A A A A A
×

ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೧೬

ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಚಾರನ ಮಗನೂ ಆದ ಕೋರಹ ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನ್ ಹಾಗೂ ಅಬೀರಾಮ್ ಮತ್ತು ಪೆಲೆತನ ಮಗ ಓನ್ - ಇವರು ಮೋಶೆಗೆ ವಿರುದ್ಧ ಪ್ರತಿಭಟಿಸಿದರು.
ಇವರ ಸಮೇತ ಸಮುದಾಯದವರಲ್ಲಿ ಮುಖ್ಯಸ್ಥರೂ ಸಲಹೆಗಾರರೂ ಹೆಸರಾಂತ ವ್ಯಕ್ತಿಗಳೂ ಆಗಿದ್ದ 250 ಮಂದಿ ಇಸ್ರಯೇಲರು ಕೂಡ ದಂಗೆಯೆದ್ದರು.
ಇವರೆಲ್ಲರೂ ಜೊತೆಗೂಡಿ ಮೋಶೆ ಮತ್ತು ಆರೋನರ ಬಳಿಗೆ ಬಂದು, “ನಿಮ್ಮ ವರ್ತನೆ ಅಧಿಕವಾಯಿತು. ಈ ಸಮುದಾಯದಲ್ಲಿ ಪ್ರತಿಯೊಬ್ಬನೂ ಪ್ರತಿಷ್ಠಿತನೇ. ಸರ್ವೇಶ್ವರ ಇವರೆಲ್ಲರಲ್ಲಿ ವಾಸವಾಗಿದ್ದಾರಲ್ಲವೇ? ಹೀಗಿರಲಾಗಿ ಸರ್ವೇಶ್ವರನ ಸಮುದಾಯದವರಿಗಿಂತ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇಕೆ?” ಎಂದು ವಾದಿಸಿದರು.
ಈ ಮಾತುಗಳನ್ನು ಕೇಳಿದ್ದೇ ಮೋಶೆ ನೆಲದ ಮೇಲೆ ಬೋರಲಾಗಿ ಬಿದ್ದನು.
ಕೋರಹನಿಗೂ ಅವನ ಪಂಗಡದವರೆಲ್ಲರಿಗೂ ಹೀಗೆಂದನು: “ಸರ್ವೇಶ್ವರ ತನ್ನವರು ಯಾರೆಂದು ನಾಳೆ ತಿಳಿಸುವರು. ಯಾರನ್ನು ಪ್ರತಿಷ್ಠಿಸಿದ್ದಾರೋ ಹಾಗೂ ತಾವೇ ಆರಿಸಿಕೊಂಡಿದ್ದಾರೋ ಅವರನ್ನು ಮಾತ್ರ ತಮ್ಮ ಹತ್ತಿರಕ್ಕೆ ಬರಗೊಳಿಸುವರು.
ನೀವು ಮಾಡಬೇಕಾದುದಿಷ್ಟು - ಕೋರಹನು ಮತ್ತು ಅವನ ಪಂಗಡದವರಾದ ನೀವೆಲ್ಲರೂ ಧೂಪಾರತಿಗಳನ್ನು ತಂದು ಅವುಗಳಲ್ಲಿ ಕೆಂಡವನ್ನಿಟ್ಟು ನಾಳೆ ಸರ್ವೇಶ್ವರನ ಸನ್ನಿಧಿಯಲ್ಲಿ ಧೂಪ ಹಾಕಬೇಕು.
ಆಗ ಸರ್ವೇಶ್ವರ ಯಾರನ್ನು ಮೆಚ್ಚುತ್ತಾರೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ಅಧಿಕವಾಗಿರುವುದು ನಿಮ್ಮ ವರ್ತನೆಯೆ!”
ಮೋಶೆ ಕೋರಹನಿಗೆ - “ಲೇವಿಯರೇ ಕೇಳಿ:
ಇಸ್ರಯೇಲರ ದೇವರು ತಮ್ಮ ಸಮೂದಾಯದವರಾದ ನಿಮ್ಮನ್ನು ಪ್ರತ್ಯೇಕಿಸಿ ತಮ್ಮ ಗುಡಾರದ ಪರಿಚರ್ಯವನ್ನು ಮಾಡಲು ಹಾಗೂ ಸರ್ವಸಮುದಾಯದ ಸೇವೆಯನ್ನು ಕೈಗೊಳ್ಳಲು ತಮ್ಮ ಬಳಿಯಲ್ಲೇ ಇಟ್ಟುಕೊಂಡರು.
೧೦
ಇದು ಕೋರಹನಾದ ನಿನಗೂ ನಿನ್ನ ಸ್ವಕುಲದವರಾದ ಲೇವಿಯರಿಗೂ ಕೇವಲ ಅಲ್ಪಕಾರ್ಯವೆಂದು ತೋರಿತೇ? ಯಾಜಕ ಪದವಿ ನಿಮಗಾಗಬೇಕೆಂದು ಕೋರುತ್ತೀರೋ?
೧೧
ಆರೋನನಂಥವನಿಗೇ ವಿರೋಧವಾಗಿ ಗೊಣಗುವವರಾದ್ದರಿಂದ ನೀನು ಮತ್ತು ನಿನ್ನ ಪಂಗಡದವರೆಲ್ಲರು ಸರ್ವೇಶ್ವರನಿಗೆ ವಿರುದ್ಧ ಕೂಡಿಕೊಂಡವರಾದಿರಿ!” ಎಂದನು.
೧೨
ಮೋಶೆ ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬಿರಾಮರನ್ನು ಬರುವಂತೆ ಹೇಳಿಕಳಿಸಿದನು.
೧೩
ಅವರು ಅವನಿಗೆ, “ನಾವು ಬರುವುದಿಲ್ಲ, ಹಾಲೂಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆತಂದು ಈ ಮರಳುಗಾಡಿನಲ್ಲಿ ಸಾಯಿಸುತ್ತಿರುವೆ. ಇದು ಅಲ್ಪಕಾರ್ಯವೆಂದು ಎಣಿಸುತ್ತೀಯೋ? ನಮ್ಮ ಮೇಲೆ ದೊರೆತನ ಮಾಡಬೇಕೆಂದು ಕೋರುತ್ತಿರುವೆಯೋ?”
೧೪
ಅಷ್ಟುಮಾತ್ರವಲ್ಲ, ಹಾಲೂಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲೇಯಿಲ್ಲ; ಹೊಲ ಹಾಗು ದ್ರಾಕ್ಷೆತೋಟಗಳನ್ನು ನಮ್ಮ ಸ್ವಾಧೀನಕ್ಕೆ ಕೊಟ್ಟೂ ಇಲ್ಲ. ಈ ಜನರ ಕಣ್ಣಿಗೆ ಮಣ್ಣುಹಾಕಬೇಕೆಂದಿರುವೆಯಾ? ನಾವು ಬರುವುದಿಲ್ಲ,” ಎಂದು ಹೇಳಿದರು.
೧೫
ಅದಕ್ಕೆ ಮೋಶೆ ಬಹುಕೋಪಗೊಂಡನು. ಸರ್ವೇಶ್ವರನಿಗೆ, “ತಾವು ಇವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡಿ. ನಾನು ಇವರಿಂದ ಒಂದು ಕತ್ತೆಯನ್ನೂ ಕೂಡ ತೆಗೆದುಕೊಂಡವನಲ್ಲ. ಅವರಲ್ಲಿ ಒಬ್ಬನಿಗಾದರೂ ಹಾನಿಮಾಡಿದವನಲ್ಲ,” ಎಂದು ಮನವಿಮಾಡಿದನು.
೧೬
ಮೋಶೆ ಕೋರಹನಿಗೆ, “ನೀನೂ ನಿನ್ನ ಪಂಗಡದವರು ಮತ್ತು ಆರೋನನು ನಾಳೆ ಸರ್ವೇಶ್ವರನ ಸನ್ನಿಧಿಗೆ ಬರಬೇಕು.
೧೭
ಪಂಗಡದ ಪ್ರತಿಯೊಬ್ಬನು ತನ್ನ ತನ್ನ ಧೂಪಾರತಿಯನ್ನು ಅಂದರೆ ಒಟ್ಟು 250 ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಸರ್ವೇಶ್ವರನ ಸನ್ನಿಧಿಗೆ ಬರಬೇಕು. ನೀನು ಮತ್ತು ಆರೋನನು ಕೂಡ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು,” ಎಂದು ಹೇಳಿದನು.
೧೮
ಅದರಂತೆ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಬಂದು, ಅವುಗಳಲ್ಲಿ ಕೆಂಡವನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆ ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತುಕೊಂಡರು.
೧೯
ಬಳಿಕ ಕೋರಹನು ಸಮುದಾಯದವರೆಲ್ಲರನ್ನು ತಮಗೆದುರಾಗಿ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿದನು. ಆಗ ಸರ್ವೇಶ್ವರನ ತೇಜಸ್ಸು ಸಮುದಾಯದವರೆಲ್ಲರಿಗೆ ಹೊಳೆಯಿತು.
೨೦
ಮೋಶೆ - ಆರೋನರಿಗೆ ಸರ್ವೇಶ್ವರ,
೨೧
“ನೀವು ಈ ಸಮುದಾಯದವರಿಂದ ಪ್ರತ್ಯೇಕವಾಗಿ ನಿಲ್ಲಿ; ನಾನು ಇವರನ್ನು ಒಂದು ಕ್ಷಣಮಾತ್ರದಲ್ಲಿ ಭಸ್ಮ ಮಾಡಿಬಿಡುತ್ತೇನೆ,” ಎಂದರು.
೨೨
ಮೋಶೆ ಮತ್ತು ಆರೋನರು ಅಡ್ಡಬಿದ್ದು, “ದೇವರೇ, ಸರ್ವ ದೇಹಾತ್ಮಗಳಿಗೆ ದೇವರಾಗಿರುವವರೇ, ಒಬ್ಬನೇ ಒಬ್ಬನು ಪಾಪ ಮಾಡಿರುವಲ್ಲಿ ನೀವು ಸಮುದಾಯದ ಎಲ್ಲರ ಮೇಲೆ ಕೋಪಗೊಳ್ಳಬಹುದೆ?” ಎಂದು ಭಿನ್ನವಿಸಿದರು.
೨೩
ಆಗ ಸರ್ವೇಶ್ವರ ಮೋಶೆಗೆ,
೨೪
“ಇಸ್ರಯೇಲ್ ಸಮಾಜದವರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು ಅವರಿಗೆ ಆಜ್ಞಾಪಿಸು,” ಎಂದರು.
೨೫
ಆಗ ಮೋಶೆ ಎದ್ದು ದಾತಾನ್ - ಅಬೀರಾಮರ ಬಳಿಗೆ ಹೋದನು. ಇಸ್ರಯೇಲರ ಹಿರಿಯರು ಅವನ ಹಿಂದೆ ಹೋದರು.
೨೬
ಇಸ್ರಯೇಲ್ ಸಮಾಜದವರಿಗೆ ಅವನು, “ಈ ದುಷ್ಟರ ಡೇರೆಗಳ ಬಳಿಯಿರದೆ ದೂರಹೋಗಿ. ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬೇಡಿ. ಇವರ ದೋಷಗಳಿಗೆ ಬರಲಿರುವ ಶಿಕ್ಷೆ ನಿಮ್ಮನ್ನು ಕೊಚ್ಚಿಕೊಂಡು ಹೋದೀತು,” ಎಂದು ಎಚ್ಚರಿಸಿದನು.
೨೭
ಆದಕಾರಣ ಅವರೆಲ್ಲ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ಬೇರೆಹೋದರು. ದಾತಾನ್, ಅಬೀರಾಮ ಮತ್ತು ಅವರ ಮಡದಿ ಮಕ್ಕಳು, ಬಂಧುಬಳಗದವರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು.
೨೮
ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲ ನನ್ನ ಸ್ವಂತ ಆಲೋಚನೆಯಿಂದ ಆಗಲಿಲ್ಲ, ಸರ್ವೇಶ್ವರನೇ ಇವುಗಳನ್ನು ನಡೆಸುವುದಕ್ಕೆ ನನ್ನನ್ನು ಕಳಿಸಿದ್ದಾರೆಂದು ನೀವೇ ತಿಳಿದುಕೊಳ್ಳಬಹುದು.
೨೯
ಅದು ಹೇಗೆಂದರೆ - ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಅಥವಾ ಎಲ್ಲರಿಗೂ ಸಂಭವಿಸುವ ಗತಿ ಇವರಿಗೆ ಒದಗಿದರೆ ಸರ್ವೇಶ್ವರ ನನ್ನನ್ನು ಕಳಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
೩೦
ಬದಲಿಗೆ ಸರ್ವೇಶ್ವರ ಇವರಿಗಾಗಿ ಆಶ್ಚರ್ಯಕರವಾದ ಶಿಕ್ಷೆಯನ್ನು ಕಲ್ಪಿಸಿ ಅಂದರೆ ಭೂಮಿ ಬಾಯ್ದೆರೆದು ಇವರನ್ನು ಹಾಗೂ ಇವರಿಗಿರುವ ಸರ್ವಸ್ವವನ್ನು ನುಂಗಿಬಿಟ್ಟರೆ, ಇವರೆಲ್ಲರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಸರ್ವೇಶ್ವರನನ್ನು ಉಲ್ಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು,” ಎಂದು ಹೇಳಿದನು.
೩೧
ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಜನರ ಕೆಳಗಿದ್ದ ನೆಲವು ಸೀಳಿತು.
೩೨
ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸೇರಿದ ವ್ಯಕ್ತಿಗಳೆಲ್ಲರನ್ನೂ ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
೩೩
ಅವರು ಸಜೀವರಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಇಳಿದುಬಿಟ್ಟರು. ಭೂಮಿ ಅವರನ್ನು ಮುಚ್ಚಿಕೊಂಡಿತು.
೩೪
ಹೀಗೆ ಅವರು ಸಮುದಾಯದಿಂದ ನಾಶವಾದರು. ಅವರ ಸುತ್ತಲಿದ್ದ ಇಸ್ರಯೇಲರೆಲ್ಲರೂ ಸಾಯುವವರ ಹಾಹಾಕಾರವನ್ನು ಕೇಳಿ, “ಭೂಮಿ ನಮ್ಮನ್ನು ನುಂಗದಿರಲಿ” ಎಂದುಕೊಂಡು ಓಡಿಹೋದರು.
೩೫
ಸರ್ವೇಶ್ವರನ ಬಳಿಯಿಂದ ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.
೩೬
ಸರ್ವೇಶ್ವರ ಸ್ವಾಮಿ ಮೋಶೆಗೆ,
೩೭
“ಸುಟ್ಟುಹೋದವರ ನಡುವೆಯಿಂದ ಆ ಧೂಪಾರತಿಗಳನ್ನು ಎತ್ತಬೇಕೆಂದು ಮಹಾಯಾಜಕ ಆರೋನನ ಮಗ ಎಲ್ಲಾಜಾರನಿಗೆ ಆಜ್ಞಾಪಿಸು; ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು.
೩೮
ಆ ಧೂಪಾರತಿಗಳು ಸರ್ವೇಶ್ವರನ ಸನ್ನಿಧಿಗೆ ತರಲಾದವುಗಳು. ಈ ಕಾರಣ ಪವಿತ್ರವಾದುವು. ಆದುದರಿಂದ ಅವುಗಳನ್ನು ತಗಡುಗಳಾಗಿ ತಟ್ಟಿ ಬಲಿಪೀಠಕ್ಕೆ ಮುಚ್ಚಳವನ್ನಾಗಿ ಮಾಡಿಸು. ಹೀಗೆ ಅವು ಇಸ್ರಯೇಲರಿಗೆ ನೆನಪು ಹುಟ್ಟಿಸುವ ಗುರುತುಗಳಾಗುವುವು,” ಎಂದು ಹೇಳಿದರು.
೩೯
ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿದ ಅಪ್ಪಣೆಯ ಮೇರೆಗೆ ಯಾಜಕ ಎಲ್ಲಾಜಾರನು, ಸುಟ್ಟುಹೋದವರು ತಂದಿದ್ದ ಆ ಕಂಚಿನ ಧೂಪಾರತಿಗಳನ್ನು ತಗಡುಗಳನ್ನಾಗಿ ತಟ್ಟಿಸಿ ಬಲಿಪೀಠಕ್ಕೆ ಮುಚ್ಚಳವನ್ನು ಮಾಡಿಸಿದನು.
೪೦
ಆರೋನನ ಸಂತತಿಯವರಲ್ಲದೆ ಇತರರು ಸರ್ವೇಶ್ವರನ ಸನ್ನಿಧಿಗೆ ಬಂದು ಧೂಪವನ್ನು ಅರ್ಪಿಸಬಾರದು; ಅರ್ಪಿಸಿದರೆ ಕೋರಹನಿಗೂ ಅವನ ಪಂಗಡದವರಿಗೂ ಆದ ಗತಿಗೆ ಗುರಿಯಾಗುವರು ಎಂದು ಇಸ್ರಯೇಲರಿಗೆ ಎಚ್ಚರಿಕೆ ನೀಡುವ ಚಿನ್ಹೆಯಾಯಿತು.
೪೧
ಆದರೂ ಇಸ್ರಯೇಲ್ ಸಮುದಾಯದವರು ಮೋಶೆ ಮತ್ತು ಆರೋನರ ಮೇಲೆ ಗೊಣಗುಟ್ಟ ತೊಡಗಿದರು. ‘ಸರ್ವೇಶ್ವರನ ಜನರನ್ನು ಸಾಯಸಿದವರು ನೀವೇ’ ಎಂದು ಹೇಳುವವರಾದರು.
೪೨
ಸಮುದಾಯದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರ ವಿರುದ್ಧ ಪ್ರತಿಭಟಿಸಲು ಸಭೆ ಸೇರಿದರು. ಅವರು ದೇವದರ್ಶನದ ಗುಡಾರದತ್ತ ನೋಡಿದಾಗ, ಮೇಘವೊಂದು ಅದನ್ನು ಆವರಿಸಿತು ಮತ್ತು ಸರ್ವೇಶ್ವರನ ತೇಜಸ್ಸು ಹೊಳೆಯಿತು.
೪೩
ಮೋಶೆ - ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
೪೪
ಆಗ ಸರ್ವೇಶ್ವರ ಮೋಶೆಗೆ: “ನೀವಿಬ್ಬರು ಸಮುದಾಯದವರೊಂದಿಗೆ ಸೇರದೆ ಬೇರೆ ನಿಲ್ಲಬೇಕು. ಒಂದೇ ಕ್ಷಣದಲ್ಲಿ ನಾನು ಅವರನ್ನು ಭಸ್ಮ ಮಾಡಿಬಿಡುತ್ತೇನೆ,” ಎಂದರು. ಆಗ ಮೋಶೆ ಆರೋನರು ಸಾಷ್ಠಾಂಗವೆರಗಿದರು.
೪೫
***
೪೬
ಮೋಶೆ, ಆರೋನನನ್ನು ಉದ್ದೇಶಿಸಿ, “ಸರ್ವೇಶ್ವರನಿಗೆ ಕೋಪವುಂಟಾಗಿದೆ: ಈ ಜನರೊಳಗೆ ಘೋರ ವ್ಯಾಧಿಯೊಂದು ಪ್ರಾರಂಭವಾಗಿಬಿಟ್ಟಿದೆ. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಬಲಿಪೀಠದಿಂದ ಕೆಂಡಗಳನ್ನು ಇಟ್ಟು ಧೂಪ ಹಾಕಿ ಸಮುದಾಯದವರ ಬಳಿಗೆ ಬೇಗ ಹೋಗು; ಅವರ ಪರವಾಗಿ ದೋಷಪರಿಹಾರವನ್ನು ಮಾಡು,” ಎಂದು ಹೇಳಿದನು.
೪೭
ಮೋಶೆ ಹೇಳಿದಂತೆಯೇ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮುದಾಯದವರ ಬಳಿಗೆ ಓಡಿಬಂದಾಗ ಆ ಘೋರವ್ಯಾಧಿ ಜನರಲ್ಲಿ ಹರಡಿಕೊಳ್ಳುತ್ತಲಿತ್ತು. ಅವನು ಧೂಪಹಾಕಿ ಆ ಜನರ ಪರವಾಗಿ ದೋಷಪರಿಹಾರ ಮಾಡಿದನು;
೪೮
ಸತ್ತವರಿಗೂ ಹಾಗೂ ಬದುಕುವವರಿಗೂ ನಡುವೆ ಅವನು ನಿಂತನು. ಆ ವಿಪತ್ತು ಶಮನವಾಯಿತು.
೪೯
ಕೋರಹನನ್ನು ಸೇರಿಕೊಂಡು ಸತ್ತವರಲ್ಲದೆ ಆ ವಿಪತ್ತಿನಿಂದಲೇ ಸತ್ತವರ ಸಂಖ್ಯೆ 14,700:
೫೦
ವಿಪತ್ತು ನಿಂತಮೇಲೆ ಆರೋನನು ದೇವದರ್ಶನದ ಗುಡಾರದ ಬಳಿಯಿದ್ದ ಮೋಶೆಯ ಬಳಿಗೆ ಹಿಂದಿರುಗಿದನು.
ಸಂಖ್ಯಾಕಾಂಡ ೧೬:1
ಸಂಖ್ಯಾಕಾಂಡ ೧೬:2
ಸಂಖ್ಯಾಕಾಂಡ ೧೬:3
ಸಂಖ್ಯಾಕಾಂಡ ೧೬:4
ಸಂಖ್ಯಾಕಾಂಡ ೧೬:5
ಸಂಖ್ಯಾಕಾಂಡ ೧೬:6
ಸಂಖ್ಯಾಕಾಂಡ ೧೬:7
ಸಂಖ್ಯಾಕಾಂಡ ೧೬:8
ಸಂಖ್ಯಾಕಾಂಡ ೧೬:9
ಸಂಖ್ಯಾಕಾಂಡ ೧೬:10
ಸಂಖ್ಯಾಕಾಂಡ ೧೬:11
ಸಂಖ್ಯಾಕಾಂಡ ೧೬:12
ಸಂಖ್ಯಾಕಾಂಡ ೧೬:13
ಸಂಖ್ಯಾಕಾಂಡ ೧೬:14
ಸಂಖ್ಯಾಕಾಂಡ ೧೬:15
ಸಂಖ್ಯಾಕಾಂಡ ೧೬:16
ಸಂಖ್ಯಾಕಾಂಡ ೧೬:17
ಸಂಖ್ಯಾಕಾಂಡ ೧೬:18
ಸಂಖ್ಯಾಕಾಂಡ ೧೬:19
ಸಂಖ್ಯಾಕಾಂಡ ೧೬:20
ಸಂಖ್ಯಾಕಾಂಡ ೧೬:21
ಸಂಖ್ಯಾಕಾಂಡ ೧೬:22
ಸಂಖ್ಯಾಕಾಂಡ ೧೬:23
ಸಂಖ್ಯಾಕಾಂಡ ೧೬:24
ಸಂಖ್ಯಾಕಾಂಡ ೧೬:25
ಸಂಖ್ಯಾಕಾಂಡ ೧೬:26
ಸಂಖ್ಯಾಕಾಂಡ ೧೬:27
ಸಂಖ್ಯಾಕಾಂಡ ೧೬:28
ಸಂಖ್ಯಾಕಾಂಡ ೧೬:29
ಸಂಖ್ಯಾಕಾಂಡ ೧೬:30
ಸಂಖ್ಯಾಕಾಂಡ ೧೬:31
ಸಂಖ್ಯಾಕಾಂಡ ೧೬:32
ಸಂಖ್ಯಾಕಾಂಡ ೧೬:33
ಸಂಖ್ಯಾಕಾಂಡ ೧೬:34
ಸಂಖ್ಯಾಕಾಂಡ ೧೬:35
ಸಂಖ್ಯಾಕಾಂಡ ೧೬:36
ಸಂಖ್ಯಾಕಾಂಡ ೧೬:37
ಸಂಖ್ಯಾಕಾಂಡ ೧೬:38
ಸಂಖ್ಯಾಕಾಂಡ ೧೬:39
ಸಂಖ್ಯಾಕಾಂಡ ೧೬:40
ಸಂಖ್ಯಾಕಾಂಡ ೧೬:41
ಸಂಖ್ಯಾಕಾಂಡ ೧೬:42
ಸಂಖ್ಯಾಕಾಂಡ ೧೬:43
ಸಂಖ್ಯಾಕಾಂಡ ೧೬:44
ಸಂಖ್ಯಾಕಾಂಡ ೧೬:45
ಸಂಖ್ಯಾಕಾಂಡ ೧೬:46
ಸಂಖ್ಯಾಕಾಂಡ ೧೬:47
ಸಂಖ್ಯಾಕಾಂಡ ೧೬:48
ಸಂಖ್ಯಾಕಾಂಡ ೧೬:49
ಸಂಖ್ಯಾಕಾಂಡ ೧೬:50
ಸಂಖ್ಯಾಕಾಂಡ 1 / ಸಂಖ್ಯಾ 1
ಸಂಖ್ಯಾಕಾಂಡ 2 / ಸಂಖ್ಯಾ 2
ಸಂಖ್ಯಾಕಾಂಡ 3 / ಸಂಖ್ಯಾ 3
ಸಂಖ್ಯಾಕಾಂಡ 4 / ಸಂಖ್ಯಾ 4
ಸಂಖ್ಯಾಕಾಂಡ 5 / ಸಂಖ್ಯಾ 5
ಸಂಖ್ಯಾಕಾಂಡ 6 / ಸಂಖ್ಯಾ 6
ಸಂಖ್ಯಾಕಾಂಡ 7 / ಸಂಖ್ಯಾ 7
ಸಂಖ್ಯಾಕಾಂಡ 8 / ಸಂಖ್ಯಾ 8
ಸಂಖ್ಯಾಕಾಂಡ 9 / ಸಂಖ್ಯಾ 9
ಸಂಖ್ಯಾಕಾಂಡ 10 / ಸಂಖ್ಯಾ 10
ಸಂಖ್ಯಾಕಾಂಡ 11 / ಸಂಖ್ಯಾ 11
ಸಂಖ್ಯಾಕಾಂಡ 12 / ಸಂಖ್ಯಾ 12
ಸಂಖ್ಯಾಕಾಂಡ 13 / ಸಂಖ್ಯಾ 13
ಸಂಖ್ಯಾಕಾಂಡ 14 / ಸಂಖ್ಯಾ 14
ಸಂಖ್ಯಾಕಾಂಡ 15 / ಸಂಖ್ಯಾ 15
ಸಂಖ್ಯಾಕಾಂಡ 16 / ಸಂಖ್ಯಾ 16
ಸಂಖ್ಯಾಕಾಂಡ 17 / ಸಂಖ್ಯಾ 17
ಸಂಖ್ಯಾಕಾಂಡ 18 / ಸಂಖ್ಯಾ 18
ಸಂಖ್ಯಾಕಾಂಡ 19 / ಸಂಖ್ಯಾ 19
ಸಂಖ್ಯಾಕಾಂಡ 20 / ಸಂಖ್ಯಾ 20
ಸಂಖ್ಯಾಕಾಂಡ 21 / ಸಂಖ್ಯಾ 21
ಸಂಖ್ಯಾಕಾಂಡ 22 / ಸಂಖ್ಯಾ 22
ಸಂಖ್ಯಾಕಾಂಡ 23 / ಸಂಖ್ಯಾ 23
ಸಂಖ್ಯಾಕಾಂಡ 24 / ಸಂಖ್ಯಾ 24
ಸಂಖ್ಯಾಕಾಂಡ 25 / ಸಂಖ್ಯಾ 25
ಸಂಖ್ಯಾಕಾಂಡ 26 / ಸಂಖ್ಯಾ 26
ಸಂಖ್ಯಾಕಾಂಡ 27 / ಸಂಖ್ಯಾ 27
ಸಂಖ್ಯಾಕಾಂಡ 28 / ಸಂಖ್ಯಾ 28
ಸಂಖ್ಯಾಕಾಂಡ 29 / ಸಂಖ್ಯಾ 29
ಸಂಖ್ಯಾಕಾಂಡ 30 / ಸಂಖ್ಯಾ 30
ಸಂಖ್ಯಾಕಾಂಡ 31 / ಸಂಖ್ಯಾ 31
ಸಂಖ್ಯಾಕಾಂಡ 32 / ಸಂಖ್ಯಾ 32
ಸಂಖ್ಯಾಕಾಂಡ 33 / ಸಂಖ್ಯಾ 33
ಸಂಖ್ಯಾಕಾಂಡ 34 / ಸಂಖ್ಯಾ 34
ಸಂಖ್ಯಾಕಾಂಡ 35 / ಸಂಖ್ಯಾ 35
ಸಂಖ್ಯಾಕಾಂಡ 36 / ಸಂಖ್ಯಾ 36