A A A A A
×

ಕನ್ನಡ ಬೈಬಲ್ (KNCL) 2016

ಸಂಖ್ಯಾಕಾಂಡ ೧೦

ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಆಜ್ಞಾಪಿಸಿದರು:
“ನೀನು ಬೆಳ್ಳಿಯ ತಗಡಿನಿಂದ ಎರಡು ಕಹಳೆಗಳನ್ನು ಮಾಡಿಸು. ಜನರನ್ನು ಸಭೆಸೇರಿಸುವುದಕ್ಕೂ ಹಾಗೂ ದಂಡನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸು.
ಅವೆರಡನ್ನೂ ನೀನು ಊದಿಸುವಾಗ ಜನರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.
ಒಂದನ್ನು ಮಾತ್ರ ಊದಿಸಿದಾಗ ಇಸ್ರಯೇಲರಲ್ಲಿ ಸಹಸ್ರಾಧಿಪತಿಗಳಾದ ಮುಖ್ಯಸ್ಥರು ನಿನ್ನ ಬಳಿಗೆ ಕೂಡಿಬರಬೇಕು.
ಆರ್ಭಟವಾಗಿ ಮೊಳಗಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.
ಎರಡನೆಯ ಸಾರಿ ಆರ್ಭಟವಾಗಿ ಮೊಳಗಿಸಿದಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣ ಹೊರಡಬೇಕಾದಾಗ ಆರ್ಭಟವಾಗಿಯೇ ಮೊಳಗಿಸಬೇಕು.
ಜನರನ್ನು ಸಭೆಸೇರಿಸಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಮೊಳಗಿಸಬೇಕಾಗಿಲ್ಲ.
ಆರೋನನ ವಂಶಸ್ಥರಾದ ಯಾಜಕರೇ ಆ ಕಹಳೆಗಳನ್ನು ಊದಬೇಕು. “ನಿಮಗೂ ನಿಮ್ಮ ಸಂತತಿಯವರಿಗೂ ಇದು ಶಾಶ್ವತ ನಿಯಮವಾಗಿರಲಿ.
ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಪೀಡಿಸುವ ಶತ್ರುಗಳ ಮೇಲೆ ಯುದ್ಧಕ್ಕೆ ಹೊರಡುವಾಗ ಆ ಕಹಳೆಗಳನ್ನು ಆರ್ಭಟವಾಗಿ ಮೊಳಗಿಸಬೇಕು. ಆಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ನೆನಪಿಗೆ ತಂದುಕೊಂಡು ಶತ್ರುಗಳ ಕೈಯಿಂದ ನಿಮ್ಮನ್ನು ಬಿಡಿಸುವರು.
೧೦
ಇದಲ್ಲದೆ, ಉತ್ಸವ ದಿನಗಳಲ್ಲೂ ಹಬ್ಬ ದಿನಗಳಲ್ಲೂ ಅಮಾವಾಸ್ಯೆಯಲ್ಲೂ ಮತ್ತು ದಹನಬಲಿಗಳನ್ನೂ ಸಮಾಧಾನ ಬಲಿಗಳನ್ನೂ ಅರ್ಪಿಸುವಾಗಲೂ ಆ ಕಹಳೆಗಳನ್ನು ಮೊಳಗಿಸಬೇಕು. ಆ ಧ್ವನಿ ನಿಮ್ಮನ್ನು ನಿಮ್ಮ ದೇವರ ನೆನಪಿಗೆ ತರಲು ನೆರವಾಗುವುದು. ನಾನೇ ನಿಮ್ಮ ದೇವರಾದ ಸರ್ವೇಶ್ವರ.”
೧೧
ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.
೧೨
ಆದ್ದರಿಂದ ಇಸ್ರಯೇಲರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣ ಮಾಡಿದರು. ಬಳಿಕ ಆ ಮೇಘ ಪಾರಾನ್ ಮರುಭೂಮಿಯಲ್ಲಿ ನಿಂತಿತು.
೧೩
ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದ ಕ್ರಮಾನುಸಾರ ದಂಡುಗಳು ಪ್ರಯಾಣಮಾಡಿದ್ದು ಇದೇ ಮೊದಲನಯ ಸಾರಿ.
೧೪
ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿದ್ದವನು ಅಮ್ಮೀನಾದಾಬನ ಮಗ ನಹಶೋನನು.
೧೫
ಇಸ್ಸಾಕಾರ್ ಕುಲಕ್ಕೆ ಸೇನಾನಾಯಕನಾಗಿದ್ದವನು ಚೂವಾರನ ಮಗ ನೆತನೇಲನು.
೧೬
ಜೆಬುಲೂನ್ ಕುಲಕ್ಕೆ ಹೇಲೋನನ ಮಗ ಎಲೀಯಾಬನು ಸೇನಾನಾಯಕನಾಗಿದ್ದನು.
೧೭
ಬಳಿಕ ದೇವದರ್ಶನದ ಗುಡಾರವನ್ನು ಇಳಿಸಿದ್ದೇ ಗೇರ್ಷೋನ್ಯರೂ ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.
೧೮
ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಶೆದೇಯೂರನ ಮಗ ಎಲೀಚೂರನು.
೧೯
ಸಿಮೆಯೋನ್ ಕುಲದ ಸೇನಾನಾಯಕನು ಚೂರಿಷದ್ದೈಯನ ಮಗ ಶೆಲುಮೀಯೇಲನು.
೨೦
ಗಾದ್ ಕುಲದ ಸೇನಾನಾಯಕ ರೇಗೂವೇಲನ ಮಗ ಎಲ್ಯಾಸಾಫನು.
೨೧
ಅವರ ಹಿಂದೆ ಕೆಹಾತ್ಯರು ದೇವಸ್ಥಾನದ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಮಿಕ್ಕ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.
೨೨
ತದನಂತರ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರ ಸೇನಾನಾಯಕ ಅಮ್ಮೀಹೂದನ ಮಗ ಎಲೀಷಾಮನು.
೨೩
ಮನಸ್ಸೆ ಕುಲದ ಸೇನಾನಾಯಕ ಪೆದಾಚೂರನ ಮಗ ಗಮ್ಲೀಯೇಲನು.
೨೪
ಬೆನ್ಯಾಮೀನ್ ಕುಲದ ಸೇನಾನಾಯಕ ಗಿದ್ಯೋನಿಯ ಮಗ ಅಬೀದಾನನು.
೨೫
ಈ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕ ಅಮ್ಮೀಷದ್ದೈಯನ ಮಗ ಅಹೀಗೆಜೆರನು.
೨೬
ಆಶೇರ್ ಕುಲಕ್ಕೆ ಸೇನಾನಾಯಕ ಒಕ್ರಾನನ ಮಗ ಪಗೀಯೇಲನು.
೨೭
ನಫ್ತಾಲಿ ಕುಲಕ್ಕೆ ಸೇನಾನಾಯಕ ಏನಾನನ ಮಗ ಅಹೀರನು.
೨೮
ಈ ಕ್ರಮದಲ್ಲಿ ಇಸ್ರಯೇಲರು ಸೈನ್ಯ ಸೈನ್ಯವಾಗಿ ಹೊರಟು ಪ್ರಯಾಣ ಮಾಡಿದರು.
೨೯
ಮೋಶೆ ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗ ಹೋಬಾಬನಿಗೆ, “ಸರ್ವೇಶ್ವರ ನಮಗೆ ಕೊಡುವುದಾಗಿ ವಾಗ್ದಾನ ಮಾಡಿದ ನಾಡಿಗೆ ನಾವು ಪ್ರಯಾಣ ಮಾಡುತ್ತಿದ್ದೇವೆ. ಇಸ್ರಯೇಲರಿಗೆ ಒಳಿತನ್ನೇ ಮಾಡುವುದಾಗಿ ಸರ್ವೇಶ್ವರ ಸ್ವಾಮಿಯೇ ಹೇಳಿದ್ದಾರೆ. ಆದ್ದರಿಂದ ನೀನೂ ನಮ್ಮ ಸಂಗಡ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು,” ಎಂದು ಹೇಳಿದ.
೩೦
ಅದಕ್ಕೆ ಅವನು, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ,” ಎಂದು ಉತ್ತರಿಸಿದ.
೩೧
ಅದಕ್ಕೆ ಮೋಶೆ, “ನಮ್ಮನ್ನು ಬಿಟ್ಟುಹೋಗಬೇಡವೆಂದು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ತಿಳಿದಿವೆ.
೩೨
ಆದ್ದರಿಂದ ನೀನು ನಮಗೆ ಕಣ್ಣಾಗಿರಬೇಕು. ನೀನು ನಮ್ಮ ಸಂಗಡ ಬಂದರೆ ಸರ್ವೇಶ್ವರ ನಮಗೆ ಮಾಡುವ ಒಳಿತೆಲ್ಲವನ್ನು ನಿನ್ನೊಂದಿಗೆ ಹಂಚಿಕೊಳ್ಳುತ್ತೇವೆ,” ಎಂದು ಉತ್ತರಕೊಟ್ಟನು.
೩೩
ಅವರು ಸರ್ವೇಶ್ವರನ ಬೆಟ್ಟವನ್ನು ಬಿಟ್ಟು ಮೂರುದಿನದ ಪ್ರಯಾಣದಷ್ಟು ದೂರಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡಲು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರಿಗೆ ಮುಂದಾಗಿ ಹೋಗುತ್ತಿತ್ತು.
೩೪
ಅವರು ಪಾಳೆಯದಿಂದ ಹೊರಡುವಾಗ ಹಗಲಲ್ಲಿ ಸರ್ವೇಶ್ವರನ ಮೇಘ ಅವರ ಮೇಲೆ ಇರುತ್ತಿತ್ತು.
೩೫
ಸರ್ವೇಶ್ವರನ ಮಂಜೂಷ ಹೊರಡುವಾಗ ಮೋಶೆ, “ಹೊರಡೋಣವಾಗಲಿ ಸರ್ವೇಶ್ವರಾ, ಎಚ್ಚೆತ್ತು ಚದರಿಹೋಗಲಿ ನಿಮ್ಮ ಶತ್ರುಗಳು ಬೆಂಗೊಟ್ಟು ಓಡಿಹೋಗಲಿ ನಿಮ್ಮ ಹಗೆಗಾರರು” ಎಂದು ಹೇಳುತ್ತಿದ್ದನು.
೩೬
ಆ ಮಂಜೂಷ ನಿಂತಾಗ: “ಮರಳಿ ಬರೋಣವಾಗಲಿ, ಸರ್ವೇಶ್ವರಾ ಸಹಸ್ರಾರು ಇಸ್ರಯೇಲ್ ಕುಟುಂಬಗಳ ಬಳಿಗೆ,” ಎಂದು ಹೇಳುತ್ತಿದ್ದನು.
ಸಂಖ್ಯಾಕಾಂಡ ೧೦:1
ಸಂಖ್ಯಾಕಾಂಡ ೧೦:2
ಸಂಖ್ಯಾಕಾಂಡ ೧೦:3
ಸಂಖ್ಯಾಕಾಂಡ ೧೦:4
ಸಂಖ್ಯಾಕಾಂಡ ೧೦:5
ಸಂಖ್ಯಾಕಾಂಡ ೧೦:6
ಸಂಖ್ಯಾಕಾಂಡ ೧೦:7
ಸಂಖ್ಯಾಕಾಂಡ ೧೦:8
ಸಂಖ್ಯಾಕಾಂಡ ೧೦:9
ಸಂಖ್ಯಾಕಾಂಡ ೧೦:10
ಸಂಖ್ಯಾಕಾಂಡ ೧೦:11
ಸಂಖ್ಯಾಕಾಂಡ ೧೦:12
ಸಂಖ್ಯಾಕಾಂಡ ೧೦:13
ಸಂಖ್ಯಾಕಾಂಡ ೧೦:14
ಸಂಖ್ಯಾಕಾಂಡ ೧೦:15
ಸಂಖ್ಯಾಕಾಂಡ ೧೦:16
ಸಂಖ್ಯಾಕಾಂಡ ೧೦:17
ಸಂಖ್ಯಾಕಾಂಡ ೧೦:18
ಸಂಖ್ಯಾಕಾಂಡ ೧೦:19
ಸಂಖ್ಯಾಕಾಂಡ ೧೦:20
ಸಂಖ್ಯಾಕಾಂಡ ೧೦:21
ಸಂಖ್ಯಾಕಾಂಡ ೧೦:22
ಸಂಖ್ಯಾಕಾಂಡ ೧೦:23
ಸಂಖ್ಯಾಕಾಂಡ ೧೦:24
ಸಂಖ್ಯಾಕಾಂಡ ೧೦:25
ಸಂಖ್ಯಾಕಾಂಡ ೧೦:26
ಸಂಖ್ಯಾಕಾಂಡ ೧೦:27
ಸಂಖ್ಯಾಕಾಂಡ ೧೦:28
ಸಂಖ್ಯಾಕಾಂಡ ೧೦:29
ಸಂಖ್ಯಾಕಾಂಡ ೧೦:30
ಸಂಖ್ಯಾಕಾಂಡ ೧೦:31
ಸಂಖ್ಯಾಕಾಂಡ ೧೦:32
ಸಂಖ್ಯಾಕಾಂಡ ೧೦:33
ಸಂಖ್ಯಾಕಾಂಡ ೧೦:34
ಸಂಖ್ಯಾಕಾಂಡ ೧೦:35
ಸಂಖ್ಯಾಕಾಂಡ ೧೦:36
ಸಂಖ್ಯಾಕಾಂಡ 1 / ಸಂಖ್ಯಾ 1
ಸಂಖ್ಯಾಕಾಂಡ 2 / ಸಂಖ್ಯಾ 2
ಸಂಖ್ಯಾಕಾಂಡ 3 / ಸಂಖ್ಯಾ 3
ಸಂಖ್ಯಾಕಾಂಡ 4 / ಸಂಖ್ಯಾ 4
ಸಂಖ್ಯಾಕಾಂಡ 5 / ಸಂಖ್ಯಾ 5
ಸಂಖ್ಯಾಕಾಂಡ 6 / ಸಂಖ್ಯಾ 6
ಸಂಖ್ಯಾಕಾಂಡ 7 / ಸಂಖ್ಯಾ 7
ಸಂಖ್ಯಾಕಾಂಡ 8 / ಸಂಖ್ಯಾ 8
ಸಂಖ್ಯಾಕಾಂಡ 9 / ಸಂಖ್ಯಾ 9
ಸಂಖ್ಯಾಕಾಂಡ 10 / ಸಂಖ್ಯಾ 10
ಸಂಖ್ಯಾಕಾಂಡ 11 / ಸಂಖ್ಯಾ 11
ಸಂಖ್ಯಾಕಾಂಡ 12 / ಸಂಖ್ಯಾ 12
ಸಂಖ್ಯಾಕಾಂಡ 13 / ಸಂಖ್ಯಾ 13
ಸಂಖ್ಯಾಕಾಂಡ 14 / ಸಂಖ್ಯಾ 14
ಸಂಖ್ಯಾಕಾಂಡ 15 / ಸಂಖ್ಯಾ 15
ಸಂಖ್ಯಾಕಾಂಡ 16 / ಸಂಖ್ಯಾ 16
ಸಂಖ್ಯಾಕಾಂಡ 17 / ಸಂಖ್ಯಾ 17
ಸಂಖ್ಯಾಕಾಂಡ 18 / ಸಂಖ್ಯಾ 18
ಸಂಖ್ಯಾಕಾಂಡ 19 / ಸಂಖ್ಯಾ 19
ಸಂಖ್ಯಾಕಾಂಡ 20 / ಸಂಖ್ಯಾ 20
ಸಂಖ್ಯಾಕಾಂಡ 21 / ಸಂಖ್ಯಾ 21
ಸಂಖ್ಯಾಕಾಂಡ 22 / ಸಂಖ್ಯಾ 22
ಸಂಖ್ಯಾಕಾಂಡ 23 / ಸಂಖ್ಯಾ 23
ಸಂಖ್ಯಾಕಾಂಡ 24 / ಸಂಖ್ಯಾ 24
ಸಂಖ್ಯಾಕಾಂಡ 25 / ಸಂಖ್ಯಾ 25
ಸಂಖ್ಯಾಕಾಂಡ 26 / ಸಂಖ್ಯಾ 26
ಸಂಖ್ಯಾಕಾಂಡ 27 / ಸಂಖ್ಯಾ 27
ಸಂಖ್ಯಾಕಾಂಡ 28 / ಸಂಖ್ಯಾ 28
ಸಂಖ್ಯಾಕಾಂಡ 29 / ಸಂಖ್ಯಾ 29
ಸಂಖ್ಯಾಕಾಂಡ 30 / ಸಂಖ್ಯಾ 30
ಸಂಖ್ಯಾಕಾಂಡ 31 / ಸಂಖ್ಯಾ 31
ಸಂಖ್ಯಾಕಾಂಡ 32 / ಸಂಖ್ಯಾ 32
ಸಂಖ್ಯಾಕಾಂಡ 33 / ಸಂಖ್ಯಾ 33
ಸಂಖ್ಯಾಕಾಂಡ 34 / ಸಂಖ್ಯಾ 34
ಸಂಖ್ಯಾಕಾಂಡ 35 / ಸಂಖ್ಯಾ 35
ಸಂಖ್ಯಾಕಾಂಡ 36 / ಸಂಖ್ಯಾ 36