A A A A A
×

ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೨

“ಆಗ ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆ ನಾವು ಹಿಂದಿರುಗಿ ಮರುಭೂಮಿಗೆ ಹೊರಟು ಕೆಂಪುಸಮುದ್ರದ ಮಾರ್ಗದಲ್ಲಿ ನಡೆದು ಅನೇಕ ದಿನಗಳು ಸೇಯೀರ್ ಮಲೆನಾಡನ್ನು ಸುತ್ತುತ್ತಿದ್ದೆವು.
ಆಮೇಲೆ ಸರ್ವೇಶ್ವರ ನನಗೆ,
‘ನೀವು ಈ ಮಲೆನಾಡನ್ನು ಸುತ್ತಿದ್ದು ಸಾಕು; ಉತ್ತರದಿಕ್ಕಿಗೆ ತಿರುಗಿಕೊಳ್ಳಿ.
ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು; ಸೇಯೀರ್ ನಾಡಿನಲ್ಲಿ ವಾಸವಾಗಿರುವ ನಿಮ್ಮ ಬಂಧುಗಳಾದ ಏಸಾವನ ವಂಶದವರ ನಾಡನ್ನು ದಾಟುವುದಕ್ಕಿದ್ದೀರಿ. ಅವರು ನಿಮಗೆ ಅಂಜುವರು; ನೀವು ಅವರ ಸಂಗಡ ಯುದ್ಧಕ್ಕೆ ಹೋಗದೆ ಬಹಳ ಜಾಗರೂಕತೆಯಿಂದಿರಬೇಕು.
ನಾನು ಸೇಯೀರ್ ಮಲೆನಾಡನ್ನು ಏಸಾವ್ಯರಿಗೇ ಸ್ವದೇಶವಾಗಿ ಕೊಟ್ಟಿದ್ದೇನೆ. ಆದುದರಿಂದ ಅದರಲ್ಲಿ ನಿಮಗೆ ಹೆಜ್ಜೆಯಿಡುವಷ್ಟು ನೆಲವನ್ನಾದರೂ ಕೊಡುವುದಿಲ್ಲ.
ನೀವು ಅಲ್ಲಿ ಕಾಸುಕೊಟ್ಟು ಆಹಾರಪದಾರ್ಥಗಳನ್ನು ಕೊಂಡು ತಿನ್ನಬೇಕು; ನೀರನ್ನೂ ಕೊಂಡುಕೊಂಡು ಕುಡಿಯಬೇಕು,’ ಎಂದರು.
“ನೀವು ಕೈಹಾಕಿದ ಎಲ್ಲ ಕೆಲಸಗಳನ್ನೂ ನಿಮ್ಮ ದೇವರಾದ ಸರ್ವೇಶ್ವರ ಸಫಲಪಡಿಸಿದ್ದಾರೆ. ಈ ದೊಡ್ಡ ಮರುಭೂಮಿಯಲ್ಲಿ ನೀವು ಸಂಚರಿಸುತ್ತಿರುವಾಗಲೆಲ್ಲ ಅವರು ನಿಮ್ಮನ್ನು ಪರಾಂಬರಿಸುತ್ತಾ ಬಂದರು. ಈ ನಲವತ್ತು ವರ್ಷ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮೊಂದಿಗೆ ಇದ್ದುದರಿಂದಲೆ ನಿಮಗೆ ಏನೂ ಕಡಿಮೆಯಾಗಲಿಲ್ಲ,” ಎಂದು ಹೇಳಿದನು.
“ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರ ಕಡೆಯಿಂದ ಓರೆಯಾಗಿ ಪ್ರಯಾಣಮಾಡಿ ಅರಾಬದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.
ಆಗ ಸರ್ವೇಶ್ವರ ನನಗೆ, ‘ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸೊತ್ತನ್ನು ಕೊಡುವುದಿಲ್ಲ. ನೀವು ಎದ್ದು ಜೆರೆದ್ ಹಳ್ಳವನ್ನು ದಾಟಬೇಕು.’ ಎಂದು ಆಜ್ಞಾಪಿಸಿದರು.
೧೦
(ತತ್ಪೂರ್ವದಲ್ಲಿ ಏಮಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಬಲಿಷ್ಠರೂ ಬಹುಮಂದಿಯೂ ಅನಾಕಿಮರಂತೆ ಎತ್ತರವಾದವರೂ ಆಗಿದ್ದರು.
೧೧
ಅವರು ಅನಾಕಿಮರಂತೆ ರೆಫಾಯರಿಗೆ ಸೇರಿದವರೆಂದು ಹೇಳುವುದುಂಟು; ಆದರೆ ಮೋವಾಬ್ಯರು ಅವರನ್ನು ಏಮಿಯರೆಂದು ಹೇಳುತ್ತಾರೆ.
೧೨
ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಯೇಲರು ತಮಗೆ ಸರ್ವೇಶ್ವರ ಕೊಟ್ಟ ನಾಡನ್ನು ಹೇಗೆ ಸ್ವಾಧೀನಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ನಾಡಿನಲ್ಲಿ ವಾಸಮಾಡಿದರು.)
೧೩
“ಆಗ ನಾವು ಜೆರೆದ್ ಹಳ್ಳವನ್ನು ದಾಟಿದೆವು. ನಾವು ಕಾದೇಶ್ ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಿದವರೆಗೆ ಮೂವತ್ತೆಂಟು ವರ್ಷಕಾಲ ಆಯಿತು. ಸರ್ವೇಶ್ವರ ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಯ ಸೈನಿಕರೆಲ್ಲರು ಸತ್ತುಹೋಗಿದ್ದರು.
೧೪
***
೧೫
ಸರ್ವೇಶ್ವರನ ಹಸ್ತವು ಅವರಿಗೆ ವಿರೋಧವಾಗಿದ್ದುದರಿಂದ ಪಾಳೆಯದಲ್ಲಿ ಒಬ್ಬನೂ ಉಳಿಯದಂತೆ ನಾಶವಾದರು.
೧೬
“ಆ ಸೈನಿಕರೆಲ್ಲರು ಸತ್ತುಹೋದ ನಂತರ ಸರ್ವೇಶ್ವರ ನನಗೆ,
೧೭
***
೧೮
‘ನೀವು ಈಗ ಮೋವಾಬ್ಯರ ಪ್ರಾಂತ್ಯವಾಗಿರುವ ಆರ್ ಎಂಬ ಪ್ರದೇಶವನ್ನು ದಾಟುವಿರಿ.
೧೯
ಮುಂದೆ ನೀವು ಅಮ್ಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಬೇಡಿ. ನಾನು ಆ ನಾಡನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿದ್ದೇನೆ. ಆದುದರಿಂದ ನಿಮಗೆ ಅದರಲ್ಲಿ ಕಿಂಚಿತ್ತು ಭಾಗವನ್ನೂ ಕೊಡುವುದಿಲ್ಲ.
೨೦
(ಪೂರ್ವಕಾಲದಲ್ಲಿ ರೆಫಾಯರು ಆ ನಾಡಿನಲ್ಲಿ ವಾಸವಾಗಿದ್ದುದರಿಂದ ಅದು ಕೂಡ ರೆಫಾಯರ ನಾಡೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಕರೆಯುತ್ತಾರೆ;
೨೧
ಅವರು ಬಲಿಷ್ಠರು, ಬಹುಜನರು ಹಾಗು ಅನಾಕಿಮರಂತೆ ಎತ್ತರದವರೂ ಆಗಿದ್ದರು.
೨೨
ಆದರೆ ಹೇಗೆ ಸರ್ವೇಶ್ವರ ಸೇಯೀರಿನಲ್ಲಿರುವ ಏಸಾವ್ಯರ ಪರವಾಗಿ ಹೋರಿಯರನ್ನು ಹೊರದೂಡಿದಾಗ ಏಸಾವ್ಯರು ಆ ನಾಡನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,
೨೩
ಮತ್ತು ಹೇಗೆ ಕಫ್ತೋರಿಂದ ಬಂದ ಕಫ್ತೋರ್ಯರು ಗಾಜಾ ಪಟ್ಟಣದವರೆಗೂ ಹಳ್ಳಿಗಳಲ್ಲಿದ್ದ ಅವ್ವಿಯರನ್ನು ನಾಶಮಾಡಿ ಅವರ ಸ್ಥಳದಲ್ಲಿ ವಾಸಮಾಡಿದರೋ, ಹಾಗೆಯೇ ಸರ್ವೇಶ್ವರ ರೆಫಾಯರನ್ನು ಅಮ್ಮೋನಿಯರ ಬಳಿಯಿಂದ ಹೊರದೂಡಿದರು; ಅಮ್ಮೋನಿಯರು ಆ ನಾಡನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಿಸಿದರು.)
೨೪
ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸ ಸೀಹೋನನು ನಿಮ್ಮಿಂದ ಸೋತುಹೋಗಿ ಅವನ ರಾಜ್ಯ ನಿಮಗೇ ವಶವಾಗಬೇಕೆಂದು ನಿಮಗೆ ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ ಆ ನಾಡನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿರಿ.
೨೫
ಲೋಕದಲ್ಲಿರುವ ಎಲ್ಲ ಜನಗಳಿಗೂ ಇಂದಿನಿಂದ ನಿಮ್ಮ ಬಗ್ಗೆ ದಿಗಿಲೂ ಹೆದರಿಕೆಯೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಗಡಗಡನೆ ನಡುಗಿ ಸಂಕಟಪಡುವರು,’ ಎಂದು ಹೇಳಿದರು.
೨೬
“ಆಗ ನಾನು ಕೆದೇಮೋತಿನ ಮರುಭೂಮಿಯಿಂದ ಹೆಷ್ಬೋನಿನ ಅರಸ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದೆ.
೨೭
‘ನಿನ್ನ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಬಲಕ್ಕೆ ತಿರುಗದೆ ದಾರಿಹಿಡಿದು ನಡೆದುಹೋಗುವೆವು.
೨೮
ನಮ್ಮಿಂದ ಕ್ರಯ ತೆಗೆದುಕೊಂಡು ಆಹಾರಪದಾರ್ಥಗಳನ್ನೂ ಕುಡಿಯಲು ನೀರನ್ನೂ ಕೊಡಿ.
೨೯
ನಾವು ಜೋರ್ಡನ್ ಹೊಳೆಯನ್ನು ದಾಟಿ, ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ನಾಡನ್ನು ಸೇರಬೇಕೆಂದಿದ್ದೇವೆ. ಸೇಯೀರಿನಲ್ಲಿರುವ ಏಸಾವ್ಯರು ಹಾಗು ಆರ್ ಪ್ರದೇಶದಲ್ಲಿರುವ ಮೋವಾಬ್ಯರು ನಮಗೆ ದಾರಿಕೊಟ್ಟಂತೆ ನೀನೂ ಕೊಡಬೇಕು. ಕಾಲ್ನಡೆಯಾಗಿ ನಿನ್ನ ನಾಡನ್ನು ದಾಟಿಹೋಗುವುದಕ್ಕೆ ನಿನ್ನ ಅಪ್ಪಣೆಯಾಗಬೇಕೇ ಹೊರತು ಬೇರೆ ಏನೂ ಬೇಕಿಲ್ಲ,’ ಎಂದು ವಿನಯಪೂರ್ವಕವಾದ ಮಾತುಗಳಿಂದ ಹೇಳಿಸಿದೆ.
೩೦
ಆದರೆ ಸರ್ವೇಶ್ವರ ಅವನಿಗೆ ಮೂರ್ಖಬುದ್ಧಿಯನ್ನು ಕೊಟ್ಟು, ಹಟಮಾರಿಯನ್ನಾಗಿಸಿದ್ದರಿಂದ ಅವನು ಸಮ್ಮತಿಸಲಿಲ್ಲ. ನಿಮ್ಮಿಂದ ಅವನು ಸೋತುಹೋಗಬೇಕೆಂಬುದೇ ನಿಮ್ಮ ದೇವರಾದ ಸರ್ವೇಶ್ವರನ ಸಂಕಲ್ಪವಾಗಿತ್ತು. ಅದು ಈಗಾಗಲೇ ನೆರವೇರಿದೆ.
೩೧
“ತರುವಾಯ ಸರ್ವೇಶ್ವರ ನನಗೆ, ‘ಈಗ ನಾನು ಸೀಹೋನನನ್ನೂ ಅವನ ನಾಡನ್ನೂ ನಿಮಗೆ ವಶಪಡಿಸುವುದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನ ಮಾಡಿಕೊಳ್ಳಲು ಶುರುಮಾಡಿರಿ,’ ಎಂದು ಹೇಳಿದರು.
೩೨
ಸೀಹೋನನು ತನ್ನ ಜನರೆಲ್ಲರ ಸಮೇತ ನಮ್ಮೊಡನೆ ಯುದ್ಧಮಾಡಲು ಯಹಜಿಗೆ ಹೊರಟುಬಂದ.
೩೩
ನಮ್ಮ ದೇವರಾದ ಸರ್ವೇಶ್ವರ ಅವನನ್ನು ನಮ್ಮಿಂದ ಪರಾಜಯ ಪಡಿಸಿದರು. ನಾವು ಅವನನ್ನು, ಅವನ ಮಕ್ಕಳನ್ನು ಹಾಗು ಜನರೆಲ್ಲರನ್ನು ಸದೆಬಡಿದೆವು.
೩೪
ಆ ಕಾಲದಲ್ಲಿ ನಾವು ಅವನ ಎಲ್ಲ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಂಡು, ಅವುಗಳಲ್ಲಿದ್ದ ಗಂಡಸರನ್ನು, ಹೆಂಗಸರನ್ನು ಹಾಗು ಮಕ್ಕಳನ್ನು ನಿಶ್ಯೇಷವಾಗಿ ಹತಮಾಡಿದೆವು; ಒಬ್ಬನನ್ನೂ ಉಳಿಸಲಿಲ್ಲ.
೩೫
ಪಶುಗಳನ್ನು ಮಾತ್ರ ಉಳಿಸಿ ನಮ್ಮ ಸ್ವಂತಕ್ಕಾಗಿ ತೆಗೆದುಕೊಂಡು, ಊರುಗಳನ್ನು ಸೂರೆಮಾಡಿಬಿಟ್ಟೆವು.
೩೬
ಅರ್ನೋನ್ ಕಣಿವೆಯ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮತ್ತು ಕಣಿವೆಯಲ್ಲೇ ಇರುವ ಪಟ್ಟಣ ಇವುಗಳನ್ನು ಮೊದಲುಗೊಂಡು ಗಿಲ್ಯಾದ್ ಸೀಮೆಯವರೆಗೆ ಯಾವ ಪಟ್ಟಣವನ್ನು ಜಯಿಸಲೂ ನಮಗೆ ಅಸಾಧ್ಯವಾಗಲಿಲ್ಲ. ನಮ್ಮ ದೇವರಾದ ಸರ್ವೇಶ್ವರ ಅವುಗಳೆಲ್ಲ ನಮ್ಮ ಕೈಗೆ ಸಿಕ್ಕುವಂತೆ ಮಾಡಿದರು.
೩೭
ಅಮ್ಮೋನಿಯರ ನಾಡನ್ನು ಮಾತ್ರ, ಅಂದರೆ ಯಬ್ಬೋಕ್ ಹೊಳೆಯ ಬಳಿಯಲ್ಲಿರುವ ಪ್ರದೇಶ ಮತ್ತು ಮಲೆನಾಡಿನ ಊರುಗಳು ಇವೇ ಮೊದಲಾದ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ; ಅಲ್ಲಿಗೆ ಹೋಗಲೇಬಾರದೆಂದು ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದ್ದರು.
ಧರ್ಮೋಪದೇಷಕಾಂಡ ೨:1
ಧರ್ಮೋಪದೇಷಕಾಂಡ ೨:2
ಧರ್ಮೋಪದೇಷಕಾಂಡ ೨:3
ಧರ್ಮೋಪದೇಷಕಾಂಡ ೨:4
ಧರ್ಮೋಪದೇಷಕಾಂಡ ೨:5
ಧರ್ಮೋಪದೇಷಕಾಂಡ ೨:6
ಧರ್ಮೋಪದೇಷಕಾಂಡ ೨:7
ಧರ್ಮೋಪದೇಷಕಾಂಡ ೨:8
ಧರ್ಮೋಪದೇಷಕಾಂಡ ೨:9
ಧರ್ಮೋಪದೇಷಕಾಂಡ ೨:10
ಧರ್ಮೋಪದೇಷಕಾಂಡ ೨:11
ಧರ್ಮೋಪದೇಷಕಾಂಡ ೨:12
ಧರ್ಮೋಪದೇಷಕಾಂಡ ೨:13
ಧರ್ಮೋಪದೇಷಕಾಂಡ ೨:14
ಧರ್ಮೋಪದೇಷಕಾಂಡ ೨:15
ಧರ್ಮೋಪದೇಷಕಾಂಡ ೨:16
ಧರ್ಮೋಪದೇಷಕಾಂಡ ೨:17
ಧರ್ಮೋಪದೇಷಕಾಂಡ ೨:18
ಧರ್ಮೋಪದೇಷಕಾಂಡ ೨:19
ಧರ್ಮೋಪದೇಷಕಾಂಡ ೨:20
ಧರ್ಮೋಪದೇಷಕಾಂಡ ೨:21
ಧರ್ಮೋಪದೇಷಕಾಂಡ ೨:22
ಧರ್ಮೋಪದೇಷಕಾಂಡ ೨:23
ಧರ್ಮೋಪದೇಷಕಾಂಡ ೨:24
ಧರ್ಮೋಪದೇಷಕಾಂಡ ೨:25
ಧರ್ಮೋಪದೇಷಕಾಂಡ ೨:26
ಧರ್ಮೋಪದೇಷಕಾಂಡ ೨:27
ಧರ್ಮೋಪದೇಷಕಾಂಡ ೨:28
ಧರ್ಮೋಪದೇಷಕಾಂಡ ೨:29
ಧರ್ಮೋಪದೇಷಕಾಂಡ ೨:30
ಧರ್ಮೋಪದೇಷಕಾಂಡ ೨:31
ಧರ್ಮೋಪದೇಷಕಾಂಡ ೨:32
ಧರ್ಮೋಪದೇಷಕಾಂಡ ೨:33
ಧರ್ಮೋಪದೇಷಕಾಂಡ ೨:34
ಧರ್ಮೋಪದೇಷಕಾಂಡ ೨:35
ಧರ್ಮೋಪದೇಷಕಾಂಡ ೨:36
ಧರ್ಮೋಪದೇಷಕಾಂಡ ೨:37
ಧರ್ಮೋಪದೇಷಕಾಂಡ 1 / ಧರ್ಮೋ 1
ಧರ್ಮೋಪದೇಷಕಾಂಡ 2 / ಧರ್ಮೋ 2
ಧರ್ಮೋಪದೇಷಕಾಂಡ 3 / ಧರ್ಮೋ 3
ಧರ್ಮೋಪದೇಷಕಾಂಡ 4 / ಧರ್ಮೋ 4
ಧರ್ಮೋಪದೇಷಕಾಂಡ 5 / ಧರ್ಮೋ 5
ಧರ್ಮೋಪದೇಷಕಾಂಡ 6 / ಧರ್ಮೋ 6
ಧರ್ಮೋಪದೇಷಕಾಂಡ 7 / ಧರ್ಮೋ 7
ಧರ್ಮೋಪದೇಷಕಾಂಡ 8 / ಧರ್ಮೋ 8
ಧರ್ಮೋಪದೇಷಕಾಂಡ 9 / ಧರ್ಮೋ 9
ಧರ್ಮೋಪದೇಷಕಾಂಡ 10 / ಧರ್ಮೋ 10
ಧರ್ಮೋಪದೇಷಕಾಂಡ 11 / ಧರ್ಮೋ 11
ಧರ್ಮೋಪದೇಷಕಾಂಡ 12 / ಧರ್ಮೋ 12
ಧರ್ಮೋಪದೇಷಕಾಂಡ 13 / ಧರ್ಮೋ 13
ಧರ್ಮೋಪದೇಷಕಾಂಡ 14 / ಧರ್ಮೋ 14
ಧರ್ಮೋಪದೇಷಕಾಂಡ 15 / ಧರ್ಮೋ 15
ಧರ್ಮೋಪದೇಷಕಾಂಡ 16 / ಧರ್ಮೋ 16
ಧರ್ಮೋಪದೇಷಕಾಂಡ 17 / ಧರ್ಮೋ 17
ಧರ್ಮೋಪದೇಷಕಾಂಡ 18 / ಧರ್ಮೋ 18
ಧರ್ಮೋಪದೇಷಕಾಂಡ 19 / ಧರ್ಮೋ 19
ಧರ್ಮೋಪದೇಷಕಾಂಡ 20 / ಧರ್ಮೋ 20
ಧರ್ಮೋಪದೇಷಕಾಂಡ 21 / ಧರ್ಮೋ 21
ಧರ್ಮೋಪದೇಷಕಾಂಡ 22 / ಧರ್ಮೋ 22
ಧರ್ಮೋಪದೇಷಕಾಂಡ 23 / ಧರ್ಮೋ 23
ಧರ್ಮೋಪದೇಷಕಾಂಡ 24 / ಧರ್ಮೋ 24
ಧರ್ಮೋಪದೇಷಕಾಂಡ 25 / ಧರ್ಮೋ 25
ಧರ್ಮೋಪದೇಷಕಾಂಡ 26 / ಧರ್ಮೋ 26
ಧರ್ಮೋಪದೇಷಕಾಂಡ 27 / ಧರ್ಮೋ 27
ಧರ್ಮೋಪದೇಷಕಾಂಡ 28 / ಧರ್ಮೋ 28
ಧರ್ಮೋಪದೇಷಕಾಂಡ 29 / ಧರ್ಮೋ 29
ಧರ್ಮೋಪದೇಷಕಾಂಡ 30 / ಧರ್ಮೋ 30
ಧರ್ಮೋಪದೇಷಕಾಂಡ 31 / ಧರ್ಮೋ 31
ಧರ್ಮೋಪದೇಷಕಾಂಡ 32 / ಧರ್ಮೋ 32
ಧರ್ಮೋಪದೇಷಕಾಂಡ 33 / ಧರ್ಮೋ 33
ಧರ್ಮೋಪದೇಷಕಾಂಡ 34 / ಧರ್ಮೋ 34