A A A A A
×

ಕನ್ನಡ ಬೈಬಲ್ (KNCL) 2016

ಯೆಜೆಕಿಯೇಲನ ೩೨

ಹನ್ನೆರಡನೆಯ ವರ್ಷದ ಹನ್ನೆರಡನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರಸ್ವಾಮಿ ನನಗೆ ಅನುಗ್ರಹಿಸಿದ ವಾಣಿ ಇದು:
“ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನನ್ನು ಕುರಿತು ಶೋಕಗೀತೆಯೊಂದನ್ನು ನುಡಿ: “ನೀನು ಮೃಗರಾಜನೆನಿಸಿಕೊಂಡಿರುವೆ ಜನಾಂಗಗಳಲ್ಲಿ, ಇಗೋ ದೊಡ್ಡ ಮೊಸಳೆಯಾಗಿಬಿಟ್ಟಿರುವೆ ಮಹಾನದಿಯಲ್ಲಿ. ನೀನಿದ್ದ ನದಿಗಳ ಭೇದಿಸಿಕೊಂಡು ಬಂದು, ಕಾಲಿಂದ ನೀ ಕಲಕಿರುವೆ ಅದರ ನೀರನ್ನು, ತುಳಿದು ಬದಿಮಾಡಿರುವೆ ಜನಾಂಗವೆಂಬ ಹೊಳೆಯನ್ನು.”
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಗುಂಪಾಗಿ ಕೂಡಿದ ಬಹುಜನಾಂಗಗಳ ಕೈಯಿಂದ, ನಾ ನಿನ್ನ ಮೇಲೆ ಬೀಸುವೆ ಬಲೆಯೊಂದ.
ಆಕಾಶದ ಪಕ್ಷಿಗಳು ನಿನ್ನ ಮೇಲೆರಗುವಂತೆ, ಸಮಸ್ತ ಭೂಜಂತುಗಳು ನಿನ್ನಿಂದ ತೃಪ್ತಿಗೊಳ್ಳುವಂತೆ, ನಿನ್ನನೆಸೆದುಬಿಡುವೆ ನೆಲದ ಮೇಲೆ ಬಯಲಿಗೆ.
ಚೆಲ್ಲಲಾಗುವುದು ನಿನ್ನ ಮಾಂಸಖಂಡಗಳನು ಗುಡ್ಡೆಗಳ ಮೇಲೆ, ತುಂಬಲಾಗುವುದು ಕಣಿವೆಗಳನು ನಿನ್ನ ಮೂಳೆ ಮುಸುಕುಗಳಿಂದಲೆ.
ತೋಯಿಸುವೆನು ಸಮನಾಡನು ನಿನ್ನ ರಕ್ತಪ್ರವಾಹದಿಂದ, ಹಳ್ಳಕೊಳ್ಳಗಳು ತುಂಬಿ ತುಳುಕುವುವು ಅದರಿಂದ.
ನಿನ್ನ ಬೆಳಕನು ನಾ ನಂದಿಸಿ ಕತ್ತಲಾಗಿಸುವಾಗ, ಮುಚ್ಚುವೆನು ಸೂರ್ಯಚಂದ್ರ ನಕ್ಷತ್ರಗಳನು ಮೋಡಮುಸುಕಿನಿಂದ.
ನಿನ್ನ ಮೇಲೆ ಗಗನದಲಿ ಮಿನುಗುವ ಸಕಲ ಜ್ಯೋತಿಗಳನು ಮುಸುಕು ಮಾಡುವೆನು, ನಿನ್ನ ನಾಡಿನೊಳು ಕತ್ತಲನೊಡ್ಡುವೆನು.
“ನಿನ್ನ ವಿನಾಶದ ಸುದ್ದಿಯನ್ನು, ರಾಷ್ಟ್ರಗಳಲ್ಲಿ ನಿನಗೇ ತಿಳಿಯದ ದೇಶಗಳಿಗೆ ನಾನು ಮುಟ್ಟಿಸುವಾಗ ಆ ದೇಶಗಳು ಕಳವಳಪಡುವುವು.
೧೦
ಹೌದು, ಬಹುರಾಷ್ಟ್ರಗಳು ನಿನ್ನ ಗತಿಗೆ ಬೆಚ್ಚಿಬೆರಗಾಗುವಂತೆ ಮಾಡುವೆನು; ನಾನು ನನ್ನ ಖಡ್ಗವನ್ನು ಅವುಗಳ ಅರಸರ ಕಣ್ಣೆದುರಿಗೆ ಬೀಳಿಸುವಾಗ ಅವರು ನಿನ್ನ ದುರ್ಗತಿಯನ್ನು ನೆನೆಸಿ ಭಯಭ್ರಾಂತರಾಗುವರು; ನಿನ್ನ ಪತನದಿಂದ ಪ್ರತಿಯೊಬ್ಬನು ತನ್ನ ಪ್ರಾಣಾಪಾಯಕ್ಕೆ ಕ್ಷಣಕ್ಷಣವು ನಡುಗುವನು.”
೧೧
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ಬಾಬಿಲೋನಿನ ಅರಸನ ಖಡ್ಗ ನಿನ್ನ ಮೇಲೆ ಬೀಳುವುದು.
೧೨
ನಿನ್ನ ಬಹುಪ್ರಜೆಯನ್ನು ಅತಿ ಭಯಾನಕ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಈಜಿಪ್ಟ್ ಹೆಚ್ಚಳಪಡುವ ವಸ್ತುಗಳನ್ನೇ ಅವರು ಸೂರೆಮಾಡುವರು; ಅದರ ಜನ ನಿರ್ನಾಮವಾಗುವುದು.
೧೩
ದೊಡ್ಡ ಪ್ರವಾಹಗಳ ತೀರದಲ್ಲಿನ ಪಶುಗಳನ್ನೆಲ್ಲಾ ನಾಶಪಡಿಸುವೆನು; ಆ ನೀರನ್ನು ಕಲಕಲು ಇನ್ನು ಯಾವ ಮನುಷ್ಯನೂ ಅಲ್ಲಿ ಹೆಜ್ಜೆಯಿಡನು, ಯಾವ ಪಶುವೂ ಅಲ್ಲಿ ಗೊರಸಿಕ್ಕದು.
೧೪
ಆಗ ಆ ನೀರು ತಿಳಿಯಾಗುವಂತೆ, ಆ ಪ್ರವಾಹಗಳು ಎಣ್ಣೆಯ ಹಾಗೆ ಹರಿಯುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ.
೧೫
ಈಜಿಪ್ಟಿನಲ್ಲಿ ತುಂಬಿದ್ದ ಸೊತ್ತನ್ನೆಲ್ಲಾ ಕರಗಿಸಿ ಆ ದೇಶವನ್ನು ಹಾಳುಪಾಳುಮಾಡಿ ಅಲ್ಲಿನ ಸಕಲ ನಿವಾಸಿಗಳನ್ನು ಸಂಹರಿಸಿದಾಗ ನಾನೇ ಸರ್ವೇಶ್ವರ ಎಂದು ಗೊತ್ತಾಗುವುದು.
೧೬
ಪ್ರಲಾಪಿಸುವವರು ಈ ಶೋಕಗೀತವನ್ನು ಹಾಡಲಿ; ಜನಾಂಗಗಳ ಯುವತಿಯರು ಹೀಗೆ ಗೋಳಿಡಲಿ; ಈಜಿಪ್ಟಿಗಾಗಿಯೂ ಅಲ್ಲಿನ ಬಹುಪ್ರಜೆಗಾಗಿಯೂ ದುಃಖಿಸಿ ಈ ಗೀತೆಯನ್ನು ಹಾಡಲಿ; ಇದು ಸರ್ವೇಶ್ವರನಾದ ದೇವರ ನುಡಿ.”
೧೭
ಹನ್ನೆರಡನೆಯ ವರ್ಷದ ಹದಿನೈದನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ದಯಪಾಲಿಸಿದರು -
೧೮
“ನರಪುತ್ರನೇ, ನೀನು ಈಜಿಪ್ಟಿನ ಅಸಂಖ್ಯಾತ ಪ್ರಜೆಗಾಗಿ ಗೋಳಾಡಿ ಅವರನ್ನೂ ಘನವಾದ ಜನಾಂಗಗಳವರನ್ನೂ ಅಧೋಲೋಕಕ್ಕೆ, ಪ್ರೇತಗಳ ಜೊತೆಗೆ ತಳ್ಳಿಬಿಡು.
೧೯
ಈಜಿಪ್ಟೇ, ನೀನು ಸೌಂದರ್ಯದಲ್ಲಿ ಯಾರಿಗೆ ಕಡಿಮೆ? ಪಾತಾಳಕ್ಕೆ ಇಳಿದು ನೆಲಸು ಸುನ್ನತಿಹೀನರ ನಡುವೆ.
೨೦
ಖಡ್ಗಹತರ ಮಧ್ಯೆ ಬೀಳು, ಕತ್ತಿಯನ್ನು ಎತ್ತಿಹಿಡಿಯಲಾಗಿದೆ. ಅಧೋಲೋಕದವರೇ, ಈಜಿಪ್ಟನ್ನು ಅದರ ಅನಂತ ಪ್ರಜೆಗಳನ್ನೂ ಎಳೆದುಕೊಳ್ಳಿ.
೨೧
ಪಾತಾಳದಲ್ಲಿನ ಬಲಿಷ್ಠಶೂರರು ಅದನ್ನೂ ಅದರ ಸಹಾಯಕರನ್ನೂ ನೋಡಿ, “ಓಹೋ, ಇವರು ಸುನ್ನತಿಹೀನರು, ಖಡ್ಗಹತರು, ಇಳಿದುಬಂದು ಒರಗಿಬಿದ್ದರು’ ಎಂದುಕೊಳ್ಳುವರು.
೨೨
“ಅಸ್ಸೀರಿಯ ಮತ್ತು ಅದರ ಜನತೆ ಯಾವಾಗಲು ಅಲ್ಲಿರುವುವು; ಆ ಜನರ ಗೋರಿಗಳು ಅದನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸಂಹೃತರು, ಖಡ್ಗಹತರು.
೨೩
ಅವರ ಗೋರಿಗಳು ಅಧೋಲೋಕದ ಅಗಾಧ ಸ್ಥಳಗಳಲ್ಲಿ ಹರಡಿಕೊಂಡಿವೆ; ಅವರು ಅಸ್ಸೀರಿಯದ ಗೋರಿಯ ಸುತ್ತಲಿದ್ದಾರೆ; ಜೀವಲೋಕದಲ್ಲಿ ಭೀಕರವಾಗಿದ್ದ ಇವರೆಲ್ಲರೂ ಸಂಹೃತರು, ಖಡ್ಗಹತರು.
೨೪
“ಏಲಾಮೂ ಅಲ್ಲಿದೆ; ಅದರ ಪ್ರಜೆಯೆಲ್ಲಾ ಅದರ ಗೋರಿಯನ್ನು ಸುತ್ತಿಕೊಂಡಿವೆ.ಅವರೆಲ್ಲರೂ ಸಂಹೃತರು, ಖಡ್ಗಹತರು; ಜೀವಲೋಕದಲ್ಲಿ ಭೀಕರವಾಗಿದ್ದ ಆ ಸುನ್ನತಿಹೀನರು ಅಧೋಲೋಕಕ್ಕೆ ಇಳಿದು ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.
೨೫
ಏಲಾಮು ಮಲಗುವುದಕ್ಕೆ, ಹತರಾದ ಅದರ ಪ್ರಜೆಗಳೆಲ್ಲರ ನಡುವೆ ಸ್ಥಳವನ್ನು ಏರ್ಪಡಿಸಿದ್ದಾರೆ, ಅವರ ಗೋರಿಗಳು ಅದರ ಸುತ್ತಮುತ್ತಲಿವೆ. ಅವರೆಲ್ಲರೂ ಸುನ್ನತಿಹೀನರು, ಖಡ್ಗಹತರು; ಅವರು ಜೀವಲೋಕದಲ್ಲಿ ಭೀಕರರಾಗಿದ್ದು ಪ್ರೇತಗಳ ಜೊತೆಗೆ ಸೇರಿ ಅವಮಾನಪಟ್ಟವರಾಗಿದ್ದಾರೆ. ಸಂಹೃತರ ಮಧ್ಯದಲ್ಲೇ ಏಲಾಮಿಗೆ ಸ್ಥಳ ಏರ್ಪಾಡಾಗಿದೆ.
೨೬
“ಮೆಷೆಕ್, ತೂಬಲ್ ಅವುಗಳ ಎಲ್ಲಾ ಪ್ರಜೆಯೂ ಅಲ್ಲಿರುತ್ತಾರೆ; ಆ ಪ್ರಜೆಗಳ ಗೋರಿಗಳು ಅವುಗಳನ್ನು ಸುತ್ತಿಕೊಂಡಿವೆ; ಅವರೆಲ್ಲರೂ ಸುನ್ನತಿಹೀನರು, ಖಡ್ಗಹತರು, ಜೀವಲೋಕದಲ್ಲಿ ಅವರು ಭೀಕರರಾಗಿದ್ದರಲ್ಲವೇ?
೨೭
ಪೂರ್ವದಲ್ಲಿ ಯಾವ ಸುನ್ನತಿಹೀನ ಶೂರರು, ಜೀವಲೋಕದೊಳಗೆ ಬಲಿಷ್ಠರಿಗೂ ಭೀಕರರಾಗಿದ್ದು, ಹತರಾಗಿ ಆಯುಧ ಸಹಿತ ಪಾತಾಳಕ್ಕೆ ಇಳಿದು, ಕತ್ತಿಗಳನ್ನು ತಲೆದಿಂಬು ಮಾಡಿಕೊಂಡು, ತಮ್ಮ ಅಸ್ಥಿಗಳ ಮೇಲೆ ತಮ್ಮ ದುಷ್ಕೃತ್ಯಗಳ ಭಾರವನ್ನು ಹೊತ್ತುಕೊಂಡಿದ್ದರೋ ಅವರ ನಡುವೆ ಮೆಷೆಕಿನವರೂ, ತೂಬಲಿನವರೂ ನೆಲಸದೆಹೋಗುವರೇ?
೨೮
“ಹೀಗೆ ಈಜಿಪ್ಟರು ಸುನ್ನತಿಹೀನರ ಮಧ್ಯೆ ನಾಶವಾಗಿ ಖಡ್ಗಹತರ ನಡುವೆ ಸೇರಿಹೋಗುವರು.
೨೯
“ಎದೋಮೂ ಅದರ ಅರಸರೂ ಎಲ್ಲ ಸರದಾರರೂ ಅಲ್ಲಿದ್ದಾರೆ; ಅವರು ಹಿಂಸಾಚಾರಿಗಳಾಗಿದ್ದು, ಖಡ್ಗಹತರ ಸಂಗಡ ಬಿದ್ದಿರುತ್ತಾರೆ; ಸುನ್ನತಿಹೀನರೊಡನೆ ಪ್ರೇತಗಳ ನಡುವೆ ನೆಲಸಿದ್ದಾರೆ.
೩೦
“ಉತ್ತರದೇಶದ ಸಕಲ ರಾಜರುಗಳೂ ಸಮಸ್ತ ಸಿದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರರಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೆಗೊಂಡು, ಖಡ್ಗಹತರ ಮಧ್ಯೆ ಸುನ್ನತಿಹೀನರಾಗಿ ಬಿದ್ದು, ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.
೩೧
“ಫರೋಹನು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಪ್ರಜೆಯ ವಿಷಯದಲ್ಲಿ ಸಮಾಧಾನಹೊಂದುವನು; ಹೌದು, ಫರೋಹನೂ ಖಡ್ಗಹತರಾದ ಅವನ ಸಕಲ ಸೈನಿಕರೂ ಸಮಾಧಾನಹೊಂದುವರು. ಇದು ಸರ್ವೇಶ್ವರನಾದ ದೇವರ ನುಡಿ.
೩೨
“ಇಗೋ, ಜೀವಲೋಕದಲ್ಲಿ ನಾನು ನನ್ನ ಭಯವನ್ನು ಹುಟ್ಟಿಸಿದ್ದೇನೆ; ಫರೋಹನೂ ಅವನ ಸಮಸ್ತ ಪ್ರಜೆಯೂ ಸುನ್ನತಿಹೀನರ ಮಧ್ಯೆ ಖಡ್ಗಹತರ ನಡುವೆ ಸೇರಿಹೋಗುವರು,” ಎಂಬುದು ಸರ್ವೇಶ್ವರನಾದ ದೇವರ ನುಡಿ.
ಯೆಜೆಕಿಯೇಲನ ೩೨:1
ಯೆಜೆಕಿಯೇಲನ ೩೨:2
ಯೆಜೆಕಿಯೇಲನ ೩೨:3
ಯೆಜೆಕಿಯೇಲನ ೩೨:4
ಯೆಜೆಕಿಯೇಲನ ೩೨:5
ಯೆಜೆಕಿಯೇಲನ ೩೨:6
ಯೆಜೆಕಿಯೇಲನ ೩೨:7
ಯೆಜೆಕಿಯೇಲನ ೩೨:8
ಯೆಜೆಕಿಯೇಲನ ೩೨:9
ಯೆಜೆಕಿಯೇಲನ ೩೨:10
ಯೆಜೆಕಿಯೇಲನ ೩೨:11
ಯೆಜೆಕಿಯೇಲನ ೩೨:12
ಯೆಜೆಕಿಯೇಲನ ೩೨:13
ಯೆಜೆಕಿಯೇಲನ ೩೨:14
ಯೆಜೆಕಿಯೇಲನ ೩೨:15
ಯೆಜೆಕಿಯೇಲನ ೩೨:16
ಯೆಜೆಕಿಯೇಲನ ೩೨:17
ಯೆಜೆಕಿಯೇಲನ ೩೨:18
ಯೆಜೆಕಿಯೇಲನ ೩೨:19
ಯೆಜೆಕಿಯೇಲನ ೩೨:20
ಯೆಜೆಕಿಯೇಲನ ೩೨:21
ಯೆಜೆಕಿಯೇಲನ ೩೨:22
ಯೆಜೆಕಿಯೇಲನ ೩೨:23
ಯೆಜೆಕಿಯೇಲನ ೩೨:24
ಯೆಜೆಕಿಯೇಲನ ೩೨:25
ಯೆಜೆಕಿಯೇಲನ ೩೨:26
ಯೆಜೆಕಿಯೇಲನ ೩೨:27
ಯೆಜೆಕಿಯೇಲನ ೩೨:28
ಯೆಜೆಕಿಯೇಲನ ೩೨:29
ಯೆಜೆಕಿಯೇಲನ ೩೨:30
ಯೆಜೆಕಿಯೇಲನ ೩೨:31
ಯೆಜೆಕಿಯೇಲನ ೩೨:32
ಯೆಜೆಕಿಯೇಲನ 1 / ಯೆಜೆಕಿ 1
ಯೆಜೆಕಿಯೇಲನ 2 / ಯೆಜೆಕಿ 2
ಯೆಜೆಕಿಯೇಲನ 3 / ಯೆಜೆಕಿ 3
ಯೆಜೆಕಿಯೇಲನ 4 / ಯೆಜೆಕಿ 4
ಯೆಜೆಕಿಯೇಲನ 5 / ಯೆಜೆಕಿ 5
ಯೆಜೆಕಿಯೇಲನ 6 / ಯೆಜೆಕಿ 6
ಯೆಜೆಕಿಯೇಲನ 7 / ಯೆಜೆಕಿ 7
ಯೆಜೆಕಿಯೇಲನ 8 / ಯೆಜೆಕಿ 8
ಯೆಜೆಕಿಯೇಲನ 9 / ಯೆಜೆಕಿ 9
ಯೆಜೆಕಿಯೇಲನ 10 / ಯೆಜೆಕಿ 10
ಯೆಜೆಕಿಯೇಲನ 11 / ಯೆಜೆಕಿ 11
ಯೆಜೆಕಿಯೇಲನ 12 / ಯೆಜೆಕಿ 12
ಯೆಜೆಕಿಯೇಲನ 13 / ಯೆಜೆಕಿ 13
ಯೆಜೆಕಿಯೇಲನ 14 / ಯೆಜೆಕಿ 14
ಯೆಜೆಕಿಯೇಲನ 15 / ಯೆಜೆಕಿ 15
ಯೆಜೆಕಿಯೇಲನ 16 / ಯೆಜೆಕಿ 16
ಯೆಜೆಕಿಯೇಲನ 17 / ಯೆಜೆಕಿ 17
ಯೆಜೆಕಿಯೇಲನ 18 / ಯೆಜೆಕಿ 18
ಯೆಜೆಕಿಯೇಲನ 19 / ಯೆಜೆಕಿ 19
ಯೆಜೆಕಿಯೇಲನ 20 / ಯೆಜೆಕಿ 20
ಯೆಜೆಕಿಯೇಲನ 21 / ಯೆಜೆಕಿ 21
ಯೆಜೆಕಿಯೇಲನ 22 / ಯೆಜೆಕಿ 22
ಯೆಜೆಕಿಯೇಲನ 23 / ಯೆಜೆಕಿ 23
ಯೆಜೆಕಿಯೇಲನ 24 / ಯೆಜೆಕಿ 24
ಯೆಜೆಕಿಯೇಲನ 25 / ಯೆಜೆಕಿ 25
ಯೆಜೆಕಿಯೇಲನ 26 / ಯೆಜೆಕಿ 26
ಯೆಜೆಕಿಯೇಲನ 27 / ಯೆಜೆಕಿ 27
ಯೆಜೆಕಿಯೇಲನ 28 / ಯೆಜೆಕಿ 28
ಯೆಜೆಕಿಯೇಲನ 29 / ಯೆಜೆಕಿ 29
ಯೆಜೆಕಿಯೇಲನ 30 / ಯೆಜೆಕಿ 30
ಯೆಜೆಕಿಯೇಲನ 31 / ಯೆಜೆಕಿ 31
ಯೆಜೆಕಿಯೇಲನ 32 / ಯೆಜೆಕಿ 32
ಯೆಜೆಕಿಯೇಲನ 33 / ಯೆಜೆಕಿ 33
ಯೆಜೆಕಿಯೇಲನ 34 / ಯೆಜೆಕಿ 34
ಯೆಜೆಕಿಯೇಲನ 35 / ಯೆಜೆಕಿ 35
ಯೆಜೆಕಿಯೇಲನ 36 / ಯೆಜೆಕಿ 36
ಯೆಜೆಕಿಯೇಲನ 37 / ಯೆಜೆಕಿ 37
ಯೆಜೆಕಿಯೇಲನ 38 / ಯೆಜೆಕಿ 38
ಯೆಜೆಕಿಯೇಲನ 39 / ಯೆಜೆಕಿ 39
ಯೆಜೆಕಿಯೇಲನ 40 / ಯೆಜೆಕಿ 40
ಯೆಜೆಕಿಯೇಲನ 41 / ಯೆಜೆಕಿ 41
ಯೆಜೆಕಿಯೇಲನ 42 / ಯೆಜೆಕಿ 42
ಯೆಜೆಕಿಯೇಲನ 43 / ಯೆಜೆಕಿ 43
ಯೆಜೆಕಿಯೇಲನ 44 / ಯೆಜೆಕಿ 44
ಯೆಜೆಕಿಯೇಲನ 45 / ಯೆಜೆಕಿ 45
ಯೆಜೆಕಿಯೇಲನ 46 / ಯೆಜೆಕಿ 46
ಯೆಜೆಕಿಯೇಲನ 47 / ಯೆಜೆಕಿ 47
ಯೆಜೆಕಿಯೇಲನ 48 / ಯೆಜೆಕಿ 48