೧ |
ಅದು ಆರನೆಯ ವರ್ಷದ ಆರನೆಯ ತಿಂಗಳಿನ ಐದನೆಯ ದಿನ. ನಾನೂ ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರುಬದುರಾಗಿ ಕುಳಿತಿದ್ದೆವು. ಸರ್ವೇಶ್ವರನಾದ ದೇವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ. |
೨ |
ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ನನಗೆ ಕಾಣಿಸಿತು; ಸೊಂಟದ ಹಾಗೆ ತೋರುವ ಅದರ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತಿತ್ತು; ಅದರ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ ಎಂಬಂತೆ ಅದ್ಭುತ ಕಾಂತಿಯೊಂದು ಹೊಳೆಯಿತು. |
೩ |
ಆಗ ಆ ಮನುಷ್ಯಾಕೃತಿ ಮಾನವನ ಹಸ್ತದಂಥ ಹಸ್ತವನ್ನು ಚಾಚಿ ನನ್ನ ಚಂಡಿಕೆಯನ್ನು ಹಿಡಿಯಿತು. ದೇವರಾತ್ಮ ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಜೆರುಸಲೇಮಿನವರೆಗೆ ಒಯ್ದಿತು. ಅಲ್ಲಿನ ದೇವಾಲಯದ ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡುಬಂದಿತು. |
೪ |
ಆಗ ಇಗೋ, ಇಸ್ರಯೇಲಿನ ದೇವರ ಮಹಿಮಾದ್ಭುತ ದರ್ಶನವು ಬಯಲುಸೀಮೆಯಲ್ಲಿ ಆದಂತೆ ಇಲ್ಲಿಯೂ ನನಗಾಯಿತು. |
೫ |
ಆಗ ಅವರು ನನಗೆ, “ನರಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದಲ್ಲಿ ಪ್ರವೇಶದ್ವಾರದ ಮುಂದೆ ನಿಂತಿತ್ತು. |
೬ |
ಆಗ ಅವರು ನನಗೆ, “ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನೆಲ್ಲ ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿದರು. |
೭ |
ಆಮೇಲೆ ದೇವರು ನನ್ನನ್ನು ಪ್ರಾಕಾರದ ಬಾಗಿಲಿಗೆ ಬರಮಾಡಿದರು; ಇಗೋ, ಆ ಗೋಡೆಯಲ್ಲಿ ಒಂದು ರಂಧ್ರವು ನನಗೆ ಕಾಣಿಸಿತು. |
೮ |
ಆಗ ಅವರು ನನಗೆ, “ನರಪುತ್ರನೇ, ಗೋಡೆಯನ್ನು ತೋಡು,” ಎಂದು ಹೇಳಿದರು. ನಾನು ಗೋಡೆಯನ್ನು ತೋಡಿದೆ. ಆಗ ಇಗೋ, ಒಂದು ಬಾಗಿಲು ಕಾಣಿಸಿತು. |
೯ |
ದೇವರು ನನಗೆ, “ನೀನು ಒಳಹೊಕ್ಕು ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದು ಹೇಳಿದರು. ನಾನು ಹೊಕ್ಕು ನೋಡಿದೆ; |
೧೦ |
ಅಕಟಾ, ಎಲ್ಲಾ ಜಾತಿಯ ಕ್ರಿಮಿಕೀಟಗಳು, ಅಸಹ್ಯ ಮೃಗಗಳು ಹಾಗು ಇಸ್ರಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳು ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು. |
೧೧ |
ಇಸ್ರಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ ಅವರ ಮಧ್ಯದಲ್ಲಿ ಶಾಫಾನನ ಮಗ ಯಾಜನ್ಯನೂ ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು: ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು. |
೧೨ |
ಆಗ ದೇವರು ನನಗೆ, “ನರಪುತ್ರನೇ, ಇಸ್ರಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಸರ್ವೇಶ್ವರ ನಮ್ಮನ್ನು ನೋಡನು, ಸರ್ವೇಶ್ವರ ನಾಡನ್ನು ತೊರೆದುಬಿಟ್ಟಿದ್ದಾನೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು. |
೧೩ |
ಆಮೇಲೆ ದೇವರು ನನಗೆ, “ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ |
೧೪ |
ನನ್ನನ್ನು ಸರ್ವೇಶ್ವರನ ಆಲಯದ ಉತ್ತರ ಬಾಗಿಲ ಮುಂದಕ್ಕೆ ಕರೆತಂದರು; ಇಗೋ, ಅಲ್ಲಿ ಹೆಂಗಸರು ‘ತಮ್ಮೂಜ್’ ದೇವತೆಗಾಗಿ ಅಳುತ್ತಾ ಕುಳಿತಿದ್ದರು. |
೧೫ |
ಇದಾದ ಮೇಲೆ ದೇವರು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಮತ್ತೂ ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ |
೧೬ |
ಸರ್ವೇಶ್ವರನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆದುತಂದರು; ಇಗೋ, ಆ ಆಲಯದ ಬಾಗಿಲ ಮುಂದೆ, ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಸುಮಾರು ಇಪ್ಪತ್ತೈದು ಜನರು ಸರ್ವೇಶ್ವರನ ಆಲಯಕ್ಕೆ ಬೆನ್ನುಮಾಡಿ ಪೂರ್ವದ ಕಡೆಗೆ ಮುಖಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು. |
೧೭ |
ಆಗ ದೇವರು ನನಗೆ, “ನರಪುತ್ರನೇ, ನೋಡಿದೆಯಾ? ಯೆಹೂದವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ನಾಡನ್ನು ಹಿಂಸಾಕೃತ್ಯಗಳಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ. |
೧೮ |
ಆದಕಾರಣ ನಾನೂ ಕೋಪೋದ್ರೇಕದಿಂದ ವರ್ತಿಸುವೆನು. ಅವರನ್ನು ಕಟಾಕ್ಷಿಸೆನು, ಉಳಿಸೆನು; ಅವರು ನನ್ನ ಕಿವಿಯಲ್ಲಿ ಎಷ್ಟು ಗಟ್ಟಿಯಾಗಿ ಕೂಗಿಕೊಂಡರೂ ನಾನು ಆಲಿಸೆನು.”
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆಜೆಕಿಯೇಲನ ೮:1 |
ಯೆಜೆಕಿಯೇಲನ ೮:2 |
ಯೆಜೆಕಿಯೇಲನ ೮:3 |
ಯೆಜೆಕಿಯೇಲನ ೮:4 |
ಯೆಜೆಕಿಯೇಲನ ೮:5 |
ಯೆಜೆಕಿಯೇಲನ ೮:6 |
ಯೆಜೆಕಿಯೇಲನ ೮:7 |
ಯೆಜೆಕಿಯೇಲನ ೮:8 |
ಯೆಜೆಕಿಯೇಲನ ೮:9 |
ಯೆಜೆಕಿಯೇಲನ ೮:10 |
ಯೆಜೆಕಿಯೇಲನ ೮:11 |
ಯೆಜೆಕಿಯೇಲನ ೮:12 |
ಯೆಜೆಕಿಯೇಲನ ೮:13 |
ಯೆಜೆಕಿಯೇಲನ ೮:14 |
ಯೆಜೆಕಿಯೇಲನ ೮:15 |
ಯೆಜೆಕಿಯೇಲನ ೮:16 |
ಯೆಜೆಕಿಯೇಲನ ೮:17 |
ಯೆಜೆಕಿಯೇಲನ ೮:18 |
|
|
|
|
|
|
ಯೆಜೆಕಿಯೇಲನ 1 / ಯೆಜೆಕಿ 1 |
ಯೆಜೆಕಿಯೇಲನ 2 / ಯೆಜೆಕಿ 2 |
ಯೆಜೆಕಿಯೇಲನ 3 / ಯೆಜೆಕಿ 3 |
ಯೆಜೆಕಿಯೇಲನ 4 / ಯೆಜೆಕಿ 4 |
ಯೆಜೆಕಿಯೇಲನ 5 / ಯೆಜೆಕಿ 5 |
ಯೆಜೆಕಿಯೇಲನ 6 / ಯೆಜೆಕಿ 6 |
ಯೆಜೆಕಿಯೇಲನ 7 / ಯೆಜೆಕಿ 7 |
ಯೆಜೆಕಿಯೇಲನ 8 / ಯೆಜೆಕಿ 8 |
ಯೆಜೆಕಿಯೇಲನ 9 / ಯೆಜೆಕಿ 9 |
ಯೆಜೆಕಿಯೇಲನ 10 / ಯೆಜೆಕಿ 10 |
ಯೆಜೆಕಿಯೇಲನ 11 / ಯೆಜೆಕಿ 11 |
ಯೆಜೆಕಿಯೇಲನ 12 / ಯೆಜೆಕಿ 12 |
ಯೆಜೆಕಿಯೇಲನ 13 / ಯೆಜೆಕಿ 13 |
ಯೆಜೆಕಿಯೇಲನ 14 / ಯೆಜೆಕಿ 14 |
ಯೆಜೆಕಿಯೇಲನ 15 / ಯೆಜೆಕಿ 15 |
ಯೆಜೆಕಿಯೇಲನ 16 / ಯೆಜೆಕಿ 16 |
ಯೆಜೆಕಿಯೇಲನ 17 / ಯೆಜೆಕಿ 17 |
ಯೆಜೆಕಿಯೇಲನ 18 / ಯೆಜೆಕಿ 18 |
ಯೆಜೆಕಿಯೇಲನ 19 / ಯೆಜೆಕಿ 19 |
ಯೆಜೆಕಿಯೇಲನ 20 / ಯೆಜೆಕಿ 20 |
ಯೆಜೆಕಿಯೇಲನ 21 / ಯೆಜೆಕಿ 21 |
ಯೆಜೆಕಿಯೇಲನ 22 / ಯೆಜೆಕಿ 22 |
ಯೆಜೆಕಿಯೇಲನ 23 / ಯೆಜೆಕಿ 23 |
ಯೆಜೆಕಿಯೇಲನ 24 / ಯೆಜೆಕಿ 24 |
ಯೆಜೆಕಿಯೇಲನ 25 / ಯೆಜೆಕಿ 25 |
ಯೆಜೆಕಿಯೇಲನ 26 / ಯೆಜೆಕಿ 26 |
ಯೆಜೆಕಿಯೇಲನ 27 / ಯೆಜೆಕಿ 27 |
ಯೆಜೆಕಿಯೇಲನ 28 / ಯೆಜೆಕಿ 28 |
ಯೆಜೆಕಿಯೇಲನ 29 / ಯೆಜೆಕಿ 29 |
ಯೆಜೆಕಿಯೇಲನ 30 / ಯೆಜೆಕಿ 30 |
ಯೆಜೆಕಿಯೇಲನ 31 / ಯೆಜೆಕಿ 31 |
ಯೆಜೆಕಿಯೇಲನ 32 / ಯೆಜೆಕಿ 32 |
ಯೆಜೆಕಿಯೇಲನ 33 / ಯೆಜೆಕಿ 33 |
ಯೆಜೆಕಿಯೇಲನ 34 / ಯೆಜೆಕಿ 34 |
ಯೆಜೆಕಿಯೇಲನ 35 / ಯೆಜೆಕಿ 35 |
ಯೆಜೆಕಿಯೇಲನ 36 / ಯೆಜೆಕಿ 36 |
ಯೆಜೆಕಿಯೇಲನ 37 / ಯೆಜೆಕಿ 37 |
ಯೆಜೆಕಿಯೇಲನ 38 / ಯೆಜೆಕಿ 38 |
ಯೆಜೆಕಿಯೇಲನ 39 / ಯೆಜೆಕಿ 39 |
ಯೆಜೆಕಿಯೇಲನ 40 / ಯೆಜೆಕಿ 40 |
ಯೆಜೆಕಿಯೇಲನ 41 / ಯೆಜೆಕಿ 41 |
ಯೆಜೆಕಿಯೇಲನ 42 / ಯೆಜೆಕಿ 42 |
ಯೆಜೆಕಿಯೇಲನ 43 / ಯೆಜೆಕಿ 43 |
ಯೆಜೆಕಿಯೇಲನ 44 / ಯೆಜೆಕಿ 44 |
ಯೆಜೆಕಿಯೇಲನ 45 / ಯೆಜೆಕಿ 45 |
ಯೆಜೆಕಿಯೇಲನ 46 / ಯೆಜೆಕಿ 46 |
ಯೆಜೆಕಿಯೇಲನ 47 / ಯೆಜೆಕಿ 47 |
ಯೆಜೆಕಿಯೇಲನ 48 / ಯೆಜೆಕಿ 48 |