೧ |
ಸರ್ವೇಶ್ವರ ಸ್ವಾಮಿ ಮೋಶೆಗೆ ಹೇಳಿದ್ದು ಏನೆಂದರೆ: |
೨ |
“ನೀನು ಇಸ್ರಯೇಲರಿಗೆ ಹೀಗೆಂದು ಆಜ್ಞಾಪಿಸು - ‘ಇಡೀ ಕಾನಾನ್ ನಾಡು ನಿಮಗೆ ಸ್ವಂತ ನಾಡಾಗಿ ದೊರಕುವುದು. |
೩ |
ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಿರುವ ಚಿನ್ ಮರುಭೂಮಿಯೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆ ಮೂಡಣ ದಿಕ್ಕಿನಲ್ಲಿ ಲವಣಸಮುದ್ರದ ಕೊನೆಯಿಂದ ತೊಡಗುವುದು. |
೪ |
ಅದು ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರುವುದು. ಅದರ ಮೂಲೆ ಕಾದೇಶ್ ಬರ್ನೆಯದ ದಕ್ಷಿಣ ಕಡೆಯಲ್ಲಿರುವುದು. ಅಲ್ಲಿಂದ ಹಚರದ್ದಾರ್, ಆಚ್ಮೋನ್ ಎಂಬ ಊರುಗಳ ಮೇಲೆ |
೫ |
ಈಜಿಪ್ಟ್ ದೇಶದ ಮುಂದೆ ಇರುವ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯುವುದು. |
೬ |
‘ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ನಾಡಿನ ಮೇರೆಯಾಗಿರುವುದು. |
೭ |
‘ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ ಹೋರ್ ಎಂಬ ಪರ್ವತಕ್ಕೂ |
೮ |
ಆ ಪರ್ವತದಿಂದ ಹಮಾತಿನ ದಾರಿಗೂ ಗುರುತು ಹಾಕಿಕೊಳ್ಳಬೇಕು. ಅದರ ಮೂಲೆ ಚೆದಾದಿನ ಹತ್ತಿರ ಇರುವುದು. |
೯ |
ಆಮೇಲೆ ಅದು ಜಿಫ್ರೋನಿಗೆ ಹೋಗಿ ಹಚೆರೇನಾನಿನ ಬಳಿಯಲ್ಲಿ ಮುಗಿಯುವುದು. |
೧೦ |
‘ಪೂರ್ವದಿಕ್ಕಿನ ಮೇರೆಗಾಗಿ ಹಚೆರೇನಾನಿನಿ0ದ ಶೆಫಾಮಿಗೆ ಗುರುತು ಹಾಕಬೇಕು. |
೧೧ |
ಅಲ್ಲಿ0ದ ಅದು ಅಯಿನಿನ ಮೂಡಲಲ್ಲಿರುವ ರಿಬ್ಲಕ್ಕೆ ಬರಬೇಕು.ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಮೂಡಲಲ್ಲಿರುವ ಬೆಟ್ಟಗಳಿಗೆ ಹೋಗಬೇಕು. |
೧೨ |
ಅದೂ ಅಲ್ಲಿಂದ ಜೋರ್ಡನ್ ನದಿಗೆ ಇಳಿದು, ಅದನ್ನು ಅನುಸರಿಸುತ್ತಾ ಲವಣ ಸಮುದ್ರದ ಬಳಿಯಲ್ಲಿ ಮುಗಿಯಬೇಕು.’ ಇವೇ ನಿಮ್ಮ ನಾಡಿನ ಮೇರೆಗಳು,” ಎಂದರು. |
೧೩ |
ಅದಕ್ಕನುಸಾರವಾಗಿ ಮೋಶೆ ಇಸ್ರಯೇಲರಿಗೆ, “ನೀವು ಚೀಟುಹಾಕಿ ಹಂಚಿಕೊಳ್ಳಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ ನಾಡು ಇದೇ. ಒಂಬತ್ತುವರೆ ಕುಲದವರಿಗೆ ಇದನ್ನು ಹಂಚಿಕೊಡಬೇಕು. |
೧೪ |
ಬೇರೆ ಎರಡುವರೆ ಕುಲಗಳವರು, ಅಂದರೆ ರೂಬೇನ್ಯರ ಕುಟುಂಬಗಳು, ಗಾದ್ಯರ ಕುಟುಂಬಗಳು ಹಾಗು ಮನಸ್ಸೆಕುಲದವರಲ್ಲಿ ಅರ್ಧಜನರು ಜೋರ್ಡನ್ ನದಿಯ ಈಚೆ ಜೆರಿಕೊ ಪಟ್ಟಣಕ್ಕೆ ಪೂರ್ವದಿಕ್ಕಿನಲ್ಲಿ ಸೊತ್ತನ್ನು ಹೊಂದಿದ್ದಾರೆ,” ಎಂದು ಅಪ್ಪಣೆಕೊಟ್ಟನು. |
೧೫ |
*** |
೧೬ |
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದು ಏನೆಂದರೆ: |
೧೭ |
“ಮಹಾಯಾಜಕ ಎಲ್ಲಾಜಾರನು, ನೂನನ ಮಗ ಯೆಹೋಶುವನು |
೧೮ |
ಹಾಗು ಒಂದೊಂದು ಕುಲದಿಂದ ನೇಮಿಸಲ್ಪಟ್ಟ ಒಬ್ಬ ಕುಲನಾಯಕನು ಇವರೇ ಕಾನಾನ್ ನಾಡಿನಲ್ಲಿ ನಿಮ್ಮ ನಿಮ್ಮ ಸೊತ್ತುಗಳನ್ನು ಹಂಚಿಕೊಡಬೇಕಾದವರು. |
೧೯ |
ಆಯಾ ಕುಲದಿಂದ ನೀವು ನೇಮಿಸಬೇಕಾದವರು ಇವರು: ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್, |
೨೦ |
ಸಿಮೆಯೋನ್ ಕುಲದಿಂದ ಅಮ್ಮೀಹೂದನ ಮಗ ಶೆಮೂವೇಲ್, |
೨೧ |
ಬೆನ್ಯಾಮೀನ್ ಕುಲದಿಂದ ಕಿಸ್ಲೋನನ ಮಗ ಎಲೀದಾದ್, |
೨೨ |
ದಾನ್ ಕುಲದಿಂದ ಯೊಗ್ಲೀಯ ಮಗ ಬುಕ್ಕೀ ನಾಯಕ, |
೨೩ |
ಜೋಸೆಫನ ವಂಶದವರಲ್ಲಿ ಮನಸ್ಸೆ ಕುಲದಿಂದ ಏಫೋದನ ಮಗ ಹನ್ನೀಯೇಲ್ ನಾಯಕ, |
೨೪ |
ಎಫ್ರಯಿಮ್ ಕುಲದಿಂದ ಶಿಫ್ಟಾನನ ಮಗ ಕೆಮೂವೇಲ್ ನಾಯಕ, |
೨೫ |
ಜೆಬುಲೂನ್ ಕುಲದಿಂದ ಪರ್ನಾಕನ ಮಗ ಎಲೀಚಾಫನ್ ನಾಯಕ, |
೨೬ |
ಇಸ್ಸಾಕಾರ್ ಕುಲದಿಂದ ಅಜ್ಜಾನನ ಮಗ ಪಲ್ಟಿಯೇಲ್ ನಾಯಕ, |
೨೭ |
ಆಶೇರ್ ಕುಲದಿಂದ ಶೆಲೋಮಿಯ ಮಗ ಅಹೀಹೂದ್ ನಾಯಕ, |
೨೮ |
ನಫ್ತಾಲಿ ಕುಲದಿಂದ ಅಮ್ಮೀಹೂದನ ಮಗ ಪೆದಹೇಲ್ ನಾಯಕ.” |
೨೯ |
ಕಾನಾನ್ ನಾಡಿನಲ್ಲಿ ಇಸ್ರಯೇಲರಿಗೆ ಸೊತ್ತನ್ನು ಹಂಚಿಕೊಡುವುದಕ್ಕೆ ಸರ್ವೇಶ್ವರ ಇವರೆಲ್ಲರನ್ನು ನೇಮಿಸಿದರು.
|
Kannada Bible (KNCL) 2016 |
No Data |