೧ |
ನಾವು ಸೆರೆಯಾದ ಇಪ್ಪತ್ತೈದನೆಯ ವರ್ಷದ ಅಂದರೆ, ಪಟ್ಟಣವು ಹಾಳಾದ ಹದಿನಾಲ್ಕನೆಯ ವರ್ಷದ ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಹೌದು, ಆ ದಿನದಲ್ಲೇ ನಾನು ಸರ್ವೇಶ್ವರಸ್ವಾಮಿಯ ಹಸ್ತಸ್ಪರ್ಶದಿಂದ ಪರವಶನಾದೆ. ಆಗ ಅವರು ನನ್ನನ್ನು ಅಲ್ಲಿಗೆ ಒಯ್ದರು. |
೨ |
ನನ್ನನ್ನು ಇಸ್ರಯೇಲ್ ನಾಡಿಗೆ ತಂದು, ಅತ್ಯುನ್ನತ ಪರ್ವತದ ಮೇಲೆ ಇಳಿಸಿದರೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂದಿತು. ದಕ್ಷಿಣ ಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡ ಕಾಣಿಸಿತು. |
೩ |
ಅವರು ನನ್ನನ್ನು ಅಲ್ಲಿಗೆ ತರಲು, ಇಗೋ, ತಾಮ್ರದಂತೆ ಹೊಳೆಯುವ ಒಬ್ಬ ಪುರುಷನು ನಾರಿನ ಹುರಿಯನ್ನೂ ಅಳತೆ ಕೋಲನ್ನೂ ಕೈಯಲ್ಲಿ ಹಿಡಿದುಕೊಂಡು ಬಾಗಿಲಲ್ಲಿ ನಿಂತಿದ್ದನು. |
೪ |
ಆ ಪುರುಷ ನನಗೆ, “ನರಪುತ್ರನೇ, ನೀನು ಕಣ್ಣಿಟ್ಟು ನೋಡು, ಕಿವಿಗೊಟ್ಟು ಕೇಳು; ನಾನು ನಿನಗೆ ತೋರಿಸುವುದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ; ನಾನು ನಿನಗೆ ತೋರಿಸುವುದನ್ನು ನೀನು ನೋಡಬೇಕೆಂದೇ ನಿನ್ನನ್ನು ಇಲ್ಲಿಗೆ ತರಲಾಗಿದೆ; ನೀನು ನೋಡುವುದನ್ನೆಲ್ಲ ಇಸ್ರಯೇಲ್ ವಂಶದವರಿಗೆ ಪ್ರಕಟಿಸು,” ಎಂದು ಹೇಳಿದನು. |
೫ |
ಇಗೋ, ಒಂದು ಗೋಡೆಯು ಆ ಕಟ್ಟಡವನ್ನು ಸುತ್ತಿಕೊಂಡಿತ್ತು. ಆ ಪುರುಷನ ಕೈಯಲ್ಲಿ ಮೂರು ಮೀಟರ್ ಅಳತೆಕೋಲೊಂದಿತ್ತು. ಆ ಗೋಡೆ ಮೂರು ಮೀಟರ್ ದಪ್ಪ ಹಾಗು ಮೂರು ಮೀಟರ್ ಎತ್ತರ ಇತ್ತು. |
೬ |
ಆಮೇಲೆ ಅವನು ಪೂರ್ವದಿಕ್ಕಿನ ಹೆಬ್ಬಾಗಿಲಿಗೆ ಬಂದು ಮೆಟ್ಟಲುಗಳನ್ನು ಹತ್ತಿ ಹೊಸ್ತಿಲಿನ ಅಗಲವನ್ನು ಅಳೆದನು. ಒಂದೊಂದು ಹೊಸ್ತಿಲಿನ ಅಗಲವು ಮೂರು ಮೀಟರ್ ಇತ್ತು. |
೭ |
ಅಲ್ಲಿ ಒಂದೊಂದು ಕೋಣೆಯ ಉದ್ದ ಮೂರು ಮೀಟರ್, ಅಗಲ ಮೂರು ಮೀಟರ್. |
೮ |
ಆ ಗೋಡೇಕೋಣೆಗಳು ಒಂದಕ್ಕೊಂದು ಎರಡುವರೆ ಮೀಟರ್ ದೂರವಾಗಿದ್ದವು; ದೇವಸ್ಥಾನಕ್ಕೆ ಎದುರಾಗಿರುವ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಮೂರು ಮೀಟರ್. |
೯ |
ಆಮೇಲೆ ಅವನು ಹೆಬ್ಬಾಗಿಲ ಕೈಸಾಲೆಯ ಅಗಲವನ್ನು ಅಳೆದನು; ಅದು ನಾಲ್ಕು ಮೀಟರ್ ಇತ್ತು; ನಿಲವು ಕಂಬಗಳ ಅಗಲ ಒಂದೊಂದು ಮೀಟರ್. ಹೆಬ್ಬಾಗಿಲ ಕೈಸಾಲೆಯು ದೇವಸ್ಥಾನಕ್ಕೆ ಎದುರಾಗಿತ್ತು. |
೧೦ |
ಪೂರ್ವದಿಕ್ಕಿನ ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಮೂರು ಮೂರು ಗೋಡೇಕೋಣೆಗಳಿದ್ದವು; ಅವೆಲ್ಲಾ ಒಂದೇ ಅಳತೆ; ಎರಡು ಪಕ್ಕಗಳಲ್ಲಿನ ನಿಲವು ಕಂಬಗಳೂ ಒಂದೇ ಅಳತೆಯಾಗಿದ್ದವು. |
೧೧ |
ಅನಂತರ ಅವನು ಹೆಬ್ಬಾಗಿಲ ದ್ವಾರವನ್ನು ಅಳೆದನು. ಅಗಲ ಐದು ಮೀಟರ್, ಉದ್ದ ಆರುವರೆ ಮೀಟರ್. |
೧೨ |
ಎರಡು ಪಕ್ಕಗಳಲ್ಲಿನ ಗೋಡೇಕೋಣೆಗಳ ಮುಂದೆ ಒಂದೊಂದು ಐವತ್ತು ಸೆಂಟಿಮೀಟರ್ ಅವಕಾಶ; ಎರಡು ಕಡೆಯ ಗೋಡೇಕೋಣೆಗಳ ಅಗಲವು ಮೂರು ಮೀಟರ್. |
೧೩ |
ಅವನು ಒಂದು ಕಡೆಯ ಗೋಡೆಕೋಣೆಗಳ ಮಾಳಿಗೆಯ ಹೊರಕೊನೆಯಿಂದ ಇನ್ನೊಂದು ಕಡೆಯ ಗೋಡೇಕೋಣೆಗಳ ಮಾಳಿಗೆಯ ಹೊರ ಕೊನೆಗೆ, ಅಂದರೆ ಒಂದು ಕೋಣೆಯ ಬಾಗಿಲಿನಿಂದ ಇನ್ನೊಂದು ಕೋಣೆಯ ಬಾಗಿಲಿಗೆ ಹೆಬ್ಬಾಗಿಲಿನ ಅಗಲವನ್ನು ಅಳೆಯಲು ಹನ್ನೆರಡುವರೆ ಮೀಟರಿತ್ತು. |
೧೪ |
ಪ್ರಾಕಾರದಲ್ಲಿನ ನಿಲವು ಕಂಬದವರೆಗೆ ನಿಲವುಕಂಬಗಳನ್ನು ಅಳತೆಮಾಡಲು ಮೂವತ್ತು ಮೀಟರ್ ಇದ್ದವು. ಹೆಬ್ಬಾಗಿಲನ್ನು ಸುತ್ತುಮುತ್ತಲು ಅಳೆದನು. |
೧೫ |
ಪ್ರವೇಶಸ್ಥಾನದ ಹೊರಗಡೆಯಿಂದ ಒಳಕೈಸಾಲೆಯ ಕೊನೆಯತನಕ ಹೆಬ್ಬಾಗಿಲು ಇಪ್ಪತ್ತೈದು ಮೀಟರ್ ಉದ್ದವಾಗಿತ್ತು. |
೧೬ |
ಗೋಡೇಕೋಣೆಗಳಲ್ಲೂ ಒಳಗಣ ಎರಡು ಕಡೆಯ ನಿಲುವುಕಂಬಗಳಲ್ಲೂ ಕೈಸಾಲೆಗಳಲ್ಲೂ ತೆರೆಯಲಾಗದ ಕಿಟಕಿಗಳು ಹೆಬ್ಬಾಗಿಲೊಳಗೆ ಸುತ್ತಮುತ್ತಲು ಇದ್ದವು; ಹೊರಗಣ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು. |
೧೭ |
ಅನಂತರ ಆ ಪುರುಷ ನನ್ನನ್ನು ಹೊರಗಣ ಪ್ರಾಕಾರಕ್ಕೆ ಕರೆದುತಂದನು; ಇಗೋ, ಕೋಣೆಗಳೂ ಪ್ರಾಕಾರದ ಸುತ್ತಲು ಹಾಕಿದ ನೆಲಗಟ್ಟೂ ಕಾಣಿಸಿದವು. ಒಟ್ಟಾಗಿ ನೆಲೆಗಟ್ಟಿನ ಮೇಲೆ ಮೂವತ್ತು ಕೋಣೆಗಳಿದ್ದವು. |
೧೮ |
ಆ ಕೆಳಗಣ ನೆಲೆಗಟ್ಟು ಹೆಬ್ಬಾಗಿಲುಗಳ ಎರಡು ಪಕ್ಕಗಳಲ್ಲೂ ಹಾಸಲಾಗಿದ್ದ ಅವುಗಳಷ್ಟು ಅಗಲವಾಗಿತ್ತು. |
೧೯ |
ಅವನು ಪೂರ್ವದಲ್ಲೂ ಉತ್ತರದಲ್ಲೂ ಕೆಳಗೂ ಹೆಬ್ಬಾಗಿಲಿನ ಒಳಗಡೆಯಿಂದ ಒಳಗಣ ಪ್ರಾಕಾರದ ಹೊರಗಡೆಯ ತನಕ ಅಳೆಯಲು ಐವತ್ತು ಮೀಟರ್ ಇತ್ತು. |
೨೦ |
ಇದಲ್ಲದೆ ಹೊರಗಣ ಪ್ರಾಕಾರದ ಉತ್ತರದ ಹೆಬ್ಬಾಗಿಲಿನ ಅಗಲವನ್ನೂ ಉದ್ದವನ್ನೂ ಅಳೆದನು. |
೨೧ |
ಅದರೊಳಗೆ ಎರಡು ಕಡೆ ಗೋಡೇ ಕೋಣೆಗಳು ಮೂರು ಮೂರಿದ್ದವು; ಅಲ್ಲಿನ ನಿಲವುಕಂಬಗಳೂ ಕೈಸಾಲೆಯೂ ಮೊದಲನೆಯ ಹೆಬ್ಬಾಗಿಲಿನ ಅಳತೆಯಂತಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. |
೨೨ |
ಅಲ್ಲಿನ ಕಿಟಕಿಗಳೂ ಕೈಸಾಲೆಯೂ ಚಿತ್ರಿತವಾಗಿದ್ದ ಖರ್ಜೂರ ವೃಕ್ಷಗಳೂ ಮೂಡಣ ಹೆಬ್ಬಾಗಿಲುಗಳ ಅಳತೆಯಷ್ಟಿದ್ದವು; ಏಳು ಮೆಟ್ಟಲು ಹತ್ತಿ ಅಲ್ಲಿಗೆ ಸೇರುತ್ತಿದ್ದರು; ಕೈಸಾಲೆ ಒಳಗಡೆಯಿತ್ತು; |
೨೩ |
ಹೊರಗಣ ಪ್ರಾಕಾರದ ಬಡಗಣ ಮೂಡಣ ಹೆಬ್ಬಾಗಿಲುಗಳಿಗೆ ಎದುರಾಗಿ ಒಳಗಣ ಪ್ರಾಕಾರಕ್ಕೂ ಹೆಬ್ಬಾಗಿಲುಗಳು ಇದ್ದವು. ಒಂದು ಬಾಗಿಲಿನಿಂದ ಎದುರು ಬಾಗಿಲಿಗೆ ಐವತ್ತು ಮೀಟರ್ ಅಳೆದನು. |
೨೪ |
ಆಮೇಲೆ ಅವನು ನನ್ನನ್ನು ದಕ್ಷಿಣಕ್ಕೆ ಕರೆತಂದನು. ಇಗೋ, ಅಲ್ಲಿಯೂ ಒಂದು ಹೆಬ್ಬಾಗಿಲು; ಅವನು ಅಲ್ಲಿನ ನಿಲವುಕಂಬಗಳನ್ನೂ ಕೈಸಾಲೆಯನ್ನೂ ಅಳೆಯಲು ಹಿಂದಣ ಅಳತೆಗಳೇ ಕಂಡುಬಂದವು. |
೨೫ |
ಅದರಲ್ಲೂ ಅದರ ಕೈಸಾಲೆಯಲ್ಲೂ ಎಲ್ಲ ಕಡೆ ಅಂಥ ಕಿಟಕಿಗಳೇ ಇದ್ದವು; ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. |
೨೬ |
ಅಲ್ಲಿ ಹತ್ತುವುದಕ್ಕೆ ಏಳು ಮೆಟ್ಟಲುಗಳಿದ್ದವು; ಕೈಸಾಲೆ ಒಳಗಡೆಯಿತ್ತು; ಕೈಸಾಲೆಯ ಎದುರು ಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು. |
೨೭ |
ಒಳಗಿನ ಪ್ರಾಕಾರದಲ್ಲೂ ದಕ್ಷಿಣಕ್ಕೆ ಹೆಬ್ಬಾಗಿಲಿತ್ತು. ದಕ್ಷಿಣದಲ್ಲಿ ಒಂದು ಬಾಗಿಲಿನಿಂದ ಎದುರುಬಾಗಿಲಿಗೆ ಅಳೆದಾಗ ಐವತ್ತು ಮೀಟರ್ ಇತ್ತು. |
೨೮ |
ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಿಲ ಮಾರ್ಗವಾಗಿ ಒಳಗಣ ಪ್ರಾಕಾರಕ್ಕೆ ಕರೆದುತಂದನು. ಅವನು ಆ ದಕ್ಷಿಣ ಹೆಬ್ಬಾಗಿಲನ್ನೂ ಅಲ್ಲಿನ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಷ್ಟೇ ಅಳತೆಗಳಿದ್ದವು. |
೨೯ |
ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಕಿಟಕಿಗಳು ಎಲ್ಲ ಕಡೆಯಿದ್ದವು. ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. |
೩೦ |
*** |
೩೧ |
ಆ ಹೆಬ್ಬಾಗಿಲ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು; ಅದರ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು. |
೩೨ |
ಅವನು ನನ್ನನ್ನು ಒಳಗಣ ಪ್ರಾಕಾರದ ಪೂರ್ವಕ್ಕೆ ಕರೆದುತಂದು ಅಲ್ಲಿನ ಹೆಬ್ಬಾಗಿಲನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಆ ಅಳತೆಗಳೇ ಕಂಡುಬಂದವು. |
೩೩ |
ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಕಿಟಕಿಗಳಿದ್ದವು. ಆ ಹೆಬ್ಬಾಗಿಲಿನ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. |
೩೪ |
ಅದರ ಕೈಸಾಲೆ ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿತ್ತು. ಕೈಸಾಲೆಯ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಇಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು. |
೩೫ |
ಆಮೇಲೆ ಅವನು ನನ್ನನ್ನು ಉತ್ತರ ಬಾಗಿಲಿಗೆ ಕರೆದುತಂದು ಅದನ್ನೂ ಅದರ ಗೋಡೇಕೋಣೆ, ನಿಲವುಕಂಬ, ಕೈಸಾಲೆ ಇವುಗಳನ್ನೂ ಅಳೆಯಲು ಅಲ್ಲಿಯೂ ಆ ಅಳತೆಗಳೇ ಕಂಡುಬಂದವು; |
೩೬ |
ಅದರಲ್ಲಿ ಎಲ್ಲಾ ಕಡೆ ಕಿಟಕಿಗಳಿದ್ದವು; ಅದರ ಉದ್ದ ಇಪ್ಪತ್ತೈದು ಮೀಟರ್, ಅಗಲ ಹನ್ನೆರಡುವರೆ ಮೀಟರ್. |
೩೭ |
ಆದರೆ ನಿಲವುಕಂಬಗಳು ಹೊರಗಣ ಪ್ರಾಕಾರಕ್ಕೆ ಅಭಿಮುಖವಾಗಿದ್ದವು. ಆ ಎದುರುಬದುರಿನ ನಿಲವುಕಂಬಗಳಲ್ಲಿ ಖರ್ಜೂರ ವೃಕ್ಷಗಳು ಚಿತ್ರಿತವಾಗಿದ್ದವು; ಅಲ್ಲಿ ಹತ್ತುವುದಕ್ಕೆ ಎಂಟು ಮೆಟ್ಟಲುಗಳಿದ್ದವು. |
೩೮ |
ಹೆಬ್ಬಾಗಿಲ ನಿಲವುಕಂಬಗಳ ಪಕ್ಕದಲ್ಲಿ ಒಂದು ಕೊಠಡಿಯೂ ಅದರ ದ್ವಾರವೂ ಕಾಣಿಸಿದವು. ಆ ಕೋಣೆಯೊಳಗೆ ದಹನ ಬಲಿಪ್ರಾಣಿಗಳ ಮಾಂಸವನ್ನು ತೊಳೆಯುತ್ತಿದ್ದರು. |
೩೯ |
ಹೆಬ್ಬಾಗಿಲ ಕೈಸಾಲೆಯಲ್ಲಿ ಎರಡು ಕಡೆಯಲ್ಲೂ ಎರಡೆರಡು ಪೀಠಗಳಿದ್ದವು. ಅವುಗಳ ಮೇಲೆ ದಹನಬಲಿಪ್ರಾಣಿ, ದೋಷಪರಿಹಾರಕ ಬಲಿಪ್ರಾಣಿ, ಪ್ರಾಯಶ್ಚಿತ್ತ ಬಲಿಪ್ರಾಣಿ, ಇವುಗಳನ್ನು ವಧಿಸುತ್ತಿದ್ದರು. |
೪೦ |
ಉತ್ತರ ಹೆಬ್ಬಾಗಿಲ ಪ್ರವೇಶಸ್ಥಾನದ ಮೆಟ್ಟಲುಗಳ ಹತ್ತಿರ, ಆ ಬಾಗಿಲ ಕೈಸಾಲೆಯ ಹೊರಗೆ, ಒಂದು ಕೊನೆಯಲ್ಲಿ ಎರಡು ಪೀಠಗಳು ಇದ್ದವು. |
೪೧ |
ಹೆಬ್ಬಾಗಿಲಿನ ಎರಡು ಪಕ್ಕಗಳಲ್ಲಿ ಇತ್ತ ನಾಲ್ಕು, ಅತ್ತ ನಾಲ್ಕು ಪೀಠಗಳು, ಒಟ್ಟಿಗೆ ಬಲಿಪ್ರಾಣಿಗಳನ್ನು ವಧಿಸುವ ಎಂಟು ಪೀಠಗಳಿದ್ದವು. |
೪೨ |
ಇದಲ್ಲದೆ ದಹನಬಲಿಗೆ ಉಪಯುಕ್ತವಾದ, ಕೆತ್ತಿದ ಕಲ್ಲಿನ ನಾಲ್ಕು ಪೀಠಗಳಿದ್ದವು; ಅವುಗಳ ಉದ್ದ ಎಪ್ಪತ್ತೈದು ಸೆಂಟಿಮೀಟರ್, ಎತ್ತರ ಐವತ್ತು ಸೆಂಟಿಮೀಟರ್, ಅವುಗಳ ಮೇಲೆ ದಹನಬಲಿಪಶುಗಳ ವಧೆಯ ಉಪಕರಣಗಳನ್ನು ಇಡುತ್ತಿದ್ದರು. |
೪೩ |
ಅಂಚಿನಲ್ಲಿ ಎಪ್ಪತ್ತೈದು ಮಿಲಿಮೀಟರ್ ದಿಂಡು ಕಟ್ಟಿತ್ತು; ನೈವೇದ್ಯ ಮಾಂಸವು ಪೀಠಗಳ ಮೇಲಿತ್ತು. |
೪೪ |
ಆಮೇಲೆ ಆ ಪುರುಷ ನನ್ನನ್ನು ಒಳಗಣ ಪ್ರಾಕಾರಕ್ಕೆ ಕರೆದುತಂದನು. ಇಗೋ, ಅಲ್ಲಿ ಎರಡು ಕೋಣೆಗಳು ಕಾಣಿಸಿದವು. ಉತ್ತರ ಹೆಬ್ಬಾಗಿಲ ಪಕ್ಕದಲ್ಲಿ ಒಂದು ಕೋಣೆಯು ದಕ್ಷಿಣಕ್ಕೆ ಅಭಿಮುಖವಾಗಿತ್ತು; ದಕ್ಷಿಣ ಹೆಬ್ಬಾಗಿಲ ಪಕ್ಕದಲ್ಲಿ ಇನ್ನೊಂದು ಕೋಣೆ ಉತ್ತರಕ್ಕೆ ಅಭಿಮುಖವಾಗಿತ್ತು. |
೪೫ |
ಆಗ ಅವನು ನನಗೆ ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೋಣೆ ದೇವಾಲಯ ಪಾರುಪತ್ಯವನ್ನು ನಡೆಸುವ ಯಾಜಕರಿಗೆ ನೇಮಕವಾಗಿದೆ. |
೪೬ |
ಉತ್ತರಕ್ಕೆ ಅಭಿಮುಖವಾಗಿರುವ ಆ ಕೋಣೆ ಬಲಿಪೀಠದ ಕಾರ್ಯದರ್ಶಿಗಳಾದ ಯಾಜಕರಿಗೆ ನೇಮಕವಾಗಿದೆ. ಚಾದೋಕನ ಸಂತತಿಯವರಾದ ಇವರು ಲೇವಿಯ ಕುಲದವರಲ್ಲಿ ಸರ್ವೇಶ್ವರನ ಸನ್ನಿಧಿಸೇವಕರಾಗಿದ್ದಾರೆ ಎಂದು ಹೇಳಿದನು. |
೪೭ |
ಆಮೇಲೆ ಅವನು ಪ್ರಾಕಾರವನ್ನು ಅಳೆಯಲು ಅದು ಐವತ್ತು ಮೀಟರ್ ಉದ್ದವಾಗಿಯೂ ಐವತ್ತು ಮೀಟರ್ ಅಗಲವಾಗಿಯೂ ಚಚ್ಚೌಕವಾಗಿತ್ತು; ಬಲಿಪೀಠವು ದೇವಸ್ಥಾನದ ಮುಂದೆ ಇತ್ತು. |
೪೮ |
ಕೂಡಲೆ ಆ ಪುರುಷ ನನ್ನನ್ನು ದೇವಸ್ಥಾನದ ದ್ವಾರಮಂಟಪಕ್ಕೆ ಕರೆದುತಂದು ಅದನ್ನು ಅಳೆದನು. ಅದರ ಎದುರುಬದುರಿನ ನಿಲವುಕಂಬಗಳ ಅಗಲ ಎರಡುವರೆ ಮೀಟರುಗಳು, ಬಾಗಿಲಿನ ಎರಡು ಪಕ್ಕದ ಗೋಡೆಗಳ ಅಗಲ ಅರ್ಧರ್ಧ ಮೀಟರ್, |
೪೯ |
ದ್ವಾರಮಂಟಪದ ಉದ್ದ ಹತ್ತು ಮೀಟರ್, ಅಗಲ ಐದುವರೆ ಮೀಟರ್ ಇದ್ದವು. ಹತ್ತು ಮೆಟ್ಟಲುಗಳನ್ನು ಹತ್ತಿ ಅಲ್ಲಿಗೆ ಸೇರುತ್ತಿದ್ದರು. ಎರಡು ಕಡೆಯ ನಿಲವುಕಂಬಗಳ ಪಕ್ಕದಲ್ಲಿ ಒಂದೊಂದು ಉಪಸ್ತಂಭ ಇತ್ತು.
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆಜೆಕಿಯೇಲನ ೪೦:1 |
ಯೆಜೆಕಿಯೇಲನ ೪೦:2 |
ಯೆಜೆಕಿಯೇಲನ ೪೦:3 |
ಯೆಜೆಕಿಯೇಲನ ೪೦:4 |
ಯೆಜೆಕಿಯೇಲನ ೪೦:5 |
ಯೆಜೆಕಿಯೇಲನ ೪೦:6 |
ಯೆಜೆಕಿಯೇಲನ ೪೦:7 |
ಯೆಜೆಕಿಯೇಲನ ೪೦:8 |
ಯೆಜೆಕಿಯೇಲನ ೪೦:9 |
ಯೆಜೆಕಿಯೇಲನ ೪೦:10 |
ಯೆಜೆಕಿಯೇಲನ ೪೦:11 |
ಯೆಜೆಕಿಯೇಲನ ೪೦:12 |
ಯೆಜೆಕಿಯೇಲನ ೪೦:13 |
ಯೆಜೆಕಿಯೇಲನ ೪೦:14 |
ಯೆಜೆಕಿಯೇಲನ ೪೦:15 |
ಯೆಜೆಕಿಯೇಲನ ೪೦:16 |
ಯೆಜೆಕಿಯೇಲನ ೪೦:17 |
ಯೆಜೆಕಿಯೇಲನ ೪೦:18 |
ಯೆಜೆಕಿಯೇಲನ ೪೦:19 |
ಯೆಜೆಕಿಯೇಲನ ೪೦:20 |
ಯೆಜೆಕಿಯೇಲನ ೪೦:21 |
ಯೆಜೆಕಿಯೇಲನ ೪೦:22 |
ಯೆಜೆಕಿಯೇಲನ ೪೦:23 |
ಯೆಜೆಕಿಯೇಲನ ೪೦:24 |
ಯೆಜೆಕಿಯೇಲನ ೪೦:25 |
ಯೆಜೆಕಿಯೇಲನ ೪೦:26 |
ಯೆಜೆಕಿಯೇಲನ ೪೦:27 |
ಯೆಜೆಕಿಯೇಲನ ೪೦:28 |
ಯೆಜೆಕಿಯೇಲನ ೪೦:29 |
ಯೆಜೆಕಿಯೇಲನ ೪೦:30 |
ಯೆಜೆಕಿಯೇಲನ ೪೦:31 |
ಯೆಜೆಕಿಯೇಲನ ೪೦:32 |
ಯೆಜೆಕಿಯೇಲನ ೪೦:33 |
ಯೆಜೆಕಿಯೇಲನ ೪೦:34 |
ಯೆಜೆಕಿಯೇಲನ ೪೦:35 |
ಯೆಜೆಕಿಯೇಲನ ೪೦:36 |
ಯೆಜೆಕಿಯೇಲನ ೪೦:37 |
ಯೆಜೆಕಿಯೇಲನ ೪೦:38 |
ಯೆಜೆಕಿಯೇಲನ ೪೦:39 |
ಯೆಜೆಕಿಯೇಲನ ೪೦:40 |
ಯೆಜೆಕಿಯೇಲನ ೪೦:41 |
ಯೆಜೆಕಿಯೇಲನ ೪೦:42 |
ಯೆಜೆಕಿಯೇಲನ ೪೦:43 |
ಯೆಜೆಕಿಯೇಲನ ೪೦:44 |
ಯೆಜೆಕಿಯೇಲನ ೪೦:45 |
ಯೆಜೆಕಿಯೇಲನ ೪೦:46 |
ಯೆಜೆಕಿಯೇಲನ ೪೦:47 |
ಯೆಜೆಕಿಯೇಲನ ೪೦:48 |
ಯೆಜೆಕಿಯೇಲನ ೪೦:49 |
|
|
|
|
|
|
ಯೆಜೆಕಿಯೇಲನ 1 / ಯೆಜೆಕಿ 1 |
ಯೆಜೆಕಿಯೇಲನ 2 / ಯೆಜೆಕಿ 2 |
ಯೆಜೆಕಿಯೇಲನ 3 / ಯೆಜೆಕಿ 3 |
ಯೆಜೆಕಿಯೇಲನ 4 / ಯೆಜೆಕಿ 4 |
ಯೆಜೆಕಿಯೇಲನ 5 / ಯೆಜೆಕಿ 5 |
ಯೆಜೆಕಿಯೇಲನ 6 / ಯೆಜೆಕಿ 6 |
ಯೆಜೆಕಿಯೇಲನ 7 / ಯೆಜೆಕಿ 7 |
ಯೆಜೆಕಿಯೇಲನ 8 / ಯೆಜೆಕಿ 8 |
ಯೆಜೆಕಿಯೇಲನ 9 / ಯೆಜೆಕಿ 9 |
ಯೆಜೆಕಿಯೇಲನ 10 / ಯೆಜೆಕಿ 10 |
ಯೆಜೆಕಿಯೇಲನ 11 / ಯೆಜೆಕಿ 11 |
ಯೆಜೆಕಿಯೇಲನ 12 / ಯೆಜೆಕಿ 12 |
ಯೆಜೆಕಿಯೇಲನ 13 / ಯೆಜೆಕಿ 13 |
ಯೆಜೆಕಿಯೇಲನ 14 / ಯೆಜೆಕಿ 14 |
ಯೆಜೆಕಿಯೇಲನ 15 / ಯೆಜೆಕಿ 15 |
ಯೆಜೆಕಿಯೇಲನ 16 / ಯೆಜೆಕಿ 16 |
ಯೆಜೆಕಿಯೇಲನ 17 / ಯೆಜೆಕಿ 17 |
ಯೆಜೆಕಿಯೇಲನ 18 / ಯೆಜೆಕಿ 18 |
ಯೆಜೆಕಿಯೇಲನ 19 / ಯೆಜೆಕಿ 19 |
ಯೆಜೆಕಿಯೇಲನ 20 / ಯೆಜೆಕಿ 20 |
ಯೆಜೆಕಿಯೇಲನ 21 / ಯೆಜೆಕಿ 21 |
ಯೆಜೆಕಿಯೇಲನ 22 / ಯೆಜೆಕಿ 22 |
ಯೆಜೆಕಿಯೇಲನ 23 / ಯೆಜೆಕಿ 23 |
ಯೆಜೆಕಿಯೇಲನ 24 / ಯೆಜೆಕಿ 24 |
ಯೆಜೆಕಿಯೇಲನ 25 / ಯೆಜೆಕಿ 25 |
ಯೆಜೆಕಿಯೇಲನ 26 / ಯೆಜೆಕಿ 26 |
ಯೆಜೆಕಿಯೇಲನ 27 / ಯೆಜೆಕಿ 27 |
ಯೆಜೆಕಿಯೇಲನ 28 / ಯೆಜೆಕಿ 28 |
ಯೆಜೆಕಿಯೇಲನ 29 / ಯೆಜೆಕಿ 29 |
ಯೆಜೆಕಿಯೇಲನ 30 / ಯೆಜೆಕಿ 30 |
ಯೆಜೆಕಿಯೇಲನ 31 / ಯೆಜೆಕಿ 31 |
ಯೆಜೆಕಿಯೇಲನ 32 / ಯೆಜೆಕಿ 32 |
ಯೆಜೆಕಿಯೇಲನ 33 / ಯೆಜೆಕಿ 33 |
ಯೆಜೆಕಿಯೇಲನ 34 / ಯೆಜೆಕಿ 34 |
ಯೆಜೆಕಿಯೇಲನ 35 / ಯೆಜೆಕಿ 35 |
ಯೆಜೆಕಿಯೇಲನ 36 / ಯೆಜೆಕಿ 36 |
ಯೆಜೆಕಿಯೇಲನ 37 / ಯೆಜೆಕಿ 37 |
ಯೆಜೆಕಿಯೇಲನ 38 / ಯೆಜೆಕಿ 38 |
ಯೆಜೆಕಿಯೇಲನ 39 / ಯೆಜೆಕಿ 39 |
ಯೆಜೆಕಿಯೇಲನ 40 / ಯೆಜೆಕಿ 40 |
ಯೆಜೆಕಿಯೇಲನ 41 / ಯೆಜೆಕಿ 41 |
ಯೆಜೆಕಿಯೇಲನ 42 / ಯೆಜೆಕಿ 42 |
ಯೆಜೆಕಿಯೇಲನ 43 / ಯೆಜೆಕಿ 43 |
ಯೆಜೆಕಿಯೇಲನ 44 / ಯೆಜೆಕಿ 44 |
ಯೆಜೆಕಿಯೇಲನ 45 / ಯೆಜೆಕಿ 45 |
ಯೆಜೆಕಿಯೇಲನ 46 / ಯೆಜೆಕಿ 46 |
ಯೆಜೆಕಿಯೇಲನ 47 / ಯೆಜೆಕಿ 47 |
ಯೆಜೆಕಿಯೇಲನ 48 / ಯೆಜೆಕಿ 48 |