A A A A A
×

ಕನ್ನಡ ಬೈಬಲ್ (KNCL) 2016

ಧರ್ಮೋಪದೇಷಕಾಂಡ ೧೦

“ಆ ಕಾಲದಲ್ಲಿ ಸರ್ವೇಶ್ವರ ನನಗೆ, ‘ನೀನು ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿಕೊಂಡು ಬೆಟ್ಟವನ್ನು ಹತ್ತಿ ನನ್ನ ಬಳಿಗೆ ಬಾ ಮತ್ತು ಒಂದು ಮರದ ಮಂಜೂಷವನ್ನು ಮಾಡಿಸಿಕೊಳ್ಳಬೇಕು.
ನೀನು ಒಡೆದುಬಿಟ್ಟ ಆ ಮೊದಲಿನ ಹಲಗೆಗಳಲ್ಲಿ ಬರೆದಿದ್ದ ಮಾತುಗಳನ್ನು ನಾನು ಈ ಹಲಗೆಗಳ ಮೇಲೆ ಬರೆಯುವೆನು. ತರುವಾಯ ನೀನು ಅವುಗಳನ್ನು ಆ ಮಂಜೂಷದಲ್ಲಿಡಬೇಕು’ ಎಂದು ಆಜ್ಞಾಪಿಸಿದರು.
ಆದಕಾರಣ, ನಾನು ಜಾಲೀಮರದಿಂದ ಮಂಜೂಷವನ್ನು ಮಾಡಿಸಿ, ಮೊದಲಿನ ಕಲ್ಲಿನ ಹಲಗೆಗಳಂತೆ ಬೇರೆ ಎರಡು ಹಲಗೆಗಳನ್ನು ಸಿದ್ಧಪಡಿಸಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು, ಬೆಟ್ಟವನ್ನು ಹತ್ತಿದೆ.
ಸರ್ವೇಶ್ವರ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ, ನೀವು ಸಭೆಕೂಡಿದ ದಿನದಲ್ಲಿ, ನಿಮಗೆ ಹೇಳಿದ ಮಾತುಗಳನ್ನು ಅಂದರೆ, ಆ ಹತ್ತು ಆಜ್ಞೆಗಳನ್ನು ಅವರು ಮೊದಲಿನಂತೆಯೇ ಆ ಹಲಗೆಗಳ ಮೇಲೆ ಬರೆದರು.
ಸರ್ವೇಶ್ವರ ಹಲಗೆಗಳನ್ನು ನನ್ನ ವಶಕ್ಕೆ ಕೊಟ್ಟನಂತರ ನಾನು ಬೆಟ್ಟದಿಂದ ಇಳಿದುಬಂದೆ; ನನ್ನಿಂದ ಸಿದ್ಧ ಆಗಿದ್ದ ಮಂಜೂಷದಲ್ಲಿ ಅವರ ಅಪ್ಪಣೆಯ ಮೇರೆಗೆ ಅವುಗಳನ್ನು ಇಟ್ಟೆ; ಅವು ಇಂದಿನವರೆಗೂ ಅದರಲ್ಲೇ ಇವೆ.
(ಇಸ್ರಯೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣಮಾಡಿ ಮೋಸೇರಕ್ಕೆ ಬಂದರು. ಅಲ್ಲಿ ಆರೋನನು ಸಾಯಲಾಗಿ ಅವನನ್ನು ಸಮಾಧಿಮಾಡಿದರು. ಅವನ ಮಗ ಎಲ್ಲಾಜಾರನು ಅವನಿಗೆ ಬದಲಾಗಿ ಮಹಾಯಾಜಕನಾದನು.
ಅಲ್ಲಿಂದ ಅವರು ಗುದ್ಗೋದಕ್ಕೂ ಗುದ್ಗೋದದಿಂದ ನೀರಿನ ಹಳ್ಳಗಳುಳ್ಳ ಯೊಟ್ಬಾತಕ್ಕೂ ಪ್ರಯಾಣಮಾಡಿದರು.)
“ಆ ಕಾಲದಲ್ಲಿ ಸರ್ವೇಶ್ವರ ಲೇವಿಕುಲದವರನ್ನು ಪ್ರತ್ಯೇಕಿಸಿ ತಮ್ಮ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕು, ತಮ್ಮ ಸನ್ನಿಧಿಯಲ್ಲಿ ಸೇವೆಮಾಡುವುದಕ್ಕು ಹಾಗು ತಮ್ಮ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕು ಅವರನ್ನು ನೇಮಿಸಿದರು. ಅವರು ಇಂದಿನವರೆಗೂ ಆ ಕೆಲಸವನ್ನು ನಡೆಸುತ್ತಾರೆ.
ಆದುದರಿಂದ ಮಿಕ್ಕ ಇಸ್ರಯೇಲರಿಗೆ ದೊರಕಿದಂತೆ ಲೇವಿಯರಿಗೆ ಸ್ವಂತವಾದ ಭೂಸ್ವಾಸ್ತ್ಯ ದೊರಕಲಿಲ್ಲ. ನಿಮ್ಮ ದೇವರಾದ ಸರ್ವೇಶ್ವರ ಅವರಿಗೆ ಹೇಳಿದಂತೆ ಸರ್ವೇಶ್ವರಸ್ವಾಮಿಯೇ ಅವರ ಸೊತ್ತು.
೧೦
“ನಾನು ಮುಂಚಿನಂತೆ ಹಗಲಿರುಳು ನಲವತ್ತು ದಿನವೂ ಬೆಟ್ಟದ ಮೇಲೆ ಇದ್ದೆ. ಸರ್ವೇಶ್ವರ ಆ ಕಾಲದಲ್ಲೂ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡಬೇಕೆಂಬ ಆಲೋಚನೆಯನ್ನು ಬಿಟ್ಟುಬಿಟ್ಟರು.
೧೧
ತರುವಾಯ ಸರ್ವೇಶ್ವರ ನನಗೆ, ‘ನೀನು ಈ ಜನರ ಮುಂದುಗಡೆ ಹೊರಡು; ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ನಾಡನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,’ ಎಂದು ಆಜ್ಞಾಪಿಸಿದರು.
೧೨
“ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡಬೇಕು;
೧೩
ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು. ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ.
೧೪
ಇಗೋ ಕೇಳಿ: ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ.
೧೫
ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು.
೧೬
ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿ.
೧೭
ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು, ಸರ್ವೇಶ್ವರಾಧಿ ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ, ಲಂಚ ತೆಗೆದುಕೊಳ್ಳುವವರಲ್ಲ.
೧೮
ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯ ದೊರಕಿಸುತ್ತಾರೆ; ಪರದೇಷಿಗಳಾದವರಿಗೆ ಪ್ರೀತಿಯಿಂದ ಅನ್ನ ವಸ್ತ್ರಗಳನ್ನು ನೀಡುತ್ತಾರೆ.
೧೯
ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ.
೨೦
ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು.
೨೧
ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅವರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ.
೨೨
ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ. ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗುವಂತೆ ಮಾಡಿದ್ದಾರೆ.
ಧರ್ಮೋಪದೇಷಕಾಂಡ ೧೦:1
ಧರ್ಮೋಪದೇಷಕಾಂಡ ೧೦:2
ಧರ್ಮೋಪದೇಷಕಾಂಡ ೧೦:3
ಧರ್ಮೋಪದೇಷಕಾಂಡ ೧೦:4
ಧರ್ಮೋಪದೇಷಕಾಂಡ ೧೦:5
ಧರ್ಮೋಪದೇಷಕಾಂಡ ೧೦:6
ಧರ್ಮೋಪದೇಷಕಾಂಡ ೧೦:7
ಧರ್ಮೋಪದೇಷಕಾಂಡ ೧೦:8
ಧರ್ಮೋಪದೇಷಕಾಂಡ ೧೦:9
ಧರ್ಮೋಪದೇಷಕಾಂಡ ೧೦:10
ಧರ್ಮೋಪದೇಷಕಾಂಡ ೧೦:11
ಧರ್ಮೋಪದೇಷಕಾಂಡ ೧೦:12
ಧರ್ಮೋಪದೇಷಕಾಂಡ ೧೦:13
ಧರ್ಮೋಪದೇಷಕಾಂಡ ೧೦:14
ಧರ್ಮೋಪದೇಷಕಾಂಡ ೧೦:15
ಧರ್ಮೋಪದೇಷಕಾಂಡ ೧೦:16
ಧರ್ಮೋಪದೇಷಕಾಂಡ ೧೦:17
ಧರ್ಮೋಪದೇಷಕಾಂಡ ೧೦:18
ಧರ್ಮೋಪದೇಷಕಾಂಡ ೧೦:19
ಧರ್ಮೋಪದೇಷಕಾಂಡ ೧೦:20
ಧರ್ಮೋಪದೇಷಕಾಂಡ ೧೦:21
ಧರ್ಮೋಪದೇಷಕಾಂಡ ೧೦:22
ಧರ್ಮೋಪದೇಷಕಾಂಡ 1 / ಧರ್ಮೋ 1
ಧರ್ಮೋಪದೇಷಕಾಂಡ 2 / ಧರ್ಮೋ 2
ಧರ್ಮೋಪದೇಷಕಾಂಡ 3 / ಧರ್ಮೋ 3
ಧರ್ಮೋಪದೇಷಕಾಂಡ 4 / ಧರ್ಮೋ 4
ಧರ್ಮೋಪದೇಷಕಾಂಡ 5 / ಧರ್ಮೋ 5
ಧರ್ಮೋಪದೇಷಕಾಂಡ 6 / ಧರ್ಮೋ 6
ಧರ್ಮೋಪದೇಷಕಾಂಡ 7 / ಧರ್ಮೋ 7
ಧರ್ಮೋಪದೇಷಕಾಂಡ 8 / ಧರ್ಮೋ 8
ಧರ್ಮೋಪದೇಷಕಾಂಡ 9 / ಧರ್ಮೋ 9
ಧರ್ಮೋಪದೇಷಕಾಂಡ 10 / ಧರ್ಮೋ 10
ಧರ್ಮೋಪದೇಷಕಾಂಡ 11 / ಧರ್ಮೋ 11
ಧರ್ಮೋಪದೇಷಕಾಂಡ 12 / ಧರ್ಮೋ 12
ಧರ್ಮೋಪದೇಷಕಾಂಡ 13 / ಧರ್ಮೋ 13
ಧರ್ಮೋಪದೇಷಕಾಂಡ 14 / ಧರ್ಮೋ 14
ಧರ್ಮೋಪದೇಷಕಾಂಡ 15 / ಧರ್ಮೋ 15
ಧರ್ಮೋಪದೇಷಕಾಂಡ 16 / ಧರ್ಮೋ 16
ಧರ್ಮೋಪದೇಷಕಾಂಡ 17 / ಧರ್ಮೋ 17
ಧರ್ಮೋಪದೇಷಕಾಂಡ 18 / ಧರ್ಮೋ 18
ಧರ್ಮೋಪದೇಷಕಾಂಡ 19 / ಧರ್ಮೋ 19
ಧರ್ಮೋಪದೇಷಕಾಂಡ 20 / ಧರ್ಮೋ 20
ಧರ್ಮೋಪದೇಷಕಾಂಡ 21 / ಧರ್ಮೋ 21
ಧರ್ಮೋಪದೇಷಕಾಂಡ 22 / ಧರ್ಮೋ 22
ಧರ್ಮೋಪದೇಷಕಾಂಡ 23 / ಧರ್ಮೋ 23
ಧರ್ಮೋಪದೇಷಕಾಂಡ 24 / ಧರ್ಮೋ 24
ಧರ್ಮೋಪದೇಷಕಾಂಡ 25 / ಧರ್ಮೋ 25
ಧರ್ಮೋಪದೇಷಕಾಂಡ 26 / ಧರ್ಮೋ 26
ಧರ್ಮೋಪದೇಷಕಾಂಡ 27 / ಧರ್ಮೋ 27
ಧರ್ಮೋಪದೇಷಕಾಂಡ 28 / ಧರ್ಮೋ 28
ಧರ್ಮೋಪದೇಷಕಾಂಡ 29 / ಧರ್ಮೋ 29
ಧರ್ಮೋಪದೇಷಕಾಂಡ 30 / ಧರ್ಮೋ 30
ಧರ್ಮೋಪದೇಷಕಾಂಡ 31 / ಧರ್ಮೋ 31
ಧರ್ಮೋಪದೇಷಕಾಂಡ 32 / ಧರ್ಮೋ 32
ಧರ್ಮೋಪದೇಷಕಾಂಡ 33 / ಧರ್ಮೋ 33
ಧರ್ಮೋಪದೇಷಕಾಂಡ 34 / ಧರ್ಮೋ 34