೧ |
ನಾನು ಹೇಳುವುದನ್ನು ಕೇಳಿ: ಸರ್ವೇಶ್ವರ ಸ್ವಾಮಿಯ ಕೈ ನಿಮ್ಮನ್ನು ರಕ್ಷಿಸಲಾಗದಂಥ ಮೋಟುಗೈಯಲ್ಲ, ಅವರ ಕಿವಿ ಕಿವುಡಲ್ಲ. |
೨ |
ಬದಲಿಗೆ, ನಿಮ್ಮ ಅಪರಾಧಗಳೇ ನಿಮ್ಮನ್ನು ಜೀವದಿಂದ ಬೇರ್ಪಡಿಸುತ್ತಾ ಬಂದಿವೆ. ಅವರು ನಿಮಗೆ ಕಿವಿಗೊಡದಂತೆ ನಿಮ್ಮ ಪಾಪಗಳೇ ಅವರನ್ನು ವಿಮುಖರನ್ನಾಗಿ ಮಾಡಿವೆ. |
೩ |
ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾದುವು, ನಿಮ್ಮ ಬೆರಳುಗಳು ಅಕ್ರಮದಿಂದ ಮಲಿನವಾಗಿವೆ, ನಿಮ್ಮ ತುಟಿಗಳು ಸುಳ್ಳು ನುಡಿಯುತ್ತವೆ. ನಿಮ್ಮ ನಾಲಿಗೆ ಕೆಡುಕನ್ನು ಗೊಣಗುತ್ತದೆ. |
೪ |
ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ. |
೫ |
ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತೀರಿ, ಜೇಡರ ಹುಳುವಿನಂತೆ ಬಲೆಯನ್ನು ನೇಯುತ್ತೀರಿ. ಆ ಮೊಟ್ಟೆಗಳನ್ನು ತಿನ್ನುವವನು ಸಾಯುತ್ತಾನೆ, ಅವನ್ನು ಹೊಡೆದುಬಿಡುವವನು ವಿಷದ ಮರಿಗಳು ಹೊರಬರುವಂತೆ ಮಾಡುತ್ತಾನೆ. |
೬ |
ನಿಮ್ಮ ಆ ಬಲೆಯು ನೂಲು ಬಟ್ಟೆಯಾಗದು. ನೀವು ನೇಯ್ದದ್ದು ಹೊದಿಕೆಯಾಗದು. ನಿಮ್ಮ ಕಾರ್ಯಗಳು ಅಕ್ರಮವಾದುವು. ನಿಮ್ಮ ಕೈಕೆಲಸಗಳು ಹಿಂಸಾತ್ಮಕವಾದುವು. |
೭ |
ನಿಮ್ಮ ಕಾಲುಗಳು ಓಡುವುದು ಕೇಡಿಗಾಗಿ, ನೀವು ತವಕಪಡುವುದು ನಿರಪರಾಧಿಯ ರಕ್ತಪಾತಕ್ಕಾಗಿ. ನಿಮ್ಮ ಈ ಆಲೋಚನೆಗಳು ದುಷ್ಟವಾದುವು, ನೀವು ಹಿಡಿದ ಹಾದಿಗಳು ತರುವುದು ನಾಶವಿನಾಶವನ್ನೇ. |
೮ |
ಶಾಂತಿಸಮಾಧಾನದ ಮಾರ್ಗವನ್ನು ನೀವು ಅರಿಯಿರಿ. ನಿಮ್ಮ ನಡತೆಯಲ್ಲಿ ನ್ಯಾಯನೀತಿ ಎಂಬುದು ಇಲ್ಲ. ನಿಮ್ಮ ಮಾರ್ಗ ಅಂಕುಡೊಂಕಾಗಿದೆ, ಅವುಗಳಲ್ಲಿ ನಡೆಯುವವನು ಶಾಂತಿಸಮಾಧಾನವನ್ನು ಮುಟ್ಟನು. |
೯ |
ಆಗ ಜನರು ಹೀಗೆನ್ನುತ್ತಾರೆ: ಈ ಕಾರಣದಿಂದಲೇ ನ್ಯಾಯನಿರ್ಣಯವು ನಮ್ಮಿಂದ ದೂರವಾಗಿದೆ, ಸದ್ಧರ್ಮವು ನಮಗೆ ದೊರಕದೆ ಇದೆ. ಬೆಳಕಿಗಾಗಿ ಕಾದಿರುವ ನಮ್ಮನ್ನು ಕತ್ತಲು ಆವರಿಸಿದೆ. ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಮ್ಮನ್ನು ಅಂಧಕಾರವೇ ಬೆನ್ನಟ್ಟುತ್ತಿದೆ. |
೧೦ |
ಗೋಡೆಯನ್ನು ತಡವರಿಸುತ್ತೇವೆ ಕುರುಡರಂತೆ, ಹೌದು, ತಡಕಾಡುತ್ತೇವೆ ಕಣ್ಣಿಲ್ಲದವರಂತೆ. ನಡುಹಗಲಲ್ಲೇ ಎಡವುತ್ತೇವೆ ಇಳಿಹೊತ್ತಿನಲ್ಲೋ ಎಂಬಂತೆ. ಸಜೀವದಿಂದಿರುವವರ ನಡುವೆ ಇದ್ದೇವೆ ಸತ್ತವರಂತೆ. |
೧೧ |
ಗುರುಗುಟ್ಟುತ್ತೇವೆ ಕರಡಿಗಳಂತೆ, ಮುಲುಗುತ್ತೇವೆ ಪಾರಿವಾಳಗಳಂತೆ. ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಗದಿದೆ; ಜೀವೋದ್ಧಾರವನ್ನು, ನಿರೀಕ್ಷಿಸಿದರೂ ಅದು ನಮ್ಮಿಂದ ದೂರವಿದೆ. |
೧೨ |
“ಸರ್ವೇಶ್ವರಾ, ನಿಮಗೆ ವಿರುದ್ಧ ನಾವು ಗೈದ ಅಪರಾಧಗಳು ಹಲವು. ನಮ್ಮ ಪಾಪಗಳೇ ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ. ನಮ್ಮ ಅಪರಾಧಗಳು ನಮ್ಮೊಡನೆಯೇ ಇವೆ. ನಮ್ಮ ದ್ರೋಹಗಳನ್ನು ನಾವು ಬಲ್ಲೆವು. |
೧೩ |
ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು. |
೧೪ |
ನ್ಯಾಯವನ್ನು ಓಡಿಸಿಬಿಟ್ಟಿದ್ದೇವೆ; ನೀತಿ ಸಮೀಪಿಸದಂತೆ ಮಾಡಿದ್ದೇವೆ. ಸತ್ಯವು ಸಾರ್ವಜನಿಕ ಚೌಕದಲ್ಲಿ ಬಿದ್ದುಹೋಗಿದೆ; ಸದಾಚಾರವು ಪ್ರವೇಶಿಸಲಾಗದಿದೆ. |
೧೫ |
ಸತ್ಯವು ಅದೃಶ್ಯವಾಗಿದೆ. ಕೇಡನ್ನು ಕೈಬಿಟ್ಟವನೇ ಖೂನಿಗೆ ಗುರಿಯಾಗುತ್ತಾನೆ.” |
೧೬ |
ಸರ್ವೇಶ್ವರ ಸ್ವಾಮಿ ಇದನ್ನು ನೋಡಿದ್ದಾರೆ. ನ್ಯಾಯವೇ ಇಲ್ಲದ್ದನ್ನು ಕಂಡು ಖಿನ್ನರಾಗಿದ್ದಾರೆ. ಮುಂದೆ ಬಂದು ಉದ್ಧಾರಮಾಡಬಲ್ಲ ವ್ಯಕ್ತಿ ಯಾರೂ ಇಲ್ಲದಿರುವುದನ್ನು ಅರಿತು ಸ್ತಬ್ಧರಾಗಿದ್ದಾರೆ. ಎಂತಲೇ, ಅವರು ಸ್ವಂತ ಶಕ್ತಿಯನ್ನು ಪ್ರಯೋಗಿಸಿ ಜಯಪ್ರದರಾಗುವರು. ನ್ಯಾಯನೀತಿಯೇ ಅವರಿಗೆ ಆಧಾರ. |
೧೭ |
ಅವರು ನ್ಯಾಯನೀತಿಯನ್ನು ವಜ್ರಕವಚವನ್ನಾಗಿ ತೊಟ್ಟುಕೊಳ್ಳುವರು. ರಕ್ಷಣೆ ಎಂಬ ಶಿರಸ್ತ್ರಾಣವನ್ನು ಧರಿಸಕೊಳ್ಳುವರು. ಪ್ರತೀಕಾರವೆಂಬ ಉಡುಪನ್ನು ಉಟ್ಟುಕೊಳ್ಳುವರು. ಆಗ್ರಹ ಎಂಬ ನಿಲುವಂಗಿಯನ್ನು ಹಾಕಿಕೊಳ್ಳುವರು. |
೧೮ |
ಅವರವರ ಕೃತ್ಯಗಳಿಗೆ ತಕ್ಕಂತೆ ದೂರದ ನಾಡುಗಳವರೆಗೂ ಮುಯ್ಯಿ ತೀರಿಸುವರು. ವಿರೋಧಿಗಳಿಗೆ ಪ್ರತೀಕಾರ ಎಸಗುವರು; ಶತ್ರುಗಳಿಗೆ ಸೇಡನ್ನು ತೀರಿಸುವರು. |
೧೯ |
ಪೂರ್ವದಿಂದ ಪಶ್ಚಿಮದವರೆಗೆ ಎಲ್ಲರೂ ಸರ್ವೇಶ್ವರ ಸ್ವಾಮಿಯ ನಾಮಕ್ಕೆ ಹೆದರುವರು. ಅವರ ಘನತೆಗೆ ಅಂಜುವರು. ರಭಸದಿಂದ ನುಗ್ಗುವ ಪ್ರವಾಹದಂತೆಯೂ ವೇಗವಾಗಿ ಬೀಸುವ ಗಾಳಿಯಂತೆಯೂ ಸರ್ವೇಶ್ವರ ಸ್ವಾಮಿ ಬಂದೇ ಬರುವರು. |
೨೦ |
ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ: “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು. |
೨೧ |
ಅವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ: ನಿಮ್ಮ ಮೇಲೆ ನೆಲೆಸಿರುವ ನನ್ನ ಆತ್ಮವೂ ಮತ್ತು ನಿಮ್ಮ ಬಾಯಲ್ಲಿ ನಾನಿಟ್ಟಿರುವ ವಾಕ್ಯಗಳೂ ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ, ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ, ಇಂದಿನಿಂದ ಎಂದಿಗೂ ತೊಲಗುವುದಿಲ್ಲ.” ಇದು ಸರ್ವೇಶ್ವರ ಸ್ವಾಮಿಯ ನುಡಿ. |
Kannada Bible (KNCL) 2016 |
No Data |
ಯೆಶಾಯನ ೫೯:1 |
ಯೆಶಾಯನ ೫೯:2 |
ಯೆಶಾಯನ ೫೯:3 |
ಯೆಶಾಯನ ೫೯:4 |
ಯೆಶಾಯನ ೫೯:5 |
ಯೆಶಾಯನ ೫೯:6 |
ಯೆಶಾಯನ ೫೯:7 |
ಯೆಶಾಯನ ೫೯:8 |
ಯೆಶಾಯನ ೫೯:9 |
ಯೆಶಾಯನ ೫೯:10 |
ಯೆಶಾಯನ ೫೯:11 |
ಯೆಶಾಯನ ೫೯:12 |
ಯೆಶಾಯನ ೫೯:13 |
ಯೆಶಾಯನ ೫೯:14 |
ಯೆಶಾಯನ ೫೯:15 |
ಯೆಶಾಯನ ೫೯:16 |
ಯೆಶಾಯನ ೫೯:17 |
ಯೆಶಾಯನ ೫೯:18 |
ಯೆಶಾಯನ ೫೯:19 |
ಯೆಶಾಯನ ೫೯:20 |
ಯೆಶಾಯನ ೫೯:21 |
ಯೆಶಾಯನ 1 / ಯೆಶ 1 |
ಯೆಶಾಯನ 2 / ಯೆಶ 2 |
ಯೆಶಾಯನ 3 / ಯೆಶ 3 |
ಯೆಶಾಯನ 4 / ಯೆಶ 4 |
ಯೆಶಾಯನ 5 / ಯೆಶ 5 |
ಯೆಶಾಯನ 6 / ಯೆಶ 6 |
ಯೆಶಾಯನ 7 / ಯೆಶ 7 |
ಯೆಶಾಯನ 8 / ಯೆಶ 8 |
ಯೆಶಾಯನ 9 / ಯೆಶ 9 |
ಯೆಶಾಯನ 10 / ಯೆಶ 10 |
ಯೆಶಾಯನ 11 / ಯೆಶ 11 |
ಯೆಶಾಯನ 12 / ಯೆಶ 12 |
ಯೆಶಾಯನ 13 / ಯೆಶ 13 |
ಯೆಶಾಯನ 14 / ಯೆಶ 14 |
ಯೆಶಾಯನ 15 / ಯೆಶ 15 |
ಯೆಶಾಯನ 16 / ಯೆಶ 16 |
ಯೆಶಾಯನ 17 / ಯೆಶ 17 |
ಯೆಶಾಯನ 18 / ಯೆಶ 18 |
ಯೆಶಾಯನ 19 / ಯೆಶ 19 |
ಯೆಶಾಯನ 20 / ಯೆಶ 20 |
ಯೆಶಾಯನ 21 / ಯೆಶ 21 |
ಯೆಶಾಯನ 22 / ಯೆಶ 22 |
ಯೆಶಾಯನ 23 / ಯೆಶ 23 |
ಯೆಶಾಯನ 24 / ಯೆಶ 24 |
ಯೆಶಾಯನ 25 / ಯೆಶ 25 |
ಯೆಶಾಯನ 26 / ಯೆಶ 26 |
ಯೆಶಾಯನ 27 / ಯೆಶ 27 |
ಯೆಶಾಯನ 28 / ಯೆಶ 28 |
ಯೆಶಾಯನ 29 / ಯೆಶ 29 |
ಯೆಶಾಯನ 30 / ಯೆಶ 30 |
ಯೆಶಾಯನ 31 / ಯೆಶ 31 |
ಯೆಶಾಯನ 32 / ಯೆಶ 32 |
ಯೆಶಾಯನ 33 / ಯೆಶ 33 |
ಯೆಶಾಯನ 34 / ಯೆಶ 34 |
ಯೆಶಾಯನ 35 / ಯೆಶ 35 |
ಯೆಶಾಯನ 36 / ಯೆಶ 36 |
ಯೆಶಾಯನ 37 / ಯೆಶ 37 |
ಯೆಶಾಯನ 38 / ಯೆಶ 38 |
ಯೆಶಾಯನ 39 / ಯೆಶ 39 |
ಯೆಶಾಯನ 40 / ಯೆಶ 40 |
ಯೆಶಾಯನ 41 / ಯೆಶ 41 |
ಯೆಶಾಯನ 42 / ಯೆಶ 42 |
ಯೆಶಾಯನ 43 / ಯೆಶ 43 |
ಯೆಶಾಯನ 44 / ಯೆಶ 44 |
ಯೆಶಾಯನ 45 / ಯೆಶ 45 |
ಯೆಶಾಯನ 46 / ಯೆಶ 46 |
ಯೆಶಾಯನ 47 / ಯೆಶ 47 |
ಯೆಶಾಯನ 48 / ಯೆಶ 48 |
ಯೆಶಾಯನ 49 / ಯೆಶ 49 |
ಯೆಶಾಯನ 50 / ಯೆಶ 50 |
ಯೆಶಾಯನ 51 / ಯೆಶ 51 |
ಯೆಶಾಯನ 52 / ಯೆಶ 52 |
ಯೆಶಾಯನ 53 / ಯೆಶ 53 |
ಯೆಶಾಯನ 54 / ಯೆಶ 54 |
ಯೆಶಾಯನ 55 / ಯೆಶ 55 |
ಯೆಶಾಯನ 56 / ಯೆಶ 56 |
ಯೆಶಾಯನ 57 / ಯೆಶ 57 |
ಯೆಶಾಯನ 58 / ಯೆಶ 58 |
ಯೆಶಾಯನ 59 / ಯೆಶ 59 |
ಯೆಶಾಯನ 60 / ಯೆಶ 60 |
ಯೆಶಾಯನ 61 / ಯೆಶ 61 |
ಯೆಶಾಯನ 62 / ಯೆಶ 62 |
ಯೆಶಾಯನ 63 / ಯೆಶ 63 |
ಯೆಶಾಯನ 64 / ಯೆಶ 64 |
ಯೆಶಾಯನ 65 / ಯೆಶ 65 |
ಯೆಶಾಯನ 66 / ಯೆಶ 66 |
|
|
|
|
|