೧ |
ಏಳನೆಯ ವರ್ಷದ ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇಸ್ರಯೇಲಿನ ಹಿರಿಯರಲ್ಲಿ ಕೆಲವರು ಸರ್ವೇಶ್ವರನನ್ನು ಪ್ರಶ್ನಿಸುವುದಕ್ಕೆ ಬಂದು ನನ್ನ ಮುಂದೆ ಕುಳಿತುಕೊಂಡರು. |
೨ |
ಆಗ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು: |
೩ |
“ನರಪುತ್ರನೇ, ಇಸ್ರಯೇಲಿನ ಹಿರಿಯರನ್ನು ಸಂಬೋಧಿಸಿ ಹೀಗೆ ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನನ್ನು ಪ್ರಶ್ನೆಕೇಳುವುದಕ್ಕೆ ಬಂದಿರೋ? ನನ್ನ ಜೀವದಾಣೆ ನಾನು ನಿಮಗೆ ಉತ್ತರ ಕೊಡುವುದೇ ಇಲ್ಲ; ಇದು ಸರ್ವೇಶ್ವರನಾದ ದೇವರ ನುಡಿ. |
೪ |
“ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನೀನೂ ಮನಸ್ಸು ಮಾಡಿರುವೆಯಾ? ಇವರ ಪಿತೃಗಳ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು - |
೫ |
ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಾನು ಇಸ್ರಯೇಲರನ್ನು ಆರಿಸಿಕೊಂಡ ದಿನದಂದು ಯಕೋಬ ಸಂತಾನದವರಿಗೆ ಮಾತುಕೊಟ್ಟು, ‘ನಾನೇ ನಿಮ್ಮ ದೇವರಾದ ಸರ್ವೇಶ್ವರ’ ಎಂದು ಈಜಿಪ್ಟ್ ದೇಶದಲ್ಲಿ ಪ್ರಮಾಣಪೂರ್ವಕವಾಗಿ ತಿಳಿಯಪಡಿಸಿದೆ. |
೬ |
ನಾನು ಅವರಿಗೆ ‘ನಾಡುಗಳಲ್ಲೆಲ್ಲ ಶ್ರೀಮಂತವಾದ ನಾಡನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ನಾಡಿಗೆ ಸೇರಿಸುವೆನು’ ಎಂದು ಪ್ರಮಾಣಮಾಡಿದೆ; |
೭ |
‘ನೀವೆಲ್ಲರೂ ನಿಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಬಿಸಾಡಿಬಿಡಿ; ಈಜಿಪ್ಟಿನ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳಬೇಡಿ; ನಾನು ನಿಮ್ಮ ದೇವರಾದ ಸರ್ವೇಶ್ವರ’ ಎಂದು ಅವರನ್ನು ಎಚ್ಚರಿಸಿದೆ. |
೮ |
ಅವರಾದರೋ ನನ್ನ ಮಾತನ್ನು ಲೆಕ್ಕಿಸದೆ ನನ್ನ ವಿರುದ್ಧ ದಂಗೆಯೆದ್ದರು; ತಮ್ಮ ಕಣ್ಣಿಗೆ ಇಷ್ಟವಾದ ಅಸಹ್ಯವಸ್ತುಗಳನ್ನು ಯಾರೂ ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತ್ಯಜಿಸಲಿಲ್ಲ. ಆಗ ನಾನು ಈಜಿಪ್ಟ್ ದೇಶದಲ್ಲಿ ಇವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು ಎಂದುಕೊಂಡೆ. |
೯ |
ಆದರೂ, ‘ನಿಮ್ಮನ್ನು ಈಜಿಪ್ಟಿನಿಂದ ಪಾರುಮಾಡುವೆನು,’ ಎಂಬುದಾಗಿ ಜನಾಂಗಗಳ ಮುಂದೆಯೇ ನನ್ನನ್ನು ಇವರಿಗೆ ಪ್ರಕಟಿಸಿಕೊಂಡೆನಲ್ಲಾ ಎಂದು ಯೋಚಿಸಿ ಅವರ ಸುತ್ತಮುತ್ತಲಿನ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗದಂತೆ ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ. |
೧೦ |
“ಆದರೂ ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಮರುಭೂಮಿಗೆ ಕರೆದುತಂದೆ. |
೧೧ |
ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅವರಿಗೆ ತಿಳಿಸಿಕೊಟ್ಟೆ. |
೧೨ |
ಇದಲ್ಲದೆ, ತಮ್ಮನ್ನು ದೇವಜನರನ್ನಾಗಿ ಮಾಡಿರುವ ಸರ್ವೇಶ್ವರ ನಾನೇ ಎಂದು ಅವರು ತಿಳಿದುಕೊಳ್ಳುವಂತೆ ನನಗೂ ಅವರಿಗೂ ಸಂಕೇತವಾದ ಸಬ್ಬತ್ ದಿನಗಳನ್ನು ಅವರಿಗೆ ನೇಮಿಸಿದೆ. |
೧೩ |
ಆದರೆ ಇಸ್ರಯೇಲ್ ವಂಶದವರು ಮರುಭೂಮಿಯಲ್ಲಿ ನನ್ನ ವಿರುದ್ಧ ದಂಗೆಯೆದ್ದರು. ಕೈಗೊಳ್ಳುವವರಿಗೆ ಜೀವಾಧಾರವಾದ ನನ್ನ ಆಜ್ಞಾವಿಧಿಗಳನ್ನು ಅನುಸರಿಸದೆ ಧಿಕ್ಕರಿಸಿದರು. ಮುಖ್ಯವಾಗಿ ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿದರು. ಆಗ ನಾನು ‘ಮರುಭೂಮಿಯಲ್ಲಿರುವ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ ಇವರನ್ನು ಧ್ವಂಸಮಾಡುವೆನು’ ಎಂದುಕೊಂಡೆ. |
೧೪ |
ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಬರಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡೆ. |
೧೫ |
ಆಮೇಲೆ, ‘ನಾಡುಗಳಲ್ಲೆಲ್ಲಾ ಶ್ರೇಷ್ಠವಾದ ನಾಡಿಗೆ, ಹಾಲೂ ಜೇನೂ ಹರಿಯುವ ಆ ವಾಗ್ದತ್ತನಾಡಿಗೆ ನಿಮ್ಮನ್ನು ಸೇರಿಸೆನು’ ಎಂದು ಮರುಭೂಮಿಯಲ್ಲಿ ಅವರಿಗೆ ಪ್ರಮಾಣಮಾಡಿ ಹೇಳಿದೆ. |
೧೬ |
ಏಕೆಂದರೆ, ಅವರ ಹೃದಯ ವಿಗ್ರಹಗಳಲ್ಲಿ ಆಸಕ್ತವಾಗಿ, ನನ್ನ ಆಜ್ಞಾವಿಧಿಗಳನ್ನು ಅವರು ಅನುಸರಿಸದೆ ಧಿಕ್ಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಗೊಳಿಸಿದರು. |
೧೭ |
“ಆದರೂ ನಾನು ಅವರನ್ನು ನಾಶಮಾಡಲಿಲ್ಲ; ನನ್ನ ಕಟಾಕ್ಷವು ಅವರನ್ನು ಉಳಿಸಿತು; ನಾನು ಅವರನ್ನು ಮರುಭೂಮಿಯಲ್ಲಿ ನಿರ್ಮೂಲಮಾಡಲಿಲ್ಲ. |
೧೮ |
ಆಮೇಲೆ ನಾನು ಅವರ ಸಂತಾನದವರಿಗೆ - ‘ನೀವು ನಿಮ್ಮ ಪಿತೃಗಳ ಕಟ್ಟಳೆಗಳನ್ನು ಅನುಸರಿಸದೆ ಅವರ ವಿಧಿಗಳನ್ನು ಕೈಗೊಳ್ಳದೆ ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿ; |
೧೯ |
ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ನನ್ನ ಆಜ್ಞೆಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಗೊಂಡು ನಡೆಯಿರಿ. |
೨೦ |
ನಾನು ನೇಮಿಸಿದ ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿರಿ; ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನೀವು ತಿಳಿದುಕೊಳ್ಳುವಂತೆ ಅವು ನಿಮಗೂ ನನಗೂ ಗುರುತಾಗಿರುವುವು’ ಎಂದು ಹೇಳಿದೆ. |
೨೧ |
“ಆದರೆ ಆ ಸಂತಾನದವರು ನನ್ನನ್ನು ಪ್ರತಿಭಟಿಸಿದರು; ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ; ಕೈಗೊಂಡವರಿಗೆ ಜೀವಾಧಾರವಾದ ನನ್ನ ವಿಧಿಗಳನ್ನು ಅನುಸರಿಸಿ ನಡೆಯಲಿಲ್ಲ; ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿದರು. ಆದುದರಿಂದ ನಾನು ‘ಮರುಭೂಮಿಯಲ್ಲೇ ಇವರ ಮೇಲೆ ನನ್ನ ರೋಷಾಗ್ನಿಯನ್ನು ಹರಿಸಿ, ನನ್ನ ಕೋಪವನ್ನು ತೀರಿಸಿಕೊಳ್ಳುವೆನು’ ಎಂದುಕೊಂಡೆ. |
೨೨ |
ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಬಿಡುಗಡೆ ಮಾಡಿದೆನೋ, ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿಮಿತ್ತವೇ ಸಹಿಸಿಕೊಂಡು, ಕೈಯನ್ನು ಹಿಂದಕ್ಕೆ ತೆಗೆದುಕೊಂಡೆ. |
೨೩ |
ಆಮೇಲೆ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳದೆ, ನನ್ನ ವಿಧಿಗಳನ್ನು ನಿರಾಕರಿಸಿ, ನಾನು ನೇಮಿಸಿದ ಸಬ್ಬತ್ ದಿನಗಳನ್ನು ಅಪವಿತ್ರಮಾಡಿ ತಮ್ಮ ಪಿತೃಗಳ ವಿಗ್ರಹಗಳಲ್ಲೇ ಆಸಕ್ತರಾದರು. |
೨೪ |
ಆದ್ದರಿಂದ ನಾನು ‘ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವೆನು’ ಎಂದು ಮರುಭೂಮಿಯಲ್ಲಿ ಪ್ರಮಾಣಮಾಡಿ ಹೇಳಿದೆ. |
೨೫ |
“ಇದಲ್ಲದೆ, ‘ನಾನೇ ಸರ್ವೇಶ್ವರ’ ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ಆಜ್ಞೆಗಳನ್ನೂ ಜೀವಾಧಾರವಲ್ಲದ ವಿಧಿಗಳನ್ನೂ ನೇಮಿಸಿದೆ. |
೨೬ |
ಅವರು ತಮ್ಮ ಚೊಚ್ಚಲುಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು. |
೨೭ |
“ಹೀಗಿರಲು, ನರಪುತ್ರನೇ, ಇಸ್ರಯೇಲ್ ವಂಶದವರಿಗೆ ಈ ಮಾತನ್ನು ಹೇಳು - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳು ಪುನಃ ದ್ರೋಹಮಾಡಿ ನನ್ನನ್ನು ದೂಷಿಸಿದ್ದಾರೆ. |
೨೮ |
ನಾನು ಪ್ರಮಾಣಪೂರ್ವಕವಾಗಿ ಅವರಿಗೆ ವಾಗ್ದಾನಮಾಡಿದ ನಾಡಿಗೆ ಅವರನ್ನು ಸೇರಿಸಿದ ಮೇಲೆ, ಅವರು ಎತ್ತರವಾದ ಎಲ್ಲ ಗುಡ್ಡಗಳನ್ನೂ ಸೊಂಪಾಗಿ ಬೆಳೆದಿರುವ ಎಲ್ಲ ಮರಗಳನ್ನೂ ನೋಡಿ, ಅಲ್ಲಿ ಯಜ್ಞಪಶುಗಳನ್ನು ವಧಿಸಿ, ನನ್ನನ್ನು ರೇಗಿಸುವ ನೈವೇದ್ಯವನ್ನರ್ಪಿಸಿ, ಸುಗಂಧಹೋಮಮಾಡಿ, ಪಾನದ್ರವ್ಯವನ್ನು ಸುರಿದು, ಬಲಿ ಒಪ್ಪಿಸುತ್ತಿದ್ದರು. |
೨೯ |
ನೀವು ಹೋಗುವ ‘ಬಾ - ಮಾ’ ಎಂಬ ಪೂಜಾಸ್ಥಳ ಎಂಥ ಸ್ಥಳ? (ಇಂದಿನವರೆಗೂ ಇಂಥಾ ಪೂಜಾಸ್ಥಳಗಳಿಗೆ ಬಾಮಾ ಎಂದೇ ಹೆಸರು). |
೩೦ |
“ಇಸ್ರಯೇಲ್ ವಂಶದವರಿಗೆ ಹೀಗೆ ಹೇಳು: - ಸರ್ವೇಶ್ವರ ದೇವರು ಇಂತೆನ್ನುತ್ತಾರೆ - ನಿಮ್ಮ ಪಿತೃಗಳಂತೆ ನಿಮ್ಮನ್ನು ನೀವೇ ಅಪವಿತ್ರಮಾಡಿಕೊಳ್ಳುತ್ತೀರೋ? ಅವರು ಪೂಜಿಸುತ್ತಿದ್ದ ಅಸಹ್ಯವಸ್ತುಗಳನ್ನು ನೀವೂ ಪೂಜಿಸಿ ದೇವದ್ರೋಹಮಾಡುತ್ತೀರೋ? |
೩೧ |
ನೀವು ಬಲಿಯರ್ಪಿಸುತ್ತಾ, ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಂಡಿರಿ. ಹೀಗಿರುವಾಗ ಇಸ್ರಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೇ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಸರ್ವೇಶ್ವರನಾದ ದೇವರ ನುಡಿ. |
೩೨ |
‘ನಾವು ಜನಾಂಗಗಳಂತೆ, ಅನ್ಯದೇಶಗಳವರಂತೆ ಮರ, ಕಲ್ಲುಗಳ ವಿಗ್ರಹಗಳನ್ನು ಪೂಜಿಸುವೆವು’ ಎಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆ ಎಷ್ಟು ಮಾತ್ರವೂ ನೆರವೇರದು. |
೩೩ |
“ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ, ನಿಮ್ಮ ಮೇಲೆ ದೊರೆತನಮಾಡುವೆನು; |
೩೪ |
ಹೌದು, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಹರಿಸುತ್ತಾ, ನಿಮ್ಮನ್ನು ಜನಾಂಗಗಳಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ನಿಮ್ಮನ್ನು ಒಂದುಗೂಡಿಸಿ, |
೩೫ |
ಜನಾಂಗಗಳ ಮಧ್ಯೆ ಮರುಭೂಮಿಗೆ ಕರೆತಂದು ಅಲ್ಲೇ ಮುಖಾಮುಖಿಯಾಗಿ ನಿಮ್ಮೊಂದಿಗೆ ವಾದಿಸುವೆನು. |
೩೬ |
ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪಿತೃಗಳ ಸಂಗಡ ವಾದಿಸಿದಂತೆ ನಿಮ್ಮ ಸಂಗಡವೂ ವಾದಿಸುವೆನು; ಇದು ಸರ್ವೇಶ್ವರನಾದ ದೇವರ ನುಡಿ. |
೩೭ |
“ನಾನು ನಿಮ್ಮನ್ನು ಲೆಕ್ಕಿಸುವಂತೆ, ಕೋಲಿನ ಕೆಳಗೆ ಹೋಗುವಂತೆಮಾಡಿ, ಒಡಂಬಡಿಕೆಯ ಕಟ್ಟಿನಿಂದ ಬಂಧಿಸುವೆನು, |
೩೮ |
ನನಗೆ ವಿಮುಖರಾದ ದ್ರೋಹಿಗಳನ್ನು ನಿಮ್ಮಿಂದ ದೂರಕ್ಕೆ ಗುಡಿಸಿಬಿಡುವೆನು; ಅವರು ಪ್ರವಾಸಿಗಳಾಗಿದ್ದ ದೇಶದಿಂದ ನಾನು ಅವರನ್ನು ಬಿಡುಗಡೆ ಮಾಡಿದರೂ ಅವರು ಇಸ್ರಯೇಲ್ ನಾಡಿಗೆ ಸೇರುವುದೇ ಇಲ್ಲ; ಆಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು. |
೩೯ |
“ಇಸ್ರಯೇಲ್ ವಂಶದವರೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಹೋಗಿರಿ, ನಿಮ್ಮ ವಿಗ್ರಹಗಳನ್ನು ಪೂಜಿಸಿರಿ; ಮುಂದಕ್ಕಾದರು ನನ್ನ ಮಾತನ್ನು ಕೇಳಿಯೇ ಕೇಳುವಿರಿ; ಇನ್ನು ಮೇಲಾದರು ನನ್ನ ಪರಿಶುದ್ಧನಾಮವನ್ನು ನಿಮ್ಮ ಬಲಿಗಳಿಂದ ಹಾಗೂ ವಿಗ್ರಹಗಳಿಂದ ನೀವು ಅಪಕೀರ್ತಿಗೆ ಒಳಪಡಿಸಲಾರಿರಿ. |
೪೦ |
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾಡಿನಲ್ಲಿ ಇಸ್ರಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧ ಬೆಟ್ಟದಲ್ಲೇ, ಇಸ್ರಯೇಲಿನ ಪರ್ವತಾಗ್ರದಲ್ಲೇ, ನನ್ನನ್ನು ಪೂಜಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ ಉತ್ತಮ ನೈವೇದ್ಯಗಳನ್ನೂ ಮೀಸಲಾದುದೆಲ್ಲವನ್ನೂ ಅಂಗೀಕರಿಸುವೆನು. |
೪೧ |
ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡುಗಡೆಮಾಡಿ, ನೀವು ಚದರಿಹೋಗಿರುವ ದೇಶಗಳಿಂದ ತಂದು ಸೇರಿಸುವಾಗ, ನಿಮ್ಮ ಸುಗಂಧಹೋಮವನ್ನು ಆಘ್ರಾಣಿಸಿ, ನಿಮಗೆ ಪ್ರಸನ್ನನಾಗುವೆನು; ಸಕಲ ಜನಾಂಗಗಳೆದುರಿಗೆ, ನಿಮ್ಮ ರಕ್ಷಣೆಯ ಮೂಲಕ, ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. |
೪೨ |
ನಾನು ಪ್ರಮಾಣಮಾಡಿ ನಿಮ್ಮ ಪಿತೃಗಳಿಗೆ ಯಾವ ನಾಡನ್ನು ಕೊಟ್ಟೆನೋ ಆ ಇಸ್ರಾಯೇಲ್ ನಾಡಿಗೆ ನಿಮ್ಮನ್ನು ಬರಮಾಡುವಾಗ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು. |
೪೩ |
ನಿಮ್ಮನ್ನು ಅಪವಿತ್ರಗೊಳಿಸಿರುವ ನಿಮ್ಮ ನಡತೆಯನ್ನೂ ನಿಮ್ಮ ಎಲ್ಲಾ ಕಾರ್ಯಗಳನ್ನೂ ಅಲ್ಲಿ ನೆನಪಿಗೆ ತಂದುಕೊಂಡು, ನೀವು ನಡೆಸಿರುವ ಸಕಲ ದುಷ್ಕೃತ್ಯಗಳ ನಿಮಿತ್ತ, ನಿಮ್ಮನ್ನು ನೋಡಿ ನೀವೇ ಅಸಹ್ಯಪಡುವಿರಿ. |
೪೪ |
ಇಸ್ರಯೇಲ್ ವಂಶದವರೇ, ನಿಮ್ಮ ದುರ್ನಡತೆಗೂ ದುಷ್ಕೃತ್ಯಗಳಿಗೂ ತಕ್ಕ ಹಾಗೆ ನಾನು ನಿಮ್ಮನ್ನು ಸಹಿಸಿಕೊಂಡಿರುವಾಗ, ನಾನೇ ಸರ್ವೇಶ್ವರ ಎಂದು ನಿಮಗೆ ತಿಳಿಯುವುದು; ಇದು ಸರ್ವೇಶ್ವರನಾದ ದೇವರ ನುಡಿ.” |
೪೫ |
ಆಮೇಲೆ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು - |
೪೬ |
“ನರಪುತ್ರನೇ, ನೀನು ದಕ್ಷಿಣಾಭಿಮುಖನಾಗಿ, ಆ ಕಡೆಗೆ ಮಾತಾಡುತ್ತಾ ದಕ್ಷಿಣ ಸೀಮೆಯ ವನವನ್ನು ಉದ್ದೇಶಿಸಿ ಪ್ರಸ್ತಾಪವನ್ನೆತ್ತಿ, |
೪೭ |
ಆ ವನಕ್ಕೆ ಹೀಗೆ ಪ್ರವಾದಿಸು: ‘ಸರ್ವೇಶ್ವರನ ಮಾತನ್ನು ಕೇಳು: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನು ನಿನ್ನೊಳಗೆ ಬೆಂಕಿಯನ್ನು ಹೊತ್ತಿಸುವೆನು. ಅದು ನಿನ್ನಲ್ಲಿನ ಎಲ್ಲಾ ಹಸಿರುಮರಗಳನ್ನೂ ಒಣಮರಗಳನ್ನೂ ಕಬಳಿಸಿಬಿಡುವುದು; ಧಗಧಗಿಸುವ ಜ್ವಾಲೆ ಆರದೆ, ತೆಂಕಲಿಂದ ಬಡಗಲವರೆಗೆ ಎಲ್ಲರ ಮುಖಗಳನ್ನು ಕುಂದಿಸುವುದು. |
೪೮ |
ಅದನ್ನು ಹೊತ್ತಿಸಿದವನು ಸರ್ವೇಶ್ವರನಾದ ನಾನೇ ಎಂದು ಸಕಲ ನರಪ್ರಾಣಿಗಳಿಗೆ ಆಗ ಗೋಚರವಾಗುವುದು; ಅದು ಆರಿಹೋಗದು’. |
೪೯ |
ಆಗ ನಾನು - “ಅಯ್ಯೋ, ಸರ್ವೇಶ್ವರನಾದ ದೇವರೇ, ‘ಅವನು ಒಗಟುಗಾರನಲ್ಲವೆ?’ ಎಂದು ಈ ಜನರು ನನ್ನ ಬಗ್ಗೆ ಆಡಿಕೊಳ್ಳುತ್ತಾರೆ” ಎಂದು ಅರಿಕೆಮಾಡಿದೆನು.
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆಜೆಕಿಯೇಲನ ೨೦:1 |
ಯೆಜೆಕಿಯೇಲನ ೨೦:2 |
ಯೆಜೆಕಿಯೇಲನ ೨೦:3 |
ಯೆಜೆಕಿಯೇಲನ ೨೦:4 |
ಯೆಜೆಕಿಯೇಲನ ೨೦:5 |
ಯೆಜೆಕಿಯೇಲನ ೨೦:6 |
ಯೆಜೆಕಿಯೇಲನ ೨೦:7 |
ಯೆಜೆಕಿಯೇಲನ ೨೦:8 |
ಯೆಜೆಕಿಯೇಲನ ೨೦:9 |
ಯೆಜೆಕಿಯೇಲನ ೨೦:10 |
ಯೆಜೆಕಿಯೇಲನ ೨೦:11 |
ಯೆಜೆಕಿಯೇಲನ ೨೦:12 |
ಯೆಜೆಕಿಯೇಲನ ೨೦:13 |
ಯೆಜೆಕಿಯೇಲನ ೨೦:14 |
ಯೆಜೆಕಿಯೇಲನ ೨೦:15 |
ಯೆಜೆಕಿಯೇಲನ ೨೦:16 |
ಯೆಜೆಕಿಯೇಲನ ೨೦:17 |
ಯೆಜೆಕಿಯೇಲನ ೨೦:18 |
ಯೆಜೆಕಿಯೇಲನ ೨೦:19 |
ಯೆಜೆಕಿಯೇಲನ ೨೦:20 |
ಯೆಜೆಕಿಯೇಲನ ೨೦:21 |
ಯೆಜೆಕಿಯೇಲನ ೨೦:22 |
ಯೆಜೆಕಿಯೇಲನ ೨೦:23 |
ಯೆಜೆಕಿಯೇಲನ ೨೦:24 |
ಯೆಜೆಕಿಯೇಲನ ೨೦:25 |
ಯೆಜೆಕಿಯೇಲನ ೨೦:26 |
ಯೆಜೆಕಿಯೇಲನ ೨೦:27 |
ಯೆಜೆಕಿಯೇಲನ ೨೦:28 |
ಯೆಜೆಕಿಯೇಲನ ೨೦:29 |
ಯೆಜೆಕಿಯೇಲನ ೨೦:30 |
ಯೆಜೆಕಿಯೇಲನ ೨೦:31 |
ಯೆಜೆಕಿಯೇಲನ ೨೦:32 |
ಯೆಜೆಕಿಯೇಲನ ೨೦:33 |
ಯೆಜೆಕಿಯೇಲನ ೨೦:34 |
ಯೆಜೆಕಿಯೇಲನ ೨೦:35 |
ಯೆಜೆಕಿಯೇಲನ ೨೦:36 |
ಯೆಜೆಕಿಯೇಲನ ೨೦:37 |
ಯೆಜೆಕಿಯೇಲನ ೨೦:38 |
ಯೆಜೆಕಿಯೇಲನ ೨೦:39 |
ಯೆಜೆಕಿಯೇಲನ ೨೦:40 |
ಯೆಜೆಕಿಯೇಲನ ೨೦:41 |
ಯೆಜೆಕಿಯೇಲನ ೨೦:42 |
ಯೆಜೆಕಿಯೇಲನ ೨೦:43 |
ಯೆಜೆಕಿಯೇಲನ ೨೦:44 |
ಯೆಜೆಕಿಯೇಲನ ೨೦:45 |
ಯೆಜೆಕಿಯೇಲನ ೨೦:46 |
ಯೆಜೆಕಿಯೇಲನ ೨೦:47 |
ಯೆಜೆಕಿಯೇಲನ ೨೦:48 |
ಯೆಜೆಕಿಯೇಲನ ೨೦:49 |
|
|
|
|
|
|
ಯೆಜೆಕಿಯೇಲನ 1 / ಯೆಜೆಕಿ 1 |
ಯೆಜೆಕಿಯೇಲನ 2 / ಯೆಜೆಕಿ 2 |
ಯೆಜೆಕಿಯೇಲನ 3 / ಯೆಜೆಕಿ 3 |
ಯೆಜೆಕಿಯೇಲನ 4 / ಯೆಜೆಕಿ 4 |
ಯೆಜೆಕಿಯೇಲನ 5 / ಯೆಜೆಕಿ 5 |
ಯೆಜೆಕಿಯೇಲನ 6 / ಯೆಜೆಕಿ 6 |
ಯೆಜೆಕಿಯೇಲನ 7 / ಯೆಜೆಕಿ 7 |
ಯೆಜೆಕಿಯೇಲನ 8 / ಯೆಜೆಕಿ 8 |
ಯೆಜೆಕಿಯೇಲನ 9 / ಯೆಜೆಕಿ 9 |
ಯೆಜೆಕಿಯೇಲನ 10 / ಯೆಜೆಕಿ 10 |
ಯೆಜೆಕಿಯೇಲನ 11 / ಯೆಜೆಕಿ 11 |
ಯೆಜೆಕಿಯೇಲನ 12 / ಯೆಜೆಕಿ 12 |
ಯೆಜೆಕಿಯೇಲನ 13 / ಯೆಜೆಕಿ 13 |
ಯೆಜೆಕಿಯೇಲನ 14 / ಯೆಜೆಕಿ 14 |
ಯೆಜೆಕಿಯೇಲನ 15 / ಯೆಜೆಕಿ 15 |
ಯೆಜೆಕಿಯೇಲನ 16 / ಯೆಜೆಕಿ 16 |
ಯೆಜೆಕಿಯೇಲನ 17 / ಯೆಜೆಕಿ 17 |
ಯೆಜೆಕಿಯೇಲನ 18 / ಯೆಜೆಕಿ 18 |
ಯೆಜೆಕಿಯೇಲನ 19 / ಯೆಜೆಕಿ 19 |
ಯೆಜೆಕಿಯೇಲನ 20 / ಯೆಜೆಕಿ 20 |
ಯೆಜೆಕಿಯೇಲನ 21 / ಯೆಜೆಕಿ 21 |
ಯೆಜೆಕಿಯೇಲನ 22 / ಯೆಜೆಕಿ 22 |
ಯೆಜೆಕಿಯೇಲನ 23 / ಯೆಜೆಕಿ 23 |
ಯೆಜೆಕಿಯೇಲನ 24 / ಯೆಜೆಕಿ 24 |
ಯೆಜೆಕಿಯೇಲನ 25 / ಯೆಜೆಕಿ 25 |
ಯೆಜೆಕಿಯೇಲನ 26 / ಯೆಜೆಕಿ 26 |
ಯೆಜೆಕಿಯೇಲನ 27 / ಯೆಜೆಕಿ 27 |
ಯೆಜೆಕಿಯೇಲನ 28 / ಯೆಜೆಕಿ 28 |
ಯೆಜೆಕಿಯೇಲನ 29 / ಯೆಜೆಕಿ 29 |
ಯೆಜೆಕಿಯೇಲನ 30 / ಯೆಜೆಕಿ 30 |
ಯೆಜೆಕಿಯೇಲನ 31 / ಯೆಜೆಕಿ 31 |
ಯೆಜೆಕಿಯೇಲನ 32 / ಯೆಜೆಕಿ 32 |
ಯೆಜೆಕಿಯೇಲನ 33 / ಯೆಜೆಕಿ 33 |
ಯೆಜೆಕಿಯೇಲನ 34 / ಯೆಜೆಕಿ 34 |
ಯೆಜೆಕಿಯೇಲನ 35 / ಯೆಜೆಕಿ 35 |
ಯೆಜೆಕಿಯೇಲನ 36 / ಯೆಜೆಕಿ 36 |
ಯೆಜೆಕಿಯೇಲನ 37 / ಯೆಜೆಕಿ 37 |
ಯೆಜೆಕಿಯೇಲನ 38 / ಯೆಜೆಕಿ 38 |
ಯೆಜೆಕಿಯೇಲನ 39 / ಯೆಜೆಕಿ 39 |
ಯೆಜೆಕಿಯೇಲನ 40 / ಯೆಜೆಕಿ 40 |
ಯೆಜೆಕಿಯೇಲನ 41 / ಯೆಜೆಕಿ 41 |
ಯೆಜೆಕಿಯೇಲನ 42 / ಯೆಜೆಕಿ 42 |
ಯೆಜೆಕಿಯೇಲನ 43 / ಯೆಜೆಕಿ 43 |
ಯೆಜೆಕಿಯೇಲನ 44 / ಯೆಜೆಕಿ 44 |
ಯೆಜೆಕಿಯೇಲನ 45 / ಯೆಜೆಕಿ 45 |
ಯೆಜೆಕಿಯೇಲನ 46 / ಯೆಜೆಕಿ 46 |
ಯೆಜೆಕಿಯೇಲನ 47 / ಯೆಜೆಕಿ 47 |
ಯೆಜೆಕಿಯೇಲನ 48 / ಯೆಜೆಕಿ 48 |