A A A A A
×

ಕನ್ನಡ ಬೈಬಲ್ (KNCL) 2016

ಯೆಜೆಕಿಯೇಲನ ೨೧

ಸರ್ವೇಶ್ವರ ನನಗೆ ಈ ವಾಣಿಯನ್ನು ದಯಪಾಲಿಸಿದರು -
“ನರಪುತ್ರನೇ, ನೀನು ಜೆರುಸಲೇಮಿಗೆ ಅಭಿಮುಖನಾಗಿ, ಅಲ್ಲಿನ ಪವಿತ್ರಸ್ಥಳಗಳ ಕಡೆಗೆ ಮಾತಾಡುತ್ತಾ, ಇಸ್ರಯೇಲ್ ನಾಡಿನ ಪ್ರಸ್ತಾಪವನ್ನೆತ್ತಿ ಆ ನಾಡಿಗೆ ಹೀಗೆ ಪ್ರವಾದಿಸು:
ಸರ್ವೇಶ್ವರ ಇಂತೆನ್ನುತ್ತಾರೆ - ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಿಬಿಡುವೆನು.
ನಾನು ನಿನ್ನಲ್ಲಿನ ಸಜ್ಜನರನ್ನೂ ದುರ್ಜನರನ್ನೂ ಸಂಹರಿಸಬೇಕೆಂದಿರುವುದರಿಂದ ನನ್ನ ಖಡ್ಗ ಒರೆಯಿಂದ ಹೊರಟು ದಕ್ಷಿಣದಿಂದ ಉತ್ತರವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು;
ಆಗ ಸರ್ವೇಶ್ವರನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ ಎಂಬುದು ಎಲ್ಲ ನರಮಾನವರಿಗೂ ತಿಳಿಯುವುದು; ಅದು ಪುನಃ ಒರೆಗೆ ಸೇರದು.
ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು.
‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳುವರು. ಆಗ ನೀನು ಅವರಿಗೆ - ‘ದುರ್ವಾರ್ತೆಯ ನಿಮಿತ್ತ ನರಳುತ್ತಿದ್ದೇನೆ; ಇಗೋ, ವಿಪತ್ತು ಬಂದಿತು; ಎಲ್ಲರ ಹೃದಯವು ಕರಗಿ ನೀರಾಗುವುದು, ಎಲ್ಲರ ಕೈ ಜೋಲುಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಅದರುವುದು; ಇಗೋ, ಬಂದಿತು, ಬಂದಾಯಿತು! ಇದು ಸರ್ವೇಶ್ವರನಾದ ದೇವರ ನುಡಿ,’ ಎಂದು ಉತ್ತರಕೊಡು.”
ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
“ನರಪುತ್ರನೇ, ಪ್ರವಾದಿಸು ಸರ್ವೇಶ್ವರ ಹೀಗೆನ್ನುತ್ತಾರೆಂದು:
೧೦
ಆಹಾ ಖಡ್ಗ, ಖಡ್ಗ, ಸಾಣೆ ಹಿಡಿದ ಖಡ್ಗ, ಮಸೆದ ಖಡ್ಗ! ಸಾಣೆ ಹಿಡಿದಿದೆ ಹತಿಸುವಂತೆ, ಮಸೆದಿದೆ ಮಿಂಚುವಂತೆ. ಸಂಭ್ರಮಿಸಲಾದೀತೆ ‘ನಮ್ಮ ಕುಮಾರನ ರಾಜದಂಡ’ ಎಂದು? ಮಿಕ್ಕ ದಂಡಗಳನ್ನೆಲ್ಲ ಧಿಕ್ಕರಿಸುವಂಥ ದಂಡವೆಂದುಕೊಂಡು?
೧೧
ಬಳಕೆಗೆ ಸಿದ್ಧವಿರಲೆಂದು ಕೊಡಲಾಗಿದೆ ಆ ಖಡ್ಗ ಮಸೆಯಲಿಕ್ಕೆ ಮಸೆದು, ಸಾಣೆ ಹಿಡಿದು, ಸಜ್ಜಾಗಿದೆ ಅದು ಹತ್ಯಗಾರನ ಹಿಡಿತಕ್ಕೆ.
೧೨
ನರಪುತ್ರನೇ, ಕೂಗು, ಗೋಳಾಡು, ಬಡಿದುಕೋ ಎದೆ! ಎರಗಿದೆ ಆ ಖಡ್ಗ ನನ್ನ ಜನರ ಮೇಲೆ ಇಸ್ರಯೇಲಿನ ಅರಸರೆಲ್ಲರ ಮೇಲೆ ತುತ್ತಾಗುವರು ಅದಕ್ಕೆ ಜನನಾಯಕರು ಜನರೊಂದಿಗೆ.
೧೩
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಸಂಭವಿಸಿದೆ ಪರಿಶೋಧನೆ ಏನು ಗತಿ, ರಾಜದಂಡವೇ ನಾಶವಾದರೆ!
೧೪
ನರಪುತ್ರನೇ, ಪ್ರವಾದಿಸು, ಚಪ್ಪಾಳೆ ಬಡಿ, ಹತಿಸುವುದಾ ಖಡ್ಗ ಇಮ್ಮಡಿ ಮುಮ್ಮಡಿ. ಪ್ರಜೆಯನ್ನು ಸಂಹರಿಸುವುದಾ ಖಡ್ಗ ಅಧಿಪತಿಯನ್ನೇ ಸುತ್ತಲು ಬೀಸಿ ಹತಿಸುವುದಾ ಖಡ್ಗ.
೧೫
ನೀರಾಗುವುದು ಜನರ ಹೃದಯ, ಎಡವಿ ಬೀಳುವರು ಬಹುಜನ. ಪುರದ್ವಾರಗಳಿಗೇ ತಂದಿರುವೆನು ಹತಿಸುವಾ ಖಡ್ಗವ. ಮಿನುಗುತಿಹುದದು ಮಿಂಚಿನಂತೆ ಹರಿತವಿದೆ ವಧೆಗಾಗುವ ಕತ್ತಿಯಂತೆ.
೧೬
ಖಡ್ಗವೇ, ಏಕಾಗ್ರವಾಗಿ ಹೋಗು ಬಲಕೆ ಸಜ್ಜಾಗಿ ಸಾಗು ಎಡಕೆ ಹೊರಡು ನಿನ್ನ ಮುಖವಿದ್ದ ಕಡೆಗೆ.
೧೭
ನಾನೂ ರೋಷ ತೀರಿಸಿಕೊಳ್ವೆ ಚಪ್ಪಾಳೆ ತಟ್ಟಿ ಇದು ಸರ್ವೇಶ್ವರನಾದ ನನ್ನ ನುಡಿ.”
೧೮
ಸರ್ವೇಶ್ವರ ನನಗೆ ಮತ್ತೊಂದು ವಾಣಿಯನ್ನು ದಯಪಾಲಿಸಿದರು - “ನರಪುತ್ರನೇ,
೧೯
ಬಾಬಿಲೋನಿನ ಅರಸನ ಖಡ್ಗ ಬರುವುದಕ್ಕೆ ಎರಡು ದಾರಿಗಳುಳ್ಳ ನಕ್ಷೆಯನ್ನು ಬರೆ; ಅವೆರಡು ದಾರಿಗಳು ಒಂದೇ ದೇಶದಿಂದ ಹೊರಟಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.
೨೦
ಅಮ್ಮೋನ್ಯರ ರಬ್ಬಾ ಪಟ್ಟಣಕ್ಕೂ ಜುದೇಯದಲ್ಲಿ ಕೋಟೆಕೊತ್ತಲಗಳಿಂದ ಕೂಡಿದ ಜೆರುಸಲೇಮಿಗೂ ಆ ಖಡ್ಗ ಬರುವುದಕ್ಕೆ ದಾರಿಗಳನ್ನು ಮಾಡು.
೨೧
ಮಾರ್ಗ ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಪ್ರಾರಂಭದಲ್ಲಿ ಬಾಬಿಲೋನಿನ ಅರಸ ಶಕುನ ನೋಡಲು ನಿಂತಿರುವನು. ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆ ಕೇಳಿ, ಹಸ್ತರೇಖೆಯನ್ನು ಪರೀಕ್ಷಿಸಿದ್ದಾನೆ.
೨೨
ಜೆರುಸಲೇಮ್ ಗುರುತಿನ ಬಾಣ ಅವನ ಬಲಗೈಗೆ ಸಿಕ್ಕಿದೆ; ಭಿತ್ತಿಭೇದಕ ಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ಬಾಯಿತೆರೆದು ಸಂಹಾರ ಧ್ವನಿಮಾಡಿ, ಹೌದು ಭಿತ್ತಿಭೇದಕಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ದಿಬ್ಬಹಾಕಿ, ಒಡ್ಡು ಕಟ್ಟಬೇಕೆಂಬ ಸೂಚನೆ ಅದರಿಂದ ಬಂದಿತು.
೨೩
ಆದರೆ ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸೆಯಿಟ್ಟು, ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವರು ತನ್ನ ಕೈಗೆ ಸಿಕ್ಕಿಬೀಳಲೆಂದು ಅವರ ಅಧರ್ಮವನ್ನು ಅವನು ಬೆಳಕಿಗೆ ತರುವನು.
೨೪
ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಿಮ್ಮ ಅಪರಾಧಗಳು ಬೆಳಕಿಗೆ ಬಂದು, ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ಪ್ರತ್ಯಕ್ಷವಾಗಿ, ನೀವು ನಿಮ್ಮ ಅಧರ್ಮವನ್ನು ನನ್ನ ನೆನಪಿಗೆ ತಂದಿರುವಿರಿ; ಆದಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.
೨೫
ಇಸ್ರಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ, ನಿನಗೆ ಸಮಯವು ಸಮೀಪಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.
೨೬
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿನ್ನ ರುಮಾಲನ್ನು ಕಿತ್ತುಬಿಡು, ಕಿರೀಟವನ್ನು ತೆಗೆದುಹಾಕು. ಎಲ್ಲವೂ ಮೊದಲಿದ್ದ ಹಾಗೆ ಇರುವುದಿಲ್ಲ; ಕೆಳಗಿರುವುದನ್ನು ಮೇಲೆ ಸೇರಿಸಲಾಗುವುದು, ಮೇಲಿರುವುದನ್ನು ಕೆಳಕ್ಕಿಳಿಸಲಾಗುವುದು.
೨೭
ಧ್ವಂಸ, ಧ್ವಂಸ, ನಾನು ಧ್ವಂಸ ಮಾಡುವೆನು; ರಾಜ್ಯಕ್ಕೆ ಬಾಧ್ಯನು ಬರುವುದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.
೨೮
“ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲೂ ಅವರು ಮಾಡುವ ದೂಷಣೆಯ ವಿಷಯದಲ್ಲೂ ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ಖಡ್ಗ, ಖಡ್ಗ, ಸಂಹರಿಸುವುದಕ್ಕೆ ಹಿರಿದಿದೆ; ಮಿಂಚುವಂತೆ ಪೂರ್ಣ ಮಸೆಯಲಾಗಿದೆ.
೨೯
ಅಮ್ಮೋನೇ, ನಿನ್ನ ಜೋಯಿಸರು ಮಿಥ್ಯೆಯನ್ನು ಕಲ್ಪಿಸಿಕೊಂಡು ಸುಳ್ಳುಸುಳ್ಳಾಗಿ ಕಣಿ ಹೇಳುತ್ತಿದ್ದಾರೆ. ಸಮಯವು ಸಮೀಪಿಸಿ ಅಪರಾಧದ ಕಡೆಗಾಲವು ಸಂಭವಿಸಿ ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು; ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಬೀಳುವೆ.
೩೦
ಕತ್ತಿಯನ್ನು ಒರೆಗೆ ಸೇರಿಸು. ನೀನು ಹುಟ್ಟಿದ ಸ್ಥಳದಲ್ಲಿ, ನಿನ್ನ ಜನ್ಮಭೂಮಿಯಲ್ಲಿ, ನಿನಗೆ ನ್ಯಾಯತೀರಿಸುವೆನು.
೩೧
ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ, ರೋಷಾಗ್ನಿಯನ್ನು ಕಾರಿ, ಕ್ರೂರಿಗಳನ್ನು ಹಾಳುಮಾಡುವುದರಲ್ಲಿ ಗಟ್ಟಿಗರಾದವರ ಕೈಗೆ ಸಿಕ್ಕಿಸುವೆನು.
೩೨
ನೀನು ಅಗ್ನಿಗೆ ಆಹುತಿಯಾಗುವೆ; ನೀನು ರಕ್ತ ನಾಡಿನಲ್ಲೆಲ್ಲಾ ಇಂಗಿರುವುದು; ನೀನು ಇನ್ನು ನೆನಪಿಗೆ ಬರುವುದಿಲ್ಲ; ಸರ್ವೇಶ್ವರನಾದ ನಾನೇ ಇದನ್ನು ನುಡಿದಿದ್ದೇನೆ.”
ಯೆಜೆಕಿಯೇಲನ ೨೧:1
ಯೆಜೆಕಿಯೇಲನ ೨೧:2
ಯೆಜೆಕಿಯೇಲನ ೨೧:3
ಯೆಜೆಕಿಯೇಲನ ೨೧:4
ಯೆಜೆಕಿಯೇಲನ ೨೧:5
ಯೆಜೆಕಿಯೇಲನ ೨೧:6
ಯೆಜೆಕಿಯೇಲನ ೨೧:7
ಯೆಜೆಕಿಯೇಲನ ೨೧:8
ಯೆಜೆಕಿಯೇಲನ ೨೧:9
ಯೆಜೆಕಿಯೇಲನ ೨೧:10
ಯೆಜೆಕಿಯೇಲನ ೨೧:11
ಯೆಜೆಕಿಯೇಲನ ೨೧:12
ಯೆಜೆಕಿಯೇಲನ ೨೧:13
ಯೆಜೆಕಿಯೇಲನ ೨೧:14
ಯೆಜೆಕಿಯೇಲನ ೨೧:15
ಯೆಜೆಕಿಯೇಲನ ೨೧:16
ಯೆಜೆಕಿಯೇಲನ ೨೧:17
ಯೆಜೆಕಿಯೇಲನ ೨೧:18
ಯೆಜೆಕಿಯೇಲನ ೨೧:19
ಯೆಜೆಕಿಯೇಲನ ೨೧:20
ಯೆಜೆಕಿಯೇಲನ ೨೧:21
ಯೆಜೆಕಿಯೇಲನ ೨೧:22
ಯೆಜೆಕಿಯೇಲನ ೨೧:23
ಯೆಜೆಕಿಯೇಲನ ೨೧:24
ಯೆಜೆಕಿಯೇಲನ ೨೧:25
ಯೆಜೆಕಿಯೇಲನ ೨೧:26
ಯೆಜೆಕಿಯೇಲನ ೨೧:27
ಯೆಜೆಕಿಯೇಲನ ೨೧:28
ಯೆಜೆಕಿಯೇಲನ ೨೧:29
ಯೆಜೆಕಿಯೇಲನ ೨೧:30
ಯೆಜೆಕಿಯೇಲನ ೨೧:31
ಯೆಜೆಕಿಯೇಲನ ೨೧:32
ಯೆಜೆಕಿಯೇಲನ 1 / ಯೆಜೆಕಿ 1
ಯೆಜೆಕಿಯೇಲನ 2 / ಯೆಜೆಕಿ 2
ಯೆಜೆಕಿಯೇಲನ 3 / ಯೆಜೆಕಿ 3
ಯೆಜೆಕಿಯೇಲನ 4 / ಯೆಜೆಕಿ 4
ಯೆಜೆಕಿಯೇಲನ 5 / ಯೆಜೆಕಿ 5
ಯೆಜೆಕಿಯೇಲನ 6 / ಯೆಜೆಕಿ 6
ಯೆಜೆಕಿಯೇಲನ 7 / ಯೆಜೆಕಿ 7
ಯೆಜೆಕಿಯೇಲನ 8 / ಯೆಜೆಕಿ 8
ಯೆಜೆಕಿಯೇಲನ 9 / ಯೆಜೆಕಿ 9
ಯೆಜೆಕಿಯೇಲನ 10 / ಯೆಜೆಕಿ 10
ಯೆಜೆಕಿಯೇಲನ 11 / ಯೆಜೆಕಿ 11
ಯೆಜೆಕಿಯೇಲನ 12 / ಯೆಜೆಕಿ 12
ಯೆಜೆಕಿಯೇಲನ 13 / ಯೆಜೆಕಿ 13
ಯೆಜೆಕಿಯೇಲನ 14 / ಯೆಜೆಕಿ 14
ಯೆಜೆಕಿಯೇಲನ 15 / ಯೆಜೆಕಿ 15
ಯೆಜೆಕಿಯೇಲನ 16 / ಯೆಜೆಕಿ 16
ಯೆಜೆಕಿಯೇಲನ 17 / ಯೆಜೆಕಿ 17
ಯೆಜೆಕಿಯೇಲನ 18 / ಯೆಜೆಕಿ 18
ಯೆಜೆಕಿಯೇಲನ 19 / ಯೆಜೆಕಿ 19
ಯೆಜೆಕಿಯೇಲನ 20 / ಯೆಜೆಕಿ 20
ಯೆಜೆಕಿಯೇಲನ 21 / ಯೆಜೆಕಿ 21
ಯೆಜೆಕಿಯೇಲನ 22 / ಯೆಜೆಕಿ 22
ಯೆಜೆಕಿಯೇಲನ 23 / ಯೆಜೆಕಿ 23
ಯೆಜೆಕಿಯೇಲನ 24 / ಯೆಜೆಕಿ 24
ಯೆಜೆಕಿಯೇಲನ 25 / ಯೆಜೆಕಿ 25
ಯೆಜೆಕಿಯೇಲನ 26 / ಯೆಜೆಕಿ 26
ಯೆಜೆಕಿಯೇಲನ 27 / ಯೆಜೆಕಿ 27
ಯೆಜೆಕಿಯೇಲನ 28 / ಯೆಜೆಕಿ 28
ಯೆಜೆಕಿಯೇಲನ 29 / ಯೆಜೆಕಿ 29
ಯೆಜೆಕಿಯೇಲನ 30 / ಯೆಜೆಕಿ 30
ಯೆಜೆಕಿಯೇಲನ 31 / ಯೆಜೆಕಿ 31
ಯೆಜೆಕಿಯೇಲನ 32 / ಯೆಜೆಕಿ 32
ಯೆಜೆಕಿಯೇಲನ 33 / ಯೆಜೆಕಿ 33
ಯೆಜೆಕಿಯೇಲನ 34 / ಯೆಜೆಕಿ 34
ಯೆಜೆಕಿಯೇಲನ 35 / ಯೆಜೆಕಿ 35
ಯೆಜೆಕಿಯೇಲನ 36 / ಯೆಜೆಕಿ 36
ಯೆಜೆಕಿಯೇಲನ 37 / ಯೆಜೆಕಿ 37
ಯೆಜೆಕಿಯೇಲನ 38 / ಯೆಜೆಕಿ 38
ಯೆಜೆಕಿಯೇಲನ 39 / ಯೆಜೆಕಿ 39
ಯೆಜೆಕಿಯೇಲನ 40 / ಯೆಜೆಕಿ 40
ಯೆಜೆಕಿಯೇಲನ 41 / ಯೆಜೆಕಿ 41
ಯೆಜೆಕಿಯೇಲನ 42 / ಯೆಜೆಕಿ 42
ಯೆಜೆಕಿಯೇಲನ 43 / ಯೆಜೆಕಿ 43
ಯೆಜೆಕಿಯೇಲನ 44 / ಯೆಜೆಕಿ 44
ಯೆಜೆಕಿಯೇಲನ 45 / ಯೆಜೆಕಿ 45
ಯೆಜೆಕಿಯೇಲನ 46 / ಯೆಜೆಕಿ 46
ಯೆಜೆಕಿಯೇಲನ 47 / ಯೆಜೆಕಿ 47
ಯೆಜೆಕಿಯೇಲನ 48 / ಯೆಜೆಕಿ 48