೧ |
ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: |
೨ |
“ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. |
೩ |
ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು. |
೪ |
ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; |
೫ |
ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.” |
೬ |
ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾದೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? |
೭ |
ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? |
೮ |
ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?’ ಎಂದರು. |
೯ |
ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: |
೧೦ |
“ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. |
೧೧ |
ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. |
೧೨ |
ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.’ |
೧೩ |
ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ. |
೧೪ |
“ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು. |
೧೫ |
ಕೆಲವರು ತಮ್ಮ ಹಸುಳೆಗಳನ್ನು ಯೇಸುಸ್ವಾಮಿ ಮುಟ್ಟಿ ಹರಸಬೇಕೆಂದು ಅಲ್ಲಿಗೆ ಕರೆತಂದರು. ಇದನ್ನು ಕಂಡ ಶಿಷ್ಯರು ಅವರನ್ನು ಗದರಿಸಿದರು. |
೧೬ |
ಆಗ ಯೇಸು ಆ ಹಸುಳೆಗಳನ್ನು ತಮ್ಮ ಬಳಿಗೆ ಕರೆತರಿಸಿ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ! |
೧೭ |
ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ,” ಎಂದರು. |
೧೮ |
ಅಧಿಕಾರಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, “ಒಳ್ಳೆಯ ಗುರುವೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು. |
೧೯ |
“ನೀನು ನನ್ನನ್ನು ಒಳ್ಳೆಯವನೆಂದು ಕರೆದುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ; |
೨೦ |
ದೈವಾಜ್ಞೆಗಳು ನಿನಗೆ ತಿಳಿದೇ ಇವೆ; ‘ವ್ಯಭಿಚಾರ ಮಾಡಬೇಡ, ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು’,” ಎಂದು ಯೇಸು ಅವನಿಗೆ ಉತ್ತರವಿತ್ತರು. |
೨೧ |
ಅದಕ್ಕೆ ಅವನು, “ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದನು. |
೨೨ |
ಇದನ್ನು ಕೇಳಿದ ಯೇಸು, “ನೀನು ಮಾಡಬೇಕಾದ ಕಾರ್ಯ ಇನ್ನೂ ಒಂದು ಉಳಿದಿದೆ; ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. |
೨೩ |
ಈ ಮಾತುಗಳನ್ನು ಕೇಳಿದ್ದೇ ಅವನಿಗೆ ತುಂಬ ವ್ಯಥೆಯಾಯಿತು. ಏಕೆಂದರೆ, ಅವನು ಬಹಳ ಸಿರಿವಂತನಾಗಿದ್ದನು. |
೨೪ |
ಅವನು ವ್ಯಥೆಗೀಡಾದುದನ್ನು ಕಂಡ ಯೇಸು, “ಸಿರಿವಂತರಿಗೆ ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟೊಂದು ಕಷ್ಟ! |
೨೫ |
ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆ ಸೂಜಿಗಣ್ಣಿನಲ್ಲಿ ನುಸುಳುವುದು ಸುಲಭ!” ಎಂದರು. |
೨೬ |
ಇದನ್ನು ಕೇಳಿದವರು, “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎನ್ನಲು |
೨೭ |
ಯೇಸು, “ಮಾನವರಿಗೆ ಅಸಾಧ್ಯವಾದುದು ದೇವರಿಗೆ ಸಾಧ್ಯ,” ಎಂದು ಹೇಳಿದರು. |
೨೮ |
ಆಗ ಪೇತ್ರನು, “ನೋಡಿ, ನಾವು ನಮ್ಮ ಮನೆಮಾರುಗಳನ್ನು ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲಾ,” ಎಂದನು. |
೨೯ |
ಅದಕ್ಕೆ ಯೇಸು, “ನಿಮಗೆ ಖಂಡಿತವಾಗಿ ಹೇಳುತ್ತೇನೆ: ಯಾವನು ದೇವರ ಸಾಮ್ರಾಜ್ಯದ ನಿಮಿತ್ತ ಮನೆಯನ್ನಾಗಲಿ, ಮಡದಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳು ಮರಿಯನ್ನಾಗಲಿ ತ್ಯಜಿಸುತ್ತಾನೋ |
೩೦ |
ಅವನು ಈ ಕಾಲದಲ್ಲಿ ಅದಕ್ಕಿಂತಲೂ ಮಿಗಿಲಾದುದನ್ನೂ ಮುಂದಿನ ಲೋಕದಲ್ಲಿ ಅಮರಜೀವವನ್ನೂ ಪಡೆಯುವನು,” ಎಂದರು. |
೩೧ |
ಯೇಸುಸ್ವಾಮಿ ಹನ್ನೆರಡುಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ನರಪುತ್ರನ ವಿಷಯವಾಗಿ ಪ್ರವಾದಿಗಳು ಬರೆದಿರುವುದೆಲ್ಲವೂ ನೆರವೇರುವುದು. |
೩೨ |
ಆತನನ್ನು ಪರಕೀಯರ ಕೈಗೊಪ್ಪಿಸಲಾಗುವುದು; ಅವರು, ಅವನನ್ನು ಪರಿಹಾಸ್ಯ ಮಾಡುವರು, ಅಪಮಾನಪಡಿಸುವರು, ಉಗಿಯುವರು. |
೩೩ |
ಕೊರಡೆಗಳಿಂದ ಹೊಡೆಯುವರು ಮತ್ತು ಕೊಂದುಹಾಕುವರು. ಆತನಾದರೋ ಮೂರನೆಯ ದಿನ ಪುನರುತ್ಥಾನ ಹೊಂದುವನು,” ಎಂದರು. |
೩೪ |
ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಿಕೊಳ್ಳಲಿಲ್ಲ. ಈ ಹೇಳಿಕೆ ಅವರಿಗೆ ಒಗಟಾಗಿತ್ತು. ಎಂದೇ ಯೇಸುವಿನ ಮಾತುಗಳು ಅವರಿಗೆ ಅರ್ಥವಾಗಲಿಲ್ಲ. |
೩೫ |
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. |
೩೬ |
ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. |
೩೭ |
“ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು. |
೩೮ |
ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. |
೩೯ |
ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. |
೪೦ |
ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. |
೪೧ |
ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾಮೀ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. |
೪೨ |
ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. |
೪೩ |
ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.
|
Kannada Bible (KNCL) 2016 |
No Data |
|
|
|
|
|
|
|
|
|
|
ಲೂಕನು ೧೮:1 |
ಲೂಕನು ೧೮:2 |
ಲೂಕನು ೧೮:3 |
ಲೂಕನು ೧೮:4 |
ಲೂಕನು ೧೮:5 |
ಲೂಕನು ೧೮:6 |
ಲೂಕನು ೧೮:7 |
ಲೂಕನು ೧೮:8 |
ಲೂಕನು ೧೮:9 |
ಲೂಕನು ೧೮:10 |
ಲೂಕನು ೧೮:11 |
ಲೂಕನು ೧೮:12 |
ಲೂಕನು ೧೮:13 |
ಲೂಕನು ೧೮:14 |
ಲೂಕನು ೧೮:15 |
ಲೂಕನು ೧೮:16 |
ಲೂಕನು ೧೮:17 |
ಲೂಕನು ೧೮:18 |
ಲೂಕನು ೧೮:19 |
ಲೂಕನು ೧೮:20 |
ಲೂಕನು ೧೮:21 |
ಲೂಕನು ೧೮:22 |
ಲೂಕನು ೧೮:23 |
ಲೂಕನು ೧೮:24 |
ಲೂಕನು ೧೮:25 |
ಲೂಕನು ೧೮:26 |
ಲೂಕನು ೧೮:27 |
ಲೂಕನು ೧೮:28 |
ಲೂಕನು ೧೮:29 |
ಲೂಕನು ೧೮:30 |
ಲೂಕನು ೧೮:31 |
ಲೂಕನು ೧೮:32 |
ಲೂಕನು ೧೮:33 |
ಲೂಕನು ೧೮:34 |
ಲೂಕನು ೧೮:35 |
ಲೂಕನು ೧೮:36 |
ಲೂಕನು ೧೮:37 |
ಲೂಕನು ೧೮:38 |
ಲೂಕನು ೧೮:39 |
ಲೂಕನು ೧೮:40 |
ಲೂಕನು ೧೮:41 |
ಲೂಕನು ೧೮:42 |
ಲೂಕನು ೧೮:43 |
|
|
|
|
|
|
ಲೂಕನು 1 / ಲೂಕ 1 |
ಲೂಕನು 2 / ಲೂಕ 2 |
ಲೂಕನು 3 / ಲೂಕ 3 |
ಲೂಕನು 4 / ಲೂಕ 4 |
ಲೂಕನು 5 / ಲೂಕ 5 |
ಲೂಕನು 6 / ಲೂಕ 6 |
ಲೂಕನು 7 / ಲೂಕ 7 |
ಲೂಕನು 8 / ಲೂಕ 8 |
ಲೂಕನು 9 / ಲೂಕ 9 |
ಲೂಕನು 10 / ಲೂಕ 10 |
ಲೂಕನು 11 / ಲೂಕ 11 |
ಲೂಕನು 12 / ಲೂಕ 12 |
ಲೂಕನು 13 / ಲೂಕ 13 |
ಲೂಕನು 14 / ಲೂಕ 14 |
ಲೂಕನು 15 / ಲೂಕ 15 |
ಲೂಕನು 16 / ಲೂಕ 16 |
ಲೂಕನು 17 / ಲೂಕ 17 |
ಲೂಕನು 18 / ಲೂಕ 18 |
ಲೂಕನು 19 / ಲೂಕ 19 |
ಲೂಕನು 20 / ಲೂಕ 20 |
ಲೂಕನು 21 / ಲೂಕ 21 |
ಲೂಕನು 22 / ಲೂಕ 22 |
ಲೂಕನು 23 / ಲೂಕ 23 |
ಲೂಕನು 24 / ಲೂಕ 24 |