A A A A A
×

ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೩

ಸೀನಾಯಿ ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಮೋಶೆಯ ಸಂಗಡ ಮಾತಾಡಿದ ಕಾಲದಲ್ಲಿದ್ದ ಮೋಶೆ - ಆರೋನರ ವಂಶಸ್ಥರ ವಿವರ:
ಆರೋನನಿಗಿದ್ದ ಮಕ್ಕಳ ಹೆಸರುಗಳು: ಜೇಷ್ಠಪುತ್ರ ನಾದಾಬ್, ಅಬೀಹು, ಎಲ್ಲಾಜಾರ್ ಮತ್ತು ಈತಾಮಾರ್.
ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಅಭಿಷೇಕದಿಂದ ಪ್ರತಿಷ್ಠಿತರಾದವರು ಇವರೇ.
ನಾದಾಬ್ ಮತ್ತು ಅಬೀಹೂ ಎಂಬಿಬ್ಬರು ಸೀನಾಯಿ ಮರುಭೂಮಿಯಲ್ಲಿ ಸರ್ವೇಶ್ವರ ಆಜ್ಞಾಪಿಸದ ಅಪವಿತ್ರ ಅಗ್ನಿಯಿಂದ ಧೂಪವನ್ನು ಸಮರ್ಪಿಸಿದರು. ಈ ಕಾರಣ ಸರ್ವೇಶ್ವರನ ಸನ್ನಿಧಿಯಲ್ಲಿ ಸತ್ತುಹೋದರು. ಅವರಿಗೆ ಮಕ್ಕಳಿರಲಿಲ್ಲ. ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಮಿಕ್ಕವರು ತಮ್ಮ ತಂದೆಯ ಕೈಕೆಳಗೆ ಯಾಜಕರಾಗಿ ಸೇವೆ ಸಲ್ಲಿಸಿದರು.
ಸರ್ವೇಶ್ವರ ಮೋಶೆಗೆ ಇತ್ತ ಆಜ್ಞೆ ಇದು:
“ನೀನು ಲೇವಿಕುಲದವರನ್ನು ಕರೆದುತಂದು ಅವರು ದೇವತಾ ಕಾರ್ಯಗಳಲ್ಲಿ ಯಾಜಕ ಆರೋನನಿಗೆ ಸಹಾಯಕರಾಗಿರುವಂತೆ ನಿಯುಕ್ತಗೊಳಿಸು.
ಅವರು ದೇವದರ್ಶನದ ಗುಡಾರದ ಬಳಿಯಲ್ಲಿರಬೇಕು; ಆರೋನನಿಗೂ ಇಡೀ ಸಮಾಜಕ್ಕೂ ನೆರವಾಗಿ ದೇವಸ್ಥಾನದ ಪರಿಚರ್ಯವನ್ನು ನಡೆಸಬೇಕು.
ದೇವದರ್ಶನದ ಗುಡಾರಕ್ಕೆ ಸೇರಿದ ಉಪಕರಣಗಳನ್ನು ನೋಡಿಕೊಳ್ಳಬೇಕು. ಇಸ್ರಯೇಲರ ಪರವಾಗಿ ದೇವಸ್ಥಾನದ ಸೇವಾಕಾರ್ಯಗಳನ್ನು ನಡೆಸಬೇಕು.
ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸು. ಇಸ್ರಯೇಲರಲ್ಲಿ ಆರೋನನಿಗೆ ಸಂಪೂರ್ಣ ಶರಣರು ಇವರೇ.
೧೦
ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಆರೋನನನ್ನು ಹಾಗೂ ಅವನ ಮಕ್ಕಳನ್ನು ನೇಮಿಸು. ಬೇರೆ ಯಾರಾದರು ಆ ವೃತ್ತಿಗೆ ಕೈ ಹಾಕಿದರೆ ಅಂಥವನಿಗೆ ಮರಣ ಶಿಕ್ಷೆಯಾಗಬೇಕು.
೧೧
ಸರ್ವೇಶ್ವರ ಮೋಶೆಗೆ ಹೀಗೆಂದರು:
೧೨
“ನಾನು ಇಸ್ರಯೇಲರಲ್ಲಿ ಜೇಷ್ಠಪುತ್ರರಿಗೆ ಬದಲಾಗಿ ಲೇವಿಯರನ್ನೇ ಆರಿಸಿಕೊಂಡಿದ್ದೇನೆಂದು ತಿಳಿ. ಆದುದರಿಂದ ಲೇವಿಯರು ನನಗೆ ಸೇರಿದವರು, ನನ್ನ ಸೊತ್ತು.
೧೩
ವಾಸ್ತವವಾಗಿ ಇಸ್ರಯೇಲರ ಜೇಷ್ಠರೆಲ್ಲರು ನನ್ನ ಸೊತ್ತು, ಈಜಿಪ್ಟ್ ದೇಶದಲ್ಲಿ ಜೇಷ್ಠವಾದುದೆಲ್ಲವನ್ನು ನಾನು ಸಂಹಾರಮಾಡಿದಾಗ ಇಸ್ರಯೇಲರಲ್ಲಿಯ ಜೇಷ್ಠ ಮನುಷ್ಯರನ್ನೂ ಪಶುಪ್ರಾಣಿಗಳನ್ನೂ ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆ. ಆದರೆ ಈಗ ಅಂಥವರಿಗೆ ಬದಲಾಗಿ ಲೇವಿಯರನ್ನು ಆರಿಸಿಕೊಂಡಿದ್ದೇನೆ, ಅವರು ಸರ್ವೇಶ್ವರನಾದ ನನ್ನವರು.”
೧೪
ಸರ್ವೇಶ್ವರ ಸೀನಾಯಿ ಮರುಭೂಮಿಯಲ್ಲಿ ಮೋಶೆಗೆ
೧೫
“ನೀನು ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನೆಲ್ಲಾ ಗೋತ್ರ ಕುಟುಂಬಗಳ ಪ್ರಕಾರ ಎಣಿಸಬೇಕು,” ಎಂದು ಆಜ್ಞಾಪಿಸಿದರು.
೧೬
ಸ್ವಾಮಿಯ ಅಪ್ಪಣೆಯ ಮೇರೆಗೆ ಮೋಶೆ ಅವರನ್ನು ಎಣಿಸಿದನು.
೧೭
ಲೇವಿಯ ಮಕ್ಕಳ ಹೆಸರುಗಳು ಇವು: ಗೇರ್ಷೋನ್, ಕೆಹಾತ್, ಮೆರಾರೀ.
೧೮
ಇವರು ಗೋತ್ರಸ್ಥಾಪಕರು. ಗೋತ್ರಸ್ಥಾಪಕ ಗೇರ್ಷೋನನ ಮಕ್ಕಳು - ಲಿಬ್ನಿ, ಶಿಮ್ಮೀ ಎಂಬುವರು.
೧೯
ಗೋತ್ರಸ್ಥಾಪಕ ಕೆಹಾತನ ಮಕ್ಕಳು - ಅಮ್ರಾಮ್, ಇಚ್ಛಾರ್, ಹೆಬ್ರೋನ್, ಉಜ್ಜೀಯೇಲ್ ಎಂಬುವರು.
೨೦
ಮೆರಾರಿಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.
೨೧
ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರು ಶಿಮ್ಮೀ ಗೋತ್ರದವರೂ ಇದ್ದರು.
೨೨
ಅವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ 7,500:
೨೩
ಗೇರ್ಷೋನ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ಹಿಂದುಗಡೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೨೪
ಗೇರ್ಷೋನ್ಯರ ಗೋತ್ರಗಳ ಮುಖ್ಯಸ್ಥ ಲಾಯೇಲನ ಮಗ ಎಲ್ಯಾಸಾಫ್.
೨೫
ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಗುಡಾರ, ಅದರ ಮೇಲಿದ್ದ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ
೨೬
ಗುಡಾರದ ಮತ್ತು ಬಲಿಪೀಠದ ಸುತ್ತಲಿರುವ ಅಂಗಳದ ತೆರೆಗಳು, ಅಂಗಳದ ಬಾಗಿಲಿನ ಪರದೆ ಮತ್ತು ಅವುಗಳ ಹಗ್ಗಗಳು. ಇಂಥ ಎಲ್ಲಾ ವಿಧವಾದ ಸೇವೆಯನ್ನು ಗೇರ್ಷೋನ್ಯರು ಮಾಡಬೇಕಾಗಿತ್ತು.
೨೭
ಕೆಹಾತ್ ವಂಶದವರಲ್ಲಿ ಅಮ್ರಾಮ್ ಗೋತ್ರದವರು, ಇಚ್ಹಾರ್ ಗೋತ್ರದವರು, ಹೆಬ್ರೋನ್ ಗೋತ್ರದವರು ಹಾಗೂ ಉಜ್ಜೀಯೇಲ್ ಗೋತ್ರದವರು ಇದ್ದರು.
೨೮
ಅವರಲ್ಲಿ ದೇವಸ್ಥಾನ ನೋಡಿಕೊಳ್ಳತಕ್ಕವರು ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ 8,600:
೨೯
ಕೆಹಾತ್ಯರ ಕುಟುಂಬಗಳವರು ದೇವದರ್ಶನದ ಗುಡಾರದ ದಕ್ಷಿಣ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೩೦
ಈ ಕೆಹಾತ್ಯರ ಗೋತ್ರಗಳ ಮುಖ್ಯಸ್ಥನು ಉಜ್ಜೀಯೇಲನ ಮಗ ಎಲೀಚಾಫಾನ್.
೩೧
ಅವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಮಂಜೂಷ, ಮೇಜು, ದೀಪಸ್ತಂಭ, ವೇದಿಕೆಗಳು, ದೇವಸ್ಥಾನದ ಸೇವೋಪಕರಣಗಳು ಹಾಗೂ ಒಳಗಣ ತೆರೆ. ಇಂಥ ಎಲ್ಲಾ ವಿಧವಾದ ಸೇವೆಯನ್ನು ಅವರು ಮಾಡಬೇಕಾಗಿತ್ತು.
೩೨
ಇದಲ್ಲದೆ ಮಹಾಯಾಜಕ ಆರೋನನ ಮಗ ಎಲ್ಲಾಜಾರನು ಲೇವಿಯರ ಮುಖ್ಯಸ್ಥರಿಗೆ ಅಧ್ಯಕ್ಷನಾಗಿದ್ದ; ದೇವಸ್ಥಾನವನ್ನು ಕಾಯುವವರಿಗೆ ಮೇಲ್ವಿಚಾರಕನಾಗಿದ್ದ.
೩೩
ಮೆರಾರೀ ವಂಶದವರಲ್ಲಿ ಮಹ್ಲೀ ಗೋತ್ರದವರು ಮತ್ತು ಮೂಷಿ ಗೋತ್ರದವರು ಇದ್ದರು.
೩೪
ಇವರಲ್ಲಿ ಎಣಿಕೆಯಾದ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 6,200:
೩೫
ಮೆರಾರೀಯರ ಗೋತ್ರಗಳ ಮುಖ್ಯಸ್ಥನು ಅಬೀಹೈಲನ ಮಗ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
೩೬
ಮೇರಾರೀ ವಂಶದವರ ವಶಕ್ಕೆ ಒಪ್ಪಿಸಲಾಗಿದ್ದವುಗಳು ಇವು - ಗುಡಾರದ ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು,
೩೭
ಇವುಗಳ ಉಪಕರಣಗಳು, ಅಂಗಳದ ಸುತ್ತಲಿದ್ದ ಕಂಬಗಳು, ಅವುಗಳ ಗದ್ದಿಗೆ ಕಲ್ಲುಗಳು, ಗೂಟಗಳು ಮತ್ತು ಹಗ್ಗಗಳು. ಇಂಥ ಎಲ್ಲಾ ವಿಧವಾದ ಸೇವೆಯನ್ನು ಇವರೇ ಮಾಡಬೇಕಾಗಿತ್ತು.
೩೮
ದೇವದರ್ಶನದ ಗುಡಾರದ ಪೂರ್ವದಿಕ್ಕಿನಲ್ಲಿ, ಅಂದರೆ ಸೂರ್ಯೋದಯವಾಗುವ ಕಡೆಯಲ್ಲಿ ಮೋಶೆ ಮತ್ತು ಆರೋನನು ಹಾಗೂ ಆರೋನನ ಮಕ್ಕಳು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು. ಅವರು ಇಸ್ರಯೇಲರ ಪರವಾಗಿ ದೇವಸ್ಥಾನವನ್ನು ನೋಡಿಕೊಳ್ಳಬೇಕಾಗಿತ್ತು. ಬೇರೆ ಯಾರಾದರೂ ಆ ಕೆಲಸಕ್ಕೆ ಕೈ ಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕಾಗಿತ್ತು.
೩೯
ಮೋಶೆ ಮತ್ತು ಆರೋನರು ಸರ್ವೇಶ್ವರನ ಅಪ್ಪಣೆಯ ಮೇರೆಗೆ ಕುಟುಂಬಗಳ ಪ್ರಕಾರ ಎಣಿಸಿದ ಲೇವಿಯರ ಅಂದರೆ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 22,000:
೪೦
ಸರ್ವೇಶ್ವರ ಮೋಶೆಗೆ, “ನೀನು ಇಸ್ರಯೇಲರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಜೇಷ್ಠಪುತ್ರರನ್ನು ಹೆಸರು ಹಿಡಿದು ಎಣಿಕೆಮಾಡು.
೪೧
ಆದರೆ ಸರ್ವೇಶ್ವರನೆಂಬ ನನ್ನ ಸೊತ್ತಾಗುವುದಕ್ಕೆ ನೀನು ಇಸ್ರಯೇಲರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೋ,” ಎಂದು ಆಜ್ಞಾಪಿಸಿದರು.
೪೨
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಇಸ್ರಯೇಲರಲ್ಲಿದ್ದ ಜೇಷ್ಠರಾದವರೆಲ್ಲರನ್ನು ಎಣಿಕೆಮಾಡಿದನು.
೪೩
ಹೆಸರು ಹಿಡಿದು ಎಣಿಕೆಯಾದವರ, ಅಂದರೆ ಒಂದು ತಿಂಗಳ ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 22,273:
೪೪
ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದೇನೆಂದರೆ -
೪೫
“ನೀನು ಇಸ್ರಯೇಲರ ಜೇಷ್ಠರಿಗೆ ಬದಲಾಗಿ ಲೇವಿಯರನ್ನು ಮತ್ತು ಅವರ ಚೊಚ್ಚಲಾದ ಪಶುಪ್ರಾಣಿಗಳಿಗೆ ಬದಲಾಗಿ ಲೇವಿಯರ ಪಶುಪ್ರಾಣಿಗಳನ್ನು ತೆಗೆದುಕೋ. ಲೇವಿಯರೇ ನನ್ನ ಸೊತ್ತು. ನಾನು ಸರ್ವೇಶ್ವರ!
೪೬
ಲೇವಿಯರ ಸಂಖ್ಯೆಗಿಂತ 273 ಮಂದಿ ಜೇಷ್ಠರು ಇಸ್ರಯೇಲರಲ್ಲಿ ಹೆಚ್ಚಾಗಿದ್ದಾರೆ. ಆದುದರಿಂದ ಅವರನ್ನು ವಿಮೋಚಿಸುವುದಕ್ಕಾಗಿ ತಲೆ ಒಂದಕ್ಕೆ ಐದು ಬೆಳ್ಳಿ ನಾಣ್ಯಗಳಂತೆ ಈಡು ತೆಗೆದುಕೊ.
೪೭
ದೇವರ ಸೇವೆಗೆ ನಿಗದಿಯಾದ ನಾಣ್ಯಗಳ ಮೇರೆಗೆ ತೆಗೆದುಕೊಳ್ಳಬೇಕು.
೪೮
ಆ ಹೆಚ್ಚಾಗಿರುವವರ ವಿಮೋಚನೆಗಾಗಿ ಅವರು ಕೊಡುವ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಡು,” ಎಂದರು.
೪೯
ಅದರಂತೆಯೇ ಮೋಶೆ ಲೇವಿಯರಿಗಿಂತ ಹೆಚ್ಚಾದ ಜೇಷ್ಠರನ್ನು ವಿಮೋಚಿಸುವುದಕ್ಕಾಗಿ ಹಣವನ್ನು ತೆಗೆದುಕೊಂಡನು.
೫೦
ದೇವರ ಸೇವೆಗೆ ನಿಗದಿಯಾದ ನಾಣ್ಯದ ಮೇರೆಗೆ 1365 ನಾಣ್ಯಗಳನ್ನು ತೆಗೆದುಕೊಂಡನು.
೫೧
ಸರ್ವೇಶ್ವರನ ಆಜ್ಞೆಯಂತೆ ವಿಮೋಚನೆಯ ಹಣವನ್ನು ಆರೋನನಿಗೂ ಅವನ ಮಕ್ಕಳಿಗೂ ಕೊಟ್ಟನು.
ಸಂಖ್ಯಾಕಾಂಡ ೩:1
ಸಂಖ್ಯಾಕಾಂಡ ೩:2
ಸಂಖ್ಯಾಕಾಂಡ ೩:3
ಸಂಖ್ಯಾಕಾಂಡ ೩:4
ಸಂಖ್ಯಾಕಾಂಡ ೩:5
ಸಂಖ್ಯಾಕಾಂಡ ೩:6
ಸಂಖ್ಯಾಕಾಂಡ ೩:7
ಸಂಖ್ಯಾಕಾಂಡ ೩:8
ಸಂಖ್ಯಾಕಾಂಡ ೩:9
ಸಂಖ್ಯಾಕಾಂಡ ೩:10
ಸಂಖ್ಯಾಕಾಂಡ ೩:11
ಸಂಖ್ಯಾಕಾಂಡ ೩:12
ಸಂಖ್ಯಾಕಾಂಡ ೩:13
ಸಂಖ್ಯಾಕಾಂಡ ೩:14
ಸಂಖ್ಯಾಕಾಂಡ ೩:15
ಸಂಖ್ಯಾಕಾಂಡ ೩:16
ಸಂಖ್ಯಾಕಾಂಡ ೩:17
ಸಂಖ್ಯಾಕಾಂಡ ೩:18
ಸಂಖ್ಯಾಕಾಂಡ ೩:19
ಸಂಖ್ಯಾಕಾಂಡ ೩:20
ಸಂಖ್ಯಾಕಾಂಡ ೩:21
ಸಂಖ್ಯಾಕಾಂಡ ೩:22
ಸಂಖ್ಯಾಕಾಂಡ ೩:23
ಸಂಖ್ಯಾಕಾಂಡ ೩:24
ಸಂಖ್ಯಾಕಾಂಡ ೩:25
ಸಂಖ್ಯಾಕಾಂಡ ೩:26
ಸಂಖ್ಯಾಕಾಂಡ ೩:27
ಸಂಖ್ಯಾಕಾಂಡ ೩:28
ಸಂಖ್ಯಾಕಾಂಡ ೩:29
ಸಂಖ್ಯಾಕಾಂಡ ೩:30
ಸಂಖ್ಯಾಕಾಂಡ ೩:31
ಸಂಖ್ಯಾಕಾಂಡ ೩:32
ಸಂಖ್ಯಾಕಾಂಡ ೩:33
ಸಂಖ್ಯಾಕಾಂಡ ೩:34
ಸಂಖ್ಯಾಕಾಂಡ ೩:35
ಸಂಖ್ಯಾಕಾಂಡ ೩:36
ಸಂಖ್ಯಾಕಾಂಡ ೩:37
ಸಂಖ್ಯಾಕಾಂಡ ೩:38
ಸಂಖ್ಯಾಕಾಂಡ ೩:39
ಸಂಖ್ಯಾಕಾಂಡ ೩:40
ಸಂಖ್ಯಾಕಾಂಡ ೩:41
ಸಂಖ್ಯಾಕಾಂಡ ೩:42
ಸಂಖ್ಯಾಕಾಂಡ ೩:43
ಸಂಖ್ಯಾಕಾಂಡ ೩:44
ಸಂಖ್ಯಾಕಾಂಡ ೩:45
ಸಂಖ್ಯಾಕಾಂಡ ೩:46
ಸಂಖ್ಯಾಕಾಂಡ ೩:47
ಸಂಖ್ಯಾಕಾಂಡ ೩:48
ಸಂಖ್ಯಾಕಾಂಡ ೩:49
ಸಂಖ್ಯಾಕಾಂಡ ೩:50
ಸಂಖ್ಯಾಕಾಂಡ ೩:51
ಸಂಖ್ಯಾಕಾಂಡ 1 / ಸಂಖ್ಯಾ 1
ಸಂಖ್ಯಾಕಾಂಡ 2 / ಸಂಖ್ಯಾ 2
ಸಂಖ್ಯಾಕಾಂಡ 3 / ಸಂಖ್ಯಾ 3
ಸಂಖ್ಯಾಕಾಂಡ 4 / ಸಂಖ್ಯಾ 4
ಸಂಖ್ಯಾಕಾಂಡ 5 / ಸಂಖ್ಯಾ 5
ಸಂಖ್ಯಾಕಾಂಡ 6 / ಸಂಖ್ಯಾ 6
ಸಂಖ್ಯಾಕಾಂಡ 7 / ಸಂಖ್ಯಾ 7
ಸಂಖ್ಯಾಕಾಂಡ 8 / ಸಂಖ್ಯಾ 8
ಸಂಖ್ಯಾಕಾಂಡ 9 / ಸಂಖ್ಯಾ 9
ಸಂಖ್ಯಾಕಾಂಡ 10 / ಸಂಖ್ಯಾ 10
ಸಂಖ್ಯಾಕಾಂಡ 11 / ಸಂಖ್ಯಾ 11
ಸಂಖ್ಯಾಕಾಂಡ 12 / ಸಂಖ್ಯಾ 12
ಸಂಖ್ಯಾಕಾಂಡ 13 / ಸಂಖ್ಯಾ 13
ಸಂಖ್ಯಾಕಾಂಡ 14 / ಸಂಖ್ಯಾ 14
ಸಂಖ್ಯಾಕಾಂಡ 15 / ಸಂಖ್ಯಾ 15
ಸಂಖ್ಯಾಕಾಂಡ 16 / ಸಂಖ್ಯಾ 16
ಸಂಖ್ಯಾಕಾಂಡ 17 / ಸಂಖ್ಯಾ 17
ಸಂಖ್ಯಾಕಾಂಡ 18 / ಸಂಖ್ಯಾ 18
ಸಂಖ್ಯಾಕಾಂಡ 19 / ಸಂಖ್ಯಾ 19
ಸಂಖ್ಯಾಕಾಂಡ 20 / ಸಂಖ್ಯಾ 20
ಸಂಖ್ಯಾಕಾಂಡ 21 / ಸಂಖ್ಯಾ 21
ಸಂಖ್ಯಾಕಾಂಡ 22 / ಸಂಖ್ಯಾ 22
ಸಂಖ್ಯಾಕಾಂಡ 23 / ಸಂಖ್ಯಾ 23
ಸಂಖ್ಯಾಕಾಂಡ 24 / ಸಂಖ್ಯಾ 24
ಸಂಖ್ಯಾಕಾಂಡ 25 / ಸಂಖ್ಯಾ 25
ಸಂಖ್ಯಾಕಾಂಡ 26 / ಸಂಖ್ಯಾ 26
ಸಂಖ್ಯಾಕಾಂಡ 27 / ಸಂಖ್ಯಾ 27
ಸಂಖ್ಯಾಕಾಂಡ 28 / ಸಂಖ್ಯಾ 28
ಸಂಖ್ಯಾಕಾಂಡ 29 / ಸಂಖ್ಯಾ 29
ಸಂಖ್ಯಾಕಾಂಡ 30 / ಸಂಖ್ಯಾ 30
ಸಂಖ್ಯಾಕಾಂಡ 31 / ಸಂಖ್ಯಾ 31
ಸಂಖ್ಯಾಕಾಂಡ 32 / ಸಂಖ್ಯಾ 32
ಸಂಖ್ಯಾಕಾಂಡ 33 / ಸಂಖ್ಯಾ 33
ಸಂಖ್ಯಾಕಾಂಡ 34 / ಸಂಖ್ಯಾ 34
ಸಂಖ್ಯಾಕಾಂಡ 35 / ಸಂಖ್ಯಾ 35
ಸಂಖ್ಯಾಕಾಂಡ 36 / ಸಂಖ್ಯಾ 36