A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಮತ್ತಾಯನು ೧೨ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
ಇದನ್ನು ಕಂಡ ಫರಿಸಾಯರು, “ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ,” ಎಂದರು.
ಅದಕ್ಕೆ ಯೇಸು, “ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ?
ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ?
ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ?
ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ.
‘ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ.
ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ,” ಎಂದರು.
ಯೇಸುಸ್ವಾಮಿ ಅಲ್ಲಿಂದ ಹೊರಟು ಪ್ರಾರ್ಥನಾಮಂದಿರಕ್ಕೆ ಬಂದರು.
೧೦
ಬತ್ತಿದ ಕೈಯುಳ್ಳ ಒಬ್ಬ ವ್ಯಕ್ತಿ ಅಲ್ಲಿದ್ದನು. ಯೇಸುವಿನ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ಕೆಲವರು, “ಸಬ್ಬತ್ ದಿನ ಸ್ವಸ್ಥಗೊಳಿಸುವುದು ಶಾಸ್ತ್ರಬದ್ಧವೇ?\ ಎಂದು ಯೇಸುವನ್ನು ಕೇಳಿದರು.
೧೧
ಅದಕ್ಕೆ ಯೇಸು, “ನಿಮ್ಮಲ್ಲಿ ಒಬ್ಬನಿಗೆ ಒಂದೇ ಒಂದು ಕುರಿಯಿದೆ ಎನ್ನೋಣ. ಸಬ್ಬತ್ ದಿನ ಅದು ಗುಣಿಯಲ್ಲಿ ಬಿದ್ದುಹೋಯಿತು ಎನ್ನೋಣ; ಆ ದಿನ ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
೧೨
ಕುರಿಗಿಂತ ನರಮಾನವ ಎಷ್ಟೋ ಮೌಲ್ಯವುಳ್ಳವನಲ್ಲವೇ? ಆದುದರಿಂದ ಸಬ್ಬತ್ ದಿನ ಸತ್ಕಾರ್ಯಮಾಡುವುದು ಶಾಸ್ತ್ರಬದ್ಧವಾದುದು,” ಎಂದರು.
೧೩
ಅನಂತರ ಬತ್ತಿದ ಕೈಯುಳ್ಳವನನ್ನು ನೋಡಿ, “ಕೈಚಾಚು” ಎಂದರು. ಅವನು ಚಾಚಿದನು. ಅದು ಪುನಶ್ಚೇತನಗೊಂಡು ಇನ್ನೊಂದು ಕೈಯ ಹಾಗೆ ಸಂಪೂರ್ಣ ಸ್ವಸ್ಥವಾಯಿತು.
೧೪
ಫರಿಸಾಯರಾದರೋ ಅಲ್ಲಿಂದ ಹೊರಗೆ ಹೋಗಿ ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.
೧೫
ತಮಗೆ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟುಹೋದರು.
೧೬
ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು ಮತ್ತು ತಮ್ಮ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆಮಾಡಿದರು.
೧೭
ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು:
೧೮
“ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು.
೧೯
ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ.
೨೦
ಮುರಿದ ಜೊಂಡಿನಂತಹ ದುರ್ಬಲರಿಗೀತ ದೀನಬಂಧು ನಂದಿಹೋಗುತಿಹ ದೀನದಲಿತರಿಗೆ ಕೃಪಾಸಿಂಧು ನ್ಯಾಯನೀತಿಗೆ ಜಯ ದೊರಕಿಸದೆ ಬಿಡನಿವನು.
೨೧
ನೆಮ್ಮುವರು ಅನ್ಯಜನರೆಲ್ಲರು ಇವನ ನಾಮವನು.”
೨೨
ಬಳಿಕ, ದೆವ್ವಹಿಡಿದು ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಅವನನ್ನು ಗುಣಪಡಿಸಿದರು. ಅವನಿಗೆ ದೃಷ್ಟಿ ಹಾಗೂ ಮಾತು ಎರಡೂ ಬಂದಿತು. ಅಲ್ಲಿದ್ದ ಜನರೆಲ್ಲರೂ ಬೆರಗಾದರು.
೨೩
“ಇವರು ದಾವೀದನ ಕುಲಪುತ್ರರಾಗಿರಬಹುದೇ!’ ಎಂದುಕೊಂಡರು.
೨೪
ಆದರೆ ಫರಿಸಾಯರು ಇದನ್ನು ಕೇಳಿದಾಗ, “ಇವನು ದೆವ್ವಗಳನ್ನು ಬಿಡಿಸುತ್ತಿರುವುದು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದಲೇ,” ಎಂದರು.
೨೫
ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು ಇಂತೆಂದರು: “ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವೂ ನಾಶವಾಗುವುದು; ಅದರಂತೆಯೇ ತಮ್ಮತಮ್ಮೊಳಗೆ ಕಾದಾಡುವ ಊರುಗಳೂ ಕುಟುಂಬಗಳೂ ಹಾಳಾಗುವುವು.
೨೬
ಸೈತಾನನು ಸೈತಾನನನ್ನು ಹೊಡೆದೋಡಿಸುವುದಾದರೆ, ಸೈತಾನನ ಪಕ್ಷದವರೇ ಪರಸ್ಪರ ವಿರೋಧಿಗಳಾಗುತ್ತಾರೆ.
೨೭
ಆಗ ಅವನ ರಾಜ್ಯ ಹೇಗೆ ತಾನೇ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
೨೮
ನಾನು ದೇವರ ಆತ್ಮದಿಂದ ದೆವ್ವಗಳನ್ನು ಬಿಡಿಸುವುದಾದರೆ, ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ.
೨೯
“ಒಬ್ಬ ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾದೀತೇ? ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡೆಯಬೇಕು.
೩೦
ನನ್ನ ಪರವಾಗಿ ಇಲ್ಲದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
೩೧
“ಮಾನವರು ಮಾಡುವ ಪ್ರತಿಯೊಂದು ಪಾಪಕ್ಕೂ ಆಡುವ ದೇವದೂಷಣೆಗೂ ಕ್ಷಮೆ ಉಂಟು. ಆದರೆ ಪವಿತ್ರಾತ್ಮನ ವಿರುದ್ಧ ಆಡುವ ದೂಷಣೆಗೆ ಕ್ಷಮೆಯೇ ಇಲ್ಲ.
೩೨
ಯಾರಾದರೂ ನರಪುತ್ರನ ವಿರುದ್ಧ ಮಾತಾಡಿದರೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮನನ್ನು ದೂಷಿಸುವವನಿಗೆ ಇಹದಲ್ಲೇ ಆಗಲಿ, ಪರದಲ್ಲೇ ಆಗಲಿ ಕ್ಷಮೆ ದೊರಕದು.
೩೩
“ಒಳ್ಳೆಯ ಹಣ್ಣು ಬೇಕಾದರೆ ಮರ ಒಳ್ಳೆಯದಿರಬೇಕು. ಹುಳುಕು ಮರವಾದರೆ ಸಿಗುವುದು ಹುಳುಕು ಹಣ್ಣೇ. ಹಣ್ಣಿನ ರುಚಿಯಿಂದ ಮರವನ್ನು ಗುರುತಿಸಬಹುದು.
೩೪
ಎಲೈ ವಿಷಸರ್ಪಗಳ ಪೀಳಿಗೆಯೇ, ಕೆಟ್ಟವರಾಗಿರುವ ನಿಮ್ಮ ಬಾಯಿಂದ ಒಳ್ಳೆಯ ಮಾತು ಬರಲು ಸಾಧ್ಯವೇ? ಹೃದಯದಲ್ಲಿ ತುಂಬಿತುಳುಕುವುದನ್ನೇ ನಾಲಿಗೆ ನುಡಿಯುತ್ತದೆ.
೩೫
ಒಳ್ಳೆಯವನು ತನ್ನ ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ತನ್ನ ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
೩೬
ಜನರು ತಾವಾಡುವ ಪ್ರತಿಯೊಂದು ಜೊಳ್ಳುಮಾತಿಗೂ ತೀರ್ಪಿನ ದಿನ ಲೆಕ್ಕಕೊಡಬೇಕಾಗುವುದು ಎಂಬುದು ನಿಮಗೆ ತಿಳಿದಿರಲಿ.
೩೭
ನಿನ್ನ ಮಾತುಗಳಿಂದಲೇ ನೀನು ನಿರಪರಾಧಿಯೆಂದು ನಿರ್ಧರಿಸಲಾಗುವುದು; ಅಥವಾ ಅಪರಾಧಿಯೆಂದು ಆಪಾದಿಸಲಾಗುವುದು,” ಎಂದರು.
೩೮
ಬಳಿಕ ಕೆಲವುಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, “ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ,” ಎಂದರು.
೩೯
ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: “ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.
೪೦
ಯೋನನು ಮೂರುದಿನ ಹಗಲು ರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲು ರಾತ್ರಿ ಭೂಗರ್ಭದಲ್ಲಿರುವನು.
೪೧
ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
೪೨
ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
೪೩
“ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದಾಗ, ಅದು, ‘ನಾನು ಬಿಟ್ಟುಬಂದ ಮನೆಗೆ ಹಿಂದಿರುಗುತ್ತೇನೆ’ ಎಂದು ಹೇಳಿಕೊಳ್ಳುತ್ತದೆ.
೪೪
ಅದು ಮರಳಿ ಬಂದಾಗ, ಮನೆ ಬರಿದಾಗಿರುವುದನ್ನೂ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟ ಆಗಿರುವುದನ್ನೂ ಕಾಣುತ್ತದೆ.
೪೫
ಪುನಃ ಹೊರಟುಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಡನೆ ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳಹೊಕ್ಕು ನೆಲಸುತ್ತವೆ. ಆಗ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗಿಳಿಯುತ್ತದೆ. ಈ ದುಷ್ಟ ಪೀಳಿಗೆಗೆ ಸಂಭವಿಸುವ ಗತಿಯೂ ಅದೇ,” ಎಂದರು.
೪೬
ಯೇಸುಸ್ವಾಮಿ ತಮ್ಮನ್ನು ಸುತ್ತುವರಿದಿದ್ದ ಜನರಿಗೆ ಇನ್ನೂ ಬೋಧನೆ ಮಾಡುತ್ತಿದ್ದರು. ಆಗ ಅವರ ತಾಯಿ ಮತ್ತು ಸಹೋದರರು ಬಂದು ಅವರೊಡನೆ ಮಾತನಾಡಬಯಸಿ ಹೊರಗೆ ನಿಂತಿದ್ದರು.
೪೭
“ನಿಮ್ಮ ತಾಯಿ ಮತ್ತು ಸಹೋದರರು ಹೊರಗೆ ನಿಂತಿದ್ದಾರೆ; ನಿಮ್ಮೊಡನೆ ಮಾತನಾಡಬೇಕೆಂದಿದ್ದಾರೆ,” ಎಂದು ಒಬ್ಬನು ತಿಳಿಸಿದನು.
೪೮
ಅದಕ್ಕೆ ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎನ್ನುತ್ತಾ, ತಮ್ಮ ಶಿಷ್ಯರ ಕಡೆಗೆ ಕೈತೋರಿಸಿ,
೪೯
ಇಗೋ ನೋಡು, ನನ್ನ ತಾಯಿ; ನನ್ನ ಸಹೋದರರು;
50
ಸ್ವರ್ಗದಲ್ಲಿರುವ ನನ್ನ ತಂದೆಯ‍ ಚಿತ್ತವನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ ಮತ್ತು ತಾಯಿ,” ಎಂದರು.ಮತ್ತಾಯನು ೧೨:1
ಮತ್ತಾಯನು ೧೨:2
ಮತ್ತಾಯನು ೧೨:3
ಮತ್ತಾಯನು ೧೨:4
ಮತ್ತಾಯನು ೧೨:5
ಮತ್ತಾಯನು ೧೨:6
ಮತ್ತಾಯನು ೧೨:7
ಮತ್ತಾಯನು ೧೨:8
ಮತ್ತಾಯನು ೧೨:9
ಮತ್ತಾಯನು ೧೨:10
ಮತ್ತಾಯನು ೧೨:11
ಮತ್ತಾಯನು ೧೨:12
ಮತ್ತಾಯನು ೧೨:13
ಮತ್ತಾಯನು ೧೨:14
ಮತ್ತಾಯನು ೧೨:15
ಮತ್ತಾಯನು ೧೨:16
ಮತ್ತಾಯನು ೧೨:17
ಮತ್ತಾಯನು ೧೨:18
ಮತ್ತಾಯನು ೧೨:19
ಮತ್ತಾಯನು ೧೨:20
ಮತ್ತಾಯನು ೧೨:21
ಮತ್ತಾಯನು ೧೨:22
ಮತ್ತಾಯನು ೧೨:23
ಮತ್ತಾಯನು ೧೨:24
ಮತ್ತಾಯನು ೧೨:25
ಮತ್ತಾಯನು ೧೨:26
ಮತ್ತಾಯನು ೧೨:27
ಮತ್ತಾಯನು ೧೨:28
ಮತ್ತಾಯನು ೧೨:29
ಮತ್ತಾಯನು ೧೨:30
ಮತ್ತಾಯನು ೧೨:31
ಮತ್ತಾಯನು ೧೨:32
ಮತ್ತಾಯನು ೧೨:33
ಮತ್ತಾಯನು ೧೨:34
ಮತ್ತಾಯನು ೧೨:35
ಮತ್ತಾಯನು ೧೨:36
ಮತ್ತಾಯನು ೧೨:37
ಮತ್ತಾಯನು ೧೨:38
ಮತ್ತಾಯನು ೧೨:39
ಮತ್ತಾಯನು ೧೨:40
ಮತ್ತಾಯನು ೧೨:41
ಮತ್ತಾಯನು ೧೨:42
ಮತ್ತಾಯನು ೧೨:43
ಮತ್ತಾಯನು ೧೨:44
ಮತ್ತಾಯನು ೧೨:45
ಮತ್ತಾಯನು ೧೨:46
ಮತ್ತಾಯನು ೧೨:47
ಮತ್ತಾಯನು ೧೨:48
ಮತ್ತಾಯನು ೧೨:49
ಮತ್ತಾಯನು ೧೨:50


ಮತ್ತಾಯನು 1 / Matt 1
ಮತ್ತಾಯನು 2 / Matt 2
ಮತ್ತಾಯನು 3 / Matt 3
ಮತ್ತಾಯನು 4 / Matt 4
ಮತ್ತಾಯನು 5 / Matt 5
ಮತ್ತಾಯನು 6 / Matt 6
ಮತ್ತಾಯನು 7 / Matt 7
ಮತ್ತಾಯನು 8 / Matt 8
ಮತ್ತಾಯನು 9 / Matt 9
ಮತ್ತಾಯನು 10 / Matt 10
ಮತ್ತಾಯನು 11 / Matt 11
ಮತ್ತಾಯನು 12 / Matt 12
ಮತ್ತಾಯನು 13 / Matt 13
ಮತ್ತಾಯನು 14 / Matt 14
ಮತ್ತಾಯನು 15 / Matt 15
ಮತ್ತಾಯನು 16 / Matt 16
ಮತ್ತಾಯನು 17 / Matt 17
ಮತ್ತಾಯನು 18 / Matt 18
ಮತ್ತಾಯನು 19 / Matt 19
ಮತ್ತಾಯನು 20 / Matt 20
ಮತ್ತಾಯನು 21 / Matt 21
ಮತ್ತಾಯನು 22 / Matt 22
ಮತ್ತಾಯನು 23 / Matt 23
ಮತ್ತಾಯನು 24 / Matt 24
ಮತ್ತಾಯನು 25 / Matt 25
ಮತ್ತಾಯನು 26 / Matt 26
ಮತ್ತಾಯನು 27 / Matt 27
ಮತ್ತಾಯನು 28 / Matt 28