೧ |
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ಇಗೋ, ನಾನು ಬಾಬಿಲೋನಿನ ಮೇಲೂ ಅದರ ಲೇಬ್ಕಾಮೈ ಪ್ರಜೆಗಳ ಮೇಲೂ ವಿನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು. |
೨ |
ಅನ್ಯಜನರನ್ನು ಬಾಬಿಲೋನಿಗೆ ಕಳುಹಿಸುವೆನು. ಅವರು ಅದನ್ನು ಗಾಳಿಗೆ ತೂರಿಬಿಡುವರು. ನಿಯಮಿತ ವಿಪತ್ಕಾಲದಲ್ಲಿ ಆ ದೇಶಕ್ಕೆ ಮುತ್ತಿಗೆ ಹಾಕಿ ಅದನ್ನು ಬಟ್ಟಬರಿದು ಮಾಡುವರು. |
೩ |
ಅದರ ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಬಾಣಗಳನ್ನೆಸೆಯಲು ಅವಕಾಶವಿಲ್ಲದಿರಲಿ. ಬಾಬಿಲೋನಿಯದ ಯುವಕರನ್ನು ಉಳಿಸದಿರಿ. ಅದರ ಸೈನಿಕರನ್ನೆಲ್ಲ ನಿಶ್ಶೇಷಮಾಡಿರಿ. |
೪ |
ಬಾಬಿಲೋನಿಯರು ತಮ್ಮ ದೇಶದಲ್ಲೆ ಹತರಾಗಿ ಬೀಳುವರು. ಅದರ ಬೀದಿಗಳಲ್ಲೆ ಕತ್ತಿಗೆ ತುತ್ತಾಗಿ ಮಣ್ಣುಪಾಲಾಗುವರು. |
೫ |
ಇಸ್ರಯೇಲರ ಪರಮ ಪಾವನ ಸ್ವಾಮಿಯಾದ ನನಗೆ ನನ್ನ ಜನರು ಮಾಡಿದ ಅಪರಾಧ ತಮ್ಮ ನಾಡಿನಲ್ಲಿ ತುಂಬಿದ್ದರೂ ಸೇನಾಧೀಶ್ವರ ಸರ್ವೇಶ್ವರನೆಂಬ ದೇವರಾದ ನಾನು ಇಸ್ರಯೇಲನ್ನಾಗಲಿ ಜುದೇಯವನ್ನಾಗಲಿ ತ್ಯಜಿಸಿಬಿಡಲಿಲ್ಲ. |
೬ |
ನೀವು ಬಾಬಿಲೋನಿನಿಂದ ಓಡಿಹೋಗಿ ನಿಮ್ಮ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿ, ಅದಕ್ಕೆ ಉಂಟಾಗುವ ದಂಡನೆಗೆ ನೀವು ಒಳಗಾಗಬೇಡಿ. ಸರ್ವೇಶ್ವರನಾದ ನಾನು ಮುಯ್ಯಿತೀರಿಸುವ ಕಾಲಬಂದಿದೆ. ಬಾಬಿಲೋನಿಗೆ ತಕ್ಕ ಪ್ರತೀಕಾರ ಮಾಡುವೆನು. |
೭ |
ಬಾಬಿಲೋನ್ ನನ್ನ ಕೈಯಲ್ಲಿರುವ ಹೊನ್ನಿನ ಪಾನಪಾತ್ರೆ. ಲೋಕದವರೆಲ್ಲರು ಅದರಿಂದ ಕುಡಿದು ಮತ್ತರಾದರು. ರಾಷ್ಟ್ರಗಳು ಅದರಿಂದ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು. |
೮ |
ಬಾಬಿಲೋನ್ ತಟ್ಟನೆ ಬಿದ್ದು ಹಾಳಾಯಿತು. ಅದಕ್ಕಾಗಿ ಗೋಳಾಡಿ. ಅದರ ನೋವನ್ನು ನೀಗಿಸಲು ಔಷಧವನ್ನು ತನ್ನಿ. ಒಂದು ವೇಳೆ ಅದು ಗುಣವಾದೀತು! |
೯ |
ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು. |
೧೦ |
‘ಸರ್ವೇಶ್ವರ ನಮ್ಮ ಧಾರ್ಮಿಕತೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ದೇವರಾದ ಸರ್ವೇಶ್ವರ ನಡೆಸಿದ ಮಹತ್ಕಾರ್ಯವನ್ನು ಸಿಯೋನಿನಲ್ಲಿ ಪ್ರಕಟಿಸೋಣ ಬನ್ನಿ’ ಎಂದು ಹೇಳುವರು.” |
೧೧ |
ಸರ್ವೇಶ್ವರನು ಬಾಬಿಲೋನನ್ನು ಹಾಳುಮಾಡಬೇಕೆಂದು ಉದ್ದೇಶಿಸಿ, ಅದನ್ನು ಮೇದ್ಯರ ಅರಸರು ನಾಶಮಾಡುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಆ ನಾಶವು, ಸರ್ವೇಶ್ವರನು ತನ್ನ ಆಲಯವನ್ನು ಕೆಡವಿದವರಿಗೆ ಮಾಡಬೇಕೆಂದಿದ್ದ ಪ್ರತೀಕಾರವೇ ಆಗಿದೆ. ‘ಮೇದ್ಯರೇ, ಬಾಣಗಳನ್ನು ಮಸೆಯಿರಿ, ಯುದ್ಧಸನ್ನದ್ಧರಾಗಿರಿ; |
೧೨ |
ಬಾಬಿಲೋನಿನ ಕೋಟೆಗೆ ಎದುರಾಗಿ ಧ್ವಜವೆತ್ತಿರಿ. ಪಹರೆಯನ್ನು ಬಲಪಡಿಸಿರಿ. ಕಾವಲುಗಾರರನ್ನು ನಿಲ್ಲಿಸಿರಿ. ಹೊಂಚುಗಾರರನ್ನು ಗೊತ್ತುಮಾಡಿರಿ!’ ಸರ್ವೇಶ್ವರ ಸ್ವಾಮಿ ಬಾಬಿಲೋನಿನವರ ವಿಷಯದಲ್ಲಿ ನುಡಿದಿದ್ದನ್ನು ನೆನಪಿಗೆ ತಂದುಕೊಂಡು ನೆರವೇರಿಸಿದ್ದಾರೆ. |
೧೩ |
“ಬಹುಜಲಾಶ್ರಯಗಳ ನಡುವೆ ನಿಂತಿರುವ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯಕಾಲವು ಬಂದಿದೆ. ನೀನು ಕೊಳ್ಳೆಹೊಡೆದದ್ದು ಸಾಕಾಗಿದೆ.” |
೧೪ |
ಸೇನಾಧೀಶ್ವರ ಸರ್ವೇಶ್ವರ ತಮ್ಮ ಮೇಲೆ ಆಣೆಯಿಟ್ಟು ಹೇಳುವುದು ಇದು: “ಖಂಡಿತವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುವೆನು. ಅವರು ನಿನ್ನ ಮೇಲೆ ಜಯಘೋಷಮಾಡುವರು.” |
೧೫ |
ಆತ ಭೂಮಿಯನ್ನು ನಿರ್ಮಿಸಿದ ಶಕ್ತಿಯಿಂದ ಲೋಕವನ್ನು ಸ್ಥಾಪಿಸಿದ ಜ್ಞಾನದಿಂದ ಆಕಾಶಮಂಡಲವನ್ನು ಹರಡಿದ ವಿವೇಕದಿಂದ. |
೧೬ |
ಆತನ ಘರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ ಭುವಿಯ ಕಟ್ಟಕಡೆಯಿಂದ ಮೋಡ ಮೇಲೇರುತ್ತದೆ ಮಳೆಗೋಸ್ಕರ ಮಿಂಚು ಹೊಳೆಯುತ್ತದೆ ಆತನ ಭಂಡಾರದಿಂದ ಗಾಳಿ ಬೀಸುತ್ತದೆ. |
೧೭ |
ಇದರ ಮುಂದೆ ಜನರು ತಿಳುವಳಿಕೆಯಿಲ್ಲದ ಪಶುಪ್ರಾಯರು ತಾನು ಕೆತ್ತಿದ ವಿಗ್ರಹಕ್ಕಾಗಿ ಹೇಸುವನು ಪ್ರತಿಯೊಬ್ಬ ಅಕ್ಕಸಾಲಿಗನು. ಪೊಳ್ಳು, ಶ್ವಾಸವಿಲ್ಲದವುಗಳು, ಅವನು ಎರಕಹೊಯ್ದ ಪುತ್ತಳಿಗಳು. |
೧೮ |
ಅವು ವ್ಯರ್ಥವಾದವುಗಳು, ಹಾಸ್ಯಾಸ್ಪದ ಕೃತಿಗಳು, ದಂಡನೆಯ ಕಾಲದಲ್ಲಿ ಅಳಿದುಹೋಗುವಂಥವುಗಳು. |
೧೯ |
ಯಕೋಬ್ಯರಿಗೆ ಸ್ವಂತವಾದ ದೇವರು ಅವುಗಳ ಹಾಗಲ್ಲ ಆತ ಸಮಸ್ತವನ್ನು ಸೃಷ್ಟಿಸಿದಾತ ಆತನ ಸೊತ್ತು ಇಸ್ರಯೇಲ್ ವಂಶ ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ಆತನ ನಾಮಧೇಯ. |
೨೦ |
“ಬಾಬಿಲೋನೇ, ನೀನು ನನಗೊಂದು ಯುದ್ಧಾಸ್ತ್ರ, ಒಂದು ಗದೆ. ಈ ಗದೆಯಿಂದ ರಾಷ್ಟ್ರಗಳನ್ನು ಬಡಿದುಬಿಡುವೆನು, ರಾಜ್ಯಗಳನ್ನು ಅಳಿಸಿಬಿಡುವೆನು. |
೨೧ |
ಈ ಗದೆಯಿಂದ ಒಡೆದುಬಿಡುವೆನು ಕುದುರೆಯನ್ನೂ ಸವಾರನನ್ನೂ, |
೨೨ |
ರಥವನ್ನೂ ಸಾರಥಿಯನ್ನೂ ಸ್ತ್ರೀಪುರುಷರನ್ನೂ ಬಾಲವೃದ್ಧರನ್ನೂ. |
೨೩ |
ಈ ಗದೆಯಿಂದ ಒಡೆದುಬಿಡುವೆನು ಕುರುಬನನ್ನೂ ಮಂದೆಯನ್ನೂ ರೈತನನ್ನೂ ನೊಗದೆತ್ತುಗಳನ್ನೂ ದೇಶಾಧಿಪತಿಗಳನ್ನೂ ನಾಡಿನೊಡೆಯರನ್ನೂ.” |
೨೪ |
“ಆದರೆ ಬಾಬಿಲೋನಿನವರು ಹಾಗು ಅದರ ಕಸ್ದೀಯರು ಸಿಯೋನಿನಲ್ಲಿ ಮಾಡಿದ ಎಲ್ಲ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೆ ಆ ಸಿಯೋನಿನವರ ಕಣ್ಣೆದುರಿಗೇ ಮುಯ್ಯಿ ತೀರಿಸುವೆನು,” ಎನ್ನುತ್ತಾರೆ ಸರ್ವೇಶ್ವರ. |
೨೫ |
“ಲೋಕವನ್ನೆಲ್ಲಾ ನಾಶಮಾಡುವ ಎಲೈ ನಾಶಕ ಪರ್ವತವೇ, ನಾನು ನಿನಗೆ ವಿರುದ್ಧನಾಗಿದ್ದೇನೆ. ನಿನ್ನ ಮೇಲೆ ಕೈಮಾಡಿ, ನಿನ್ನನ್ನು ಬಂಡೆಯ ಮೇಲಿಂದ ಕೆಳಕ್ಕೆ ಉರುಳಿಸುವೆನು. ಸುಟ್ಟ ಬೆಟ್ಟವನ್ನಾಗಿಸುವೆನು. |
೨೬ |
ಮೂಲೆಗಲ್ಲಿಗಾಗಲಿ, ಅಸ್ತಿವಾರದ ಕಲ್ಲಿಗಾಗಲಿ ಯಾರೂ ನಿನ್ನಿಂದ ಕಲ್ಲನ್ನು ತೆಗೆಯರು. ನೀನು ನಿತ್ಯನಾಶಕ್ಕೆ ಗುರಿಯಾಗುವೆ,” ಎನ್ನುತ್ತಾರೆ ಸರ್ವೇಶ್ವರ. |
೨೭ |
“ನಾಡಿನಲ್ಲಿ ಧ್ವಜವೆತ್ತಿರಿ, ರಾಜ್ಯಗಳಲ್ಲೆಲ್ಲ ಕೊಂಬೂದಿರಿ, ರಾಷ್ಟ್ರಗಳನ್ನು ಸಜ್ಜುಮಾಡಿರಿ. ಬಾಬಿಲೋನಿನ ಮೇಲೆ ಬೀಳಲಿಕ್ಕೆ ಅರರಾಟ್, ಮಿನ್ನಿ, ಅಷ್ಕೆನಜ್ ಎಂಬ ರಾಷ್ಟ್ರಗಳನ್ನು ಕರೆದುಕೊಳ್ಳಿ. ಸೋಲಿಸಬಲ್ಲ ಸೇನಾಪತಿಯನ್ನು ನೇಮಿಸಿರಿ. ಬಿರುಸಾದ ಅಶ್ವಬಲವನ್ನು ಮಿಡತೆಗಳ ದಂಡಿನೋಪಾದಿ ಬರಮಾಡಿ. |
೨೮ |
ರಾಷ್ಟ್ರಗಳು, ಮೇದ್ಯರ ಅರಸರು, ಅಧಿಪತಿಗಳು, ಅಧಿಕಾರಿಗಳು, ಅವರ ಕೈಕೆಳಗಿರುವ ಎಲ್ಲ ನಾಡಿನವರು, ಇವರೆಲ್ಲರನ್ನು ಬಾಬಿಲೋನಿಗೆ ವಿರುದ್ಧ ಸಜ್ಜುಗೊಳಿಸಿರಿ. |
೨೯ |
ಪೊಡವಿ ನೊಂದು ನಡುಗುತ್ತಿದೆ! ಏಕೆಂದರೆ ಬಾಬಿಲೋನ್ ದೇಶ ಹಾಳುಬಿದ್ದು ನಿರ್ಜನವಾಗಲಿ ಎಂದು ಸರ್ವೇಶ್ವರ ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪ ಅಚಲವಾಗಿದೆ. |
೩೦ |
ಬಾಬಿಲೋನಿಯದ ಶೂರರು ಯುದ್ಧಕ್ಕೆ ಹಿಂಜರಿದು ಹೆಂಗಸರಂತೆ, ಹೇಡಿಗಳಂತೆ ತಮ್ಮ ಕೋಟೆಗಳಲ್ಲೆ ನಿಂತಿದ್ದಾರೆ. ಅದರ ಹೆಬ್ಬಾಗಿಲುಗಳು ಮುರಿದುಬಿದ್ದಿವೆ. ಅದರ ಮನೆಗೆ ಬೆಂಕಿಯಿಕ್ಕಲಾಗಿದೆ. |
೩೧ |
ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನತ್ತ ಓಡುತ್ತಾನೆ. ಒಬ್ಬ ದೂತ ಇನ್ನೊಬ್ಬ ದೂತನತ್ತ ದೌಡಾಯಿಸುತ್ತಾನೆ. ‘ರಾಜಧಾನಿಯನ್ನು ಎಲ್ಲಾ ಕಡೆಯಿಂದಲೂ ಆಕ್ರಮಿಸಿದ್ದಾರೆ. |
೩೨ |
ರೇವುಗಳನ್ನು ಹಿಡಿದಿದ್ದಾರೆ. ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ರಣವೀರರು ಭಯಭ್ರಾಂತರಾಗಿದ್ದಾರೆ’ ಎಂದು ಬಾಬಿಲೋನಿನ ಅರಸನಿಗೆ ತಿಳಿಸುತ್ತಾರೆ. |
೩೩ |
ಬಾಬಿಲೋನ್ ನಗರವು ತುಳಿದು ತುಳಿದು ಸರಿಮಾಡಿದ ಕಣದಂತಿದೆ. ಇಷ್ಟರಲ್ಲೆ ಕೊಯ್ಲುಕಾಲ ಅದಕ್ಕೆ ಸಂಭವಿಸಲಿದೆ; ಇದು ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರನ ನುಡಿ.” |
೩೪ |
ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ನನ್ನನ್ನು ಮುರಿದು ತಿಂದುಬಿಟ್ಟ ನನ್ನನ್ನು ಕುಡಿದು ಬಿಸಾಡಿದ ಪಾತ್ರೆಯನ್ನಾಗಿಸಿಬಿಟ್ಟ. ಘಟಸರ್ಪದ ಹಾಗೆ ನನ್ನನ್ನು ನುಂಗಿದ ನನ್ನ ರುಚಿಪದಾರ್ಥಗಳಿಂದ ಹೊಟ್ಟೆ ತುಂಬಿಸಿಕೊಂಡ ಮಿಕ್ಕಿದುದನ್ನೆಲ್ಲ ತೊಳೆದು ಎಸೆದುಬಿಟ್ಟ. |
೩೫ |
‘ನಮ್ಮ ಪ್ರಾಣವನ್ನು ಹಿಂಡಿದ ದೋಷ ಬಾಬಿಲೋನಿಗೆ ತಟ್ಟಲಿ’ ಎನ್ನುತ್ತದೆ ಸಿಯೋನ್. ‘ನಮ್ಮ ರಕ್ತವನ್ನು ಸುರಿಸಿದ ಅಪರಾಧ ಅದರ ಕಸ್ದೀಯರಿಗೆ ಬಡಿಯಲಿ!’ ಎನ್ನುತ್ತದೆ ಜೆರುಸಲೇಮ್. |
೩೬ |
ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ, ನಾನು ನಿನ್ನ ಪರವಾಗಿ ವ್ಯಾಜ್ಯಮಾಡಿ ನಿನ್ನನ್ನು ಹಿಂಸಿಸಿದ ರಾಜ್ಯಕ್ಕೆ ಮುಯ್ಯಿತೀರಿಸುವೆನು. ಅದರ ಸರೋವರ ಬತ್ತಿಹೋಗುವಂತೆಯೂ ಅದರ ಪ್ರವಾಹ ಒಣಗಿಹೋಗುವಂತೆಯೂ ಮಾಡುವೆನು. |
೩೭ |
ಆಗ ಬಾಬಿಲೋನ್ ಹಾಳುದಿಬ್ಬ ಆಗುವುದು. ಗುಳ್ಳೆನರಿಗಳ ಬೀಡಾಗುವುದು. ಅದು ಭಯಭೀತಿಗೂ ಸೀಳು ಪರಿಹಾಸ್ಯಕ್ಕೂ ಆಸ್ಪದವಾಗುವುದು. |
೩೮ |
ಬಾಬಿಲೋನಿನವರು ಯುವಸಿಂಹಗಳಂತೆ ಒಟ್ಟಿಗೆ ಗರ್ಜಿಸುವರು, ಸಿಂಹದ ಮರಿಗಳಂತೆ ಗುರುಗುಟ್ಟುವರು. |
೩೯ |
ಅವರು ಹೊಟ್ಟೆಬಾಕರೇ ಸರಿ. ಅವರಿಗೆ ಔತಣವನ್ನು ಸಿದ್ಧಮಾಡುವೆನು. ತಿಂದು ಸಂಭ್ರಮಪಡುವಂತೆ ಮಾಡುವೆನು. ತಲೆಗೇರುವತನಕ ಕುಡಿಸಿ ಎಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆಯಲ್ಲಿರುವಂತೆ ಮಾಡುವೆನು. |
೪೦ |
ಕುರಿ, ಟಗರು, ಹೋತಗಳ ಹಾಗೆ ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.” |
೪೧ |
ಏನು, ಶೇಷಕ್ ಶತ್ರುವಶವಾಯಿತೆ? ಲೋಕಪ್ರಸಿದ್ಧ ನಗರ ಶರಣಾಗತವಾಯಿತೆ? |
೪೨ |
ರಾಷ್ಟ್ರಗಳ ಕಣ್ಣಿಗೆ ಬಾಬಿಲೋನ್ ಭೀಕರವಾಗಿಬಿಟ್ಟಿದೆ, ಸಮುದ್ರವೆ ಬಾಬಿಲೋನಿಯದ ಮೇಲೆ ನುಗ್ಗಿಬಿಟ್ಟಿದೆ, ಲೆಕ್ಕವಿಲ್ಲದ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ. |
೪೩ |
ಕಾಡು, ಕಗ್ಗಾಡು, ಬೆಂಗಾಡು ಆಗಿವೆ ಅದರ ನಗರಗಳು. ಆ ದೇಶದೊಳು ಯಾರೂ ವಾಸಿಸರು, ಯಾವ ನರಪ್ರಾಣಿಯೂ ಹಾದುಹೋಗದು. |
೪೪ |
“ಬಾಬಿಲೋನಿಯದ ಬೇಲ್ದೇವತೆಯನ್ನು ದಂಡಿಸುವೆನು. ಅದು ನುಂಗಿದ್ದನ್ನು ಅದರ ಬಾಯಿಂದಲೇ ಕಕ್ಕಿಸುವೆನು. ಪ್ರವಾಹವಾಗಿ ಅಲ್ಲಿಗೆ ಬರುತ್ತಿದ್ದ ಸಕಲ ದೇಶೀಯರು ಇನ್ನು ಬಾರರು. ಆ ಬಾಬಿಲೋನಿನ ಪೌಳಿಗೋಡೆ ಇನ್ನು ಬಿದ್ದುಹೋಗುವುದು. |
೪೫ |
ನನ್ನ ಜನರೇ, ಬಾಬಿಲೋನನ್ನು ಬಿಟ್ಟು ಹೊರಡಿ. ನನ್ನ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಿ. |
೪೬ |
ನಿಮ್ಮ ಎದೆ ಕುಂದದಿರಲಿ. ನಾಡಿನಲ್ಲಿ ಕಿವಿಗೆ ಬೀಳುವ ಸುದ್ದಿ ನಿಮ್ಮನ್ನು ಹೆದರಿಸದಿರಲಿ. ಒಂದು ವರ್ಷ ಒಂದು ಸುದ್ದಿಯಾದರೆ ಮತ್ತೊಂದು ವರ್ಷ ಮತ್ತೊಂದು ಸುದ್ದಿ. ಹಿಂಸಾಚಾರ ಪ್ರಬಲವಾಗುತ್ತಿದೆ ನಾಡಿನಲ್ಲಿ. ಅಧಿಕಾರಿಗೆ ಅಧಿಕಾರಿಯೇ ವಿರೋಧಿ ಅಲ್ಲಿ. |
೪೭ |
ಇಗೋ ಬಾಬಿಲೋನಿಯದ ವಿಗ್ರಹಗಳನ್ನು ದಂಡಿಸುವ ದಿನಗಳು ಬರಲಿವೆ. ಆ ನಾಡೆಲ್ಲ ನಾಚಿಕೆಗೆ ಈಡಾಗುವುದು. ಅದರ ಪ್ರಜೆಗಳು ಅದರಲ್ಲೇ ಹತರಾಗಿ ಬೀಳುವರು. |
೪೮ |
ಆಗ ಭೂಮಿ ಆಕಾಶಗಳೂ ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶ ನೋಡಿ ಜಯಘೋಷಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು. |
೪೯ |
ಹತರಾದ ಇಸ್ರಯೇಲರೇ, ಬಾಬಿಲೋನಿಯದ ಹಿತಕ್ಕಾಗಿ ಬಹುಜನ ಹತರಾದರು. ಅಂತೆಯೇ ಬಾಬಿಲೋನ್ ಹತವಾಗುವುದು. ಸರ್ವೇಶ್ವರನಾದ ನನ್ನ ನುಡಿ ಇದು.” |
೫೦ |
“ಕತ್ತಿಯಿಂದ ತಪ್ಪಿಸಿಕೊಂಡವರೇ, ಸುಮ್ಮನೆ ನಿಂತುಕೊಳ್ಳದೆ ನಡೆಯಿರಿ. ದೂರವಿರುವಾಗಲು ಸರ್ವೇಶ್ವರನನ್ನು ಸ್ಮರಿಸಿರಿ. ಜೆರುಸಲೇಮನ್ನು ಕುರಿತು ಮನಸ್ಸಾರೆ ಹಂಬಲಿಸಿರಿ. |
೫೧ |
‘ನಿಂದೆಯನ್ನು ಕೇಳಿ ನಾವು ಲಜ್ಜೆಗೊಂಡೆವು, ಮ್ಲೇಚ್ಛರು ಸರ್ವೇಶ್ವರನ ಪವಿತ್ರಾಲಯವನ್ನು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಆವರಿಸಿದೆ,’ ಎನ್ನುತ್ತೀರೋ? |
೫೨ |
ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ: “ಬರಲಿವೆ ಬಾಬಿಲೋನಿನ ವಿಗ್ರಹಗಳನ್ನು ದಂಡಿಸುವ ದಿನಗಳು. ಆಗ ಆ ದೇಶದೊಳೆಲ್ಲ ನರಳಾಡುವರು ಗಾಯಗೊಂಡವರು. |
೫೩ |
ಬಾಬಿಲೋನ್ ಆಕಾಶದ ತನಕ ಬೆಳೆದರೂ ಎತ್ತರವಾದ, ಬಲವಾದ ಕೋಟೆಕಟ್ಟಿ ಭದ್ರಪಡಿಸಿಕೊಂಡರೂ ನನ್ನ ಅಪ್ಪಣೆಯ ಮೇರೆಗೆ ಜನರು ಹಾಳುಮಾಡುವರು; ಅದರ ಮೇಲೆ ಬೀಳುವರು. ಸರ್ವೇಶ್ವರನಾದ ನನ್ನ ನುಡಿ ಇದು.” |
೫೪ |
“ಇಗೋ ಕೇಳಿಬರುತ್ತಿದೆ ಬಾಬಿಲೋನಿನಿಂದ ಕೂಗಾಟ! ಆ ಬಾಬಿಲೋನಿಯರ ದೇಶದಿಂದ ಮಹಾ ವಿನಾಶದ ಕಿರುಚಾಟ! |
೫೫ |
ಬಾಬಿಲೋನನ್ನು ನಾನು ಹಾಳುಮಾಡಿಬಿಡುತ್ತೇನೆ ಅದರ ಸದ್ದುಗದ್ದಲವನ್ನು ಅಡಗಿಸಿಬಿಡುತ್ತೇನೆ. ಮಹಾ ಜಲಪ್ರವಾಹಗಳು ಭೋರ್ಗರೆಯುವಂತೆ ಅಲೆ ಅಲೆಯಾಗಿ ಬಂದ ಶತ್ರುಗಳು ಘೋಷಿಸಿ ಆರ್ಭಟಿಸುತ್ತಿದ್ದಾರೆ. |
೫೬ |
ವಿನಾಶಕಾರನು ಬಂದೆರಗಿದ್ದಾನೆ ಬಾಬಿಲೋನಿನ ಮೇಲೆ ಅದರ ಶೂರರೋ ಸೆರೆಯಾಗಿಬಿಟ್ಟಿದ್ದಾರೆ ಅವರ ಬಿಲ್ಲುಗಳೋ ಮುರಿದುಹೋಗಿವೆ. ಸರ್ವೇಶ್ವರನು ಮುಯ್ಯಿತೀರಿಸುವ ದೇವರು ಆತ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇರನು. |
೫೭ |
ಬಾಬಿಲೋನಿನ ರಾಜ್ಯಪಾಲರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಯೋಧರು, ಇವರೆಲ್ಲರಿಗೆ ತಲೆಗೇರುವ ತನಕ ಕುಡಿಸುವೆನು. ಅವರು ಎಂದೆಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆ ಮಾಡುವರು ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರನೆಂಬ ರಾಜಾಧಿರಾಜರು.” |
೫೮ |
ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ಬಾಬಿಲೋನಿನ ದೊಡ್ಡ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು. ಅದರ ಉನ್ನತ ದ್ವಾರಗಳು ಬೆಂಕಿಯಿಂದ ಸುಟ್ಟುಹೋಗುವುವು ರಾಷ್ಟ್ರಗಳು ದುಡಿದದ್ದು ಬೆಂಕಿಗೆ ತುತ್ತಾಗುವುದು.” |
೫೯ |
ಮಸ್ಸೇಯನ ಮೊಮ್ಮಗನೂ ನೇರೀಯನ ಮಗನೂ ಆದ ಸೆರಾಯನು ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಚಿದ್ಕೀಯನೊಡನೆ ಬಾಬಿಲೋನಿಗೆ ಪ್ರಯಾಣಮಾಡಿದನು. ಆಗ ಪ್ರವಾದಿ ಯೆರೆಮೀಯನು ಸೆರಾಯನಿಗೆ ಒಂದು ಅಪ್ಪಣೆಯನ್ನು ಕೊಟ್ಟನು. |
೬೦ |
ಸೆರಾಯನು ಸರಬರಾಯಿನ ಕಾರಬಾರಿ. ಯೆರೆಮೀಯನು ಬಾಬಿಲೋನಿಗೆ ಸಂಭವಿಸತಕ್ಕ ಎಲ್ಲ ಕೇಡಿನ ವಿಷಯವನ್ನು, ಅಂದರೆ ಬಾಬಿಲೋನಿನ ಸಂಬಂಧವಾಗಿ ಹಿಂದೆ ಲಿಖಿತವಾದ ಎಲ್ಲ ಸಂಗತಿಗಳನ್ನು, ಒಂದು ಗ್ರಂಥವಾಗಿ ಬರೆದು ಸೆರಾಯನಿಗೆ ಹೀಗೆಂದು ಹೇಳಿದನು: |
೬೧ |
“ನೋಡು, ನೀನು ಬಾಬಿಲೋನನ್ನು ತಲುಪಿದ ಮೇಲೆ ಈ ಮಾತುಗಳನ್ನೆಲ್ಲ ತಕ್ಕವರಿಗೆ ಓದಿ ಹೇಳು. |
೬೨ |
ಬಳಿಕ, ‘ಸರ್ವೇಶ್ವರಾ, ನೀವು ಈ ಸ್ಥಳವನ್ನು ನಿರ್ಮೂಲಮಾಡಲು ಉದ್ದೇಶಿಸಿ, ಇದು ಜನರಿಗೂ ಜಾನುವಾರುಗಳಿಗೂ ನೆಲೆಯಾಗದೆ ಸದಾಕಾಲ ಹಾಳಾಗಿಯೇ ಉಳಿಯಲಿ ಎಂದು ನುಡಿದಿದ್ದೀರಲ್ಲಾ!’ ಎಂದು ಅರಿಕೆಮಾಡು. |
೬೩ |
ಈ ಸುರುಳಿಯನ್ನು ಓದಿ ಮುಗಿಸಿದ ಮೇಲೆ ಇದಕ್ಕೆ ಕಲ್ಲುಕಟ್ಟಿ ಯೂಫ್ರೆಟಿಸ್ ನದಿಯ ಮಧ್ಯೆ ಎಸೆದುಬಿಡು. |
೬೪ |
ಆಮೇಲೆ, ‘ಸರ್ವೇಶ್ವರ ಸ್ವಾಮಿ ಬಾಬಿಲೋನಿಗೆ ಬರಮಾಡುವ ವಿಪತ್ತಿನಿಂದ ಈ ನಗರ ಹೀಗೆಯೇ ಮುಳುಗುವುದು, ಮತ್ತೆ ಏಳದು,’ ಎಂದು ಹೇಳು.” ಇಲ್ಲಿಗೆ ಯೆರೆಮೀಯನ ಪ್ರವಾದನೆ ಮುಗಿಯಿತು.
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆರೆಮೀಯನ ಗ್ರಂಥ ೫೧:1 |
ಯೆರೆಮೀಯನ ಗ್ರಂಥ ೫೧:2 |
ಯೆರೆಮೀಯನ ಗ್ರಂಥ ೫೧:3 |
ಯೆರೆಮೀಯನ ಗ್ರಂಥ ೫೧:4 |
ಯೆರೆಮೀಯನ ಗ್ರಂಥ ೫೧:5 |
ಯೆರೆಮೀಯನ ಗ್ರಂಥ ೫೧:6 |
ಯೆರೆಮೀಯನ ಗ್ರಂಥ ೫೧:7 |
ಯೆರೆಮೀಯನ ಗ್ರಂಥ ೫೧:8 |
ಯೆರೆಮೀಯನ ಗ್ರಂಥ ೫೧:9 |
ಯೆರೆಮೀಯನ ಗ್ರಂಥ ೫೧:10 |
ಯೆರೆಮೀಯನ ಗ್ರಂಥ ೫೧:11 |
ಯೆರೆಮೀಯನ ಗ್ರಂಥ ೫೧:12 |
ಯೆರೆಮೀಯನ ಗ್ರಂಥ ೫೧:13 |
ಯೆರೆಮೀಯನ ಗ್ರಂಥ ೫೧:14 |
ಯೆರೆಮೀಯನ ಗ್ರಂಥ ೫೧:15 |
ಯೆರೆಮೀಯನ ಗ್ರಂಥ ೫೧:16 |
ಯೆರೆಮೀಯನ ಗ್ರಂಥ ೫೧:17 |
ಯೆರೆಮೀಯನ ಗ್ರಂಥ ೫೧:18 |
ಯೆರೆಮೀಯನ ಗ್ರಂಥ ೫೧:19 |
ಯೆರೆಮೀಯನ ಗ್ರಂಥ ೫೧:20 |
ಯೆರೆಮೀಯನ ಗ್ರಂಥ ೫೧:21 |
ಯೆರೆಮೀಯನ ಗ್ರಂಥ ೫೧:22 |
ಯೆರೆಮೀಯನ ಗ್ರಂಥ ೫೧:23 |
ಯೆರೆಮೀಯನ ಗ್ರಂಥ ೫೧:24 |
ಯೆರೆಮೀಯನ ಗ್ರಂಥ ೫೧:25 |
ಯೆರೆಮೀಯನ ಗ್ರಂಥ ೫೧:26 |
ಯೆರೆಮೀಯನ ಗ್ರಂಥ ೫೧:27 |
ಯೆರೆಮೀಯನ ಗ್ರಂಥ ೫೧:28 |
ಯೆರೆಮೀಯನ ಗ್ರಂಥ ೫೧:29 |
ಯೆರೆಮೀಯನ ಗ್ರಂಥ ೫೧:30 |
ಯೆರೆಮೀಯನ ಗ್ರಂಥ ೫೧:31 |
ಯೆರೆಮೀಯನ ಗ್ರಂಥ ೫೧:32 |
ಯೆರೆಮೀಯನ ಗ್ರಂಥ ೫೧:33 |
ಯೆರೆಮೀಯನ ಗ್ರಂಥ ೫೧:34 |
ಯೆರೆಮೀಯನ ಗ್ರಂಥ ೫೧:35 |
ಯೆರೆಮೀಯನ ಗ್ರಂಥ ೫೧:36 |
ಯೆರೆಮೀಯನ ಗ್ರಂಥ ೫೧:37 |
ಯೆರೆಮೀಯನ ಗ್ರಂಥ ೫೧:38 |
ಯೆರೆಮೀಯನ ಗ್ರಂಥ ೫೧:39 |
ಯೆರೆಮೀಯನ ಗ್ರಂಥ ೫೧:40 |
ಯೆರೆಮೀಯನ ಗ್ರಂಥ ೫೧:41 |
ಯೆರೆಮೀಯನ ಗ್ರಂಥ ೫೧:42 |
ಯೆರೆಮೀಯನ ಗ್ರಂಥ ೫೧:43 |
ಯೆರೆಮೀಯನ ಗ್ರಂಥ ೫೧:44 |
ಯೆರೆಮೀಯನ ಗ್ರಂಥ ೫೧:45 |
ಯೆರೆಮೀಯನ ಗ್ರಂಥ ೫೧:46 |
ಯೆರೆಮೀಯನ ಗ್ರಂಥ ೫೧:47 |
ಯೆರೆಮೀಯನ ಗ್ರಂಥ ೫೧:48 |
ಯೆರೆಮೀಯನ ಗ್ರಂಥ ೫೧:49 |
ಯೆರೆಮೀಯನ ಗ್ರಂಥ ೫೧:50 |
ಯೆರೆಮೀಯನ ಗ್ರಂಥ ೫೧:51 |
ಯೆರೆಮೀಯನ ಗ್ರಂಥ ೫೧:52 |
ಯೆರೆಮೀಯನ ಗ್ರಂಥ ೫೧:53 |
ಯೆರೆಮೀಯನ ಗ್ರಂಥ ೫೧:54 |
ಯೆರೆಮೀಯನ ಗ್ರಂಥ ೫೧:55 |
ಯೆರೆಮೀಯನ ಗ್ರಂಥ ೫೧:56 |
ಯೆರೆಮೀಯನ ಗ್ರಂಥ ೫೧:57 |
ಯೆರೆಮೀಯನ ಗ್ರಂಥ ೫೧:58 |
ಯೆರೆಮೀಯನ ಗ್ರಂಥ ೫೧:59 |
ಯೆರೆಮೀಯನ ಗ್ರಂಥ ೫೧:60 |
ಯೆರೆಮೀಯನ ಗ್ರಂಥ ೫೧:61 |
ಯೆರೆಮೀಯನ ಗ್ರಂಥ ೫೧:62 |
ಯೆರೆಮೀಯನ ಗ್ರಂಥ ೫೧:63 |
ಯೆರೆಮೀಯನ ಗ್ರಂಥ ೫೧:64 |
|
|
|
|
|
|
ಯೆರೆಮೀಯನ ಗ್ರಂಥ 1 / ಯೆಗ್ರ 1 |
ಯೆರೆಮೀಯನ ಗ್ರಂಥ 2 / ಯೆಗ್ರ 2 |
ಯೆರೆಮೀಯನ ಗ್ರಂಥ 3 / ಯೆಗ್ರ 3 |
ಯೆರೆಮೀಯನ ಗ್ರಂಥ 4 / ಯೆಗ್ರ 4 |
ಯೆರೆಮೀಯನ ಗ್ರಂಥ 5 / ಯೆಗ್ರ 5 |
ಯೆರೆಮೀಯನ ಗ್ರಂಥ 6 / ಯೆಗ್ರ 6 |
ಯೆರೆಮೀಯನ ಗ್ರಂಥ 7 / ಯೆಗ್ರ 7 |
ಯೆರೆಮೀಯನ ಗ್ರಂಥ 8 / ಯೆಗ್ರ 8 |
ಯೆರೆಮೀಯನ ಗ್ರಂಥ 9 / ಯೆಗ್ರ 9 |
ಯೆರೆಮೀಯನ ಗ್ರಂಥ 10 / ಯೆಗ್ರ 10 |
ಯೆರೆಮೀಯನ ಗ್ರಂಥ 11 / ಯೆಗ್ರ 11 |
ಯೆರೆಮೀಯನ ಗ್ರಂಥ 12 / ಯೆಗ್ರ 12 |
ಯೆರೆಮೀಯನ ಗ್ರಂಥ 13 / ಯೆಗ್ರ 13 |
ಯೆರೆಮೀಯನ ಗ್ರಂಥ 14 / ಯೆಗ್ರ 14 |
ಯೆರೆಮೀಯನ ಗ್ರಂಥ 15 / ಯೆಗ್ರ 15 |
ಯೆರೆಮೀಯನ ಗ್ರಂಥ 16 / ಯೆಗ್ರ 16 |
ಯೆರೆಮೀಯನ ಗ್ರಂಥ 17 / ಯೆಗ್ರ 17 |
ಯೆರೆಮೀಯನ ಗ್ರಂಥ 18 / ಯೆಗ್ರ 18 |
ಯೆರೆಮೀಯನ ಗ್ರಂಥ 19 / ಯೆಗ್ರ 19 |
ಯೆರೆಮೀಯನ ಗ್ರಂಥ 20 / ಯೆಗ್ರ 20 |
ಯೆರೆಮೀಯನ ಗ್ರಂಥ 21 / ಯೆಗ್ರ 21 |
ಯೆರೆಮೀಯನ ಗ್ರಂಥ 22 / ಯೆಗ್ರ 22 |
ಯೆರೆಮೀಯನ ಗ್ರಂಥ 23 / ಯೆಗ್ರ 23 |
ಯೆರೆಮೀಯನ ಗ್ರಂಥ 24 / ಯೆಗ್ರ 24 |
ಯೆರೆಮೀಯನ ಗ್ರಂಥ 25 / ಯೆಗ್ರ 25 |
ಯೆರೆಮೀಯನ ಗ್ರಂಥ 26 / ಯೆಗ್ರ 26 |
ಯೆರೆಮೀಯನ ಗ್ರಂಥ 27 / ಯೆಗ್ರ 27 |
ಯೆರೆಮೀಯನ ಗ್ರಂಥ 28 / ಯೆಗ್ರ 28 |
ಯೆರೆಮೀಯನ ಗ್ರಂಥ 29 / ಯೆಗ್ರ 29 |
ಯೆರೆಮೀಯನ ಗ್ರಂಥ 30 / ಯೆಗ್ರ 30 |
ಯೆರೆಮೀಯನ ಗ್ರಂಥ 31 / ಯೆಗ್ರ 31 |
ಯೆರೆಮೀಯನ ಗ್ರಂಥ 32 / ಯೆಗ್ರ 32 |
ಯೆರೆಮೀಯನ ಗ್ರಂಥ 33 / ಯೆಗ್ರ 33 |
ಯೆರೆಮೀಯನ ಗ್ರಂಥ 34 / ಯೆಗ್ರ 34 |
ಯೆರೆಮೀಯನ ಗ್ರಂಥ 35 / ಯೆಗ್ರ 35 |
ಯೆರೆಮೀಯನ ಗ್ರಂಥ 36 / ಯೆಗ್ರ 36 |
ಯೆರೆಮೀಯನ ಗ್ರಂಥ 37 / ಯೆಗ್ರ 37 |
ಯೆರೆಮೀಯನ ಗ್ರಂಥ 38 / ಯೆಗ್ರ 38 |
ಯೆರೆಮೀಯನ ಗ್ರಂಥ 39 / ಯೆಗ್ರ 39 |
ಯೆರೆಮೀಯನ ಗ್ರಂಥ 40 / ಯೆಗ್ರ 40 |
ಯೆರೆಮೀಯನ ಗ್ರಂಥ 41 / ಯೆಗ್ರ 41 |
ಯೆರೆಮೀಯನ ಗ್ರಂಥ 42 / ಯೆಗ್ರ 42 |
ಯೆರೆಮೀಯನ ಗ್ರಂಥ 43 / ಯೆಗ್ರ 43 |
ಯೆರೆಮೀಯನ ಗ್ರಂಥ 44 / ಯೆಗ್ರ 44 |
ಯೆರೆಮೀಯನ ಗ್ರಂಥ 45 / ಯೆಗ್ರ 45 |
ಯೆರೆಮೀಯನ ಗ್ರಂಥ 46 / ಯೆಗ್ರ 46 |
ಯೆರೆಮೀಯನ ಗ್ರಂಥ 47 / ಯೆಗ್ರ 47 |
ಯೆರೆಮೀಯನ ಗ್ರಂಥ 48 / ಯೆಗ್ರ 48 |
ಯೆರೆಮೀಯನ ಗ್ರಂಥ 49 / ಯೆಗ್ರ 49 |
ಯೆರೆಮೀಯನ ಗ್ರಂಥ 50 / ಯೆಗ್ರ 50 |
ಯೆರೆಮೀಯನ ಗ್ರಂಥ 51 / ಯೆಗ್ರ 51 |
ಯೆರೆಮೀಯನ ಗ್ರಂಥ 52 / ಯೆಗ್ರ 52 |