A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಕೊರಿಂಥಿಯರಿಗೆ ೧ ೧೪ಪ್ರೀತಿಯನ್ನು ಅರಸಿರಿ. ಪವಿತ್ರಾತ್ಮರ ವರಗಳನ್ನು ಬಯಸಿರಿ. ದೇವರ ಸಂದೇಶವನ್ನು ಸಾರಲು ಹಂಬಲಿಸಿರಿ.
ಪರವಶಾಭಾಷೆಯನ್ನು ಆಡುವವನು ಮಾನವನೊಡನಲ್ಲ, ದೇವರೊಡನೆ ಮಾತನಾಡುತ್ತಾನೆ. ಪವಿತ್ರಾತ್ಮರ ಪ್ರೇರಣೆಯಿಂದ ನಿಗೂಢ ವಿಷಯಗಳ ಬಗ್ಗೆ ಮಾತನಾಡುವುದರಿಂದ ಯಾರೂ ಆತನ ಮಾತನ್ನು ಅರ್ಥಮಾಡಿಕೊಳ್ಳಲಾರರು.
ಅವನ ಮಾತು ಭಕ್ತಿಯನ್ನು ವೃದ್ಧಿಸುತ್ತದೆ. ಉತ್ಸಾಹವನ್ನುಂಟುಮಾಡುತ್ತದೆ, ಉಪಶಮನವನ್ನು ತರುತ್ತದೆ.
ಪರವಶಾಭಾಷೆಗಳನ್ನು ಆಡುವವನು ತನ್ನನ್ನೇ ಅಭಿವೃದ್ಧಿಗೊಳಿಸಿಕೊಳ್ಳುತ್ತಾನೆ. ಆದರೆ ದೇವರ ವಾಕ್ಯವನ್ನು ಸಾರುವವನು ಇಡೀ ಧರ್ಮಸಭೆಯನ್ನೇ ಅಭಿವೃದ್ಧಿಗೊಳಿಸುತ್ತಾನೆ.
ನೀವೆಲ್ಲರೂ ಪರವಶಾಭಾಷೆಗಳನ್ನು ಆಡಬಹುದಾದರೂ ದೇವರ ವಾಕ್ಯವನ್ನು ಸಾರುವವರಾಗಬೇಕೆಂಬುದೇ ನನ್ನ ಅಭಿಲಾಷೆ. ಪರವಶಾಭಾಷೆಗಳನ್ನು ಆಡುವಾತನು ಧರ್ಮಸಭೆಯ ಅಭಿವೃದ್ಧಿಗಾಗಿ ತನ್ನ ಮಾತಿನ ಅರ್ಥವನ್ನು ಹೇಳಲಾರನಾದರೆ, ಅವನಿಗಿಂತಲೂ ದೇವರ ವಾಕ್ಯವನ್ನು ಸಾರುವವನೇ ಶ್ರೇಷ್ಠನು.
ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರ ಶ್ರುತಿಯನ್ನು, ನೈಜ ಜ್ಞಾನವನ್ನು, ದೇವರ ವಾಕ್ಯವನ್ನು, ದಿವ್ಯಬೋಧೆಯನ್ನು ನೀಡದೆ ಪರವಶಾಭಾಷೆಗಳಲ್ಲಿಯೇ ಮಾತನಾಡಿದರೆ ನಿಮಗೆ ಸಿಗುವ ಲಾಭವಾದರೂ ಏನು?
ಕೊಳಲು, ವೀಣೆ ಮೊದಲಾದ ನಿರ್ಜೀವವಾದ್ಯಗಳು ನಾದವನ್ನು ಹೊಮ್ಮಿಸುತ್ತವೆ; ಅವುಗಳ ಸ್ವರಗಳಲ್ಲಿ ಯಾವ ವ್ಯತ್ಯಾಸವೂ ಕಂಡುಬರದಿದ್ದರೆ, ನುಡಿಸಿದ್ದು, ಬಾಜಿಸಿದ್ದು ಇಂತಹುದೇ ರಾಗವೆಂದು ತಿಳಿಯುವುದು ಹೇಗೆ?
ರಣಕಹಳೆಯು ನಿರ್ದಿಷ್ಟವಾದ ಧ್ವನಿಯನ್ನು ಮೊಳಗಿಸದಿದ್ದರೆ ಯಾರು ತಾನೇ ಯುದ್ಧಸನ್ನದ್ಧರಾಗುತ್ತಾರೆ?
ಅಂತೆಯೇ, ನೀವು ಸಹ ಪರವಶಾಭಾಷೆಯನ್ನು ಆಡುವಾಗ, ಇತರರಿಗೆ ಅದು ಅರ್ಥವಾಗದಿದ್ದರೆ, ಅವರು ನಿಮ್ಮ ಮಾತನ್ನು ತಿಳಿದುಕೊಳ್ಳುವುದಾದರೂ ಹೇಗೆ? ನಿಮ್ಮ ಮಾತು ಗಾಳಿ ಪಾಲಾಗುತ್ತದಷ್ಟೆ.
೧೦
ಜಗತ್ತಿನಲ್ಲಿ ಎಷ್ಟೋ ಭಾಷೆಗಳಿವೆ. ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ.
೧೧
ಭಾಷೆಯ ಅರ್ಥವು ನನಗಾಗದಿದ್ದರೆ ಮಾತನಾಡುವವನಿಗೆ ನಾನು ಪರಕೀಯನಂತಾಗುತ್ತೇನೆ; ನನಗೆ ಅವನು ಪರಕೀಯನಂತಾಗುತ್ತಾನೆ.
೧೨
ಆದ್ದರಿಂದ ಪವಿತ್ರಾತ್ಮ ವರಗಳ ಮೇಲೆ ಆಸಕ್ತಿಯುಳ್ಳ ನೀವು, ಧರ್ಮಸಭೆಯನ್ನು ಅಭಿವೃದ್ಧಿಗೊಳಿಸಬಲ್ಲ ವರಗಳ ಮೇಲೆ ಆಸಕ್ತರಾಗಿರಿ.
೧೩
ಪರವಶಾಭಾಷೆಗಳಲ್ಲಿ ಮಾತನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವ ಸಾಮರ್ಥ್ಯಕ್ಕಾಗಿ ದೇವರನ್ನು ಪ್ರಾರ್ಥಿಸಲಿ.
೧೪
ಏಕೆಂದರೆ, ನಾನು ಪರವಶಾಭಾಷೆಯಲ್ಲಿ ಪ್ರಾರ್ಥಿಸಿದರೆ ನನ್ನ ಆತ್ಮವೇನೋ ಪ್ರಾರ್ಥಿಸಿದಂತೆ ಆಗುತ್ತದೆ; ಆದರೆ ಮನಸ್ಸು ಮಾತ್ರ ಅದನ್ನು ಗ್ರಹಿಸುವುದಿಲ್ಲ.
೧೫
ಹಾಗಾದರೆ ಈಗ ನಾನೇನು ಮಾಡಬೇಕು? ಆತ್ಮದಿಂದಲೂ ಪ್ರಾರ್ಥಿಸಬೇಕು, ಮನಸ್ಸಿನಿಂದಲೂ ಪ್ರಾರ್ಥಿಸಬೇಕು, ಆತ್ಮದಿಂದಲೂ
೧೬
ಸಭೆಯಲ್ಲಿ ನೀನು ಆತ್ಮದಿಂದ ಮಾತ್ರ ದೇವರ ಸ್ತುತಿಮಾಡಿದರೆ ನಿನ್ನ ಹಾಗೆ ಪರವಶನಲ್ಲದವನು ನಿನ್ನ ಕೃತಜ್ಞತಾ ಸ್ತುತಿಗೆ ‘ಆಮೆನ್’ ಎಂದು ಹೇಗೆ ತಾನೇ ಹೇಳಬಲ್ಲನು? ನೀನು ಹೇಳುವುದೇ ಅವನಿಗೆ ತಿಳಿಯುವುದಿಲ್ಲವಲ್ಲಾ!
೧೭
ನೀನು ಮಾಡುವ ಕೃತಜ್ಞತಾಸ್ತುತಿ ಎಷ್ಟು ಚೆನ್ನಾಗಿದ್ದರೂ ಅವನ ಮಟ್ಟಿಗೆ ಅದು ನಿಷ್ಪ್ರಯೋಜಕವೇ.
೧೮
ನಾನಾದರೋ ದೇವರ ದಯೆಯಿಂದ ನಿಮಗಿಂತಲೂ ಮಿಗಿಲಾಗಿ ಪರವಶಾಭಾಷೆಗಳನ್ನು ಆಡಬಲ್ಲೆ.
೧೯
ಆದರೂ ಸಭೆಯಲ್ಲಿ ಪರವಶನಾಗಿ ಹತ್ತುಸಾವಿರ ನುಡಿಗಳನ್ನಾಡುವ ಬದಲು ಮನಸ್ಸಾರೆ ಐದೇ ಮಾತುಗಳನ್ನಾಡಿ ಉಪದೇಶಿಸುವುದು ಉತ್ತಮವೆಂದು ನನಗೆ ತೋರುತ್ತದೆ.
೨೦
ಸಹೋದರರೇ, ಬುದ್ಧಿಯ ವಿಷಯದಲ್ಲಿ ಬಾಲಕರಾಗಿರಬೇಡಿ. ದುಷ್ಟ ವಿಷಯಗಳಲ್ಲಿ ಶಿಶುಗಳಂತೆ ಮುಗ್ಧರಾಗಿರಿ; ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಂತೆ ಪ್ರೌಢರಾಗಿರಿ.
೨೧
ಪವಿತ್ರಗ್ರಂಥದಲ್ಲಿ ಇಂತಿದೆ: ಅನ್ಯಭಾಷೆಯವರ ಮುಖಾಂತರ ಅನ್ಯದೇಶೀಯರ ಬಾಯ ಮುಖಾಂತರ ನಾನೆನ್ನ ಜನರೊಡನೆ ಮಾತಾಡಿದಾಗಲೂ ಎನ್ನ ಮಾತಿಗೆ ಕಿವಿಗೊಡರವರು, ಎಂದರು ಪ್ರಭು.”
೨೨
ಪರವಶಾಭಾಷೆಗಳನ್ನು ಆಡುವುದರ ಸಾಕ್ಷ್ಯ ವಿಶ್ವಾಸಿಗಳಿಗಲ್ಲ, ಅವಿಶ್ವಾಸಿಗಳಿಗೆ. ದೇವರ ವಾಕ್ಯವನ್ನು ಪ್ರಬೋಧಿಸುವುದರ ಸಾಕ್ಷ್ಯವು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ.
೨೩
ಒಂದು ಕಡೆ ಎಲ್ಲರೂ ಸಭೆ ಸೇರಿದಾಗ ಪ್ರತಿಯೊಬ್ಬನೂ ಪರವಶಾಭಾಷೆಗಳನ್ನು ಆಡಲು ಆರಂಭಿಸಿದರೆ ಅಲ್ಲಿಗೆ ಬರುವ ಅಪರಿಚಿತರು, ಅವಿಶ್ವಾಸಿಗಳು ನಿಮ್ಮನ್ನು ಹುಚ್ಚರೆಂದು ಕರೆಯಲಾರರೇ?
೨೪
ಬದಲಾಗಿ, ಬರುವ ಅಪರಿಚಿತರ ಹಾಗೂ ಅವಿಶ್ವಾಸಿಗಳ ಮುಂದೆ ಎಲ್ಲರೂ ದೇವರ ವಾಕ್ಯವನ್ನು ಪ್ರಬೋಧಿಸಿದರೆ ಅವರಲ್ಲಿ ಒಬ್ಬನಾದರೂ ತಾನು ಕೇಳಿದ ಮಾತಿನಿಂದ ತನ್ನ ಪಾಪವನ್ನು ಒಪ್ಪಿಕೊಳ್ಳುತ್ತಾನೆ; ಅವನು ಎಲ್ಲರ ಮಾತಿನಿಂದ ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುತ್ತಾನೆ.
೨೫
ಅವನ ಅಂತರಾಳದ ವಿಚಾರಗಳು ಬಯಲಾಗುತ್ತವೆ. ಅವನು ಅಡ್ಡಬಿದ್ದು ದೇವರನ್ನು ಆರಾಧಿಸುತ್ತಾನೆ. “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾರೆ,” ಎಂದು ಪ್ರಚುರಪಡಿಸುತ್ತಾನೆ.
೨೬
ಹಾಗಾದರೆ ಪ್ರಿಯ ಸಹೋದರರೇ, ನಾವು ನಡೆದುಕೊಳ್ಳಬೇಕಾದ ಬಗೆ ಹೇಗೆ? ನೀವು ಸಭೆ ಸೇರಿದಾಗ ನಿಮ್ಮಲ್ಲಿ ಒಬ್ಬನು ಹಾಡುತ್ತಾನೆ; ಇನ್ನೊಬ್ಬನು ಉಪದೇಶ ಮಾಡುತ್ತಾನೆ; ಮತ್ತೊಬ್ಬನು ದೇವರು ತನಗೆ ಶ್ರುತಪಡಿಸಿದ್ದನ್ನು ತಿಳಿಸುತ್ತಾನೆ; ಇನ್ನೂ ಒಬ್ಬನು ಪರವಶಾಭಾಷೆಯನ್ನಾಡುತ್ತಾನೆ; ಮಗದೊಬ್ಬನು ಅದಕ್ಕೆ ಅರ್ಥ ಹೇಳುತ್ತಾನೆ ಎಂದಿಟ್ಟುಕೊಳ್ಳೋಣ. ನೀವು ಏನು ಮಾಡಿದರೂ ಧರ್ಮಸಭೆಯ ಅಭಿವೃದ್ಧಿಗಾಗಿಯೇ ಮಾಡಬೇಕು.
೨೭
ಪರವಶಾಭಾಷೆಯನ್ನು ಆಡುವುದಾದರೆ ಇಬ್ಬರು, ಹೆಚ್ಚೆಂದರೆ ಮೂವರು ಮಾತನಾಡಲಿ. ಆದರೆ ಒಬ್ಬರ ನಂತರ ಇನ್ನೊಬ್ಬರು ಮಾತನಾಡಲಿ. ಬೇರೊಬ್ಬರು ವಿವರಿಸಲಿ.
೨೮
ವಿವರಿಸಬಲ್ಲವರು ಯಾರೂ ಇಲ್ಲವಾದರೆ, ಪರವಶಾಭಾಷೆಗಳನ್ನು ಆಡುವವನು ಸಭೆಯಲ್ಲಿ ಮೌನದಿಂದಿರಲಿ. ತನ್ನೊಳಗೆ ದೇವರೊಡನೆ ಮಾತನಾಡಿಕೊಳ್ಳಲಿ.
೨೯
ದೇವರ ವಾಕ್ಯವನ್ನು ಬೋಧಿಸುವವರು ಇಬ್ಬರು ಇಲ್ಲವೆ ಮೂವರು ಮಾತ್ರ ಮಾತನಾಡಲಿ. ಉಳಿದವರು ಅವರ ಮಾತನ್ನು ವಿವೇಚಿಸಲಿ.
೩೦
ಸಭೆಯಲ್ಲಿ ಕುಳಿತವರಲ್ಲಿ ಒಬ್ಬನಿಗೆ ದೇವರ ಶ್ರುತಿಲಭಿಸಿತೆಂದರೆ ಮೊದಲು ಮಾತನಾಡುತ್ತಿದ್ದವನು ಮೌನ ತಳೆಯಲಿ.
೩೧
ನೀವು, ಒಬ್ಬರಾದ ಮೇಲೆ ಒಬ್ಬರು ದೇವರ ವಾಕ್ಯವನ್ನು ಬೋಧಿಸಬಹುದು. ಆಗ ಎಲ್ಲರೂ ಕಲಿತುಕೊಂಡು ಪ್ರೋತ್ಸಾಹಪಡೆಯಲು ಸಾಧ್ಯವಾಗುತ್ತದೆ.
೩೨
ದೇವರ ವಾಕ್ಯವನ್ನು ಬೋಧಿಸುವವರು ತಮ್ಮ ವಾಕ್ಚಾತುರ್ಯವನ್ನು ಸ್ವಾಧೀನದಲ್ಲಿಟ್ಟುಕೊಳ್ಳಬೇಕು.
೩೩
ದೇವರು ಗಲಿಬಿಲಿಯನ್ನು ಬಯಸುವವರಲ್ಲ; ಅವರು ಶಾಂತಿ ಮತ್ತು ಸುವ್ಯವಸ್ಥೆಯ ದೇವರು.
೩೪
ಎಲ್ಲ ಕ್ರೈಸ್ತಸಭೆಗಳಲ್ಲಿ ರೂಢಿಯಲ್ಲಿರುವಂತೆ ಮಹಿಳೆಯರು ಮೌನವಾಗಿರಲಿ; ಮಾತನಾಡಲು ಅವರಿಗೆ ಅನುಮತಿಯಿಲ್ಲ. ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು ಅಧೀನರಾಗಿರಬೇಕು.
೩೫
ಅವರು ಏನನ್ನಾದರೂ ತಿಳಿಯಬಯಸಿದರೆ, ಮನೆಯಲ್ಲಿ ತಮ್ಮ ತಮ್ಮ ಗಂಡಂದಿರನ್ನು ಕೇಳಿ ತಿಳಿದುಕೊಳ್ಳಲಿ. ಮಹಿಳೆಯರು ಸಭಾಕೂಟದಲ್ಲಿ ಮಾತನಾಡುವುದು ಲಕ್ಷಣವಲ್ಲ.
೩೬
ದೇವರ ವಾಕ್ಯ ನಿಮ್ಮಿಂದ ಹೊರಟಿತೋ? ಅಥವಾ ನಿಮಗೆ ಮಾತ್ರ ತಲುಪಿತೋ?
೩೭
ನಿಮ್ಮಲ್ಲಿ ಯಾರಾದರೊಬ್ಬನು ತಾನು ದೇವರ ವಾಕ್ಯವನ್ನು ಬೋಧಿಸುವವನು ಅಥವಾ ಪವಿತ್ರಾತ್ಮ ಪ್ರೇರಣೆಯನ್ನು ಹೊಂದಿದವನು ಎಂದು ಭಾವಿಸುವುದಾದರೆ, ನಾನು ನಿಮಗೆ ಬರೆದಿರುವುದೆಲ್ಲ ಪ್ರಭುವಿನ ಆಜ್ಞೆಯೆಂದು ಚೆನ್ನಾಗಿ ತಿಳಿದುಕೊಳ್ಳಲಿ.
೩೮
ಯಾರಾದರು ಇದನ್ನು ಒಪ್ಪಿಕೊಳ್ಳದಿದ್ದರೆ, ನೀವು ಅವರನ್ನು ಒಪ್ಪಿಕೊಳ್ಳಬೇಕಾಗಿಲ್ಲ.
೩೯
ಸಹೋದರರೇ, ದೇವರ ವಾಕ್ಯವನ್ನು ಸಾರುವುದರಲ್ಲಿ ಆಸಕ್ತರಾಗಿರಿ. ಪರವಶಾಭಾಷೆಗಳನ್ನು ಆಡುವವರನ್ನು ತಡೆಯಬೇಡಿ.
೪೦
ಆದರೆ ಎಲ್ಲವನ್ನು ಒಪ್ಪವಾಗಿ, ಓರಣವಾಗಿ ಮಾಡಿರಿ.ಕೊರಿಂಥಿಯರಿಗೆ ೧ ೧೪:1
ಕೊರಿಂಥಿಯರಿಗೆ ೧ ೧೪:2
ಕೊರಿಂಥಿಯರಿಗೆ ೧ ೧೪:3
ಕೊರಿಂಥಿಯರಿಗೆ ೧ ೧೪:4
ಕೊರಿಂಥಿಯರಿಗೆ ೧ ೧೪:5
ಕೊರಿಂಥಿಯರಿಗೆ ೧ ೧೪:6
ಕೊರಿಂಥಿಯರಿಗೆ ೧ ೧೪:7
ಕೊರಿಂಥಿಯರಿಗೆ ೧ ೧೪:8
ಕೊರಿಂಥಿಯರಿಗೆ ೧ ೧೪:9
ಕೊರಿಂಥಿಯರಿಗೆ ೧ ೧೪:10
ಕೊರಿಂಥಿಯರಿಗೆ ೧ ೧೪:11
ಕೊರಿಂಥಿಯರಿಗೆ ೧ ೧೪:12
ಕೊರಿಂಥಿಯರಿಗೆ ೧ ೧೪:13
ಕೊರಿಂಥಿಯರಿಗೆ ೧ ೧೪:14
ಕೊರಿಂಥಿಯರಿಗೆ ೧ ೧೪:15
ಕೊರಿಂಥಿಯರಿಗೆ ೧ ೧೪:16
ಕೊರಿಂಥಿಯರಿಗೆ ೧ ೧೪:17
ಕೊರಿಂಥಿಯರಿಗೆ ೧ ೧೪:18
ಕೊರಿಂಥಿಯರಿಗೆ ೧ ೧೪:19
ಕೊರಿಂಥಿಯರಿಗೆ ೧ ೧೪:20
ಕೊರಿಂಥಿಯರಿಗೆ ೧ ೧೪:21
ಕೊರಿಂಥಿಯರಿಗೆ ೧ ೧೪:22
ಕೊರಿಂಥಿಯರಿಗೆ ೧ ೧೪:23
ಕೊರಿಂಥಿಯರಿಗೆ ೧ ೧೪:24
ಕೊರಿಂಥಿಯರಿಗೆ ೧ ೧೪:25
ಕೊರಿಂಥಿಯರಿಗೆ ೧ ೧೪:26
ಕೊರಿಂಥಿಯರಿಗೆ ೧ ೧೪:27
ಕೊರಿಂಥಿಯರಿಗೆ ೧ ೧೪:28
ಕೊರಿಂಥಿಯರಿಗೆ ೧ ೧೪:29
ಕೊರಿಂಥಿಯರಿಗೆ ೧ ೧೪:30
ಕೊರಿಂಥಿಯರಿಗೆ ೧ ೧೪:31
ಕೊರಿಂಥಿಯರಿಗೆ ೧ ೧೪:32
ಕೊರಿಂಥಿಯರಿಗೆ ೧ ೧೪:33
ಕೊರಿಂಥಿಯರಿಗೆ ೧ ೧೪:34
ಕೊರಿಂಥಿಯರಿಗೆ ೧ ೧೪:35
ಕೊರಿಂಥಿಯರಿಗೆ ೧ ೧೪:36
ಕೊರಿಂಥಿಯರಿಗೆ ೧ ೧೪:37
ಕೊರಿಂಥಿಯರಿಗೆ ೧ ೧೪:38
ಕೊರಿಂಥಿಯರಿಗೆ ೧ ೧೪:39
ಕೊರಿಂಥಿಯರಿಗೆ ೧ ೧೪:40


ಕೊರಿಂಥಿಯರಿಗೆ ೧ 1 / ಕೊ೧ 1
ಕೊರಿಂಥಿಯರಿಗೆ ೧ 2 / ಕೊ೧ 2
ಕೊರಿಂಥಿಯರಿಗೆ ೧ 3 / ಕೊ೧ 3
ಕೊರಿಂಥಿಯರಿಗೆ ೧ 4 / ಕೊ೧ 4
ಕೊರಿಂಥಿಯರಿಗೆ ೧ 5 / ಕೊ೧ 5
ಕೊರಿಂಥಿಯರಿಗೆ ೧ 6 / ಕೊ೧ 6
ಕೊರಿಂಥಿಯರಿಗೆ ೧ 7 / ಕೊ೧ 7
ಕೊರಿಂಥಿಯರಿಗೆ ೧ 8 / ಕೊ೧ 8
ಕೊರಿಂಥಿಯರಿಗೆ ೧ 9 / ಕೊ೧ 9
ಕೊರಿಂಥಿಯರಿಗೆ ೧ 10 / ಕೊ೧ 10
ಕೊರಿಂಥಿಯರಿಗೆ ೧ 11 / ಕೊ೧ 11
ಕೊರಿಂಥಿಯರಿಗೆ ೧ 12 / ಕೊ೧ 12
ಕೊರಿಂಥಿಯರಿಗೆ ೧ 13 / ಕೊ೧ 13
ಕೊರಿಂಥಿಯರಿಗೆ ೧ 14 / ಕೊ೧ 14
ಕೊರಿಂಥಿಯರಿಗೆ ೧ 15 / ಕೊ೧ 15
ಕೊರಿಂಥಿಯರಿಗೆ ೧ 16 / ಕೊ೧ 16