A A A A A
×

ಕನ್ನಡ ಬೈಬಲ್ (KNCL) 2016

ಯೆರೆಮೀಯನ ಗ್ರಂಥ ೫

ಜೆರುಸಲೇಮಿನ ಜನರೇ, ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನೋಡಿ ಅಲ್ಲಿನ ಚೌಕಗಳಲ್ಲಿ ಹುಡುಕಾಡಿ ನೋಡಿ. ನೀತಿಯನ್ನು ಕೈಗೊಂಡು ಸತ್ಯವನ್ನರಸುವವನು ಒಬ್ಬನಾದರೂ ಇದ್ದಾನೆಯೇ? ಅಂಥ ಸತ್ಪುರುಷ ಸಿಕ್ಕುತ್ತಾನೆಯೆ ಎಂಬುದನ್ನು ನೀವೇ ನಿಶ್ಚಯಿಸಿರಿ; ಸಿಕ್ಕಿದ್ದೇ ಆದರೆ ಸರ್ವೇಶ್ವರ ಸ್ವಾಮಿ ಆ ನಗರವನ್ನು ಕ್ಷಮಿಸುವರು.
ನೀವು ‘ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡಿದರೂ ಆ ಪ್ರಮಾಣ ಸುಳ್ಳೇ ಸುಳ್ಳು ಎನ್ನುತ್ತಾರೆ ಸರ್ವೇಶ್ವರ.
ಸ್ವಾಮಿ ಸರ್ವೇಶ್ವರನ ಕಣ್ಣು ನಾಟಿಸುವುದು ಸತ್ಯದ ಮೇಲೆ. ಅವರು ದಂಡಿಸಿದರೂ ನೀವು ಪಶ್ಚಾತ್ತಾಪಪಡಲಿಲ್ಲ. ಅವರು ನಸುಕಿದರೂ ನೀವು ತಿದ್ದುಕೊಳ್ಳಲು ಒಪ್ಪಲಿಲ್ಲ. ನಿಮ್ಮ ಮುಖವನ್ನು ಕಲ್ಲಿಗಿಂತ ಕಠಿಣ ಮಾಡಿಕೊಂಡಿರಿ. ಅವರಿಗೆ ಅಭಿಮುಖರಾಗಲು ಸಮ್ಮತಿಸದೆಹೋದಿರಿ.
ಹೀಗಿರಲು ನಾನು, “ಈ ಜನರು ಬಡವರು, ಮೂಢರು, ಸರ್ವೇಶ್ವರನ ಮಾರ್ಗವನ್ನೂ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು.
ಆದುದರಿಂದ ಗಣ್ಯವ್ಯಕ್ತಿಗಳ ಬಳಿಗೆ ಹೋಗಿ ಮಾತಾಡುವೆನು ಅವರು ಸರ್ವೇಶ್ವರನ ಮಾರ್ಗ ಹಾಗೂ ಅವರ ದೇವರ ನ್ಯಾಯವಿಧಿಗಳನ್ನು ಬಲ್ಲವರು,” ಎಂದುಕೊಂಡೆನು. ಆದರೆ ಆ ವ್ಯಕ್ತಿಗಳು ಕೂಡ ನೊಗವನ್ನು ಮುರಿದವರು, ಕಣ್ಣಿಗಳನ್ನು ಕಿತ್ತುಬಿಟ್ಟವರು.
ಆದಕಾರಣ ಅಡವಿಯ ಸಿಂಹ ಅವರನ್ನು ಕೊಲ್ಲುವುದು ಕಾಡಿನ ತೋಳ ಕೊಳ್ಳೆಹೊಡೆಯುವುದು ಚಿರತೆ ಅವರ ಪಟ್ಟಣಗಳಿಗೆ ಹೊಂಚುಹಾಕುವುದು ಅಲ್ಲಿಂದ ಹೊರಬರುವ ಪ್ರತಿಯೊಬ್ಬನನ್ನು ಸೀಳುವುದು. ಅವರ ಅಪರಾಧಗಳೋ ಬಹಳ, ಅವರ ದ್ರೋಹಗಳೋ ಅಪಾರ!
ಸರ್ವೇಶ್ವರ ಸ್ವಾಮಿ ಹೀಗೆಂದು ಪ್ರಶ್ನಿಸುತ್ತಾರೆ; “ಎಲೈ ಜೆರುಸಲೇಮ್, ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ತೊರೆದುಬಿಟ್ಟಿದ್ದಾರೆ; ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆತುಂಬ ಊಟಕೊಟ್ಟೆ; ಅವರೋ ವ್ಯಭಿಚಾರ ಮಾಡಿದ್ದಾರೆ, ವೇಶ್ಯೆಯರ ಮನೆಗಳಲ್ಲಿ ಗುಂಪು ಸೇರಿದ್ದಾರೆ!
ಅತ್ತಿತ್ತ ಓಡಾಡುವ ಕೊಬ್ಬಿದ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನೂ ಕೆನೆಯುತ್ತಾನೆ ತನ್ನ ನೆರೆಯವನ ಹೆಂಡತಿಯನ್ನು ನೋಡಿ!
ಇವುಗಳ ನಿಮಿತ್ತ ನಾನು ದಂಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪವನ್ನು ತೀರಿಸದಿರುವೆನೋ?
೧೦
ಆಕ್ರಮಣಕಾರರಿಗೆ ಕರೆ; ಸಿಯೋನೆಂಬ ದ್ರಾಕ್ಷಾತೋಟದ ಸಾಲುಗಿಡಗಳನ್ನು ಹಾಳುಮಾಡಿ. ಆದರೆ ಅದನ್ನು ನಿರ್ಮೂಲಮಾಡಬೇಡಿ. ಅದರ ರೆಂಬೆಗಳನ್ನು ಕಿತ್ತುಹಾಕಿ. ಅವು ಸರ್ವೇಶ್ವರನಾದ ನನಗೆ ಸೇರಿದವುಗಳಲ್ಲ.
೧೧
ಇಸ್ರಯೇಲ್ ವಂಶದವರೂ ಜುದೇಯ ವಂಶದವರೂ ನನಗೆ ಬಹಳವಾಗಿ ದ್ರೋಹವೆಸಗಿದ್ದಾರೆ. ಇದು ಸರ್ವೇಶ್ವರನಾದ ನನ್ನ ನುಡಿ.”
೧೨
ಆ ಜನರು ಸರ್ವೇಶ್ವರ ಸ್ವಾಮಿಯನ್ನು ಅಲ್ಲಗಳೆದಿದ್ದಾರೆ. “ಆತ ಏನು ಮಾಡಿಯಾನು? ನಮಗೆ ಕೇಡು ಬರುವುದೂ ಇಲ್ಲ, ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ.
೧೩
ಪ್ರವಾದಿಗಳು ಆಡುವುದೆಲ್ಲ ಬರೀ ಗಾಳಿಮಾತುಗಳು. ದೈವೋಕ್ತಿಯೆಂಬುದು ಅವುಗಳಲ್ಲಿ ಇಲ್ಲ. ಅವರಿಗೇ ತಗಲಲಿ ಅವರು ಹೇಳುವುದೆಲ್ಲ,” ಎಂದುಕೊಂಡಿದ್ದಾರೆ.
೧೪
ಆದುದರಿಂದ ಸೇನಾಧೀಶ್ವರ ಸರ್ವೇಶ್ವರ ಆದ ದೇವರು ಯೆರೆಮೀಯನಿಗೆ ಹೀಗೆಂದರು: “ಇಗೋ, ಅವರು ಹೀಗೆ ಮಾತಾಡಿದ್ದರಿಂದ ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು; ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು; ಆ ಬೆಂಕಿ ಅವರನ್ನು ಸುಟ್ಟುಹಾಕುವುದು.
೧೫
ಇಸ್ರಯೇಲ್ ವಂಶವೇ, ಸರ್ವೇಶ್ವರ ಸ್ವಾಮಿಯ ಮಾತನ್ನು ಗಮನದಿಂದ ಕೇಳು: “ನಾನು ಒಂದು ರಾಷ್ಟ್ರವನ್ನು ದೂರದಿಂದ ನಿನ್ನ ವಿರುದ್ಧ ಬರಮಾಡುವೆನು. ಅದು ಪ್ರಾಚೀನ ಹಾಗೂ ಪ್ರಬಲ ರಾಷ್ಟ್ರ. ಅದರ ಭಾಷೆ ನಿನಗೆ ತಿಳಿಯದು. ಅದು ಆಡುವ ಮಾತು ನಿನಗೆ ಅರ್ಥವಾಗದು.
೧೬
ಅದರ ಬತ್ತಳಿಕೆ ಬಾಯ್ದೆರೆದ ಗೋರಿ; ಅದರ ಯೋಧರೆಲ್ಲರು ಶೂರರು,
೧೭
ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡುಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.
೧೮
“ಆದರೂ ಆ ದಿನಗಳಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.
೧೯
‘ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ ಇವುಗಳನ್ನೆಲ್ಲ ನಮಗೇಕೆ ಮಾಡಿದ್ದಾರೆ?’ ಎಂದು ಕೇಳುವಾಗ ನೀನು ಅವರಿಗೆ, ‘ನೀವು ಸರ್ವೇಶ್ವರನನ್ನೇ ತೊರೆದು, ಸ್ವಂತನಾಡಿನಲ್ಲೆ ಅನ್ಯದೇವತೆಗಳಿಗೆ ಸೇವೆಸಲ್ಲಿಸಿದ್ದೀರಿ. ಅಂತೆಯೇ ಹೊರನಾಡಿನಲ್ಲಿ ಅನ್ಯರಿಗೆ ಸೇವೆಮಾಡುವಿರಿ’ ಎಂದು ಹೇಳು.”
೨೦
ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ಯಕೋಬ ಮನೆತನಕ್ಕೆ ಇದನ್ನು ಸಾರಿರಿ, ಜುದೇಯದಲ್ಲಿ ಹೀಗೆ ಪ್ರಕಟಿಸಿರಿ:
೨೧
ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;
೨೨
ನೀವು ನನಗೆ ಅಂಜುವುದಿಲ್ಲವೋ? ನನ್ನೆದುರಿಗೆ ನಡುಗುವುದಿಲ್ಲವೊ? ಕಡಲು ದಾಟದ ಹಾಗೆ ಅದಕ್ಕೆ ಮರಳನ್ನು ನಿತ್ಯನಿಬಂಧನೆಯಿಂದ ಮೇರೆಯನ್ನಾಗಿ ನೇಮಿಸಿದವನು ನಾನು.ತೆರೆಗಳು ಅಲ್ಲಕಲ್ಲೋಲವಾದರೂ ಅದನ್ನು ಮೀರಲಾರವು. ಭೋರ್ಗರೆದರೂ ಹಾಯಲಾರವು.
೨೩
ನೀವಾದರೋ ನನ್ನ ಅಧೀನದಿಂದ ತಪ್ಪಿಸಿಕೊಂಡು ಎದುರಿಬೀಳುವ ಹೃದಯವುಳ್ಳವರಾಗಿ ಇದ್ದೀರಿ. ಹದ್ದುಮೀರಿ ನನ್ನನ್ನು ಬಿಟ್ಟುಹೋಗಿ ಇದ್ದೀರಿ.
೨೪
ಮುಂಗಾರು, ಹಿಂಗಾರು ಹೀಗೆ ಸಕಾಲದ ಮಳೆಯನ್ನು ಬರಮಾಡುವವನು ನಾನು. ಸುಗ್ಗಿಯ ಕ್ಲುಪ್ತವಾರಗಳನ್ನು ಪ್ರತ್ಯೇಕಿಸುವವನು ನಾನು. ಆದರೆ ನೀವು ನನ್ನಲ್ಲಿ ಭಯಭಕ್ತಿ ಇಡಲು ಮನದಲ್ಲಿ ನೆನೆಯದೆ ಇದ್ದೀರಿ.
೨೫
ನಿಮ್ಮ ಅಪರಾಧಗಳು ಈ ಪ್ರಯೋಜನಗಳನ್ನು ತಡೆಗಟ್ಟಿವೆ. ನಿಮ್ಮ ಪಾಪಗಳು, ಈ ಒಳಿತು ನಿಮಗೆ ಸಿಗದಂತೆ ತಪ್ಪಿಸಿವೆ.
೨೬
“ನನ್ನ ಜನರ ನಡುವೆ ಕೆಟ್ಟವರು ಕಂಡುಬಂದಿದ್ದಾರೆ. ಬೇಡರು ಹೊಂಚುಹಾಕುವ ಹಾಗೆ ಅವರು ಹೊಂಚುಹಾಕುತ್ತಾರೆ. ಬೋನೊಡ್ಡಿ ಜನರನ್ನು ಹಿಡಿಯುತ್ತಾರೆ.
೨೭
ಪಂಜರಗಳಲ್ಲಿ ಪಕ್ಷಿಗಳು ತುಂಬಿರುವಂತೆ ಅವರ ಮನೆಗಳಲ್ಲಿ ಮೋಸ ವಂಚನೆಯಿಂದ ಬಂದ ಆದಾಯಗಳು ತುಂಬಿವೆ. ಇದರಿಂದ ದೊಡ್ಡ ಹಣವಂತರಾಗಿ ಇದ್ದಾರೆ.
೨೮
ಕೊಬ್ಬಿ ಮೆರೆಯುತ್ತಿದ್ದಾರೆ. ಕೆಟ್ಟ ಕಾರ್ಯಗಳಲ್ಲಂತೂ ನಿಸ್ಸೀಮರಾಗಿದ್ದಾರೆ. ಅನಾಥರ ಏಳಿಗೆಗಾಗಿ ಅವರ ಪಕ್ಷ ಹಿಡಿದು ವಾದಿಸುವುದಿಲ್ಲ. ದಿಕ್ಕಿಲ್ಲದವರಿಗೆ ನ್ಯಾಯ ದೊರಕಿಸುವುದಿಲ್ಲ.
೨೯
“ನಾನು ಇವುಗಳಿಗಾಗಿ ಇವರನ್ನು ದುಡಿಸಬಾರದೋ? ಇಂಥ ಜನತೆಯ ಮೇಲೆ ನನ್ನ ಕೋಪ ತೀರಿಸದೆ ಇರುವೆನೋ? ಇದು ಸರ್ವೇಶ್ವರನಾದ ನನ್ನ ನುಡಿ.
೩೦
ಭೀಕರವಾದ ಹಾಗೂ ಅಸಹ್ಯವಾದ ಘಟನೆಗಳು ನಾಡಿನಲ್ಲಿ ನಡೆದುಬಂದಿವೆ.
೩೧
ಪ್ರವಾದಿಗಳೇ ಸುಳ್ಳು ಪ್ರವಾದನೆಮಾಡುತ್ತಾರೆ. ಯಾಜಕರು ಅಂಥವರಿಂದ ಅಧಿಕಾರ ಪಡೆದು ದೊರೆತನಮಾಡುತ್ತಾರೆ. ನನ್ನ ಜನರಿಗೆ ಚೆನ್ನಾಗಿ ಹಿಡಿಸುವುದು ಇಂಥದ್ದೇ. ಆದರೆ ಅಂತ್ಯ ಬಂದಾಗ ಏನು ಮಾಡುವರು?”
ಯೆರೆಮೀಯನ ಗ್ರಂಥ ೫:1
ಯೆರೆಮೀಯನ ಗ್ರಂಥ ೫:2
ಯೆರೆಮೀಯನ ಗ್ರಂಥ ೫:3
ಯೆರೆಮೀಯನ ಗ್ರಂಥ ೫:4
ಯೆರೆಮೀಯನ ಗ್ರಂಥ ೫:5
ಯೆರೆಮೀಯನ ಗ್ರಂಥ ೫:6
ಯೆರೆಮೀಯನ ಗ್ರಂಥ ೫:7
ಯೆರೆಮೀಯನ ಗ್ರಂಥ ೫:8
ಯೆರೆಮೀಯನ ಗ್ರಂಥ ೫:9
ಯೆರೆಮೀಯನ ಗ್ರಂಥ ೫:10
ಯೆರೆಮೀಯನ ಗ್ರಂಥ ೫:11
ಯೆರೆಮೀಯನ ಗ್ರಂಥ ೫:12
ಯೆರೆಮೀಯನ ಗ್ರಂಥ ೫:13
ಯೆರೆಮೀಯನ ಗ್ರಂಥ ೫:14
ಯೆರೆಮೀಯನ ಗ್ರಂಥ ೫:15
ಯೆರೆಮೀಯನ ಗ್ರಂಥ ೫:16
ಯೆರೆಮೀಯನ ಗ್ರಂಥ ೫:17
ಯೆರೆಮೀಯನ ಗ್ರಂಥ ೫:18
ಯೆರೆಮೀಯನ ಗ್ರಂಥ ೫:19
ಯೆರೆಮೀಯನ ಗ್ರಂಥ ೫:20
ಯೆರೆಮೀಯನ ಗ್ರಂಥ ೫:21
ಯೆರೆಮೀಯನ ಗ್ರಂಥ ೫:22
ಯೆರೆಮೀಯನ ಗ್ರಂಥ ೫:23
ಯೆರೆಮೀಯನ ಗ್ರಂಥ ೫:24
ಯೆರೆಮೀಯನ ಗ್ರಂಥ ೫:25
ಯೆರೆಮೀಯನ ಗ್ರಂಥ ೫:26
ಯೆರೆಮೀಯನ ಗ್ರಂಥ ೫:27
ಯೆರೆಮೀಯನ ಗ್ರಂಥ ೫:28
ಯೆರೆಮೀಯನ ಗ್ರಂಥ ೫:29
ಯೆರೆಮೀಯನ ಗ್ರಂಥ ೫:30
ಯೆರೆಮೀಯನ ಗ್ರಂಥ ೫:31
ಯೆರೆಮೀಯನ ಗ್ರಂಥ 1 / ಯೆಗ್ರ 1
ಯೆರೆಮೀಯನ ಗ್ರಂಥ 2 / ಯೆಗ್ರ 2
ಯೆರೆಮೀಯನ ಗ್ರಂಥ 3 / ಯೆಗ್ರ 3
ಯೆರೆಮೀಯನ ಗ್ರಂಥ 4 / ಯೆಗ್ರ 4
ಯೆರೆಮೀಯನ ಗ್ರಂಥ 5 / ಯೆಗ್ರ 5
ಯೆರೆಮೀಯನ ಗ್ರಂಥ 6 / ಯೆಗ್ರ 6
ಯೆರೆಮೀಯನ ಗ್ರಂಥ 7 / ಯೆಗ್ರ 7
ಯೆರೆಮೀಯನ ಗ್ರಂಥ 8 / ಯೆಗ್ರ 8
ಯೆರೆಮೀಯನ ಗ್ರಂಥ 9 / ಯೆಗ್ರ 9
ಯೆರೆಮೀಯನ ಗ್ರಂಥ 10 / ಯೆಗ್ರ 10
ಯೆರೆಮೀಯನ ಗ್ರಂಥ 11 / ಯೆಗ್ರ 11
ಯೆರೆಮೀಯನ ಗ್ರಂಥ 12 / ಯೆಗ್ರ 12
ಯೆರೆಮೀಯನ ಗ್ರಂಥ 13 / ಯೆಗ್ರ 13
ಯೆರೆಮೀಯನ ಗ್ರಂಥ 14 / ಯೆಗ್ರ 14
ಯೆರೆಮೀಯನ ಗ್ರಂಥ 15 / ಯೆಗ್ರ 15
ಯೆರೆಮೀಯನ ಗ್ರಂಥ 16 / ಯೆಗ್ರ 16
ಯೆರೆಮೀಯನ ಗ್ರಂಥ 17 / ಯೆಗ್ರ 17
ಯೆರೆಮೀಯನ ಗ್ರಂಥ 18 / ಯೆಗ್ರ 18
ಯೆರೆಮೀಯನ ಗ್ರಂಥ 19 / ಯೆಗ್ರ 19
ಯೆರೆಮೀಯನ ಗ್ರಂಥ 20 / ಯೆಗ್ರ 20
ಯೆರೆಮೀಯನ ಗ್ರಂಥ 21 / ಯೆಗ್ರ 21
ಯೆರೆಮೀಯನ ಗ್ರಂಥ 22 / ಯೆಗ್ರ 22
ಯೆರೆಮೀಯನ ಗ್ರಂಥ 23 / ಯೆಗ್ರ 23
ಯೆರೆಮೀಯನ ಗ್ರಂಥ 24 / ಯೆಗ್ರ 24
ಯೆರೆಮೀಯನ ಗ್ರಂಥ 25 / ಯೆಗ್ರ 25
ಯೆರೆಮೀಯನ ಗ್ರಂಥ 26 / ಯೆಗ್ರ 26
ಯೆರೆಮೀಯನ ಗ್ರಂಥ 27 / ಯೆಗ್ರ 27
ಯೆರೆಮೀಯನ ಗ್ರಂಥ 28 / ಯೆಗ್ರ 28
ಯೆರೆಮೀಯನ ಗ್ರಂಥ 29 / ಯೆಗ್ರ 29
ಯೆರೆಮೀಯನ ಗ್ರಂಥ 30 / ಯೆಗ್ರ 30
ಯೆರೆಮೀಯನ ಗ್ರಂಥ 31 / ಯೆಗ್ರ 31
ಯೆರೆಮೀಯನ ಗ್ರಂಥ 32 / ಯೆಗ್ರ 32
ಯೆರೆಮೀಯನ ಗ್ರಂಥ 33 / ಯೆಗ್ರ 33
ಯೆರೆಮೀಯನ ಗ್ರಂಥ 34 / ಯೆಗ್ರ 34
ಯೆರೆಮೀಯನ ಗ್ರಂಥ 35 / ಯೆಗ್ರ 35
ಯೆರೆಮೀಯನ ಗ್ರಂಥ 36 / ಯೆಗ್ರ 36
ಯೆರೆಮೀಯನ ಗ್ರಂಥ 37 / ಯೆಗ್ರ 37
ಯೆರೆಮೀಯನ ಗ್ರಂಥ 38 / ಯೆಗ್ರ 38
ಯೆರೆಮೀಯನ ಗ್ರಂಥ 39 / ಯೆಗ್ರ 39
ಯೆರೆಮೀಯನ ಗ್ರಂಥ 40 / ಯೆಗ್ರ 40
ಯೆರೆಮೀಯನ ಗ್ರಂಥ 41 / ಯೆಗ್ರ 41
ಯೆರೆಮೀಯನ ಗ್ರಂಥ 42 / ಯೆಗ್ರ 42
ಯೆರೆಮೀಯನ ಗ್ರಂಥ 43 / ಯೆಗ್ರ 43
ಯೆರೆಮೀಯನ ಗ್ರಂಥ 44 / ಯೆಗ್ರ 44
ಯೆರೆಮೀಯನ ಗ್ರಂಥ 45 / ಯೆಗ್ರ 45
ಯೆರೆಮೀಯನ ಗ್ರಂಥ 46 / ಯೆಗ್ರ 46
ಯೆರೆಮೀಯನ ಗ್ರಂಥ 47 / ಯೆಗ್ರ 47
ಯೆರೆಮೀಯನ ಗ್ರಂಥ 48 / ಯೆಗ್ರ 48
ಯೆರೆಮೀಯನ ಗ್ರಂಥ 49 / ಯೆಗ್ರ 49
ಯೆರೆಮೀಯನ ಗ್ರಂಥ 50 / ಯೆಗ್ರ 50
ಯೆರೆಮೀಯನ ಗ್ರಂಥ 51 / ಯೆಗ್ರ 51
ಯೆರೆಮೀಯನ ಗ್ರಂಥ 52 / ಯೆಗ್ರ 52