A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಆಮೋಸನ ೯ಆಗ ಸರ್ವೇಶ್ವರಸ್ವಾಮಿ ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ಕಂಡೆನು. ಅವರು ನನಗೆ ಹೀಗೆಂದು ಅಪ್ಪಣೆಮಾಡಿದರು: “ಹೊಸ್ತಿಲುಗಳು ಕದಲುವಂತೆ ಕಂಬಗಳ ಬೋದಿಗೆಗೆ ಬಲವಾಗಿ ಹೊಡೆ. ಅವು ಕುಸಿದು ಎಲ್ಲರ ತಲೆಯ ಮೇಲೆ ಬೀಳಲಿ. ಅಳಿದುಳಿದವರನ್ನು ಖಡ್ಗಕ್ಕೆ ತುತ್ತಾಗಿಸುವೆನು. ಅವರಲ್ಲಿ ಯಾರೂ ಓಡಿಹೋಗರು; ಯಾರೂ ತಪ್ಪಿಸಿಕೊಳ್ಳರು.
ಅವರು ಪಾತಾಳಕ್ಕೆ ಇಳಿದುಹೋದರೂ ಅಲ್ಲಿಂದ ಅವರನ್ನು ಎಳೆದುತರುವೆನು. ಆಕಾಶಕ್ಕೆ ಹತ್ತಿಹೋದರೂ ಅಲ್ಲಿಂದ ಇಳಿಸುವೆನು.
ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವಿತುಕೊಂಡರೂ ಅವರನ್ನು ಹುಡುಕಿ ಅಲ್ಲಿಂದ ಹಿಡಿದುತರುವೆನು. ನನ್ನ ಕಣ್ಣುತಪ್ಪಿಸಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ಅವರನ್ನು ಕಚ್ಚುವಂತೆ ಘಟಸರ್ಪಕ್ಕೆ ಆಜ್ಞೆಮಾಡುವೆನು.
ಶತ್ರುವಶವಾಗಿ ಸೆರೆಗೆ ಹೋಗಿದ್ದರೂ ಅಲ್ಲಿಯೂ ಖಡ್ಗವು ನನ್ನ ಆಜ್ಞಾನುಸಾರ ಅವರನ್ನು ಕೊಲ್ಲುವುದು; ಅವರ ಮೇಲಿಗಾಗಿ ಅಲ್ಲ, ಕೇಡಿಗಾಗಿಯೇ ಅವರ ಮೇಲೆ ಕಣ್ಣಿಡುವೆನು.
ಸೇನಾಧಿಶ್ವರ ದೇವರಾದ ಸರ್ವೇಶ್ವರ ಮುಟ್ಟಿದ ಮಾತ್ರಕ್ಕೆ ಕರಗುವುದು ಭೂಮಿ. ಗೋಳಿಡುವುದು ಸಕಲ ಜನತೆ ಉಬ್ಬುವುದು ನಾಡೆಲ್ಲ ನೈಲ್ ನದಿಯಂತೆ ಕುಗ್ಗಿ ಕರಗುವುದು ಈಜಿಪ್ಟಿನ ನದಿಯಂತೆ
ಉನ್ನತದಲ್ಲಿ ಹಲವು ಉಪ್ಪರಿಗೆಗಳನ್ನು ನಿರ್ಮಿಸುವವ ಆತನೆ ಭುವಿಯಲ್ಲಿ ಗುಮ್ಮಟವನ್ನು ಸ್ಥಾಪಿಸಿಕೊಂಡವನು ಆತನೆ ಸಾಗರದ ನೀರನ್ನು ಸೇದಿ ಧರೆಯ ಮೇಲೆ ಸುರಿಯುವವ ಆತನೆ ಆತನ ನಾಮಧೇಯ ಸರ್ವೇಶ್ವರಸ್ವಾಮಿ ಎಂಬುದೇ.
“ಇಸ್ರಯೇಲಿನ ಜನರೇ, ನನ್ನ ದೃಷ್ಟಿಯಲ್ಲಿ ನೀವಾಗಲಿ ಎಥಿಯೋಪಿಯದವರಾಗಲೀ, ಒಂದೇ ಅಲ್ಲವೆ? ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆತಂದಂತೆ ಫಿಲಿಷ್ಟಿಯರನ್ನು ಕಫ್ತೋರಿನಿಂದಲೂ, ಅರಾಮ್ಯರನ್ನು ಕೀರ್ ನಾಡಿನಿಂದಲೂ ಕರೆತರಲಿಲ್ಲವೆ?
ಒಡೆಯ ಸರ್ವೇಶ್ವರನಾದ ನಾನು ಈ ಪಾಪಮಯ ರಾಜ್ಯದ ಮೇಲೆ ಕಣ್ಣಿಟ್ಟಿದ್ದೇನೆ ಎಂಬುದನ್ನು ಗಮನಿಸಿರಿ. ಇದನ್ನು ಭೂಮಂಡಲದಿಂದ ನಾಶಮಾಡುವೆನು. ಆದರೆ ಯಕೋಬ ಮನೆತನವನ್ನು ಸಂಪೂರ್ಣವಾಗಿ ನಾಶಮಾಡೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
“ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ಇಸ್ರಯೇಲರನ್ನು ಸಕಲ ಜನಾಂಗಗಳೊಡನೆ ಸೇರಿಸಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಹೀಗೆ ಕಾಳನ್ನೂ ಜೊಳ್ಳನ್ನೂ ಬೇರ್ಪಡಿಸುವೆನು.
೧೦
‘ನಮಗೆ ಯಾವುದೇ ಆಪತ್ತು ತಟ್ಟದು. ಯಾವುದೇ ವಿಪತ್ತು ಅಡ್ಡಬರದು’ ಎಂದುಕೊಳ್ಳುವ ನನ್ನ ಜನರಲ್ಲಿನ ಪಾಪಿಗಳೆಲ್ಲರು ಖಡ್ಗದಿಂದ ಹತರಾಗುವರು.”
೧೧
ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.
೧೨
ಹೀಗೆ ನನ್ನ ಜನರು ಎದೋಮಿನ ಮಿಕ್ಕಭಾಗವನ್ನೂ ಸರ್ವೇಶ್ವರನ ಪ್ರಜೆ ಎನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು.” ಈ ಕಾರ್ಯವನ್ನು ಸಾಧಿಸುವಂಥ ಸರ್ವೇಶ್ವರಸ್ವಾಮಿಯ ನುಡಿಯಿದು:
೧೩
ಕಾಲ ಬರುವುದು: ಆಗ - ಹೊಸ ಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು.
೧೪
ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನ್ನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು.
೧೫
ಬೇರೂರಿಸುವೆನು ಅವರನು ಸ್ವಂತ ನಾಡಲಿ ಕೀಳರಾರೂ ಅವರನು ಅಲ್ಲಿಂದ ಮರಳಿ.” ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.ಆಮೋಸನ ೯:1
ಆಮೋಸನ ೯:2
ಆಮೋಸನ ೯:3
ಆಮೋಸನ ೯:4
ಆಮೋಸನ ೯:5
ಆಮೋಸನ ೯:6
ಆಮೋಸನ ೯:7
ಆಮೋಸನ ೯:8
ಆಮೋಸನ ೯:9
ಆಮೋಸನ ೯:10
ಆಮೋಸನ ೯:11
ಆಮೋಸನ ೯:12
ಆಮೋಸನ ೯:13
ಆಮೋಸನ ೯:14
ಆಮೋಸನ ೯:15


ಆಮೋಸನ 1 / ಆಮ 1
ಆಮೋಸನ 2 / ಆಮ 2
ಆಮೋಸನ 3 / ಆಮ 3
ಆಮೋಸನ 4 / ಆಮ 4
ಆಮೋಸನ 5 / ಆಮ 5
ಆಮೋಸನ 6 / ಆಮ 6
ಆಮೋಸನ 7 / ಆಮ 7
ಆಮೋಸನ 8 / ಆಮ 8
ಆಮೋಸನ 9 / ಆಮ 9