A A A A A
×

ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೫

ಸರ್ವೇಶ್ವರ ಸ್ವಾಮಿ, ಮೋಶೆಗೆ ಹೀಗೆಂದರು:
“ಕುಷ್ಠರೋಗಿಗಳಂಥ ಎಲ್ಲ ಅಂಟುರೋಗಿಗಳನ್ನು ಮೇಹಸ್ರಾವವುಳ್ಳವರನ್ನು ಹಾಗೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಯೇಲರಿಗೆ ಆಜ್ಞಾಪಿಸು.
ಅಂಥವರು ಗಂಡಸರೇ ಆಗಿರಲಿ, ಹೆಂಗಸರೇ ಆಗಿರಲಿ, ಅವರೆಲ್ಲರನ್ನು ಪಾಳೆಯದಿಂದ ಹೊರಡಿಸಬೇಕು. ನಾನೇ ವಾಸವಾಗಿರುವ ಪಾಳೆಯವನ್ನು ಅವರು ಅಪವಿತ್ರಗೊಳಿಸಬಾರದು.
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಅಂಥವರೆಲ್ಲರನ್ನು ಪಾಳೆಯದಿಂದ ಹೊರದೂಡಿದರು.
ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಇಂತೆಂದು ಆಜ್ಞಾಪಿಸು.
ಯಾವ ಗಂಡಸೇ ಆಗಲಿ ಹೆಂಗಸೇ ಆಗಲಿ, ಮತ್ತೊಬ್ಬನನ್ನು ಮೋಸಗೊಳಿಸಿ ಸರ್ವೇಶ್ವರನಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದರೆ, ಅಂಥವರು ಅಪರಾಧಿಗಳು.
ಅವರು ತಮ್ಮ ಅಪರಾಧವನ್ನು ಒಪ್ಪಿಕೊಳ್ಳಬೇಕು. ಅಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು.
ದಂಡವನ್ನು ತೆಗೆದುಕೊಳ್ಳ ತಕ್ಕವನು ತೀರಿಹೋಗಿ ಬಾಧ್ಯಸ್ಥನೂ ಇಲ್ಲದ ಪಕ್ಷಕ್ಕೆ ಆ ದ್ರವ್ಯ ಸರ್ವೇಶ್ವರನಿಗೆ ಸೇರಬೇಕು. ಅದು ಮತ್ತು ದೋಷಪರಿಹಾರಕ್ಕಾಗಿ ಅರ್ಪಿಸಲ್ಪಡುವ ಪ್ರಾಯಶ್ಚಿತ್ತ ಬಲಿಪ್ರಾಣಿಯಾದ ಟಗರು ಇವೆರಡೂ ಯಾಜಕನಿಗೆ ಸೇರಬೇಕು.
ಇಸ್ರಯೇಲಿನ ಜನರು ಪ್ರತ್ಯೇಕಿಸಿ ಯಾಜಕನಿಗೆ ಒಪ್ಪಿಸುವ ಪವಿತ್ರ ವಸ್ತುಗಳೆಲ್ಲವೂ ಯಾಜಕನವುಗಳಾಗಿಯೇ ಇರಬೇಕು.
೧೦
ಒಬ್ಬನು ಸರ್ವೇಶ್ವರನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದೊಪ್ಪಿಸುತ್ತಾನೋ ಅದು ಅವನದಾಗಿಯೇ ಇರಬೇಕು.
೧೧
ಸರ್ವೇಶ್ವರ ಮೋಶೆಗೆ ಹೀಗೆಂದರು: “ನೀನು ಇಸ್ರಯೇಲರಿಗೆ ಹೀಗೆ ಆಜ್ಞಾಪಿಸು -
೧೨
ಒಬ್ಬನ ಹೆಂಡತಿ ತಪ್ಪುದಾರಿ ಹಿಡಿದು, ತನ್ನ ಗಂಡನಿಗೆ ಅಪ್ರಾಮಾಣಿಕಳಾಗಿ ನಡೆದು ಸಿಕ್ಕಿಕೊಳ್ಳದೆ, ಸಾಕ್ಷಿಯಿಲ್ಲದೆ
೧೩
ಗುಟ್ಟಾಗಿಯೇ ಪರಪುರುಷನೊಡನೆ ಸಂಗಮಿಸಿ, ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾಗಿರಬಹುದು.
೧೪
ಅಥವಾ ಹಾಗೆ ಮಾಡದೆ ಕೆಟ್ಟುಹೋಗದೆ ಇದ್ದರೂ ಕೆಟ್ಟುಹೋದಳೆಂದು ಗಂಡನ ಸಂಶಯಕ್ಕೆ ಗುರಿಯಾಗಿರಬಹುದು.
೧೫
ಈ ಎರಡು ಸಂದರ್ಭಗಳಲ್ಲೂ ಆ ಗಂಡನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. ಅವಳ ಸಂಗತಿಯನ್ನು ವಿಚಾರಿಸುವುದಕ್ಕಾಗಿ, ಅವನು ಯಾಜಕನಿಗೆ ಮೂರು ಸೇರು ಜವೆಗೋದಿ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರ ಸಂಶಯವನ್ನು ಸೂಚಿಸುವುದಕ್ಕೂ ಪಾಪವನ್ನು ಹೊರಪಡಿಸುವುದಕ್ಕೂ, ಸರ್ವೇಶ್ವರನಿಗೆ ನೈವೇದ್ಯವಾದ ಕಾಣಿಕೆ. ಆದ್ದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹುಯ್ಯಬಾರದು, ಸಾಂಬ್ರಾಣಿಯನ್ನು ಹಾಕಬಾರದು.
೧೬
“ಯಾಜಕನು ಅವಳನ್ನು ಕರೆದು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಬೇಕು.
೧೭
ಒಂದು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧ ಜಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು.
೧೮
ಯಾಜಕನು ಆಕೆಯನ್ನು ಸರ್ವೇಶ್ವರನ ಸಮ್ಮುಖದಲ್ಲಿ ನಿಲ್ಲಿಸಿ, ಅವಳ ತಲೆಕೂದಲನ್ನು ಕೆದರಿಸಿ, ವ್ಯಭಿಚಾರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿಡಬೇಕು; ಶಾಪವನ್ನು ತರುವ ವಿಷಕರವಾದ ನೀರನ್ನು ತನ್ನ ಕೈಯಲ್ಲೇ ಹಿಡಿದುಕೊಳ್ಳಬೇಕು.
೧೯
ಅದೇ ಯಾಜಕನು ಅವಳಿಂದ ಶಪಥಪೂರ್ವಕ ಪ್ರಮಾಣ ಮಾಡಿಸುತ್ತಾ ಅವಳಿಗೆ - “ನೀನು ನಿನ್ನ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ, ಪರಪುರುಷನನ್ನು ಕೂಡದೆ, ಅಶುದ್ಧಳಾಗದೆ ಇರುವವಳಾದರೆ ಶಾಪ ತರುವ ಈ ವಿಷಕರವಾದ ನೀರಿನಿಂದ ನಿನಗೆ ಹಾನಿಯಾಗದು.
೨೦
ಆದರೆ ನೀನು ಗಂಡಸಿದ್ದವಳಾಗಿ ಪರಪುರುಷನನ್ನು ಕೂಡಿ ಕೆಟ್ಟಿದ್ದರೆ ನಿನ್ನ ಗಂಡನಲ್ಲದೆ ಬೇರೊಬ್ಬನು ನಿನ್ನನ್ನು ಸಂಗಮಿಸಿದ್ದರೆ,
೨೧
ಸರ್ವೇಶ್ವರನು ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ, ನಿನ್ನ ಹೊಟ್ಟೆ ಉಬ್ಬುವಂತೆ ಮಾಡಿ, ನೀನು ನಿನ್ನ ಜನರ ಮಧ್ಯೆ ಶಾಪಗ್ರಸ್ತಳನ್ನಾಗಿ ಮಾಡಲಿ.
೨೨
ಶಾಪತರುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ,” ಎಂದು ಹೇಳಬೇಕು. ಅದಕ್ಕೆ ಆ ಹೆಂಗಸು, “ಆಗಲಿ, ಹಾಗೆಯೇ ಆಗಲಿ,” ಎಂದು ಹೇಳಬೇಕು.
೨೩
“ಬಳಿಕ ಯಾಜಕನು ಆ ಶಾಪವಚನಗಳನ್ನು ಒಂದು ಪತ್ರದಲ್ಲಿ ಬರೆದು ಆ ವಿಷಕರ ಜಲದಲ್ಲಿ ತೊಳೆಯಲಿ;
೨೪
ಶಾಪತರುವ ಆ ನೀರನ್ನು ಆಕೆಗೆ ಕುಡಿಸಲಿ; ಆ ನೀರು ಅವಳೊಳಗೆ ಸೇರಿ ವಿಷಕರವಾಗುವುದು.
೨೫
ಆಮೇಲೆ ವ್ಯಭಿಚಾರ ಸಂಶಯ ಸೂಚಕವಾದ ಆ ಹಿಟ್ಟನ್ನು ಅವಳ ಕೈಯಿಂದ ತೆಗೆದುಕೊಂಡ ಯಾಜಕನು ಬಲಿಪೀಠದ ಹತ್ತಿರಕ್ಕೆ ಬರಬೇಕು.
೨೬
ನೈವೇದ್ಯವಾದುದನ್ನು ಸೂಚಿಸುವುದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಅವನು ಹೋಮಮಾಡಬೇಕು. ಕೊನೆಗೆ ಯಾಜಕನು ಆ ನೀರನ್ನು ಆಕೆಗೆ ಕುಡಿಸಬೇಕು.
೨೭
ಅವಳು ದೋಷಿಯಾಗಿ ಗಂಡನಿಗೆ ದ್ರೋಹವೆಸಗಿದ್ದರೆ ಕುಡಿದ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವುದು. ಈ ಕಾರಣ ಅವಳ ಹೊಟ್ಟೆ ಉಬ್ಬುವುದು. ಅವಳ ಜನನೇಂದ್ರಿಯಗಳು ಬತ್ತಿಹೋಗುವುವು. ಆಕೆ ತನ್ನ ಜನರ ಮಧ್ಯೆ ಶಾಪಗ್ರಸ್ತಳಾಗುವಳು.
೨೮
ಆದರೆ ಆಕೆ ದುಷ್ಟಳಾಗಿರದೆ, ನಿರಪರಾಧಿಯಾಗಿದ್ದ ಪಕ್ಷಕ್ಕೆ ಅವಳಿಗೆ ಯಾವ ಹಾನಿಯೂ ಸಂಭವಿಸದೆ ಗರ್ಭವತಿಯಾಗುವಳು.
೨೯
ವ್ಯಭಿಚಾರ ಸಂಶಯವನ್ನು ಪರಿಹರಿಸುವ ವಿಧಿ ಇದುವೆ. ಹೆಂಡತಿಯಾದವಳು ಗಂಡನ ಸ್ವಾಧೀನದಲ್ಲಿದ್ದರೂ ಪಾತಿವ್ರತ್ಯವನ್ನು ತೊರೆದು ಜಾರತ್ವ ಮಾಡಿರುವಾಗ
೩೦
ಅಥವಾ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗ ಅವನು ಅವಳನ್ನು ಸರ್ವೇಶ್ವರನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿ ನಿಯಮವನ್ನು ನೆರವೇರಿಸಬೇಕು.
೩೧
ಆಗ ಗಂಡನು ನಿರಪರಾಧಿಯಾಗುವನು. ಹೆಂಡತಿ ತನ್ನ ಅಕ್ರಮಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುವಳು.
ಸಂಖ್ಯಾಕಾಂಡ ೫:1
ಸಂಖ್ಯಾಕಾಂಡ ೫:2
ಸಂಖ್ಯಾಕಾಂಡ ೫:3
ಸಂಖ್ಯಾಕಾಂಡ ೫:4
ಸಂಖ್ಯಾಕಾಂಡ ೫:5
ಸಂಖ್ಯಾಕಾಂಡ ೫:6
ಸಂಖ್ಯಾಕಾಂಡ ೫:7
ಸಂಖ್ಯಾಕಾಂಡ ೫:8
ಸಂಖ್ಯಾಕಾಂಡ ೫:9
ಸಂಖ್ಯಾಕಾಂಡ ೫:10
ಸಂಖ್ಯಾಕಾಂಡ ೫:11
ಸಂಖ್ಯಾಕಾಂಡ ೫:12
ಸಂಖ್ಯಾಕಾಂಡ ೫:13
ಸಂಖ್ಯಾಕಾಂಡ ೫:14
ಸಂಖ್ಯಾಕಾಂಡ ೫:15
ಸಂಖ್ಯಾಕಾಂಡ ೫:16
ಸಂಖ್ಯಾಕಾಂಡ ೫:17
ಸಂಖ್ಯಾಕಾಂಡ ೫:18
ಸಂಖ್ಯಾಕಾಂಡ ೫:19
ಸಂಖ್ಯಾಕಾಂಡ ೫:20
ಸಂಖ್ಯಾಕಾಂಡ ೫:21
ಸಂಖ್ಯಾಕಾಂಡ ೫:22
ಸಂಖ್ಯಾಕಾಂಡ ೫:23
ಸಂಖ್ಯಾಕಾಂಡ ೫:24
ಸಂಖ್ಯಾಕಾಂಡ ೫:25
ಸಂಖ್ಯಾಕಾಂಡ ೫:26
ಸಂಖ್ಯಾಕಾಂಡ ೫:27
ಸಂಖ್ಯಾಕಾಂಡ ೫:28
ಸಂಖ್ಯಾಕಾಂಡ ೫:29
ಸಂಖ್ಯಾಕಾಂಡ ೫:30
ಸಂಖ್ಯಾಕಾಂಡ ೫:31
ಸಂಖ್ಯಾಕಾಂಡ 1 / ಸಂಖ್ಯಾ 1
ಸಂಖ್ಯಾಕಾಂಡ 2 / ಸಂಖ್ಯಾ 2
ಸಂಖ್ಯಾಕಾಂಡ 3 / ಸಂಖ್ಯಾ 3
ಸಂಖ್ಯಾಕಾಂಡ 4 / ಸಂಖ್ಯಾ 4
ಸಂಖ್ಯಾಕಾಂಡ 5 / ಸಂಖ್ಯಾ 5
ಸಂಖ್ಯಾಕಾಂಡ 6 / ಸಂಖ್ಯಾ 6
ಸಂಖ್ಯಾಕಾಂಡ 7 / ಸಂಖ್ಯಾ 7
ಸಂಖ್ಯಾಕಾಂಡ 8 / ಸಂಖ್ಯಾ 8
ಸಂಖ್ಯಾಕಾಂಡ 9 / ಸಂಖ್ಯಾ 9
ಸಂಖ್ಯಾಕಾಂಡ 10 / ಸಂಖ್ಯಾ 10
ಸಂಖ್ಯಾಕಾಂಡ 11 / ಸಂಖ್ಯಾ 11
ಸಂಖ್ಯಾಕಾಂಡ 12 / ಸಂಖ್ಯಾ 12
ಸಂಖ್ಯಾಕಾಂಡ 13 / ಸಂಖ್ಯಾ 13
ಸಂಖ್ಯಾಕಾಂಡ 14 / ಸಂಖ್ಯಾ 14
ಸಂಖ್ಯಾಕಾಂಡ 15 / ಸಂಖ್ಯಾ 15
ಸಂಖ್ಯಾಕಾಂಡ 16 / ಸಂಖ್ಯಾ 16
ಸಂಖ್ಯಾಕಾಂಡ 17 / ಸಂಖ್ಯಾ 17
ಸಂಖ್ಯಾಕಾಂಡ 18 / ಸಂಖ್ಯಾ 18
ಸಂಖ್ಯಾಕಾಂಡ 19 / ಸಂಖ್ಯಾ 19
ಸಂಖ್ಯಾಕಾಂಡ 20 / ಸಂಖ್ಯಾ 20
ಸಂಖ್ಯಾಕಾಂಡ 21 / ಸಂಖ್ಯಾ 21
ಸಂಖ್ಯಾಕಾಂಡ 22 / ಸಂಖ್ಯಾ 22
ಸಂಖ್ಯಾಕಾಂಡ 23 / ಸಂಖ್ಯಾ 23
ಸಂಖ್ಯಾಕಾಂಡ 24 / ಸಂಖ್ಯಾ 24
ಸಂಖ್ಯಾಕಾಂಡ 25 / ಸಂಖ್ಯಾ 25
ಸಂಖ್ಯಾಕಾಂಡ 26 / ಸಂಖ್ಯಾ 26
ಸಂಖ್ಯಾಕಾಂಡ 27 / ಸಂಖ್ಯಾ 27
ಸಂಖ್ಯಾಕಾಂಡ 28 / ಸಂಖ್ಯಾ 28
ಸಂಖ್ಯಾಕಾಂಡ 29 / ಸಂಖ್ಯಾ 29
ಸಂಖ್ಯಾಕಾಂಡ 30 / ಸಂಖ್ಯಾ 30
ಸಂಖ್ಯಾಕಾಂಡ 31 / ಸಂಖ್ಯಾ 31
ಸಂಖ್ಯಾಕಾಂಡ 32 / ಸಂಖ್ಯಾ 32
ಸಂಖ್ಯಾಕಾಂಡ 33 / ಸಂಖ್ಯಾ 33
ಸಂಖ್ಯಾಕಾಂಡ 34 / ಸಂಖ್ಯಾ 34
ಸಂಖ್ಯಾಕಾಂಡ 35 / ಸಂಖ್ಯಾ 35
ಸಂಖ್ಯಾಕಾಂಡ 36 / ಸಂಖ್ಯಾ 36