A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕೊಲೊಸ್ಸೆಯರಿಗೆ ೨ನಿಮಗಾಗಿಯೂ ಲವೊದಿಕೀಯದವರಿಗಾಗಿಯೂ ಹಾಗೂ ನನ್ನ ನೇರ ಪರಿಚಯ ಇಲ್ಲದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆಂಬುದನ್ನು ತಿಳಿಸಬಯಸುತ್ತೇನೆ.
ಇದರಿಂದ ಅವರು ಅಂತರಂಗದಲ್ಲಿ ಉತ್ತೇಜನಗೊಂಡು ಪ್ರೀತಿಯಲ್ಲಿ ಒಂದಾಗಬೇಕು; ನೈಜ ಅರಿವಿನಿಂದ ಅವರಿಗೆ ಪೂರ್ಣಜ್ಞಾನ ಲಭಿಸಬೇಕು ಎಂಬುದೇ ನನ್ನ ಆಶಯ. ಆಗ ಅವರು ದೇವರ ರಹಸ್ಯವನ್ನು, ಅಂದರೆ ಕ್ರಿಸ್ತಯೇಸುವನ್ನು ಅರಿತುಕೊಳ್ಳಲು ಸಾಧ್ಯ.
ಕ್ರಿಸ್ತಯೇಸುವಿನಲ್ಲಿಯೇ ಜ್ಞಾನ, ವಿವೇಕ ಎಂಬ ಸಿರಿಸಂಪತ್ತು ಅಡಗಿದೆ.
ಯಾರೂ ತಮ್ಮ ಕುತರ್ಕಗಳಿಂದ ನಿಮ್ಮನ್ನು ಮೋಸಗೊಳಿಸದಿರಲಿ.
ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮೊಂದಿಗಿದ್ದೇನೆ. ನಿಮ್ಮ ಕ್ರಮಬದ್ಧ ನಡತೆಯನ್ನೂ ಕ್ರಿಸ್ತಯೇಸುವಿನಲ್ಲಿ ನಿಮಗಿರುವ ಸ್ಥಿರವಿಶ್ವಾಸವನ್ನೂ ನೋಡುವಾಗ ನನಗೆ ಅಮಿತಾನಂದವಾಗುತ್ತದೆ.
ನೀವು ಕ್ರಿಸ್ತಯೇಸುವನ್ನು ಪ್ರಭುವಾಗಿ ಸ್ವೀಕರಿಸಿರುವುದರಿಂದ, ಅವರೊಡನೆ ಐಕ್ಯತೆಯಿಂದ ಬಾಳಿರಿ.
ಅವರಲ್ಲಿ ಸ್ಥಿರವಾಗಿರಿ. ಅವರನ್ನೇ ಅವಲಂಬಿಸಿ ನಿಮ್ಮ ಬಾಳೆಂಬ ಸೌಧವನ್ನು ನಿರ್ಮಿಸಿರಿ. ನೀವು ಕಲಿತುಕೊಂಡಿರುವಂತೆ ನಿಮ್ಮ ವಿಶ್ವಾಸ ಅವರಲ್ಲಿ ದೃಢವಾಗಿರಲಿ. ಕೃತಜ್ಞತೆಯು ನಿಮ್ಮಲ್ಲಿ ಉಕ್ಕೇರಲಿ.
ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ.
ದೈವತ್ವದ ಸಂಪೂರ್ಣತೆ ಸಶರೀರವಾಗಿ ಯೇಸುಕ್ರಿಸ್ತರಲ್ಲಿ ನೆಲೆಗೊಂಡಿದೆ.
೧೦
ಸಕಲ ಆಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ.
೧೧
ಕ್ರಿಸ್ತಯೇಸುವಿನಲ್ಲಿಯೇ ನೀವು ಸುನ್ನತಿಯನ್ನು ಪಡೆದಿದ್ದೀರಿ. ಇದು ಶಾರೀರಿಕ ಸುನ್ನತಿಯಲ್ಲ, ಪಾಪಮಯ ಸ್ವಭಾವವನ್ನು ಕಿತ್ತೊಗೆಯುವ ಸುನ್ನತಿ. ಸ್ವಯಂ ಕ್ರಿಸ್ತಯೇಸುವೆ ಯೋಜಿಸಿದ ಸುನ್ನತಿ.
೧೨
ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತಯೇಸುವನ್ನು ಮೃತರ ಮಧ್ಯದಿಂದ ದೇವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು.
೧೩
ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದೀರಿ. ಆದರೆ ಈಗ ದೇವರು ಕ್ರಿಸ್ತಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ.
೧೪
ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂಧಿಸಿದ್ದ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ.
೧೫
ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.
೧೬
ಹೀಗಿರಲಾಗಿ, ತಿಂಡಿತೀರ್ಥದ ವಿಷಯದಲ್ಲಾಗಲಿ, ಹಬ್ಬಹುಣ್ಣಿಮೆಗಳ ವಿಚಾರದಲ್ಲಾಗಲಿ, ಸಬ್ಬತ್‍ದಿನವನ್ನು ಆಚರಿಸುವ ರೀತಿಯಲ್ಲಾಗಲಿ ನಿಮ್ಮನ್ನು ದೋಷಿಗಳೆಂದು ಯಾರೂ ದೂರದಿರಲಿ.
೧೭
ಇವುಗಳೆಲ್ಲವೂ ಬರಲಿದ್ದುದರ ಛಾಯೆ ಮಾತ್ರ; ಕ್ರಿಸ್ತಯೇಸುವೇ ಅವುಗಳ ಸತ್ಯಸ್ವರೂಪ.
೧೮
ನಿಮ್ಮಲ್ಲಿ ಕೆಲವರು ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದಾರೆ. ಲೌಕಿಕ ಜ್ಞಾನದಿಂದ ನಿರರ್ಥಕವಾಗಿ ಉಬ್ಬಿಕೊಂಡಿದ್ದಾರೆ. ತಾವು ಬಹಳ ವಿನಯಶಾಲಿಗಳೆಂದು ಹೆಚ್ಚಳಪಡುತ್ತಾರೆ. ಇಂಥವರು ನಿಮ್ಮನ್ನು ಕಡೆಗಾಣಿಸದಂತೆ ಎಚ್ಚರದಿಂದಿರಿ. ಇವರು ಯೇಸುಕ್ರಿಸ್ತರೆಂಬ ಶಿರಸ್ಸಿನಿಂದ ಬೇರ್ಪಟ್ಟಿದ್ದಾರೆ.
೧೯
ಈ ಶಿರಸ್ಸಿನಿಂದಲೇ ಇಡೀ ದೇಹವು, ಕೀಲು-ನರಗಳ ಮೂಲಕ ಒಂದಾಗಿ ಸೇರಿ, ಪೋಷಣೆ ಪಡೆದು, ದೇವರು ನಿಯೋಜಿಸಿರುವ ಪ್ರಕಾರ ಬೆಳೆಯುತ್ತಲಿದೆ.
೨೦
ನೀವು ಕ್ರಿಸ್ತಯೇಸುವಿನೊಡನೆ ಮೃತರಾಗಿರುವ ಕಾರಣ, ಪ್ರಾಕೃತ ಶಕ್ತಿಗಳ ಬಂಧನದಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿರುವಲ್ಲಿ, ಪ್ರಾಪಂಚಿಕ ವಿಧಿನಿಯಮಗಳಿಗೆ ಒಳಪಟ್ಟು ಬಾಳುತ್ತಿರುವುದೇಕೆ?
೨೧
‘ಇದನ್ನು ಮುಟ್ಟಬೇಡ,’ ‘ಅದನ್ನು ಸವಿಯಬೇಡ,’ ‘ಇನ್ನೊಂದನ್ನು ಬಳಸಬೇಡ', ಎಂಬ ಕಟ್ಟಳೆಗಳಿಗೇಕೆ ಒಳಗಾಗುತ್ತೀರಿ?
೨೨
ಇವುಗಳೆಲ್ಲವೂ ಬಳಕೆಯಿಂದ ಅಳಿದುಹೋಗುತ್ತವೆ. ಅಲ್ಲದೆ, ಅವೆಲ್ಲವೂ ಮಾನವ ವ್ಯವಸ್ಥಿತ ಬೋಧನೆ ಹಾಗೂ ನಿಬಂಧನೆಗಳು.
೨೩
ಸ್ವಕಲ್ಪಿತ ಆಚಾರವಿಧಿಗಳಿಂದಲೂ ಕಪಟ ವಿನಯದಿಂದಲೂ ಕಠಿಣ ದೇಹದಂಡನೆಯಿಂದಲೂ ಕೂಡಿರುವ ಈ ವಿಧಿನಿಯಮಗಳು ಹೊರನೋಟಕ್ಕೆ ಜಾಣ್ಮೆಯುಳ್ಳದಾಗಿ ಕಾಣಬಹುದು. ಆದರೂ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸಲು ಇವುಗಳು ಪ್ರಯೋಜನಕ್ಕೆ ಬರುವಂಥವುಗಳಲ್ಲ.ಕೊಲೊಸ್ಸೆಯರಿಗೆ ೨:1
ಕೊಲೊಸ್ಸೆಯರಿಗೆ ೨:2
ಕೊಲೊಸ್ಸೆಯರಿಗೆ ೨:3
ಕೊಲೊಸ್ಸೆಯರಿಗೆ ೨:4
ಕೊಲೊಸ್ಸೆಯರಿಗೆ ೨:5
ಕೊಲೊಸ್ಸೆಯರಿಗೆ ೨:6
ಕೊಲೊಸ್ಸೆಯರಿಗೆ ೨:7
ಕೊಲೊಸ್ಸೆಯರಿಗೆ ೨:8
ಕೊಲೊಸ್ಸೆಯರಿಗೆ ೨:9
ಕೊಲೊಸ್ಸೆಯರಿಗೆ ೨:10
ಕೊಲೊಸ್ಸೆಯರಿಗೆ ೨:11
ಕೊಲೊಸ್ಸೆಯರಿಗೆ ೨:12
ಕೊಲೊಸ್ಸೆಯರಿಗೆ ೨:13
ಕೊಲೊಸ್ಸೆಯರಿಗೆ ೨:14
ಕೊಲೊಸ್ಸೆಯರಿಗೆ ೨:15
ಕೊಲೊಸ್ಸೆಯರಿಗೆ ೨:16
ಕೊಲೊಸ್ಸೆಯರಿಗೆ ೨:17
ಕೊಲೊಸ್ಸೆಯರಿಗೆ ೨:18
ಕೊಲೊಸ್ಸೆಯರಿಗೆ ೨:19
ಕೊಲೊಸ್ಸೆಯರಿಗೆ ೨:20
ಕೊಲೊಸ್ಸೆಯರಿಗೆ ೨:21
ಕೊಲೊಸ್ಸೆಯರಿಗೆ ೨:22
ಕೊಲೊಸ್ಸೆಯರಿಗೆ ೨:23


ಕೊಲೊಸ್ಸೆಯರಿಗೆ 1 / ಕೊ 1
ಕೊಲೊಸ್ಸೆಯರಿಗೆ 2 / ಕೊ 2
ಕೊಲೊಸ್ಸೆಯರಿಗೆ 3 / ಕೊ 3
ಕೊಲೊಸ್ಸೆಯರಿಗೆ 4 / ಕೊ 4