A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಹಿಬ್ರಿಯರಿಗೆ ೫



ಪ್ರತಿಯೊಬ್ಬ ಪ್ರಧಾನಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು.
ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು.
ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ.
ಅಲ್ಲದೆ, ಪ್ರಧಾನಯಾಜಕನೆಂಬ ಗೌರವಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು.
ಅದೇ ರೀತಿ ಕ್ರಿಸ್ತಯೇಸು, ಪ್ರಧಾನಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. “ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು.
ಅವರೇ ಮತ್ತೊಂದು ಕಡೆಯಲ್ಲಿ: “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ,” ಎಂದಿದ್ದಾರೆ.
ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು‍ ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು.
ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು.
ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.
೧೦
ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕ,” ಎನಿಸಿಕೊಂಡರು.
೧೧
ಈ ವಿಷಯದಲ್ಲಿ ನಾವು ಹೇಳಬೇಕಾದುದು ಎಷ್ಟೋ ಇದೆ. ಆದರೆ ನಿಮ್ಮ ಬುದ್ಧಿಯು ಮಂದವಾಗಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ.
೧೨
ಇಷ್ಟರೊಳಗೆ ನೀವು ಇತರರಿಗೆ ಬೋಧಿಸಲು ಶಕ್ತರಾಗಬೇಕಾಗಿತ್ತು; ಆದರೆ ದೇವರ ವಾಕ್ಯದ ಮೂಲ ಪಾಠಗಳನ್ನೇ ಇತರರು ನಿಮಗೆ ಮತ್ತೆ ಹೇಳಿಕೊಡಬೇಕಾಗಿದೆ. ಗಟ್ಟಿಯಾದ ಆಹಾರವನ್ನು ಉಣ್ಣುವ ಬದಲು ನೀವಿನ್ನೂ ಹಾಲನ್ನೇ ಕುಡಿಯಬೇಕಾಗಿದೆ.
೧೩
ಹಾಲು ಕುಡಿಯಬೇಕಾದವನು ಹಸುಗೂಸು. ನ್ಯಾಯನೀತಿಯ ಅನುಭವ ಅವನಿಗಿಲ್ಲ.
೧೪
ಗಟ್ಟಿಯಾದ ಆಹಾರ ಬೆಳೆದವರಿಗೆ; ಸ್ವಂತ ಅನುಭವದಿಂದ ಒಳ್ಳೆಯದಾವುದು ಕೆಟ್ಟದ್ದಾವುದು ಎಂದು ಅರಿತುಕೊಳ್ಳಬಲ್ಲವರಿಗೆ.











ಹಿಬ್ರಿಯರಿಗೆ ೫:1
ಹಿಬ್ರಿಯರಿಗೆ ೫:2
ಹಿಬ್ರಿಯರಿಗೆ ೫:3
ಹಿಬ್ರಿಯರಿಗೆ ೫:4
ಹಿಬ್ರಿಯರಿಗೆ ೫:5
ಹಿಬ್ರಿಯರಿಗೆ ೫:6
ಹಿಬ್ರಿಯರಿಗೆ ೫:7
ಹಿಬ್ರಿಯರಿಗೆ ೫:8
ಹಿಬ್ರಿಯರಿಗೆ ೫:9
ಹಿಬ್ರಿಯರಿಗೆ ೫:10
ಹಿಬ್ರಿಯರಿಗೆ ೫:11
ಹಿಬ್ರಿಯರಿಗೆ ೫:12
ಹಿಬ್ರಿಯರಿಗೆ ೫:13
ಹಿಬ್ರಿಯರಿಗೆ ೫:14






ಹಿಬ್ರಿಯರಿಗೆ 1 / ಹಿಬ್ರಿ 1
ಹಿಬ್ರಿಯರಿಗೆ 2 / ಹಿಬ್ರಿ 2
ಹಿಬ್ರಿಯರಿಗೆ 3 / ಹಿಬ್ರಿ 3
ಹಿಬ್ರಿಯರಿಗೆ 4 / ಹಿಬ್ರಿ 4
ಹಿಬ್ರಿಯರಿಗೆ 5 / ಹಿಬ್ರಿ 5
ಹಿಬ್ರಿಯರಿಗೆ 6 / ಹಿಬ್ರಿ 6
ಹಿಬ್ರಿಯರಿಗೆ 7 / ಹಿಬ್ರಿ 7
ಹಿಬ್ರಿಯರಿಗೆ 8 / ಹಿಬ್ರಿ 8
ಹಿಬ್ರಿಯರಿಗೆ 9 / ಹಿಬ್ರಿ 9
ಹಿಬ್ರಿಯರಿಗೆ 10 / ಹಿಬ್ರಿ 10
ಹಿಬ್ರಿಯರಿಗೆ 11 / ಹಿಬ್ರಿ 11
ಹಿಬ್ರಿಯರಿಗೆ 12 / ಹಿಬ್ರಿ 12
ಹಿಬ್ರಿಯರಿಗೆ 13 / ಹಿಬ್ರಿ 13