A A A A A
Facebook Instagram Twitter
ಕನ್ನಡ ಬೈಬಲ್ (KNCL) 2016

ಹೊಶೇಯನ ೧೦ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ, ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ.
ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು.
“ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ.
ಅವರು ಹರಟೆಹೊಡೆಯುತ್ತಾರೆ; ಸುಳ್ಳಾಣೆ ಇಟ್ಟು ಸಂಧಾನಮಾಡಿಕೊಳ್ಳುತ್ತಾರೆ. ಉತ್ತಹೊಲದಲ್ಲಿ ಬೆಳೆಯುವ ವಿಷದ ಕಳೆಗಳಂತೆ ನ್ಯಾಯಸ್ಥಾನಕ್ಕೆ ಬರುವ ಅವರ ವಾದವಿವಾದಗಳು ಹೆಚ್ಚಿಕೊಳ್ಳುತ್ತವೆ.
ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು.
ಆ ವಿಗ್ರಹವನ್ನು ಅಸ್ಸೀರಿಯದ ಜಗಳಗಂಟಿ ರಾಜನಿಗೆ ಕಾಣಿಕೆಯಾಗಿ ಕೊಡಲಾಗುವುದು. ಎಫ್ರಯಿಮಿಗೆ ಅವಮಾನವಾಗುವುದು. ಇಸ್ರಯೇಲ್ ತಾನು ಕೆತ್ತಿಸಿಕೊಂಡ ವಿಗ್ರಹಕ್ಕಾಗಿ ನಾಚಿಕೆಗೀಡಾಗುವುದು.
ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು.
ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.”
“ಇಸ್ರಯೇಲ್, ನೀನು ಗಿಬ್ಯದಲ್ಲಿದ್ದ ಕಾಲದಿಂದ ನನಗೆ ವಿರುದ್ಧ ಪಾಪಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬ್ಯದ ನಿವಾಸಿಗಳು ಯುದ್ಧಕ್ಕೆ ತುತ್ತಾಗಲಿದ್ದಾರೆ.
೧೦
ಸಕಾಲದಲ್ಲಿ ನಾನು ಅವರನ್ನು ದಂಡಿಸುವೆನು; ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿ ಆಗುವುದು; ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.
೧೧
“ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.
೧೨
ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣುಹೋಗಬೇಕು.
೧೩
ಇದಕ್ಕೆ ಬದಲಾಗಿ ನೀನು ಅಧರ್ಮದ ಬೀಜವನ್ನು ಬಿತ್ತಿರುವೆ, ಅನ್ಯಾಯದ ಬೆಳೆಯನ್ನು ಕೊಯ್ದಿರುವೆ. ಅಸತ್ಯದ ಫಲವನ್ನು ಉಂಡಿರುವೆ. ನಿನ್ನ ಭುಜಬಲದಲ್ಲೂ ಸಮರಶೂರರಲ್ಲೂ ಭರವಸೆಯಿಟ್ಟೆ.
೧೪
ಎಂತಲೇ ನಿನ್ನ ಜಾತಿಜನಾಂಗಗಳ ವಿರುದ್ಧ ಯುದ್ಧ ಘೋಷಣೆ ಮೊಳಗುವುದು. ಕಾಳಗದ ದಿನದಲ್ಲಿ ಕೋಟೆಕೊತ್ತಲಗಳು ಸೂರೆಯಾಗುವುವು. ಶಲ್ಮಾನ ರಾಜನು ಬೇತ್‍ಅರ್ಬೇಲ್ ಪಟ್ಟಣವನ್ನು ನೆಲಸಮಮಾಡಿದಂತೆ ಆಗುವುದು. ತಾಯಿ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದಂತೆ ಇದೆಲ್ಲ ನಡೆಯುವುದು.
೧೫
ಬೇತೇಲಿನ ಜನರೇ, ನಿಮಗೂ ಇಂಥ ದುರ್ಗತಿಯೇ ಸಂಭವಿಸಲಿರುವುದು. ಬೆಳಗಾಗುವುದರೊಳಗೆ ಇಸ್ರಯೇಲಿನ ರಾಜನು ಹತನಾಗುವನು. ಕಾರಣ, ನಿಮ್ಮ ಅಕ್ರಮವು ಘೋರವಾದುದು!”ಹೊಶೇಯನ ೧೦:1
ಹೊಶೇಯನ ೧೦:2
ಹೊಶೇಯನ ೧೦:3
ಹೊಶೇಯನ ೧೦:4
ಹೊಶೇಯನ ೧೦:5
ಹೊಶೇಯನ ೧೦:6
ಹೊಶೇಯನ ೧೦:7
ಹೊಶೇಯನ ೧೦:8
ಹೊಶೇಯನ ೧೦:9
ಹೊಶೇಯನ ೧೦:10
ಹೊಶೇಯನ ೧೦:11
ಹೊಶೇಯನ ೧೦:12
ಹೊಶೇಯನ ೧೦:13
ಹೊಶೇಯನ ೧೦:14
ಹೊಶೇಯನ ೧೦:15


ಹೊಶೇಯನ 1 / ಹೊಶ 1
ಹೊಶೇಯನ 2 / ಹೊಶ 2
ಹೊಶೇಯನ 3 / ಹೊಶ 3
ಹೊಶೇಯನ 4 / ಹೊಶ 4
ಹೊಶೇಯನ 5 / ಹೊಶ 5
ಹೊಶೇಯನ 6 / ಹೊಶ 6
ಹೊಶೇಯನ 7 / ಹೊಶ 7
ಹೊಶೇಯನ 8 / ಹೊಶ 8
ಹೊಶೇಯನ 9 / ಹೊಶ 9
ಹೊಶೇಯನ 10 / ಹೊಶ 10
ಹೊಶೇಯನ 11 / ಹೊಶ 11
ಹೊಶೇಯನ 12 / ಹೊಶ 12
ಹೊಶೇಯನ 13 / ಹೊಶ 13
ಹೊಶೇಯನ 14 / ಹೊಶ 14