೧ |
ದೇವಜನರಿಗೆ ಸಲ್ಲಿಸಬೇಕಾದ ಈ ಸೇವಾಕಾರ್ಯವನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. |
೨ |
ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ. |
೩ |
ಆದರೂ ನಮ್ಮ ಹೊಗಳಿಕೆ ಸುಳ್ಳಾಗಬಾರದೆಂದು ನಾನು ಈ ಸಹೋದರರನ್ನು ಮುಂಚಿತವಾಗಿ ಕಳುಹಿಸುತ್ತಿದ್ದೇನೆ. |
೪ |
ನಾನು ನಿಮಗೆ ಹೇಳಿರುವಂತೆ ನಿಮ್ಮ ಏರ್ಪಾಡೆಲ್ಲಾ ಮುಗಿದಿರಬೇಕು. ಇಲ್ಲದಿದ್ದರೆ ನಾನು ಬರುವಾಗ, ನನ್ನ ಜೊತೆಯಲ್ಲಿಯೇ ಮಕೆದೋನಿಯದ ಸಹೋದರರೂ ಬಂದು, ನೀವು ಸಿದ್ಧರಿಲ್ಲದೆ ಇರುವುದನ್ನು ಕಂಡರೆ ನೀವು ತಲೆತಗ್ಗಿಸಬೇಕಾಗುತ್ತದೆ. ನಿಮ್ಮಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ನಾನೂ ತಲೆ ತಗ್ಗಿಸಬೇಕಾಗುತ್ತದೆ. |
೫ |
ಆದ್ದರಿಂದಲೇ, ನೀವು ವಾಗ್ದಾನಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಏರ್ಪಾಡನ್ನು ಮಾಡುವಂತೆ ಈ ಸಹೋದರರನ್ನು ನಮಗೆ ಮುಂಚಿತವಾಗಿಯೇ ನಿಮ್ಮ ಬಳಿಗೆ ಕಳುಹಿಸುವುದು ಉಚಿತವೆಂದು ನನಗೆ ತೋಚಿತು. ಹೀಗೆ ಈ ಕೊಡುಗೆ ಬಲಾತ್ಕಾರವಾದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ನಿಧಿ ಆಗಿರುತ್ತದೆ. |
೬ |
ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ |
೭ |
ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ. |
೮ |
ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. |
೯ |
“ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. |
೧೦ |
ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು. |
೧೧ |
ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು. |
೧೨ |
ಹೀಗೆ ನಿಮ್ಮ ಕೊಡುಗೆ ದೇವಜನರ ಕೊರತೆಗಳನ್ನು ನೀಗಿಸುವುದಲ್ಲದೆ ಅನೇಕರು ದೇವರಿಗೆ ಸ್ತೋತ್ರ ಸಲ್ಲಿಸುವಂತೆ ಮಾಡುವುದು. |
೧೩ |
ಕ್ರಿಸ್ತಯೇಸುವಿನ ಶುಭಸಂದೇಶದ ಅಂಗೀಕಾರದಿಂದ ನೀವು ಎಷ್ಟು ನಿಷ್ಠಾವಂತ ಸೇವಾಸಕ್ತರಾಗಿದ್ದೀರಿ, ತಮಗೂ ಇತರರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂದು ತಿಳಿದು ಅನೇಕರು ದೇವರನ್ನು ಕೊಂಡಾಡುವರು. |
೧೪ |
ದೇವರು ನಿಮಗೆ ಅನುಗ್ರಹಿಸಿರುವ ಅತಿಶಯವಾದ ವರಕ್ಕಾಗಿ ಅವರು ಪ್ರೀತಿವಾತ್ಸಲ್ಯದಿಂದ ನಿಮಗೋಸ್ಕರ ಪ್ರಾರ್ಥಿಸುವರು. |
೧೫ |
ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತುತಿಸ್ತೋತ್ರ ಸಲ್ಲಲಿ! |
Kannada Bible (KNCL) 2016 |
No Data |
ಕೊರಿಂಥಿಯರಿಗೆ ೨ ೯:1 |
ಕೊರಿಂಥಿಯರಿಗೆ ೨ ೯:2 |
ಕೊರಿಂಥಿಯರಿಗೆ ೨ ೯:3 |
ಕೊರಿಂಥಿಯರಿಗೆ ೨ ೯:4 |
ಕೊರಿಂಥಿಯರಿಗೆ ೨ ೯:5 |
ಕೊರಿಂಥಿಯರಿಗೆ ೨ ೯:6 |
ಕೊರಿಂಥಿಯರಿಗೆ ೨ ೯:7 |
ಕೊರಿಂಥಿಯರಿಗೆ ೨ ೯:8 |
ಕೊರಿಂಥಿಯರಿಗೆ ೨ ೯:9 |
ಕೊರಿಂಥಿಯರಿಗೆ ೨ ೯:10 |
ಕೊರಿಂಥಿಯರಿಗೆ ೨ ೯:11 |
ಕೊರಿಂಥಿಯರಿಗೆ ೨ ೯:12 |
ಕೊರಿಂಥಿಯರಿಗೆ ೨ ೯:13 |
ಕೊರಿಂಥಿಯರಿಗೆ ೨ ೯:14 |
ಕೊರಿಂಥಿಯರಿಗೆ ೨ ೯:15 |
ಕೊರಿಂಥಿಯರಿಗೆ ೨ 1 / ಕೊ೨ 1 |
ಕೊರಿಂಥಿಯರಿಗೆ ೨ 2 / ಕೊ೨ 2 |
ಕೊರಿಂಥಿಯರಿಗೆ ೨ 3 / ಕೊ೨ 3 |
ಕೊರಿಂಥಿಯರಿಗೆ ೨ 4 / ಕೊ೨ 4 |
ಕೊರಿಂಥಿಯರಿಗೆ ೨ 5 / ಕೊ೨ 5 |
ಕೊರಿಂಥಿಯರಿಗೆ ೨ 6 / ಕೊ೨ 6 |
ಕೊರಿಂಥಿಯರಿಗೆ ೨ 7 / ಕೊ೨ 7 |
ಕೊರಿಂಥಿಯರಿಗೆ ೨ 8 / ಕೊ೨ 8 |
ಕೊರಿಂಥಿಯರಿಗೆ ೨ 9 / ಕೊ೨ 9 |
ಕೊರಿಂಥಿಯರಿಗೆ ೨ 10 / ಕೊ೨ 10 |
ಕೊರಿಂಥಿಯರಿಗೆ ೨ 11 / ಕೊ೨ 11 |
ಕೊರಿಂಥಿಯರಿಗೆ ೨ 12 / ಕೊ೨ 12 |
ಕೊರಿಂಥಿಯರಿಗೆ ೨ 13 / ಕೊ೨ 13 |
|
|
|
|
|