A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಫಿಲಿಪಿಯರಿಗೆ ೨ಕ್ರಿಸ್ತಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.
ನಿಮ್ಮೆಲ್ಲರಲ್ಲಿ ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿ ಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು.
ಸ್ವಾರ್ಥಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ.
ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ.
ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ:
ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
ತನ್ನನ್ನೇ ಬರಿದುಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ.
ತನ್ನನ್ನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ.
ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು.
೧೦
ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
೧೧
‘ಕ್ರಿಸ್ತಯೇಸುವೇ ಪ್ರಭು' ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.
೧೨
ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ.
೧೩
ಏಕೆಂದರೆ ದೈವಚಿತ್ತವನ್ನು ನೀವು ನೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪ್ರೇರಣೆಯನ್ನೂ ಸತ್ಫಲವನ್ನೂ ನೀಡುತ್ತಾರೆ.
೧೪
ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕಮನಸ್ಸಿನಿಂದ ಮಾಡಿ.
೧೫
ನಿರ್ದೋಷಿಗಳೂ ನಿಷ್ಕಳಂಕರೂ ಆಗಿರಿ. ವಕ್ರಬುದ್ಧಿಯ ದುಷ್ಟಜನರ ನಡುವೆ ದೇವರ ಪರಿಶುದ್ಧ ಮಕ್ಕಳಂತೆ ಬಾಳಿರಿ. ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ; ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ.
೧೬
ಹೀಗೆ ನೀವು ನಡೆದುಕೊಂಡರೆ ನನ್ನ ಸೇವೆ ವ್ಯರ್ಥವಾಗದೆ, ಶ್ರಮೆ ನಿಷ್ಫಲವಾಗದೆ, ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆಪಡಬಹುದು.
೧೭
ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ.
೧೮
ಅದೇ ರೀತಿ ನೀವು ಸಹ ನನ್ನೊಡನೆ ಸಂತೋಷದಿಂದ ಸಂಭ್ರಮಿಸಿರಿ.
೧೯
ಪ್ರಭು ಯೇಸುವಿನ ಚಿತ್ತವಾದಲ್ಲಿ ತಿಮೊಥೇಯನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸಬೇಕೆಂದಿದ್ದೇನೆ. ಆತನಿಂದ ನಿಮ್ಮ ಸಮಾಚಾರವನ್ನು ತಿಳಿದು ನಾನು ಹರ್ಷಗೊಳ್ಳುತ್ತೇನೆ.
೨೦
ಆತನಂತೆ ನಿಷ್ಕಪಟವಾಗಿ ನಿಮ್ಮ ಯೋಗಕ್ಷೇಮವನ್ನು ಬಯಸುವವರು ಬೇರೆ ಯಾರೂ ಇಲ್ಲಿಲ್ಲ.
೨೧
ಇತರರೆಲ್ಲರೂ ಸ್ವಕಾರ್ಯದಲ್ಲಿ ಮಗ್ನರಾಗಿರುವವರೇ ಹೊರತು ಯೇಸುಸ್ವಾಮಿಯ ಕಾರ್ಯದಲ್ಲಿ ನಿರತರಾಗಿಲ್ಲ.
೨೨
ತಿಮೊಥೇಯನ ಯೋಗ್ಯತೆಯನ್ನು ನೀವು ಬಲ್ಲಿರಿ. ತಂದೆಯೊಂದಿಗೆ ಮಗನು ದುಡಿಯುವಂತೆ, ಶುಭಸಂದೇಶದ ಸೇವೆಯಲ್ಲಿ ನನ್ನೊಂದಿಗೆ ಆತನು ದುಡಿದಿದ್ದಾನೆ.
೨೩
ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶ ತಿಳಿದ ಕೂಡಲೇ ಆತನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.
೨೪
ಅಲ್ಲದೆ, ದೇವರ ಚಿತ್ತವಿದ್ದರೆ, ನಾನೇ ನಿಮ್ಮಲ್ಲಿಗೆ ಬೇಗನೆ ಬರುವೆನೆಂಬ ದೃಢನಂಬಿಕೆಯೂ ನನಗಿದೆ.
೨೫
ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.
೨೬
ನಿಮ್ಮನ್ನೆಲ್ಲಾ ನೋಡಲು ಅವನು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ದಿಯು ನಿಮ್ಮ ಕಿವಿಗೆ ಮುಟ್ಟಿತೆಂದು ತಿಳಿದು ಬಹಳ ವ್ಯಸನಪಡುತ್ತಿದ್ದಾನೆ.
೨೭
ಅವನು ಅಸ್ವಸ್ಥನಾದದ್ದು ನಿಜ; ಸಾವಿನ ದವಡೆಯಿಂದ ಪಾರಾದದ್ದೂ ನಿಜ. ದೇವರ ಕರುಣೆ ಅವನ ಮೇಲೆ ಮಾತ್ರವಲ್ಲದೆ ನನ್ನ ಮೇಲೂ ಇದ್ದುದರಿಂದ ನನಗೆ ದುಃಖದ ಮೇಲೆ ದುಃಖ ಬರದಂತಾಯಿತು.
೨೮
ಎಪಫ್ರೋದಿತನನ್ನು ನಿಮ್ಮ ಬಳಿಗೆ ಕಳುಹಿಸಲು ತವಕದಿಂದಿದ್ದೇನೆ. ಅವನನ್ನು ಕಂಡು ನಿಮಗೆ ಆನಂದವಾಗುವುದು, ನನ್ನ ದುಃಖವೂ ಶಮನವಾಗುವುದು.
೨೯
ಪ್ರಭುವಿನ ಹೆಸರಿನಲ್ಲಿ ನೀವು ಅವನನ್ನು ತುಂಬು ಹೃದಯದಿಂದ ಸ್ವಾಗತಿಸಿರಿ. ಅವನಂಥವರಿಗೆ ಸೂಕ್ತ ಗೌರವ ಸಲ್ಲಿಸಿರಿ.
೩೦
ಕ್ರಿಸ್ತಯೇಸುವಿನ ಸೇವೆಯಲ್ಲಿ ಅವನು ಸತ್ತು ಬದುಕಿದ್ದಾನೆ. ನೀವು ಕೊಡಲು ಸಾಧ್ಯವಾಗದೆ ಹೋದ ನೆರವನ್ನು ಅವನು ನನಗೆ ಕೊಟ್ಟು ಸೇವೆಯನ್ನು ಪೂರ್ಣಗೊಳಿಸಿದ್ದಾನೆ.ಫಿಲಿಪಿಯರಿಗೆ ೨:1
ಫಿಲಿಪಿಯರಿಗೆ ೨:2
ಫಿಲಿಪಿಯರಿಗೆ ೨:3
ಫಿಲಿಪಿಯರಿಗೆ ೨:4
ಫಿಲಿಪಿಯರಿಗೆ ೨:5
ಫಿಲಿಪಿಯರಿಗೆ ೨:6
ಫಿಲಿಪಿಯರಿಗೆ ೨:7
ಫಿಲಿಪಿಯರಿಗೆ ೨:8
ಫಿಲಿಪಿಯರಿಗೆ ೨:9
ಫಿಲಿಪಿಯರಿಗೆ ೨:10
ಫಿಲಿಪಿಯರಿಗೆ ೨:11
ಫಿಲಿಪಿಯರಿಗೆ ೨:12
ಫಿಲಿಪಿಯರಿಗೆ ೨:13
ಫಿಲಿಪಿಯರಿಗೆ ೨:14
ಫಿಲಿಪಿಯರಿಗೆ ೨:15
ಫಿಲಿಪಿಯರಿಗೆ ೨:16
ಫಿಲಿಪಿಯರಿಗೆ ೨:17
ಫಿಲಿಪಿಯರಿಗೆ ೨:18
ಫಿಲಿಪಿಯರಿಗೆ ೨:19
ಫಿಲಿಪಿಯರಿಗೆ ೨:20
ಫಿಲಿಪಿಯರಿಗೆ ೨:21
ಫಿಲಿಪಿಯರಿಗೆ ೨:22
ಫಿಲಿಪಿಯರಿಗೆ ೨:23
ಫಿಲಿಪಿಯರಿಗೆ ೨:24
ಫಿಲಿಪಿಯರಿಗೆ ೨:25
ಫಿಲಿಪಿಯರಿಗೆ ೨:26
ಫಿಲಿಪಿಯರಿಗೆ ೨:27
ಫಿಲಿಪಿಯರಿಗೆ ೨:28
ಫಿಲಿಪಿಯರಿಗೆ ೨:29
ಫಿಲಿಪಿಯರಿಗೆ ೨:30


ಫಿಲಿಪಿಯರಿಗೆ 1 / ಫಿಲಿಪಿ 1
ಫಿಲಿಪಿಯರಿಗೆ 2 / ಫಿಲಿಪಿ 2
ಫಿಲಿಪಿಯರಿಗೆ 3 / ಫಿಲಿಪಿ 3
ಫಿಲಿಪಿಯರಿಗೆ 4 / ಫಿಲಿಪಿ 4