೊಹೋಶುವ ೧೦:31
ಯೊಹೋಶುವ ೧೦:32
ಯೊಹೋಶುವ ೧೦:33
ಯೊಹೋಶುವ ೧೦:34
ಯೊಹೋಶುವ ೧೦:35
ಯೊಹೋಶುವ ೧೦:36
ಯೊಹೋಶುವ ೧೦:37
ಯೊಹೋಶುವ ೧೦:38
ಯೊಹೋಶುವ ೧೦:39
ಯೊಹೋಶುವ ೧೦:40
ಯೊಹೋಶುವ ೧೦:41
ಯೊಹೋಶುವ ೧೦:42
ಯೊಹೋಶುವ ೧೦:43
ಯೊಹೋಶುವ 1 / ಯೊಹ 1
ಯೊಹೋಶುವ 2 / ಯೊಹ 2
ಯೊಹೋಶುವ 3 / ಯೊಹ 3
ಯೊಹೋಶುವ 4 / ಯೊಹ 4
ಯೊಹೋಶುವ 5 / ಯೊಹ 5
ಯೊಹೋಶುವ 6 / ಯೊಹ 6
ಯೊಹೋಶುವ 7 / ಯೊಹ 7
ಯೊಹೋಶುವ 8 / ಯೊಹ 8
ಯೊಹೋಶುವ 9 / ಯೊಹ 9
ಯೊಹೋಶುವ 10 / ಯೊಹ 10
ಯೊಹೋಶುವ 11 / ಯೊಹ 11
ಯೊಹೋಶುವ 12 / ಯೊಹ 12
ಯೊಹೋಶುವ 13 / ಯೊಹ 13
ಯೊಹೋಶುವ 14 / ಯೊಹ 14
ಯೊಹೋಶುವ 15 / ಯೊಹ 15
ಯೊಹೋಶುವ 16 / ಯೊಹ 16
ಯೊಹೋಶುವ 17 / ಯೊಹ 17
ಯೊಹೋಶುವ 18 / ಯೊಹ 18
ಯೊಹೋಶುವ 19 / ಯೊಹ 19
ಯೊಹೋಶುವ 20 / ಯೊಹ 20
ಯೊಹೋಶುವ 21 / ಯೊಹ 21
ಯೊಹೋಶುವ 22 / ಯೊಹ 22
ಯೊಹೋಶುವ 23 / ಯೊಹ 23
ಯೊಹೋಶುವ 24 / ಯೊಹ 24