೧ |
ತರುವಾಯ ಈ ಪುರುಷನು ನನ್ನನ್ನು ಪವಿತ್ರಾಲಯದ ಪೂರ್ವದಿಕ್ಕಿನ ಹೊರಗಿನ ಹೆಬ್ಬಾಗಿಲಿಗೆ ಪುನಃ ಕರೆದುತಂದನು; ಅದು ಮುಚ್ಚಿತ್ತು. |
೨ |
ಆಗ ಸರ್ವೇಶ್ವರ ನನಗೆ, “ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಯೇಲಿನ ದೇವರಾದ ಸರ್ವೇಶ್ವರ ಇದರಿಂದ ಪ್ರವೇಶಿಸಿದ್ದಾರೆ; ಇದು ಮುಚ್ಚೇ ಇರಬೇಕು. |
೩ |
ರಾಜರು ಸರ್ವೇಶ್ವರನ ಸನ್ನಿಧಿಯಲ್ಲಿ ಹವಿರ್ಭೋಜನ ಮಾಡುವುದಕ್ಕೆ ಇಲ್ಲಿ ಕುಳಿತುಕೊಳ್ಳಬಹುದು; ಅವನು ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಬಂದು ಅದೇ ಮಾರ್ಗವಾಗಿ ಹೊರಡಬೇಕು,” ಎಂದು ಹೇಳಿದರು. |
೪ |
ಬಳಿಕ ಆ ಪುರಷನು ಉತ್ತರ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರೆದುತಂದನು; ಏನಾಶ್ಚರ್ಯ! ನಾನು ನೋಡುತ್ತಿದ್ದಂತೆ ಸರ್ವೇಶ್ವರನ ತೇಜಸ್ಸು ದೇವಾಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆ. |
೫ |
ಆಗ ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಸರ್ವೇಶ್ವರನ ಆಲಯದ ಸಕಲ ನಿಯಮ ನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಕಿವಿಯಾರೆ ಕೇಳಿ, ಕಣ್ಣಾರೆ ಕಂಡು, ಮನದಟ್ಟು ಮಾಡಿಕೋ; ಮತ್ತು ಪವಿತ್ರಾಲಯದ ಗಮನಾಗಮನವಿಧಿಗಳನ್ನು ಗಮನಿಸು. |
೬ |
“ಇದಲ್ಲದೆ, ನೀನು ಆ ದ್ರೋಹಿಗಳಿಗೆ ಅಂದರೆ, ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: |
೭ |
ಇಸ್ರಯೇಲ್ ವಂಶದವರೇ, ನೀವು ನನ್ನ ಆಹಾರವಾದ ರಕ್ತಮೇದಸ್ಸುಗಳನ್ನು ಅರ್ಪಿಸುವಾಗ, ತನುಮನಗಳಲ್ಲಿ ಸುನ್ನತಿಹೀನರಾದ ಮ್ಲೇಚ್ಛರನ್ನು, ನನ್ನ ಪವಿತ್ರಾಲಯದೊಳಗೆ ಬರಮಾಡಿ ನನ್ನ ಮಂದಿರವನ್ನು ಅಶುದ್ಧಗೊಳಿಸಿದ್ದೀರಿ. ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿ ನಿಮ್ಮ ಅಮಿತ ದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ. |
೮ |
ನೀವು ನನ್ನ ಪರಿಶುದ್ಧ ವಸ್ತುಗಳ ಪಾರುಪತ್ಯ ಮಾಡಲಿಲ್ಲ; ಈ ಮ್ಲೇಚ್ಛರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇಮಿಸಿಕೊಂಡಿರಿ; ನಿಮ್ಮ ಅಪಾರ ದುರಾಚಾರಗಳು ಇನ್ನು ಸಾಕು. |
೯ |
“ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಸ್ರಯೇಲರಲ್ಲಿ ಸೇರಿಕೊಂಡಿರುವ ಮ್ಲೇಚ್ಛರೊಳಗೆ ತನುಮನಗಳಲ್ಲಿ ಸುನ್ನತಿಹೀನನಾದ ಯಾವನೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು.” |
೧೦ |
“ಇಸ್ರಯೇಲರು ನನ್ನನ್ನು ತೊರೆದಾಗ, ನನ್ನಿಂದಗಲಿ ತಮ್ಮ ವಿಗ್ರಹಗಳ ಕಡೆಗೆ ತಿರುಗಿಕೊಂಡು, ನನಗೆ ದೂರವಾಗಿಹೋದ ಲೇವಿಯರು ತಮ್ಮ ದೋಷಫಲವನ್ನು ಅನುಭವಿಸುವರು. |
೧೧ |
ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ ಮಂದಿರ ದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪರವಾಗಿ ದಹನ ಬಲಿಪಶುವನ್ನೂ ಶಾಂತಿಸಮಾಧಾನ ಬಲಿಪಶುವನ್ನೂ ವಧಿಸಿ ಅವರಿಗೆ ಸೇವೆಮಾಡಲು ಸಿದ್ಧರಾಗಿರಬೇಕು. |
೧೨ |
ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ, ಇಸ್ರಯೇಲ್ ವಂಶದವರಿಗೆ ಪಾಪಕಾರಿವಿಘ್ನವಾದುದರಿಂದ, ನಾನು ಅವರ ಮೇಲೆ ಕೈಯೆತ್ತಿದ್ದೇನೆ. ಅವರು ತಮ್ಮ ದೋಷಫಲವನ್ನು ಅನುಭವಿಸಿಯೇ ತೀರಬೇಕು; ಇದು ಸರ್ವೇಶ್ವರನಾದ ದೇವರ ನುಡಿ. |
೧೩ |
ನನಗೆ ಯಾಜಕ ಸೇವೆಮಾಡುವುದಕ್ಕೆ ಅವರು ನನ್ನ ಸನ್ನಿಧಿಗೆ ಬರಕೂಡದು. ನನ್ನ ಅತಿಪವಿತ್ರವಾದ ಪರಿಶುದ್ಧವಸ್ತುಗಳಲ್ಲಿ ಯಾವುದನ್ನೂ ಸಮೀಪಿಸಬಾರದು. ತಮಗಾದ ಅವಮಾನವನ್ನೂ ತಾವು ನಡೆಸಿದ ದುರಾಚಾರಗಳ ಫಲವನ್ನೂ ಅನುಭವಿಸುವರು. |
೧೪ |
ದೇವಾಲಯದ ಸಕಲ ಸೇವೆಯಲ್ಲೂ ಅಲ್ಲಿ ನಡೆಯುವ ಸಮಸ್ತ ಕಾರ್ಯಗಳಲ್ಲಿಯೂ ಸೇವಕ ವೃತ್ತಿಯನ್ನೇ ಅವರಿಗೆ ಕೊಡುವೆನು. |
೧೫ |
“ಆದರೆ ಇಸ್ರಯೇಲರು ನನ್ನನ್ನು ತೊರೆದಾಗ ಲೇವಿಯರೂ ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದರು. ಆದ್ದರಿಂದ ಅವರು ನನ್ನ ಸೇವೆಮಾಡಲು ನನ್ನ ಸನ್ನಿಧಿಗೆ ಬರುವರು, ನನಗೆ ರಕ್ತಮೇದಸ್ಸುಗಳನ್ನು ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು; ಇದು ಸರ್ವೇಶ್ವರನಾದ ದೇವರ ನುಡಿ. |
೧೬ |
ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ, ನನ್ನ ಸೇವೆ ಮಾಡುವುದಕ್ಕೆ ನನ್ನ ವೇದಿಕೆಯನ್ನು ಸಮೀಪಿಸಿ, ನನ್ನ ಆಲಯದ ಪಾರುಪತ್ಯವನ್ನು ವಹಿಸುವರು. |
೧೭ |
ಅವರು ಒಳಗಿನ ಪ್ರಾಕಾರದ ಬಾಗಿಲುಗಳನ್ನು ಪ್ರವೇಶಿಸುವಾಗ ನಾರುಮಡಿಗಳನ್ನು ಧರಿಸಿರಬೇಕು; ಒಳಗಿನ ಪ್ರಾಕಾರದ ಬಾಗಿಲುಗಳಲ್ಲೂ ದೇವಸ್ಥಾನದಲ್ಲೂ ಸೇವೆಮಾಡುತ್ತಿರುವಾಗ, ಯಾವ ಉಣ್ಣೆಯ ಉಡುಪೂ ಅವರ ಮೇಲೆ ಇರಕೂಡದು. |
೧೮ |
ಅವರು ತಲೆಗೆ ನಾರುಪೇಟವನ್ನು, ಸೊಂಟಕ್ಕೆ ನಾರುಚಡ್ಡಿಯನ್ನು ಹಾಕಿಕೊಂಡಿರಲಿ; ಬೆವರುವ ಯಾವ ಉಡುಪನ್ನೂ ಉಟ್ಟುಕೊಳ್ಳಬಾರದು. |
೧೯ |
ಅವರು ಹೊರಗಿನ ಪ್ರಾಕಾರಕ್ಕೆ ಅಂದರೆ, ಅಲ್ಲಿನ ಜನರ ಬಳಿಗೆ ಹೊರಡುವಾಗ, ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗಲಿಸಿ ಅವರನ್ನು ಪರಿಶುದ್ಧರಾಗ ಮಾಡದಂತೆ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಲಿ. |
೨೦ |
“ಅವರು ತಲೆ ಬೋಳಿಸಬಾರದು; ಕೂದಲನ್ನು ಬೆಳೆಸಬಾರದು, ಕತ್ತರಿಸಿಕೊಂಡಿರಬೇಕು. |
೨೧ |
ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿದಿರಬಾರದು. |
೨೨ |
ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲಾದವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಯೇಲ್ ವಂಶದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ. |
೨೩ |
“ಮೀಸಲಾಗಿದದ್ದಕ್ಕೂ ಮೀಸಲಲ್ಲದ್ದಕ್ಕೂ ಇರುವ ಭೇದವನ್ನು ನನ್ನ ಜನರಿಗೆ ತೋರಿಸಿ, ಶುದ್ಧಾಶುದ್ಧ ವಿವೇಚನೆಯನ್ನು ಅವರಿಗೆ ಬೋಧಿಸಲಿ. |
೨೪ |
ವ್ಯಾಜ್ಯವಾಗುವಾಗ ಅದನ್ನು ತೀರಿಸಲು ನಿಂತು, ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ಗಳನ್ನು ಜನರು ಆಚರಿಸುವಂತೆ ನೋಡಿಕೊಳ್ಳಲಿ. |
೨೫ |
“ಸತ್ತವರ ಹೆಣವನ್ನು ಸಮೀಪಿಸಿ ತಮ್ಮನ್ನೇ ಅಶುದ್ಧಮಾಡಿಕೊಳ್ಳಬಾರದು; ಆದರೆ ಸತ್ತ ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗಾಗಿ ಒಬ್ಬನು ತನ್ನನ್ನೇ ಅಶುದ್ಧಮಾಡಿಕೊಳ್ಳಬಹುದು. |
೨೬ |
ಅಂಥವನನ್ನು ಶುದ್ಧನಾದ ಮೇಲೂ, ಏಳು ದಿವಸ ಪ್ರತ್ಯೇಕಿಸಬೇಕು. |
೨೭ |
ಅವನು ಸೇವೆಮಾಡಲು ಪವಿತ್ರಾಲಯವನ್ನು ಪ್ರವೇಶಿಸಿ ಒಳಗಿನ ಪ್ರಾಕಾರಕ್ಕೆ ಬರುವ ದಿನದಲ್ಲಿ ತನ್ನ ದೋಷಪರಿಹಾರಕ್ಕಾಗಿ ಬಲಿಯನ್ನು ಅರ್ಪಿಸಬೇಕು; ಇದು ಸರ್ವೇಶ್ವರನಾದ ದೇವರ ನುಡಿ. |
೨೮ |
“ಯಾಜಕರಿಗೆ ಇರುವ ಒಂದು ಸೊತ್ತು ಎಂದರೆ ನಾನೇ. ಇಸ್ರಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು. ನಾನೇ ಅವರಿಗೆ ಆಸ್ತಿ. |
೨೯ |
ಅವರು ಧಾನ್ಯ ನೈವೇದ್ಯವನ್ನೂ ದೋಷಪರಿಹಾರಕ ಬಲಿದ್ರವ್ಯವನ್ನೂ ಪ್ರಾಯಶ್ಚಿತ್ತ ಬಲಿದ್ರವ್ಯವನ್ನೂ ಅನುಭವಿಸಲಿ. ಸರ್ವೇಶ್ವರನದಾಗಿಯೇ ಇರಲೆಂದು ಇಸ್ರಯೇಲರು ಹರಕೆಮಾಡಿಕೊಡುವುದೆಲ್ಲವೂ ಅವರಿಗೆ ಸಲ್ಲಬೇಕು. |
೩೦ |
ಎಲ್ಲ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದು ಹಾಗು ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲ ಪದಾರ್ಥಗಳು ಅವರದಾಗಬೇಕು. ನಿಮ್ಮ ಮನೆ ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು. |
೩೧ |
ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.”
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆಜೆಕಿಯೇಲನ ೪೪:1 |
ಯೆಜೆಕಿಯೇಲನ ೪೪:2 |
ಯೆಜೆಕಿಯೇಲನ ೪೪:3 |
ಯೆಜೆಕಿಯೇಲನ ೪೪:4 |
ಯೆಜೆಕಿಯೇಲನ ೪೪:5 |
ಯೆಜೆಕಿಯೇಲನ ೪೪:6 |
ಯೆಜೆಕಿಯೇಲನ ೪೪:7 |
ಯೆಜೆಕಿಯೇಲನ ೪೪:8 |
ಯೆಜೆಕಿಯೇಲನ ೪೪:9 |
ಯೆಜೆಕಿಯೇಲನ ೪೪:10 |
ಯೆಜೆಕಿಯೇಲನ ೪೪:11 |
ಯೆಜೆಕಿಯೇಲನ ೪೪:12 |
ಯೆಜೆಕಿಯೇಲನ ೪೪:13 |
ಯೆಜೆಕಿಯೇಲನ ೪೪:14 |
ಯೆಜೆಕಿಯೇಲನ ೪೪:15 |
ಯೆಜೆಕಿಯೇಲನ ೪೪:16 |
ಯೆಜೆಕಿಯೇಲನ ೪೪:17 |
ಯೆಜೆಕಿಯೇಲನ ೪೪:18 |
ಯೆಜೆಕಿಯೇಲನ ೪೪:19 |
ಯೆಜೆಕಿಯೇಲನ ೪೪:20 |
ಯೆಜೆಕಿಯೇಲನ ೪೪:21 |
ಯೆಜೆಕಿಯೇಲನ ೪೪:22 |
ಯೆಜೆಕಿಯೇಲನ ೪೪:23 |
ಯೆಜೆಕಿಯೇಲನ ೪೪:24 |
ಯೆಜೆಕಿಯೇಲನ ೪೪:25 |
ಯೆಜೆಕಿಯೇಲನ ೪೪:26 |
ಯೆಜೆಕಿಯೇಲನ ೪೪:27 |
ಯೆಜೆಕಿಯೇಲನ ೪೪:28 |
ಯೆಜೆಕಿಯೇಲನ ೪೪:29 |
ಯೆಜೆಕಿಯೇಲನ ೪೪:30 |
ಯೆಜೆಕಿಯೇಲನ ೪೪:31 |
|
|
|
|
|
|
ಯೆಜೆಕಿಯೇಲನ 1 / ಯೆಜೆಕಿ 1 |
ಯೆಜೆಕಿಯೇಲನ 2 / ಯೆಜೆಕಿ 2 |
ಯೆಜೆಕಿಯೇಲನ 3 / ಯೆಜೆಕಿ 3 |
ಯೆಜೆಕಿಯೇಲನ 4 / ಯೆಜೆಕಿ 4 |
ಯೆಜೆಕಿಯೇಲನ 5 / ಯೆಜೆಕಿ 5 |
ಯೆಜೆಕಿಯೇಲನ 6 / ಯೆಜೆಕಿ 6 |
ಯೆಜೆಕಿಯೇಲನ 7 / ಯೆಜೆಕಿ 7 |
ಯೆಜೆಕಿಯೇಲನ 8 / ಯೆಜೆಕಿ 8 |
ಯೆಜೆಕಿಯೇಲನ 9 / ಯೆಜೆಕಿ 9 |
ಯೆಜೆಕಿಯೇಲನ 10 / ಯೆಜೆಕಿ 10 |
ಯೆಜೆಕಿಯೇಲನ 11 / ಯೆಜೆಕಿ 11 |
ಯೆಜೆಕಿಯೇಲನ 12 / ಯೆಜೆಕಿ 12 |
ಯೆಜೆಕಿಯೇಲನ 13 / ಯೆಜೆಕಿ 13 |
ಯೆಜೆಕಿಯೇಲನ 14 / ಯೆಜೆಕಿ 14 |
ಯೆಜೆಕಿಯೇಲನ 15 / ಯೆಜೆಕಿ 15 |
ಯೆಜೆಕಿಯೇಲನ 16 / ಯೆಜೆಕಿ 16 |
ಯೆಜೆಕಿಯೇಲನ 17 / ಯೆಜೆಕಿ 17 |
ಯೆಜೆಕಿಯೇಲನ 18 / ಯೆಜೆಕಿ 18 |
ಯೆಜೆಕಿಯೇಲನ 19 / ಯೆಜೆಕಿ 19 |
ಯೆಜೆಕಿಯೇಲನ 20 / ಯೆಜೆಕಿ 20 |
ಯೆಜೆಕಿಯೇಲನ 21 / ಯೆಜೆಕಿ 21 |
ಯೆಜೆಕಿಯೇಲನ 22 / ಯೆಜೆಕಿ 22 |
ಯೆಜೆಕಿಯೇಲನ 23 / ಯೆಜೆಕಿ 23 |
ಯೆಜೆಕಿಯೇಲನ 24 / ಯೆಜೆಕಿ 24 |
ಯೆಜೆಕಿಯೇಲನ 25 / ಯೆಜೆಕಿ 25 |
ಯೆಜೆಕಿಯೇಲನ 26 / ಯೆಜೆಕಿ 26 |
ಯೆಜೆಕಿಯೇಲನ 27 / ಯೆಜೆಕಿ 27 |
ಯೆಜೆಕಿಯೇಲನ 28 / ಯೆಜೆಕಿ 28 |
ಯೆಜೆಕಿಯೇಲನ 29 / ಯೆಜೆಕಿ 29 |
ಯೆಜೆಕಿಯೇಲನ 30 / ಯೆಜೆಕಿ 30 |
ಯೆಜೆಕಿಯೇಲನ 31 / ಯೆಜೆಕಿ 31 |
ಯೆಜೆಕಿಯೇಲನ 32 / ಯೆಜೆಕಿ 32 |
ಯೆಜೆಕಿಯೇಲನ 33 / ಯೆಜೆಕಿ 33 |
ಯೆಜೆಕಿಯೇಲನ 34 / ಯೆಜೆಕಿ 34 |
ಯೆಜೆಕಿಯೇಲನ 35 / ಯೆಜೆಕಿ 35 |
ಯೆಜೆಕಿಯೇಲನ 36 / ಯೆಜೆಕಿ 36 |
ಯೆಜೆಕಿಯೇಲನ 37 / ಯೆಜೆಕಿ 37 |
ಯೆಜೆಕಿಯೇಲನ 38 / ಯೆಜೆಕಿ 38 |
ಯೆಜೆಕಿಯೇಲನ 39 / ಯೆಜೆಕಿ 39 |
ಯೆಜೆಕಿಯೇಲನ 40 / ಯೆಜೆಕಿ 40 |
ಯೆಜೆಕಿಯೇಲನ 41 / ಯೆಜೆಕಿ 41 |
ಯೆಜೆಕಿಯೇಲನ 42 / ಯೆಜೆಕಿ 42 |
ಯೆಜೆಕಿಯೇಲನ 43 / ಯೆಜೆಕಿ 43 |
ಯೆಜೆಕಿಯೇಲನ 44 / ಯೆಜೆಕಿ 44 |
ಯೆಜೆಕಿಯೇಲನ 45 / ಯೆಜೆಕಿ 45 |
ಯೆಜೆಕಿಯೇಲನ 46 / ಯೆಜೆಕಿ 46 |
ಯೆಜೆಕಿಯೇಲನ 47 / ಯೆಜೆಕಿ 47 |
ಯೆಜೆಕಿಯೇಲನ 48 / ಯೆಜೆಕಿ 48 |