೧ |
ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ; |
೨ |
ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. |
೩ |
ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. |
೪ |
ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ. |
೫ |
ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ. |
೬ |
ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು. |
೭ |
ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. |
೮ |
ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. |
೯ |
ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ. |
೧೦ |
ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. |
೧೧ |
“ಆಮೇಲೆ ರಾಜನು ಅತಿಥಿಗಳನ್ನು ನೋಡಲುಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. |
೧೨ |
‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. |
೧೩ |
ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ. |
೧೪ |
“ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ. |
೧೫ |
ಅನಂತರ ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಕ್ಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು. |
೧೬ |
ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ. |
೧೭ |
ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು. |
೧೮ |
ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ? |
೧೯ |
ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು. |
೨೦ |
ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು. |
೨೧ |
ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು. |
೨೨ |
ಈ ಮಾತುಗಳನ್ನು ಕೇಳಿ ಅವರೆಲ್ಲರು ಬೆರಗಾದರು; ಯೇಸುವನ್ನು ಬಿಟ್ಟು ಅಲ್ಲಿಂದ ಹೊರಟೇಹೋದರು. |
೨೩ |
ಅದೇ ದಿನ ‘ಸದ್ದುಕಾಯರು’ ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲ ಎಂಬುದು ಅವರ ಅಭಿಮತ. |
೨೪ |
ಅವರು ಸ್ವಾಮಿಯನ್ನು ಹೀಗೆಂದು ಪ್ರಶ್ನಿಸಿದರು: “ಬೋಧಕರೇ, ಮಕ್ಕಳಿಲ್ಲದೆ ಒಬ್ಬನು ಸತ್ತುಹೋದರೆ ಅವನ ಹೆಂಡತಿಯನ್ನು ತಮ್ಮನು ಮದುವೆಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,” ಎಂದು ಮೋಶೆ ಹೇಳಿದ್ದಾನಷ್ಟೆ. |
೨೫ |
ಒಮ್ಮೆ ನಮ್ಮಲ್ಲಿ ಏಳುಮಂದಿ ಅಣ್ಣತಮ್ಮಂದಿರು ಇದ್ದರು. ಅವರಲ್ಲಿ ಮೊದಲನೆಯವನು ಮದುವೆಯಾದ, ಸಂತಾನವಿಲ್ಲದೆ ಸತ್ತುಹೋದ. ಈ ಕಾರಣ ತನ್ನ ಹೆಂಡತಿಯನ್ನು ತಮ್ಮನಿಗೆ ಬಿಟ್ಟುಹೋದ. |
೨೬ |
ಅದರಂತೆಯೇ ಎರಡನೆಯವ, ಮೂರನೆಯವ, ಹೀಗೆ ಏಳನೆಯವನವರೆಗೂ ಸಂಭವಿಸಿತು. |
೨೭ |
ಅವರೆಲ್ಲರೂ ತೀರಿಹೋದ ಮೇಲೆ ಆ ಹೆಂಗಸೂ ಸತ್ತುಹೋದಳು. |
೨೮ |
ಹೀಗಿರುವಲ್ಲಿ, ಪುನರುತ್ಥಾನದ ದಿನ ಆಕೆ ಆ ಏಳುಮಂದಿ ಅಣ್ಣತಮ್ಮಂದಿರಲ್ಲಿ ಯಾರಿಗೆ ಮಡದಿಯಾಗುವಳು? ಅವರೆಲ್ಲರೂ ಆಕೆಯನ್ನು ಮದುವೆಯಾಗಿದ್ದರಲ್ಲವೇ?” ಎಂದರು. |
೨೯ |
ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಅಭಿಪ್ರಾಯ ತಪ್ಪು. ಪವಿತ್ರಗ್ರಂಥವನ್ನಾಗಲಿ, ದೇವರ ಶಕ್ತಿಯನ್ನಾಗಲಿ ನೀವು ಅರ್ಥಮಾಡಿಕೊಂಡಿಲ್ಲ. |
೩೦ |
ಪುನರುತ್ಥಾನ ಹೊಂದಿದ ಮೇಲೆ ಜನರು ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಸ್ವರ್ಗದ ದೇವದೂತರಂತೆ ಅವರು ಇರುತ್ತಾರೆ. |
೩೧ |
ಇದಲ್ಲದೆ, ಸತ್ತವರು ಪುನರುತ್ಥಾನ ಹೊಂದುವ ವಿಷಯದಲ್ಲಿ ಹೇಳುವುದಾದರೆ, |
೩೨ |
‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು ಆಗಿದ್ದೇನೆ,’ ಎಂದು ದೇವರೇ ನಿಮಗೆ ಹೇಳಿರುವುದನ್ನು ನೀವು ಓದಿಲ್ಲವೆ? ಹೀಗಿರುವಾಗ ಅವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ,” ಎಂದರು. |
೩೩ |
ಇದನ್ನು ಕೇಳಿದ ಜನರ ಗುಂಪು ಯೇಸುವಿನ ಬೋಧನೆಯನ್ನು ಕುರಿತು ಅತ್ಯಾಶ್ಚರ್ಯಪಟ್ಟಿತು. |
೩೪ |
ಯೇಸುಸ್ವಾಮಿ ‘ಸದ್ದುಕಾಯ’ರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು. |
೩೫ |
ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು: |
೩೬ |
“ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?” |
೩೭ |
ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’ |
೩೮ |
ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ. |
೩೯ |
ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.’ |
೪೦ |
ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು. |
೪೧ |
ಕೂಡಿಬಂದಿದ್ದ ಫರಿಸಾಯರಿಗೆ ಯೇಸು ಈ ಪ್ರಶ್ನೆ ಹಾಕಿದರು: |
೪೨ |
“ಅಭಿಷಿಕ್ತನಾದ ಲೋಕೋದ್ಧಾರಕನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಆತ ಯಾರ ಮಗ?” ಅದಕ್ಕವರು, “ದಾವೀದನ ಪುತ್ರ” ಎಂದು ಉತ್ತರಿಸಿದರು. |
೪೩ |
ಆಗ ಯೇಸು, “ಹಾಗಾದರೆ, ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಆತನನ್ನು ‘ಪ್ರಭು’ ಎಂದು ಕರೆದಿದ್ದಾನಲ್ಲಾ. ಅದು ಹೇಗೆ? |
೪೪ |
‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆ ಆಸೀನನಾಗಿರು ಎಂದು ನನ್ನ ‘ಪ್ರಭು’ವಿಗೆ ಸರ್ವೇಶ್ವರ ಹೇಳಿರುವರು.’ ಎಂದಿದ್ದಾನಲ್ಲವೆ? |
೪೫ |
“ಇಲ್ಲಿ ದಾವೀದನೇ ಆತನನ್ನು ‘ನನ್ನ ಪ್ರಭು’ ಎಂದು ಕರೆದಿರುವಾಗ ಆತ ದಾವೀದನಿಗೆ ಪುತ್ರನಾಗಿರುವುದು ಹೇಗೆ?” ಎಂದು ಕೇಳಿದರು. |
೪೬ |
ಇದಕ್ಕೆ ಉತ್ತರವಾಗಿ ಒಂದು ಮಾತು ಹೇಳಲೂ ಫರಿಸಾಯರಿಂದ ಆಗಲಿಲ್ಲ. ಅದು ಮಾತ್ರವಲ್ಲ, ಅಂದಿನಿಂದ ಯೇಸುವನ್ನು ಪ್ರಶ್ನಿಸಲು ಯಾರೂ ಧೈರ್ಯಗೊಳ್ಳಲಿಲ್ಲ.
|
Kannada Bible (KNCL) 2016 |
No Data |
|
|
|
|
|
|
|
|
|
|
ಮತ್ತಾಯನು ೨೨:1 |
ಮತ್ತಾಯನು ೨೨:2 |
ಮತ್ತಾಯನು ೨೨:3 |
ಮತ್ತಾಯನು ೨೨:4 |
ಮತ್ತಾಯನು ೨೨:5 |
ಮತ್ತಾಯನು ೨೨:6 |
ಮತ್ತಾಯನು ೨೨:7 |
ಮತ್ತಾಯನು ೨೨:8 |
ಮತ್ತಾಯನು ೨೨:9 |
ಮತ್ತಾಯನು ೨೨:10 |
ಮತ್ತಾಯನು ೨೨:11 |
ಮತ್ತಾಯನು ೨೨:12 |
ಮತ್ತಾಯನು ೨೨:13 |
ಮತ್ತಾಯನು ೨೨:14 |
ಮತ್ತಾಯನು ೨೨:15 |
ಮತ್ತಾಯನು ೨೨:16 |
ಮತ್ತಾಯನು ೨೨:17 |
ಮತ್ತಾಯನು ೨೨:18 |
ಮತ್ತಾಯನು ೨೨:19 |
ಮತ್ತಾಯನು ೨೨:20 |
ಮತ್ತಾಯನು ೨೨:21 |
ಮತ್ತಾಯನು ೨೨:22 |
ಮತ್ತಾಯನು ೨೨:23 |
ಮತ್ತಾಯನು ೨೨:24 |
ಮತ್ತಾಯನು ೨೨:25 |
ಮತ್ತಾಯನು ೨೨:26 |
ಮತ್ತಾಯನು ೨೨:27 |
ಮತ್ತಾಯನು ೨೨:28 |
ಮತ್ತಾಯನು ೨೨:29 |
ಮತ್ತಾಯನು ೨೨:30 |
ಮತ್ತಾಯನು ೨೨:31 |
ಮತ್ತಾಯನು ೨೨:32 |
ಮತ್ತಾಯನು ೨೨:33 |
ಮತ್ತಾಯನು ೨೨:34 |
ಮತ್ತಾಯನು ೨೨:35 |
ಮತ್ತಾಯನು ೨೨:36 |
ಮತ್ತಾಯನು ೨೨:37 |
ಮತ್ತಾಯನು ೨೨:38 |
ಮತ್ತಾಯನು ೨೨:39 |
ಮತ್ತಾಯನು ೨೨:40 |
ಮತ್ತಾಯನು ೨೨:41 |
ಮತ್ತಾಯನು ೨೨:42 |
ಮತ್ತಾಯನು ೨೨:43 |
ಮತ್ತಾಯನು ೨೨:44 |
ಮತ್ತಾಯನು ೨೨:45 |
ಮತ್ತಾಯನು ೨೨:46 |
|
|
|
|
|
|
ಮತ್ತಾಯನು 1 / ಮತ್ತ 1 |
ಮತ್ತಾಯನು 2 / ಮತ್ತ 2 |
ಮತ್ತಾಯನು 3 / ಮತ್ತ 3 |
ಮತ್ತಾಯನು 4 / ಮತ್ತ 4 |
ಮತ್ತಾಯನು 5 / ಮತ್ತ 5 |
ಮತ್ತಾಯನು 6 / ಮತ್ತ 6 |
ಮತ್ತಾಯನು 7 / ಮತ್ತ 7 |
ಮತ್ತಾಯನು 8 / ಮತ್ತ 8 |
ಮತ್ತಾಯನು 9 / ಮತ್ತ 9 |
ಮತ್ತಾಯನು 10 / ಮತ್ತ 10 |
ಮತ್ತಾಯನು 11 / ಮತ್ತ 11 |
ಮತ್ತಾಯನು 12 / ಮತ್ತ 12 |
ಮತ್ತಾಯನು 13 / ಮತ್ತ 13 |
ಮತ್ತಾಯನು 14 / ಮತ್ತ 14 |
ಮತ್ತಾಯನು 15 / ಮತ್ತ 15 |
ಮತ್ತಾಯನು 16 / ಮತ್ತ 16 |
ಮತ್ತಾಯನು 17 / ಮತ್ತ 17 |
ಮತ್ತಾಯನು 18 / ಮತ್ತ 18 |
ಮತ್ತಾಯನು 19 / ಮತ್ತ 19 |
ಮತ್ತಾಯನು 20 / ಮತ್ತ 20 |
ಮತ್ತಾಯನು 21 / ಮತ್ತ 21 |
ಮತ್ತಾಯನು 22 / ಮತ್ತ 22 |
ಮತ್ತಾಯನು 23 / ಮತ್ತ 23 |
ಮತ್ತಾಯನು 24 / ಮತ್ತ 24 |
ಮತ್ತಾಯನು 25 / ಮತ್ತ 25 |
ಮತ್ತಾಯನು 26 / ಮತ್ತ 26 |
ಮತ್ತಾಯನು 27 / ಮತ್ತ 27 |
ಮತ್ತಾಯನು 28 / ಮತ್ತ 28 |