೧ |
ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು. |
೨ |
ಆದರೆ ಚಿದ್ಕೀಯನಾಗಲಿ, ಅವನ ಸೇವಕರಾಗಲಿ, ನಾಡಿನ ಜನರಾಗಲಿ ಸರ್ವೇಶ್ವರನು ಪ್ರವಾದಿ ಯೆರೆಮೀಯನಿಂದ ನುಡಿಸಿದ ಮಾತುಗಳನ್ನು ಕೇಳದೆಹೋದರು. |
೩ |
ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು. |
೪ |
ಆಗ ಯೆರೆಮೀಯನು ಇನ್ನೂ ಸೆರೆಯಾಗಿರಲಿಲ್ಲ. ಜನರಲ್ಲಿಗೆ ಹೋಗುತ್ತಾ ಬರುತ್ತಿದ್ದನು. |
೫ |
ಅಷ್ಟರಲ್ಲಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತ್ತು. ಈ ಸಂಗತಿಯನ್ನು ಕೇಳಿ, ಜೆರುಸಲೇಮನ್ನು ಈಗಾಗಲೆ ಮುತ್ತಿದ್ದ ಬಾಬಿಲೋನಿಯದ ಸೈನಿಕರು ಅದನ್ನು ಬಿಟ್ಟುಹೋಗಿದ್ದರು. |
೬ |
ಈ ಸಂದರ್ಭದಲ್ಲಿ ಪ್ರವಾದಿ ಯೆರೆಮೀಯನಿಗೆ ಸರ್ವೇಶ್ವರನಿಂದ ಕೇಳಿ ಬಂದ ವಾಣಿ: |
೭ |
“ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ - ನನ್ನ ಅಭಿಪ್ರಾಯವನ್ನು ವಿಚಾರಿಸಲು ನಿಮ್ಮನ್ನು ನನ್ನ ಬಳಿಗೆ ಕಳಿಸಿದ ಜುದೇಯದ ಅರಸನಿಗೆ ಹೀಗೆಂದು ಹೇಳಿರಿ: ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶಕ್ಕೆ ಹಿಂದಿರುಗುವುದು. |
೮ |
ಬಾಬಿಲೋನಿಯದವರು ಪುನಃ ಬಂದು ಈ ನಗರದ ಮೇಲೆ ದಾಳಿ ನಡೆಸುವರು. ಇದನ್ನು ಆಕ್ರಮಿಸಿ ಬೆಂಕಿಯಿಂದ ಸುಟ್ಟುಹಾಕುವರು.’ |
೯ |
ಸರ್ವೇಶ್ವರ ಇಂತೆನ್ನುತ್ತಾರೆ:- ಬಾಬಿಲೋನಿಯರು ನಿಮ್ಮಿಂದ ಖಂಡಿತವಾಗಿ ತೊಲಗಿಹೋಗುವರು ಎಂದುಕೊಂಡು ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ಅವರು ಹೋಗುವುದಿಲ್ಲ. |
೧೦ |
ದಾಳಿಮಾಡುವ ಆ ಬಾಬಿಲೋನಿಯರನ್ನು ನೀವು ಪೂರ್ತಿಯಾಗಿ ಸೋಲಿಸಿದರೂ, ಅವರಲ್ಲಿ ಗಾಯಗೊಂಡವರು ಮಾತ್ರ ನಿಮ್ಮಲ್ಲಿ ಉಳಿದರೂ, ಆ ಗಾಯಗೊಂಡವರೇ ತಮ್ಮ ತಮ್ಮ ಗುಡಾರಗಳಿಂದ ಎದ್ದುಬಂದು ಈ ನಗರವನ್ನು ಬೆಂಕಿಯಿಂದ ಸುಟ್ಟುಬಿಡುವರು. |
೧೧ |
ಬಾಬಿಲೋನಿಯದ ಸೈನ್ಯವು ಫರೋಹನ ಸೈನ್ಯಕ್ಕೆ ಭಯಪಟ್ಟು ಜೆರುಸಲೇಮನ್ನು ಬಿಟ್ಟುಹೋಯಿತು. |
೧೨ |
ಆಗ ಯೆರೆಮೀಯನು ಬೆನ್ಯಾಮೀನ್ ನಾಡಿನಲ್ಲಿ ತನಗೆ ಬರಬೇಕಾಗಿದ್ದ ಸೊತ್ತನ್ನು ಜನರ ಸಮಕ್ಷಮದಲ್ಲಿ ತೆಗೆದುಕೊಳ್ಳಲು ಜೆರುಸಲೇಮಿನಿಂದ ಅಲ್ಲಿಗೆ ಹೊರಟನು. |
೧೩ |
ಬೆನ್ಯಾಮೀನನ ಬಾಗಿಲನ್ನು ಹಾದುಹೋಗುತ್ತಿರುವಾಗ ಶೆಲೆಮ್ಯನ ಮಗನೂ ಹನನ್ಯನ ಮೊಮ್ಮಗನೂ ಆದ ಇರೀಯನು ಅಲ್ಲಿ ಪಹರೆ ಕುಳಿತಿದ್ದನು. ಅವನು ಪ್ರವಾದಿ ಯೆರೆಮೀಯನನ್ನು, “ನೀನು ಬಾಬಿಲೋನಿಯರನ್ನು ಮರೆಹೋಗಲು ಹೋಗುತ್ತಿರುವೆ,” ಎಂದು ಹೇಳಿ ಅವನನ್ನು ಬಂಧಿಸಿದನು. |
೧೪ |
ಅದಕ್ಕೆ ಯೆರೆಮೀಯನು, “ಅದು ಸುಳ್ಳು, ನಾನು ಬಾಬಿಲೋನಿಯರನ್ನು ಮರೆಹೋಗುವವನಲ್ಲ,” ಎಂದನು. ಇರೀಯನು ಅವನ ಮಾತನ್ನು ಕೇಳದೆ ಅವನನ್ನು ಬಂಧಿಸಿ, ಪದಾಧಿಕಾರಿಗಳ ಬಳಿಗೆ ಕರೆದುತಂದನು. |
೧೫ |
ಆ ಅಧಿಕಾರಿಗಳು ಯೆರೆಮೀಯನ ಮೇಲೆ ಕೋಪಗೊಂಡು ಅವನನ್ನು ಹೊಡೆಯಿಸಿ, ತಾವು ಬಂದಿಖಾನೆಯನ್ನಾಗಿ ಮಾಡಿದ್ದ ಲೇಖಕ ಯೆಹೋನಾಥಾನನ ಮನೆಯಲ್ಲಿ ಸೆರೆಹಾಕಿಸಿದರು. |
೧೬ |
ಯೆರೆಮೀಯನು ಆ ಬಂದಿಖಾನೆಯ ನೆಲಮನೆಗಳಲ್ಲಿ ಕೆಲವು ದಿವಸ ಇದ್ದನು. |
೧೭ |
ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, “ದೇವರಿಂದ ಯಾವುದಾದರು ಸಂದೇಶ ದೊರೆಯಿತೊ?” ಎಂದು ಮನೆಯಲ್ಲಿ ಗುಟ್ಟಾಗಿ ವಿಚಾರಿಸಿದನು. ಯೆರೆಮೀಯನು, “ಹೌದು, ದೊರೆಯಿತು. ತಾವು ಬಾಬಿಲೋನಿನ ಅರಸನ ಕೈಗೆ ಸಿಕ್ಕಿಬೀಳುವಿರಿ,” ಎಂದನು. |
೧೮ |
ಅಲ್ಲದೆ ಯೆರೆಮೀಯನು ಅರಸ ಚಿದ್ಕೀಯನಿಗೆ, “ನೀವು ನನ್ನನ್ನು ಸೆರೆಯಲ್ಲಿ ಹಾಕಿದ್ದಕ್ಕೆ ನಾನು ನಿಮಗಾಗಲಿ, ನಿಮ್ಮ ಸೇವಕರಿಗಾಗಲಿ, ಇಲ್ಲಿಯ ಜನರಿಗಾಗಲಿ ಮಾಡಿದ ಅಪರಾಧವೇನು? |
೧೯ |
‘ಬಾಬಿಲೋನಿನ ಅರಸನು ನಿಮಗೂ ಈ ನಾಡಿಗೂ ವಿರುದ್ಧವಾಗಿ ಆಕ್ರಮಣ ನಡೆಸನು’ ಎಂದು ಸಾರಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ? |
೨೦ |
ಎನ್ನೊಡೆಯರೇ, ಅರಸರೇ, ದಯವಿಟ್ಟು ಆಲಿಸಿ: ಲೇಖಕ ಯೆಹೋನಾಥಾನನ ಮನೆಗೆ ನನ್ನನ್ನು ಮತ್ತೆ ಕಳಿಸಬೇಡಿ. ಕಳಿಸಿದರೆ ನಾನು ಅಲ್ಲೇ ಸತ್ತೇನು. ನನ್ನ ಈ ಬಿನ್ನಹವನ್ನು ಅಂಗೀಕರಿಸಿ,” ಎಂದು ಅರಿಕೆಮಾಡಿದನು. |
೨೧ |
ಆಗ ಅರಸ ಚಿದ್ಕೀಯನು ಅಂತೆಯೆ ಅಪ್ಪಣೆಕೊಡಲು, ಯೆರೆಮೀಯನನ್ನು ರಾಜ್ಯದ ಕಾರಾಗೃಹದ ಅಂಗಳಕ್ಕೆ ಸ್ಥಳಾಂತರಿಸಲಾಯಿತು. ರೊಟ್ಟಿ ಮಾರುಕಟ್ಟೆಯಿಂದ ಪ್ರತಿದಿನ ಒಂದೊಂದು ರೊಟ್ಟಿಯನ್ನು ಅವನಿಗೆ ತಂದುಕೊಡುತ್ತಿದ್ದರು. ನಗರದ ರೊಟ್ಟಿಯೆಲ್ಲ ತೀರುವ ತನಕ ಹಾಗೆ ಮಾಡುತ್ತಿದ್ದರು. ಯೆರೆಮೀಯನು ರಾಜ್ಯದ ಕಾರಾಗೃಹದ ಅಂಗಳದಲ್ಲೇ ವಾಸಿಸುತ್ತಿದ್ದನು.
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆರೆಮೀಯನ ಗ್ರಂಥ ೩೭:1 |
ಯೆರೆಮೀಯನ ಗ್ರಂಥ ೩೭:2 |
ಯೆರೆಮೀಯನ ಗ್ರಂಥ ೩೭:3 |
ಯೆರೆಮೀಯನ ಗ್ರಂಥ ೩೭:4 |
ಯೆರೆಮೀಯನ ಗ್ರಂಥ ೩೭:5 |
ಯೆರೆಮೀಯನ ಗ್ರಂಥ ೩೭:6 |
ಯೆರೆಮೀಯನ ಗ್ರಂಥ ೩೭:7 |
ಯೆರೆಮೀಯನ ಗ್ರಂಥ ೩೭:8 |
ಯೆರೆಮೀಯನ ಗ್ರಂಥ ೩೭:9 |
ಯೆರೆಮೀಯನ ಗ್ರಂಥ ೩೭:10 |
ಯೆರೆಮೀಯನ ಗ್ರಂಥ ೩೭:11 |
ಯೆರೆಮೀಯನ ಗ್ರಂಥ ೩೭:12 |
ಯೆರೆಮೀಯನ ಗ್ರಂಥ ೩೭:13 |
ಯೆರೆಮೀಯನ ಗ್ರಂಥ ೩೭:14 |
ಯೆರೆಮೀಯನ ಗ್ರಂಥ ೩೭:15 |
ಯೆರೆಮೀಯನ ಗ್ರಂಥ ೩೭:16 |
ಯೆರೆಮೀಯನ ಗ್ರಂಥ ೩೭:17 |
ಯೆರೆಮೀಯನ ಗ್ರಂಥ ೩೭:18 |
ಯೆರೆಮೀಯನ ಗ್ರಂಥ ೩೭:19 |
ಯೆರೆಮೀಯನ ಗ್ರಂಥ ೩೭:20 |
ಯೆರೆಮೀಯನ ಗ್ರಂಥ ೩೭:21 |
|
|
|
|
|
|
ಯೆರೆಮೀಯನ ಗ್ರಂಥ 1 / ಯೆಗ್ರ 1 |
ಯೆರೆಮೀಯನ ಗ್ರಂಥ 2 / ಯೆಗ್ರ 2 |
ಯೆರೆಮೀಯನ ಗ್ರಂಥ 3 / ಯೆಗ್ರ 3 |
ಯೆರೆಮೀಯನ ಗ್ರಂಥ 4 / ಯೆಗ್ರ 4 |
ಯೆರೆಮೀಯನ ಗ್ರಂಥ 5 / ಯೆಗ್ರ 5 |
ಯೆರೆಮೀಯನ ಗ್ರಂಥ 6 / ಯೆಗ್ರ 6 |
ಯೆರೆಮೀಯನ ಗ್ರಂಥ 7 / ಯೆಗ್ರ 7 |
ಯೆರೆಮೀಯನ ಗ್ರಂಥ 8 / ಯೆಗ್ರ 8 |
ಯೆರೆಮೀಯನ ಗ್ರಂಥ 9 / ಯೆಗ್ರ 9 |
ಯೆರೆಮೀಯನ ಗ್ರಂಥ 10 / ಯೆಗ್ರ 10 |
ಯೆರೆಮೀಯನ ಗ್ರಂಥ 11 / ಯೆಗ್ರ 11 |
ಯೆರೆಮೀಯನ ಗ್ರಂಥ 12 / ಯೆಗ್ರ 12 |
ಯೆರೆಮೀಯನ ಗ್ರಂಥ 13 / ಯೆಗ್ರ 13 |
ಯೆರೆಮೀಯನ ಗ್ರಂಥ 14 / ಯೆಗ್ರ 14 |
ಯೆರೆಮೀಯನ ಗ್ರಂಥ 15 / ಯೆಗ್ರ 15 |
ಯೆರೆಮೀಯನ ಗ್ರಂಥ 16 / ಯೆಗ್ರ 16 |
ಯೆರೆಮೀಯನ ಗ್ರಂಥ 17 / ಯೆಗ್ರ 17 |
ಯೆರೆಮೀಯನ ಗ್ರಂಥ 18 / ಯೆಗ್ರ 18 |
ಯೆರೆಮೀಯನ ಗ್ರಂಥ 19 / ಯೆಗ್ರ 19 |
ಯೆರೆಮೀಯನ ಗ್ರಂಥ 20 / ಯೆಗ್ರ 20 |
ಯೆರೆಮೀಯನ ಗ್ರಂಥ 21 / ಯೆಗ್ರ 21 |
ಯೆರೆಮೀಯನ ಗ್ರಂಥ 22 / ಯೆಗ್ರ 22 |
ಯೆರೆಮೀಯನ ಗ್ರಂಥ 23 / ಯೆಗ್ರ 23 |
ಯೆರೆಮೀಯನ ಗ್ರಂಥ 24 / ಯೆಗ್ರ 24 |
ಯೆರೆಮೀಯನ ಗ್ರಂಥ 25 / ಯೆಗ್ರ 25 |
ಯೆರೆಮೀಯನ ಗ್ರಂಥ 26 / ಯೆಗ್ರ 26 |
ಯೆರೆಮೀಯನ ಗ್ರಂಥ 27 / ಯೆಗ್ರ 27 |
ಯೆರೆಮೀಯನ ಗ್ರಂಥ 28 / ಯೆಗ್ರ 28 |
ಯೆರೆಮೀಯನ ಗ್ರಂಥ 29 / ಯೆಗ್ರ 29 |
ಯೆರೆಮೀಯನ ಗ್ರಂಥ 30 / ಯೆಗ್ರ 30 |
ಯೆರೆಮೀಯನ ಗ್ರಂಥ 31 / ಯೆಗ್ರ 31 |
ಯೆರೆಮೀಯನ ಗ್ರಂಥ 32 / ಯೆಗ್ರ 32 |
ಯೆರೆಮೀಯನ ಗ್ರಂಥ 33 / ಯೆಗ್ರ 33 |
ಯೆರೆಮೀಯನ ಗ್ರಂಥ 34 / ಯೆಗ್ರ 34 |
ಯೆರೆಮೀಯನ ಗ್ರಂಥ 35 / ಯೆಗ್ರ 35 |
ಯೆರೆಮೀಯನ ಗ್ರಂಥ 36 / ಯೆಗ್ರ 36 |
ಯೆರೆಮೀಯನ ಗ್ರಂಥ 37 / ಯೆಗ್ರ 37 |
ಯೆರೆಮೀಯನ ಗ್ರಂಥ 38 / ಯೆಗ್ರ 38 |
ಯೆರೆಮೀಯನ ಗ್ರಂಥ 39 / ಯೆಗ್ರ 39 |
ಯೆರೆಮೀಯನ ಗ್ರಂಥ 40 / ಯೆಗ್ರ 40 |
ಯೆರೆಮೀಯನ ಗ್ರಂಥ 41 / ಯೆಗ್ರ 41 |
ಯೆರೆಮೀಯನ ಗ್ರಂಥ 42 / ಯೆಗ್ರ 42 |
ಯೆರೆಮೀಯನ ಗ್ರಂಥ 43 / ಯೆಗ್ರ 43 |
ಯೆರೆಮೀಯನ ಗ್ರಂಥ 44 / ಯೆಗ್ರ 44 |
ಯೆರೆಮೀಯನ ಗ್ರಂಥ 45 / ಯೆಗ್ರ 45 |
ಯೆರೆಮೀಯನ ಗ್ರಂಥ 46 / ಯೆಗ್ರ 46 |
ಯೆರೆಮೀಯನ ಗ್ರಂಥ 47 / ಯೆಗ್ರ 47 |
ಯೆರೆಮೀಯನ ಗ್ರಂಥ 48 / ಯೆಗ್ರ 48 |
ಯೆರೆಮೀಯನ ಗ್ರಂಥ 49 / ಯೆಗ್ರ 49 |
ಯೆರೆಮೀಯನ ಗ್ರಂಥ 50 / ಯೆಗ್ರ 50 |
ಯೆರೆಮೀಯನ ಗ್ರಂಥ 51 / ಯೆಗ್ರ 51 |
ಯೆರೆಮೀಯನ ಗ್ರಂಥ 52 / ಯೆಗ್ರ 52 |