೧ |
ದೇವಜನರಿಗೋಸ್ಕರ ಹಣ ಸಂಗ್ರಹಿಸುವುದರ ವಿಷಯವಾಗಿ ಹೇಳುವುದಾದರೆ: ಗಲಾತ್ಯದ ಸಭೆಗಳಿಗೆ ನಾನು ಕೊಟ್ಟ ನಿಯಮವನ್ನೇ ನೀವೂ ಅನುಸರಿಸಿರಿ. ನಾನು ಬಂದಾಗ ಹಣ ಸಂಗ್ರಹಿಸುವ ಅವಶ್ಯಕತೆ ಇರಬಾರದು. |
೨ |
ಈ ಕಾರಣ, ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸಂಪಾದನೆಗೆ ತಕ್ಕಂತೆ ಸ್ವಲ್ಪ ಹಣವನ್ನು ಪ್ರತಿ ವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ ಇಡಲಿ. |
೩ |
ನಾನು ಬಂದ ನಂತರ ನಿಮ್ಮ ಕೊಡುಗೆಯನ್ನು ಪರಿಚಯ ಪತ್ರದ ಸಮೇತ ನೀವು ಆರಿಸಿದವರ ಕೈಯಲ್ಲಿ ಜೆರುಸಲೇಮಿಗೆ ಕಳುಹಿಸುತ್ತೇನೆ. |
೪ |
ನಾನೇ ಹೋಗುವುದು ಉಚಿತವೆನಿಸಿದರೆ, ಅವರೂ ನನ್ನ ಜೊತೆಗೆ ಬರಲಿ. |
೫ |
ನಾನು ಮೊದಲು ಮಕೆದೋನಿಯದ ಪ್ರವಾಸವನ್ನು ಮುಗಿಸಿಕೊಂಡು ಅನಂತರ ನಿಮ್ಮ ಬಳಿಗೆ ಬರುತ್ತೇನೆ. |
೬ |
ಬಹುಶಃ ನಾನು ನಿಮ್ಮೊಡನೆ ತಂಗಬಹುದು. ಚಳಿಗಾಲವನ್ನು ಪೂರ್ತಿಯಾಗಿ ನಿಮ್ಮಲ್ಲಿ ಕಳೆಯಬೇಕಾಗಬಹುದು. ಆಮೇಲೆ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಕಳುಹಿಸಿಕೊಡಬೇಕು. |
೭ |
ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ. |
೮ |
ಪಂಚಾಶತ್ತಮ ಹಬ್ಬದ ತನಕ ನಾನು ಎಫೆಸದಲ್ಲಿಯೇ ಇರುತ್ತೇನೆ. |
೯ |
ಇಲ್ಲಿ ಅನೇಕ ವಿರೋಧಿಗಳಿದ್ದರೂ ಶುಭಸಂದೇಶದ ಕಾರ್ಯವನ್ನು ಕೈಗೊಳ್ಳಲು ಮಹಾದ್ವಾರಗಳು ನನಗೆ ತೆರೆದಿವೆ. |
೧೦ |
ತಿಮೊಥೇಯನು ಬಂದರೆ ಆತನಿಗೆ ಯಾವ ಚಿಂತೆಯೂ ಇರದಂತೆ ನೋಡಿಕೊಳ್ಳಿ. ಆತನು ನನ್ನ ಹಾಗೆ ಪ್ರಭುವಿನ ಸೇವೆಯಲ್ಲಿಯೇ ನಿರತನಾಗಿರುತ್ತಾನೆ. |
೧೧ |
ಯಾರೂ ಆತನನ್ನು ತಾತ್ಸಾರ ಮಾಡದಿರಲಿ. ಸಮಾಧಾನದಿಂದ ಆತನು ನನ್ನ ಬಳಿಗೆ ಬರುವಂತೆ ಕಳುಹಿಸಿಕೊಡಿ. ಆತನ ಆಗಮನವನ್ನು ನಾನು ಇತರ ಸಹೋದರರೊಡನೆ ಎದುರುನೋಡುತ್ತಿದ್ದೇನೆ. |
೧೨ |
ಸಹೋದರರೇ, ಅಪೊಲೋಸನ ವಿಷಯವಾಗಿ ಹೇಳುವುದಾದರೆ, ಆತನು ಇತರ ಸಹೋದರರೊಡನೆ ನಿಮ್ಮ ಬಳಿಗೆ ಬರಬೇಕೆಂದು ನಾನು ಬಹಳವಾಗಿ ಪ್ರೋತ್ಸಾಹಿಸಿದ್ದೇನೆ. ತಕ್ಷಣವೇ ಬರಲು ಆತನಿಗೆ ಮನಸ್ಸಿಲ್ಲ; ಸದವಕಾಶ ದೊರಕಿದಾಗ ಬರುತ್ತಾನೆ. |
೧೩ |
ಜಾಗರೂಕರಾಗಿರಿ, ವಿಶ್ವಾಸದಲ್ಲಿ ದೃಢರಾಗಿರಿ, ಧೈರ್ಯಶಾಲಿಗಳಾಗಿರಿ, ಸ್ಥೈರ್ಯದಿಂದ ಬಾಳಿರಿ. |
೧೪ |
ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ. |
೧೫ |
ಸ್ತೇಫನನನ್ನು ಮತ್ತು ಆತನ ಕುಟುಂಬದವರನ್ನು ನೀವು ಬಲ್ಲಿರಿ. ಅವರು ಅಖಾಯದ ಪ್ರಥಮ ಕ್ರೈಸ್ತವಿಶ್ವಾಸಿಗಳು. ದೇವಜನರ ಸೇವೆಗೆ ತಮ್ಮನ್ನೇ ಸಮರ್ಪಿಸಿಕೊಂಡವರು. ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ: |
೧೬ |
ಇಂಥವರನ್ನು ಮತ್ತು ಅವರೊಡನೆ ದುಡಿದು ಸೇವೆಮಾಡುವವರನ್ನು ಮುಂದಾಳುಗಳೆಂದು ಸನ್ಮಾನಿಸಿರಿ. |
೧೭ |
ಸ್ತೇಫನನು, ಪೋರ್ತುನಾತನು ಮತ್ತು ಅಖಾಯಿಕನು ಬಂದುದರಿಂದ ನನಗೆ ಸಂತೋಷವುಂಟಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿಸಿದ್ದಾರೆ. |
೧೮ |
ಅವರು ನಿಮ್ಮನ್ನು ಸಂತೈಸಿದಂತೆ ನನ್ನನ್ನೂ ಸಂತೈಸಿದ್ದಾರೆ, ಇಂಥವರನ್ನು ಗೌರವಿಸಬೇಕು. |
೧೯ |
ಏಷ್ಯ ಸೀಮೆಯಲ್ಲಿರುವ ಧರ್ಮಸಭೆಗಳ ಸಹೋದರರು ನಿಮಗೆ ವಂದನೆಗಳನ್ನು ತಿಳಿಸಿರುತ್ತಾರೆ. ಅಕ್ವಿಲನು ಮತ್ತು ಪ್ರಿಸಿಲ್ಲಳು ಹಾಗೂ ಅವರ ಮನೆಯಲ್ಲಿ ಸಭೆ ಸೇರುವ ಎಲ್ಲರೂ ಪ್ರಭುವಿನ ಹೆಸರಿನಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. |
೨೦ |
ಇಲ್ಲಿಯ ಸಹೋದರರೆಲ್ಲರೂ ನಿಮಗೆ ನಮಸ್ಕಾರ ಹೇಳಿದ್ದಾರೆ. ನೀವು ಸಹ ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. |
೨೧ |
ಪೌಲನಾದ ನಾನು ನನ್ನ ಸ್ವಂತ ಕೈಬರಹದಿಂದ ನಿಮಗೆ ವಂದನೆಯನ್ನು ಬರೆಯುತ್ತಿದ್ದೇನೆ. |
೨೨ |
ಯಾರಾದರೂ ಪ್ರಭುವನ್ನು ಪ್ರೀತಿಸದೆಹೋದರೆ ಅವರಿಗೆ ಧಿಕ್ಕಾರ! “ಮಾರನಥ\ - ಪ್ರಭುವೇ ಬನ್ನಿ. |
೨೩ |
ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರಲ್ಲಿರಲಿ. |
೨೪ |
ಕ್ರಿಸ್ತಯೇಸುವಿನಲ್ಲಿ ನಿಮ್ಮೆಲ್ಲರಿಗೂ ನನ್ನ ಪ್ರೀತಿವಾತ್ಸಲ್ಯಗಳು!
|
Kannada Bible (KNCL) 2016 |
No Data |
|
|
|
|
|
|
|
|
|
|
ಕೊರಿಂಥಿಯರಿಗೆ ೧ ೧೬:1 |
ಕೊರಿಂಥಿಯರಿಗೆ ೧ ೧೬:2 |
ಕೊರಿಂಥಿಯರಿಗೆ ೧ ೧೬:3 |
ಕೊರಿಂಥಿಯರಿಗೆ ೧ ೧೬:4 |
ಕೊರಿಂಥಿಯರಿಗೆ ೧ ೧೬:5 |
ಕೊರಿಂಥಿಯರಿಗೆ ೧ ೧೬:6 |
ಕೊರಿಂಥಿಯರಿಗೆ ೧ ೧೬:7 |
ಕೊರಿಂಥಿಯರಿಗೆ ೧ ೧೬:8 |
ಕೊರಿಂಥಿಯರಿಗೆ ೧ ೧೬:9 |
ಕೊರಿಂಥಿಯರಿಗೆ ೧ ೧೬:10 |
ಕೊರಿಂಥಿಯರಿಗೆ ೧ ೧೬:11 |
ಕೊರಿಂಥಿಯರಿಗೆ ೧ ೧೬:12 |
ಕೊರಿಂಥಿಯರಿಗೆ ೧ ೧೬:13 |
ಕೊರಿಂಥಿಯರಿಗೆ ೧ ೧೬:14 |
ಕೊರಿಂಥಿಯರಿಗೆ ೧ ೧೬:15 |
ಕೊರಿಂಥಿಯರಿಗೆ ೧ ೧೬:16 |
ಕೊರಿಂಥಿಯರಿಗೆ ೧ ೧೬:17 |
ಕೊರಿಂಥಿಯರಿಗೆ ೧ ೧೬:18 |
ಕೊರಿಂಥಿಯರಿಗೆ ೧ ೧೬:19 |
ಕೊರಿಂಥಿಯರಿಗೆ ೧ ೧೬:20 |
ಕೊರಿಂಥಿಯರಿಗೆ ೧ ೧೬:21 |
ಕೊರಿಂಥಿಯರಿಗೆ ೧ ೧೬:22 |
ಕೊರಿಂಥಿಯರಿಗೆ ೧ ೧೬:23 |
ಕೊರಿಂಥಿಯರಿಗೆ ೧ ೧೬:24 |
|
|
|
|
|
|
ಕೊರಿಂಥಿಯರಿಗೆ ೧ 1 / ಕೊ೧ 1 |
ಕೊರಿಂಥಿಯರಿಗೆ ೧ 2 / ಕೊ೧ 2 |
ಕೊರಿಂಥಿಯರಿಗೆ ೧ 3 / ಕೊ೧ 3 |
ಕೊರಿಂಥಿಯರಿಗೆ ೧ 4 / ಕೊ೧ 4 |
ಕೊರಿಂಥಿಯರಿಗೆ ೧ 5 / ಕೊ೧ 5 |
ಕೊರಿಂಥಿಯರಿಗೆ ೧ 6 / ಕೊ೧ 6 |
ಕೊರಿಂಥಿಯರಿಗೆ ೧ 7 / ಕೊ೧ 7 |
ಕೊರಿಂಥಿಯರಿಗೆ ೧ 8 / ಕೊ೧ 8 |
ಕೊರಿಂಥಿಯರಿಗೆ ೧ 9 / ಕೊ೧ 9 |
ಕೊರಿಂಥಿಯರಿಗೆ ೧ 10 / ಕೊ೧ 10 |
ಕೊರಿಂಥಿಯರಿಗೆ ೧ 11 / ಕೊ೧ 11 |
ಕೊರಿಂಥಿಯರಿಗೆ ೧ 12 / ಕೊ೧ 12 |
ಕೊರಿಂಥಿಯರಿಗೆ ೧ 13 / ಕೊ೧ 13 |
ಕೊರಿಂಥಿಯರಿಗೆ ೧ 14 / ಕೊ೧ 14 |
ಕೊರಿಂಥಿಯರಿಗೆ ೧ 15 / ಕೊ೧ 15 |
ಕೊರಿಂಥಿಯರಿಗೆ ೧ 16 / ಕೊ೧ 16 |