೧ |
ಯೆರೆಮೀಯ ಈ ಪ್ರವಾದನೆ ಮಾಡುವುದನ್ನು ಇಮ್ಮೇರನ ಮಗ ಹಾಗು ಸರ್ವೇಶ್ವರನ ಆಲಯದ ಮುಖ್ಯಾಧಿಕಾರಿಯಾದ ಯಾಜಕ ಪಷ್ಹೂರನು ಕೇಳಿದನು. |
೨ |
ಅವನು ಪ್ರವಾದಿ ಯೆರೆಮೀಯನನ್ನು ಹೊಡೆಯಿಸಿ ಸರ್ವೇಶ್ವರನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ಬಾಗಿಲ ಬಳಿಯಲ್ಲಿದ್ದ ಸೆರೆಗೆ ಹಾಕಿಸಿದನು. |
೩ |
ಮರುದಿನ ಆ ಪಷ್ಹೂರನು ಯೆರೆಮೀಯನನ್ನು ಸೆರೆಯಿಂದ ಬಿಡಿಸಿದಾಗ ಯೆರೆಮೀಯ ಅವನಿಗೆ ಹೀಗೆಂದು ಹೇಳಿದನು: “ಸರ್ವೇಶ್ವರ ನಿನ್ನ ಹೆಸರನ್ನು ಪಷ್ಹೂರ್ ಎಂದು ಕರೆಯದೆ ‘ಮಾಗೋರ್ ಮಿಸ್ಸಾಬೀಬ್’ ಎಂದು ಕರೆದಿದ್ದಾರೆ. |
೪ |
ಏಕೆಂದರೆ ಸರ್ವೇಶ್ವರನೆ ಹೇಳಿರುವ ಮಾತಿವು - ‘ಇಗೋ, ನಾನು ನಿನ್ನನ್ನು ನಿನಗೂ ನಿನ್ನ ಎಲ್ಲ ಸ್ನೇಹಿತರಿಗೂ ಭಯಾನಕನನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ಅದನ್ನು ನೀನು ಕಣ್ಣಾರೆ ಕಾಣುವೆ. ನಾನು ಜುದೇಯರನೆಲ್ಲ ಬಾಬಿಲೋನಿನ ಅರಸನ ಕೈಗೊಪ್ಪಿಸುವೆನು. ಅವನು ಇವರನ್ನು ಬಾಬಿಲೋನಿಗೆ ಸೆರೆಯಾಗಿ ಕೊಂಡೊಯ್ದು ಕತ್ತಿಗೆ ತುತ್ತಾಗಿಸುವನು. |
೫ |
ಅಷ್ಟು ಮಾತ್ರವಲ್ಲ, ಈ ನಗರದ ಎಲ್ಲ ಆಸ್ತಿಯನ್ನೂ ಆದಾಯವನ್ನೂ ಸಂಪತ್ತನ್ನೂ ಹಾಗು ಜುದೇಯದ ಅರಸರ ಸಕಲ ನಿಧಿನಿಕ್ಷೇಪಗಳನ್ನೂ ಇವರ ಶತ್ರುಗಳ ಕೈವಶಮಾಡುವೆನು. ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು. |
೬ |
ಪಷ್ಹೂರನೇ ಕೇಳು, ನೀನು ನಿನ್ನ ಮನೆಯ ಎಲ್ಲರೊಡನೆ ಸೆರೆಗೆ ಹೋಗುವೆ. ನೀನು ಮತ್ತು ನಿನ್ನ ಸುಳ್ಳು ಪ್ರವಾದನೆಯನ್ನು ಕೇಳಿದ ನಿನ್ನ ಸಕಲ ಗೆಳೆಯರೂ ಬಾಬಿಲೋನಿಗೆ ಸೇರಿ ಅಲ್ಲೆ ಸತ್ತು ಮಣ್ಣಾಗುವಿರಿ’.” |
೭ |
ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ. |
೮ |
ನನ್ನ ಮಾತೆಲ್ಲ ಅರಚಾಟ ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ. ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ. |
೯ |
‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ. |
೧೦ |
ಸುತ್ತಮುತ್ತಲು ದಿಗಿಲೆಂದರೆ ದಿಗಿಲು! ‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹುಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. |
೧೧ |
ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ. |
೧೨ |
ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. |
೧೩ |
ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ. |
೧೪ |
ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು! ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು ಹೆತ್ತಿದಾ ದಿನವು. |
೧೫ |
ಶಪಿಸಲ್ಪಡಲಿ ‘ನಿನಗೆ ಗಂಡು ಹುಟ್ಟಿದೆ’ ಎಂದು ನನ್ನ ತಂದೆಗೆ ತಿಳಿಸಿದಾತ! ಕೇವಲ ಸಂತಸವನ್ನು ನನ್ನ ತಂದೆಯಲ್ಲಿ ಉಂಟುಮಾಡಿದಾತ. |
೧೬ |
ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟ ಪಟ್ಟಣದ ಗತಿ ಅವನಿಗಾಗಲಿ! ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟ ಅವನ ಕಿವಿಗೆ ಬೀಳಲಿ! |
೧೭ |
ತಾಯಗರ್ಭದಲ್ಲಿರುವಾಗಲೆ ಅವನೇಕೆ ನನ್ನನ್ನು ಕೊಂದುಹಾಕಲಿಲ್ಲ? ಆಗ ನನ್ನ ತಾಯೇ ನನಗೆ ಗೋರಿಯಾಗುತ್ತಿದ್ದಳಲ್ಲಾ! ಆಕೆಯ ಗರ್ಭ ಸದಾ ಬಸಿರಾಗಿಯೇ ಇರುತ್ತಿತ್ತಲ್ಲಾ! |
೧೮ |
ಗರ್ಭ ಬಿಟ್ಟು ನಾನೇಕೆ ಹೊರಬಂದೆ? ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ? ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ?
|
Kannada Bible (KNCL) 2016 |
No Data |
|
|
|
|
|
|
|
|
|
|
ಯೆರೆಮೀಯನ ಗ್ರಂಥ ೨೦:1 |
ಯೆರೆಮೀಯನ ಗ್ರಂಥ ೨೦:2 |
ಯೆರೆಮೀಯನ ಗ್ರಂಥ ೨೦:3 |
ಯೆರೆಮೀಯನ ಗ್ರಂಥ ೨೦:4 |
ಯೆರೆಮೀಯನ ಗ್ರಂಥ ೨೦:5 |
ಯೆರೆಮೀಯನ ಗ್ರಂಥ ೨೦:6 |
ಯೆರೆಮೀಯನ ಗ್ರಂಥ ೨೦:7 |
ಯೆರೆಮೀಯನ ಗ್ರಂಥ ೨೦:8 |
ಯೆರೆಮೀಯನ ಗ್ರಂಥ ೨೦:9 |
ಯೆರೆಮೀಯನ ಗ್ರಂಥ ೨೦:10 |
ಯೆರೆಮೀಯನ ಗ್ರಂಥ ೨೦:11 |
ಯೆರೆಮೀಯನ ಗ್ರಂಥ ೨೦:12 |
ಯೆರೆಮೀಯನ ಗ್ರಂಥ ೨೦:13 |
ಯೆರೆಮೀಯನ ಗ್ರಂಥ ೨೦:14 |
ಯೆರೆಮೀಯನ ಗ್ರಂಥ ೨೦:15 |
ಯೆರೆಮೀಯನ ಗ್ರಂಥ ೨೦:16 |
ಯೆರೆಮೀಯನ ಗ್ರಂಥ ೨೦:17 |
ಯೆರೆಮೀಯನ ಗ್ರಂಥ ೨೦:18 |
|
|
|
|
|
|
ಯೆರೆಮೀಯನ ಗ್ರಂಥ 1 / ಯೆಗ್ರ 1 |
ಯೆರೆಮೀಯನ ಗ್ರಂಥ 2 / ಯೆಗ್ರ 2 |
ಯೆರೆಮೀಯನ ಗ್ರಂಥ 3 / ಯೆಗ್ರ 3 |
ಯೆರೆಮೀಯನ ಗ್ರಂಥ 4 / ಯೆಗ್ರ 4 |
ಯೆರೆಮೀಯನ ಗ್ರಂಥ 5 / ಯೆಗ್ರ 5 |
ಯೆರೆಮೀಯನ ಗ್ರಂಥ 6 / ಯೆಗ್ರ 6 |
ಯೆರೆಮೀಯನ ಗ್ರಂಥ 7 / ಯೆಗ್ರ 7 |
ಯೆರೆಮೀಯನ ಗ್ರಂಥ 8 / ಯೆಗ್ರ 8 |
ಯೆರೆಮೀಯನ ಗ್ರಂಥ 9 / ಯೆಗ್ರ 9 |
ಯೆರೆಮೀಯನ ಗ್ರಂಥ 10 / ಯೆಗ್ರ 10 |
ಯೆರೆಮೀಯನ ಗ್ರಂಥ 11 / ಯೆಗ್ರ 11 |
ಯೆರೆಮೀಯನ ಗ್ರಂಥ 12 / ಯೆಗ್ರ 12 |
ಯೆರೆಮೀಯನ ಗ್ರಂಥ 13 / ಯೆಗ್ರ 13 |
ಯೆರೆಮೀಯನ ಗ್ರಂಥ 14 / ಯೆಗ್ರ 14 |
ಯೆರೆಮೀಯನ ಗ್ರಂಥ 15 / ಯೆಗ್ರ 15 |
ಯೆರೆಮೀಯನ ಗ್ರಂಥ 16 / ಯೆಗ್ರ 16 |
ಯೆರೆಮೀಯನ ಗ್ರಂಥ 17 / ಯೆಗ್ರ 17 |
ಯೆರೆಮೀಯನ ಗ್ರಂಥ 18 / ಯೆಗ್ರ 18 |
ಯೆರೆಮೀಯನ ಗ್ರಂಥ 19 / ಯೆಗ್ರ 19 |
ಯೆರೆಮೀಯನ ಗ್ರಂಥ 20 / ಯೆಗ್ರ 20 |
ಯೆರೆಮೀಯನ ಗ್ರಂಥ 21 / ಯೆಗ್ರ 21 |
ಯೆರೆಮೀಯನ ಗ್ರಂಥ 22 / ಯೆಗ್ರ 22 |
ಯೆರೆಮೀಯನ ಗ್ರಂಥ 23 / ಯೆಗ್ರ 23 |
ಯೆರೆಮೀಯನ ಗ್ರಂಥ 24 / ಯೆಗ್ರ 24 |
ಯೆರೆಮೀಯನ ಗ್ರಂಥ 25 / ಯೆಗ್ರ 25 |
ಯೆರೆಮೀಯನ ಗ್ರಂಥ 26 / ಯೆಗ್ರ 26 |
ಯೆರೆಮೀಯನ ಗ್ರಂಥ 27 / ಯೆಗ್ರ 27 |
ಯೆರೆಮೀಯನ ಗ್ರಂಥ 28 / ಯೆಗ್ರ 28 |
ಯೆರೆಮೀಯನ ಗ್ರಂಥ 29 / ಯೆಗ್ರ 29 |
ಯೆರೆಮೀಯನ ಗ್ರಂಥ 30 / ಯೆಗ್ರ 30 |
ಯೆರೆಮೀಯನ ಗ್ರಂಥ 31 / ಯೆಗ್ರ 31 |
ಯೆರೆಮೀಯನ ಗ್ರಂಥ 32 / ಯೆಗ್ರ 32 |
ಯೆರೆಮೀಯನ ಗ್ರಂಥ 33 / ಯೆಗ್ರ 33 |
ಯೆರೆಮೀಯನ ಗ್ರಂಥ 34 / ಯೆಗ್ರ 34 |
ಯೆರೆಮೀಯನ ಗ್ರಂಥ 35 / ಯೆಗ್ರ 35 |
ಯೆರೆಮೀಯನ ಗ್ರಂಥ 36 / ಯೆಗ್ರ 36 |
ಯೆರೆಮೀಯನ ಗ್ರಂಥ 37 / ಯೆಗ್ರ 37 |
ಯೆರೆಮೀಯನ ಗ್ರಂಥ 38 / ಯೆಗ್ರ 38 |
ಯೆರೆಮೀಯನ ಗ್ರಂಥ 39 / ಯೆಗ್ರ 39 |
ಯೆರೆಮೀಯನ ಗ್ರಂಥ 40 / ಯೆಗ್ರ 40 |
ಯೆರೆಮೀಯನ ಗ್ರಂಥ 41 / ಯೆಗ್ರ 41 |
ಯೆರೆಮೀಯನ ಗ್ರಂಥ 42 / ಯೆಗ್ರ 42 |
ಯೆರೆಮೀಯನ ಗ್ರಂಥ 43 / ಯೆಗ್ರ 43 |
ಯೆರೆಮೀಯನ ಗ್ರಂಥ 44 / ಯೆಗ್ರ 44 |
ಯೆರೆಮೀಯನ ಗ್ರಂಥ 45 / ಯೆಗ್ರ 45 |
ಯೆರೆಮೀಯನ ಗ್ರಂಥ 46 / ಯೆಗ್ರ 46 |
ಯೆರೆಮೀಯನ ಗ್ರಂಥ 47 / ಯೆಗ್ರ 47 |
ಯೆರೆಮೀಯನ ಗ್ರಂಥ 48 / ಯೆಗ್ರ 48 |
ಯೆರೆಮೀಯನ ಗ್ರಂಥ 49 / ಯೆಗ್ರ 49 |
ಯೆರೆಮೀಯನ ಗ್ರಂಥ 50 / ಯೆಗ್ರ 50 |
ಯೆರೆಮೀಯನ ಗ್ರಂಥ 51 / ಯೆಗ್ರ 51 |
ಯೆರೆಮೀಯನ ಗ್ರಂಥ 52 / ಯೆಗ್ರ 52 |