A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಜೆಕರ್ಯನ ೧೪ಇಗೋ, ಸರ್ವೇಶ್ವರ ನೇಮಿಸಿದ ದಿನ ಬರುತ್ತಿದೆ. ಆಗ ಜೆರುಸಲೇಮಿನ ಆಸ್ತಿಪಾಸ್ತಿ ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ಅವರ ಕಣ್ಮುಂದೆ ಪಾಲುಪಾಲಾಗುವುದು.
ಜೆರುಸಲೇಮಿಗೆ ಎದುರಾಗಿ ಹೋರಾಡಲು ಅನ್ಯರಾಷ್ಟ್ರಗಳನ್ನು ಒಂದುಗೂಡಿಸುವೆನು. ಅವು ಆ ನಗರವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಿ, ಹೆಂಗಸರ ಮೇಲೆ ಅತ್ಯಾಚಾರವೆಸಗುವರು. ಅರ್ಧಕ್ಕೆ ಅರ್ಧ ಜನ ಸೆರೆಹೋಗುವರು. ಮಿಕ್ಕವರು ಅಲ್ಲೇ ಸುರಕ್ಷಿತವಾಗಿರುವರು.
ಅನಂತರ ಪೂರ್ವಕಾಲದಲ್ಲಿ ನಡೆದಂತೆ, ಸರ್ವೇಶ್ವರ ಹೊರಟುಬಂದು ಆ ರಾಷ್ಟ್ರಗಳಿಗೆ ವಿರುದ್ಧವಾಗಿ ಪ್ರತಿಭಟಿಸುವರು.
ಅವರ ಪಾದಗಳು ಜೆರುಸಲೇಮಿಗೆ ಪೂರ್ವಕ್ಕಿರುವ ಓಲಿವ್ ಗುಡ್ಡದ ಮೇಲೆ ನಿಲ್ಲುವುದು. ಆ ಗುಡ್ಡವು ಇಬ್ಭಾಗವಾಗಿ ಪೂರ್ವಪಶ್ಚಿಮದ ಉದ್ದಕ್ಕೂ ಇನ್ನರ್ಧ ಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು.
ನೀವು ಆ ಗುಡ್ಡಗಳ ನಡುವೆ ಉಂಟಾಗುವ ಕಣಿವೆಯ ಮೂಲಕ ಪಲಾಯನಗೈಯುವಿರಿ. ಆ ಕಣಿವೆ ಆಚೆಲಿನವರೆಗೆ ಹಬ್ಬಿರುವುದು. ಜುದೇಯದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪವಾದಾಗ ನೀವು ಮಾಡಿದಂತೆ ಪಲಾಯನ ಗೈಯುವಿರಿ. ಆಗ ನನ್ನ ದೇವರಾದ ಸರ್ವೇಶ್ವರ ತಮ್ಮ ದೂತರ ಸಮೇತ ಬರುವರು.
ಆ ದಿನ ಬಂದಾಗ ಚಳಿಯಾಗಲೀ ಮಂಜಾಗಲೀ ಇರದು. ಕತ್ತಲು ಕವಿಯದು.
ಹಗಲಿರುಳು ಎನ್ನದೆ ನಿರಂತರವೂ ಬೆಳಕಾಗುವುದು. ಸಂಜೆಯು ಸಹ ಪ್ರಾಕಾಶಮಯವಾಗಿರುವುದು. ಆದರೆ ಇದು ಯಾವಾಗ ಸಂಭವಿಸುವುದೆಂಬುದು ಸರ್ವೇಶ್ವರಸ್ವಾಮಿಗೆ ಮಾತ್ರ ತಿಳಿದಿರುವುದು.
ಆ ದಿನ ಬಂದಾಗ ಜೀವಜಲವು ಜೆರುಸಲೇಮಿನಿಂದ ಹರಿಯುವುದು. ಅದರ ಅರ್ಧಭಾಗ ಪೂರ್ವದ ಸಮುದ್ರಕ್ಕೂ ಇನ್ನರ್ಧಭಾಗ ಪಶ್ಚಿಮದ ಸಮುದ್ರಕ್ಕೂ ಹರಿಯುವುದು. ಮಳೆ, ಬೇಸಿಗೆ ಎನ್ನದೆ ಪ್ರವಾಹ ಹರಿಯುತ್ತಲೇ ಇರುವುದು.
ಆಗ ಸರ್ವೇಶ್ವರ ಜಗಕ್ಕೆಲ್ಲಾ ಅರಸರಾಗಿರುವರು. ಅವರೊಬ್ಬರೇ ದೇವರೆಂದು, ಅವರ ಹೆಸರೊಂದೇ ಸ್ತುತ್ಯಾರ್ಹವೆಂದು ಎಲ್ಲರಿಗೂ ತಿಳಿದಿರುವುದು.
೧೦
ಉತ್ತರದಲ್ಲಿರುವ ಗೆಬದಿಂದ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೆ ನಾಡೆಲ್ಲ ಸಮತಟ್ಟಾಗಿರುವುದು. ಜೆರುಸಲೇಮ್ ನಗರ ಮಾತ್ರ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಎತ್ತರವಾಗಿ ನಿಲ್ಲುವುದು. ಒಂದು ಕಡೆ ಬೆನ್ಯಾಮಿನ್ ಬಾಗಿಲಿನಿಂದ ಪೂರ್ವಕಾಲದ ಮೂಲೆಯ ಬಾಗಿಲ ತನಕವೂ ಹನನೇಲಿನ ಗೋಪುರದಿಂದ ಅರಸನ ದ್ರಾಕ್ಷೆಯ ಆಲೆಗಳ ಪರಿಯಂತವೂ ಹರಡಿರುವುದು.
೧೧
ಅದರಲ್ಲಿ ಜನರು ಸುರಕ್ಷಿತವಾಗಿ ವಾಸಿಸುವರು. ಇನ್ನು ಶಾಪಕ್ಕೆ ತುತ್ತಾಗದೆ ಜನರು ನೆಮ್ಮದಿಯಾಗಿ ನೆಲೆಗೊಂಡಿರುವರು.
೧೨
ಜೆರುಸಲೇಮಿನ ಮೇಲೆ ಮುತ್ತಿಗೆ ಹಾಕುವ ಸಕಲ ರಾಷ್ಟ್ರಗಳಿಗೂ ಸರ್ವೇಶ್ವರ ಭಯಂಕರ ವ್ಯಾಧಿಯೊಂದು ತಗಲುವಂತೆ ಮಾಡುವರು. ಜೀವದಿಂದಿರುವಾಗಲೇ ಜನರ ದೇಹ ಕೊಳೆತುಹೋಗುವುದು. ಕಣ್ಣು ಗುಣಿಯಲ್ಲೇ ಇಂಗಿಹೋಗುವುದು. ನಾಲಗೆ ಬಾಯಲ್ಲೇ ಬತ್ತಿಹೋಗುವುದು.
೧೩
ಸರ್ವೇಶ್ವರ ಆ ದಿನದಂದು ನಾಡಿನಲ್ಲಿ ಕೋಲಾಹಲವನ್ನೆಬ್ಬಿಸಲು, ಜನರು ಭಯಭೀತಿಗೆ ಒಳಗಾಗುವರು. ಒಬ್ಬರನ್ನೊಬ್ಬರು ತಡೆಹಿಡಿದು ಹೊಡೆದಾಡುವರು.
೧೪
ಜುದೇಯವು ಜೆರುಸಲೇಮಿನ ಪರವಾಗಿ ಯುದ್ಧಮಾಡುವುದು. ಸುತ್ತಮುತ್ತಲಿನ ರಾಷ್ಟ್ರಗಳ ಆಸ್ತಿಯನ್ನೆಲ್ಲಾ - ಬೆಳ್ಳಿಬಂಗಾರ, ಬಟ್ಟೆಬರೆಗಳನ್ನೆಲ್ಲಾ - ರಾಶಿರಾಶಿಯಾಗಿ ದೋಚಿಕೊಳ್ಳಲಾಗುವುದು.
೧೫
ನಾಡಿನ ಜನರಿಗೆ ತಗಲುವಂಥ ವ್ಯಾಧಿಯೇ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮುಂತಾದ ಪಾಳೆಯದಲ್ಲಿನ ಎಲ್ಲ ಪಶುಪ್ರಾಣಿಗಳಿಗೂ ತಗಲುವುದು.
೧೬
ಅನಂತರ ಜೆರುಸಲೇಮಿಗೆ ಮುತ್ತಿಗೆ ಹಾಕಿದ ರಾಷ್ಟ್ರಗಳಲ್ಲಿ ಅಳಿದುಳಿದವರೆಲ್ಲರು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ರಾಜಾಧಿರಾಜನೆಂದು ಆರಾಧಿಸುವುದಕ್ಕೂ ಪರ್ಣಕುಟೀರಗಳ ಹಬ್ಬವನ್ನು ಆಚರಿಸುವುದಕ್ಕೂ ಪ್ರತಿವರ್ಷ ಅಲ್ಲಿಗೆ ಬರುವರು.
೧೭
ಜನಾಂಗಗಳಲ್ಲಿ ಯಾರಾದರೂ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ರಾಜಾಧಿರಾಜನೆಂದು ಆರಾಧಿಸಲು ಬರದೆಹೋದರೆ, ಅವರಿಗೆ ಮಳೆಯೇ ಬರದು.
೧೮
ಈಜಿಪ್ಟಿನ ಮನೆತನದವರು ಬರದೆಹೋದರೆ, ಪರ್ಣಕುಟೀರಗಳ ಹಬ್ಬವನ್ನು ಆಚರಿಸಲು ಬರದ ರಾಷ್ಟ್ರಗಳಿಗೆ ಸರ್ವೇಶ್ವರ ವಿಧಿಸುವ ದಂಡನೆ ಅವರಿಗೂ ತಗಲುವುದು.
೧೯
ಈಜಿಪ್ಟಿಗೂ ಪರ್ಣಕುಟೀರಗಳ ಹಬ್ಬವನ್ನು ಆಚರಿಸಲು ಬರದ ಸಕಲ ರಾಷ್ಟ್ರಗಳಿಗೂ ಸಂಭವಿಸುವ ದಂಡನೆ ಇದೇ.
೨೦
ಆ ದಿನ ಬಂದಾಗ ‘ಸರ್ವೇಶ್ವರಸ್ವಾಮಿಗೆ ಸಮರ್ಪಿತ’ ಎಂಬ ಲಿಪಿಯು ಕುದುರೆಗಳ ಕತ್ತಿಗೆ ಕಟ್ಟಿರುವ ಗಂಟೆಗಳ ಮೇಲೆ ಕೆತ್ತನೆ ಮಾಡಲಾಗಿರುವುದು. ದೇವಾಲಯದ ಪಾತ್ರೆಗಳೆಲ್ಲವು ಬಲಿಪೀಠದ ಪಾತ್ರೆಗಳಷ್ಟೆ ಪವಿತ್ರವಾಗಿರುವುವು.
೨೧
ಜೆರುಸಲೇಮಿನಲ್ಲಿಯೂ ಜುದೇಯದಲ್ಲಿಯೂ ಇರುವ ಸಕಲ ಅಡಿಗೆಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಸಮರ್ಪಿತವಾಗಿರುವುವು. ಬಲಿಯನ್ನರ್ಪಿಸಲು ಬರುವವರೆಲ್ಲರೂ ಬಲಿಪಶುವಿನ ಮಾಂಸವನ್ನು ಬೇಯಿಸಲು ಈ ಪಾತ್ರೆಗಳನ್ನು ಬಳಸುವರು. ಆ ದಿನ ಬಂದಾಗ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಯಾವ ವರ್ತಕನೂ ಇರನು.ಜೆಕರ್ಯನ ೧೪:1
ಜೆಕರ್ಯನ ೧೪:2
ಜೆಕರ್ಯನ ೧೪:3
ಜೆಕರ್ಯನ ೧೪:4
ಜೆಕರ್ಯನ ೧೪:5
ಜೆಕರ್ಯನ ೧೪:6
ಜೆಕರ್ಯನ ೧೪:7
ಜೆಕರ್ಯನ ೧೪:8
ಜೆಕರ್ಯನ ೧೪:9
ಜೆಕರ್ಯನ ೧೪:10
ಜೆಕರ್ಯನ ೧೪:11
ಜೆಕರ್ಯನ ೧೪:12
ಜೆಕರ್ಯನ ೧೪:13
ಜೆಕರ್ಯನ ೧೪:14
ಜೆಕರ್ಯನ ೧೪:15
ಜೆಕರ್ಯನ ೧೪:16
ಜೆಕರ್ಯನ ೧೪:17
ಜೆಕರ್ಯನ ೧೪:18
ಜೆಕರ್ಯನ ೧೪:19
ಜೆಕರ್ಯನ ೧೪:20
ಜೆಕರ್ಯನ ೧೪:21


ಜೆಕರ್ಯನ 1 / ಜೆಕರ 1
ಜೆಕರ್ಯನ 2 / ಜೆಕರ 2
ಜೆಕರ್ಯನ 3 / ಜೆಕರ 3
ಜೆಕರ್ಯನ 4 / ಜೆಕರ 4
ಜೆಕರ್ಯನ 5 / ಜೆಕರ 5
ಜೆಕರ್ಯನ 6 / ಜೆಕರ 6
ಜೆಕರ್ಯನ 7 / ಜೆಕರ 7
ಜೆಕರ್ಯನ 8 / ಜೆಕರ 8
ಜೆಕರ್ಯನ 9 / ಜೆಕರ 9
ಜೆಕರ್ಯನ 10 / ಜೆಕರ 10
ಜೆಕರ್ಯನ 11 / ಜೆಕರ 11
ಜೆಕರ್ಯನ 12 / ಜೆಕರ 12
ಜೆಕರ್ಯನ 13 / ಜೆಕರ 13
ಜೆಕರ್ಯನ 14 / ಜೆಕರ 14