೧ |
ಪ್ರವಾದಿ ಹಬಕ್ಕೂಕನಿಗೆ ಪ್ರಕಟಿಸಲಾದ ದೈವೋಕ್ತಿ: |
೨ |
ನಾನೆಷ್ಟು ಕಾಲ ಸರ್ವೇಶ್ವರಾ, ಮೊರೆ ಇಡುತ್ತಿರಬೇಕು ನಿನಗೆ? ನೀನೆಷ್ಟು ಕಾಲ ಸುಮ್ಮನಿರುವೆ ಕಿವಿಗೊಡದೆ ನನಗೆ? ಹಿಂಸೆಯಾಗುತ್ತಿದೆಯೆಂದು ನಾ ಕೂಗಿದೆ; ಆದರೂ ನೀ ಸುಮ್ಮನಿರುವೆ, ರಕ್ಷಣೆ ನೀಡದೆ. |
೩ |
ಕೇಡನ್ನು ನಾ ನೋಡುವಂತೆ ಮಾಡಿದೆಯೇಕೆ? ಕಷ್ಟವನ್ನು ನಾ ಕಾಣುವಂತೆ ಮಾಡಿದೆಯೇಕೆ? ಹಿಂಸೆಬಾಧೆಗಳು ಇವೆ ನನ್ನ ಕಣ್ಣ ಮುಂದೆ. ಇಗೋ, ಜಗಳ ನಡೆಯುತಿದೆ, ವ್ಯಾಜ್ಯವೇಳುತಿದೆ. |
೪ |
ಜಡವಾಗಿಹೋಗಿದೆ ಧರ್ಮಶಾಸ್ತ್ರ; ಸ್ತಬ್ಧವಾಗಿದೆ ನ್ಯಾಯನೀತಿಯ ಚಕ್ರ. ಸಜ್ಜನರಿಗಿಂತ ದುರ್ಜನರ ಕೈ ಮೇಲಾಗಿದೆ; ಎಂದೇ ನ್ಯಾಯನೀತಿ ತಲೆಕೆಳಗಾಗಿದೆ. |
೫ |
ಆಗ ಸರ್ವೇಶ್ವರ ತಮ್ಮ ಜನರಿಗೆ ಇಂತೆಂದರು: “ಜನಾಂಗಗಳ ಮಧ್ಯೆ ನಡೆಯುವುದನ್ನು ನೋಡಿರಿ. ನೋಡಿದರೆ ಬೆಕ್ಕಸಬೆರಗಾಗುವಿರಿ. ನಿಮ್ಮ ಕಾಲದಲ್ಲೇ ನಾನೊಂದು ಕಾರ್ಯವನ್ನು ಮಾಡುವೆನು. ಅದನ್ನು ಕುರಿತು ನೀವು ಕಿವಿಯಾರೆ ಕೇಳಿದರೂ ನೀವು ನಂಬುವುದಿಲ್ಲ. |
೬ |
ಇಗೋ, ಬಾಬಿಲೋನಿನವರನ್ನು ಹುರಿದುಂಬಿಸಲಿದ್ದೇನೆ. ಅವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳು. ಅವರು ಜಗದ ಉದ್ದಗಲಕ್ಕೂ ಹರಡಿ ತಮ್ಮದಲ್ಲದ ನಾಡುಗಳನ್ನು ಆಕ್ರಮಿಸಿಕೊಳ್ಳಲು ಸಂಚರಿಸುವರು. |
೭ |
ಅವರು ಕ್ರೂರಿಗಳು, ಭಯಂಕರರು. ತಮ್ಮದೇ ಆದ ನ್ಯಾಯನೀತಿಯನ್ನು ರೂಪಿಸಿಕೊಳ್ಳುವಂಥವರು; ತಮ್ಮನ್ನು ತಾವೇ ಗೌರವಿಸಿಕೊಳ್ಳುವ ಅಹಂಭಾವಿಗಳು. |
೮ |
“ಅವರ ಕುದುರೆಗಳು ಚಿರತೆಗಳಿಗಿಂತ ಬಿರುಸು; ಹಸಿದ ತೋಳಗಳಿಗಿಂತ ಚುರುಕು. ಅವರ ರಾಹುತರು ರಭಸದಿಂದ ಹಾರಿಬರುವರು. ಬೇಟೆಯನ್ನು ಕಬಳಿಸಲು ಕಾತರದಿಂದ ಹಾರುವ ರಣಹದ್ದಿನಂತೆ ದೂರದಿಂದ ಧಾವಿಸಿಬರುವರು. |
೯ |
ಹಿಂಸೆ ಬಾಧೆಯನ್ನು ಗುರಿಯಾಗಿ ಇಟ್ಟುಕೊಂಡೇ ಮುನ್ನುಗ್ಗಿಬರುವರು. ಮರಳಿನ ಕಣಗಳಂತೆ ಲೆಕ್ಕವಿಲ್ಲದಷ್ಟು ಜನರನ್ನು ಸೆರೆ ಹಿಡಿಯುವರು. |
೧೦ |
“ಅವರು ಅರಸರನ್ನು ಅಪಹಾಸ್ಯಮಾಡುವರು; ಅಧಿಪತಿಗಳನ್ನು ಪರಿಹಾಸ್ಯಕ್ಕೆ ಗುರಿಮಾಡುವರು. ಕೋಟೆಗಳನ್ನು ಧೂಳೀಪಟ ಮಾಡುವರು. ಮಣ್ಣುಗುಡ್ಡೆ ಹಾಕಿ ಆಕ್ರಮಿಸಿಕೊಳ್ಳುವರು. |
೧೧ |
ಬಿರುಗಾಳಿಯಂತೆ ಬಂದು ಮಾಯವಾಗುವವರು ಅವರು; ಸ್ವಂತ ಶಕ್ತಿಯೇ ದೈವ ಎಂದೆಣಿಸುವಂಥ ಅಪರಾಧಿಗಳು.” |
೧೨ |
ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ. |
೧೩ |
ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಸ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ? |
೧೪ |
ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ? |
೧೫ |
ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ. |
೧೬ |
ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ. |
೧೭ |
ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶಮಾಡುತ್ತಿರಬೇಕೋ?
|
Kannada Bible (KNCL) 2016 |
No Data |
|
|
|
|
|
|
|
|
|
|
ಹಬಕ್ಕೂಕನ ೧:1 |
ಹಬಕ್ಕೂಕನ ೧:2 |
ಹಬಕ್ಕೂಕನ ೧:3 |
ಹಬಕ್ಕೂಕನ ೧:4 |
ಹಬಕ್ಕೂಕನ ೧:5 |
ಹಬಕ್ಕೂಕನ ೧:6 |
ಹಬಕ್ಕೂಕನ ೧:7 |
ಹಬಕ್ಕೂಕನ ೧:8 |
ಹಬಕ್ಕೂಕನ ೧:9 |
ಹಬಕ್ಕೂಕನ ೧:10 |
ಹಬಕ್ಕೂಕನ ೧:11 |
ಹಬಕ್ಕೂಕನ ೧:12 |
ಹಬಕ್ಕೂಕನ ೧:13 |
ಹಬಕ್ಕೂಕನ ೧:14 |
ಹಬಕ್ಕೂಕನ ೧:15 |
ಹಬಕ್ಕೂಕನ ೧:16 |
ಹಬಕ್ಕೂಕನ ೧:17 |
|
|
|
|
|
|
ಹಬಕ್ಕೂಕನ 1 / ಹಬಕ್ಕ 1 |
ಹಬಕ್ಕೂಕನ 2 / ಹಬಕ್ಕ 2 |
ಹಬಕ್ಕೂಕನ 3 / ಹಬಕ್ಕ 3 |