೧ |
ಎಚ್ಚರಗೊಳ್ಳು, ಎಚ್ಚರಗೊಳ್ಳು ಓ ಸಿಯೋನೇ, ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ. ಧರಿಸಿಕೊ ನಿನ್ನ ಚಂದದ ಉಡುಪನು ನಿನ್ನೊಳಗೆ ಪ್ರವೇಶಿಸರು ಇನ್ನು ಅಪವಿತ್ರರು, ಅನ್ಯಧರ್ಮೀಯರು. |
೨ |
ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ, ಕಿತ್ತುಬಿಡು ಬಂಧನವನು ನಿನ್ನ ಕುತ್ತಿಗೆಯಿಂದ ಸಿಂಹಾಸನಾರೂಢಳಾಗು ಜೆರುಸಲೇಮೆ ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ! |
೩ |
ಏಕೆಂದರೆ ಸರ್ವೇಶ್ವರ ಹೀಗೆಂದು ಹೇಳಿದ್ದಾರೆ - ‘ಬೆಲೆಯಿಲ್ಲದೆ ಮಾರಲ್ಪಟ್ಟಿರಿ; ಹಣವಿಲ್ಲದೆ ಮುಕ್ತರಾಗುವಿರಿ.’ |
೪ |
ದೇವರಾದ ಸರ್ವೇಶ್ವರ ಹೇಳಿಕೊಳ್ಳುವುದೇನೆಂದರೆ: “ಹಿಂದೆ ನನ್ನ ಜನರು ಈಜಿಪ್ಟಿನಲ್ಲೆ ಇಳಿದುಕೊಳ್ಳಲು ಹೋದರು. ಕೊನೆಗೆ ಅಸ್ಸೀರಿಯರು ಅವರನ್ನು ನಿಷ್ಕಾರಣವಾಗಿ ಹಿಂಸಿಸಿದರು. |
೫ |
ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ. |
೬ |
ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ವವನ್ನು ಒಂದು ದಿನ ಅರಿತುಕೊಳ್ಳುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ. |
೭ |
ಶುಭಕರ ಸಮಾಚಾರವನು ತರುವ ಶಾಂತಿಸಮಾಧಾನವನು ಸಾರುವ ಸಂತಸದ ಸಂದೇಶವನು ಅರುಹುವ ಜೀವೋದ್ಧಾರವನು ಪ್ರಕಟಿಸುವ ‘ನಿನ್ನ ದೇವರೇ ರಾಜ್ಯಭಾರ ವಹಿಸುವ ಎಂದು ಸಿಯೋನಿಗೆ ತಿಳಿಯಪಡಿಸುತ್ತ ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಮಗಳು ಎಷ್ಟೊಂದು ಸುಂದರ! |
೮ |
ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು: ಸರ್ವೇಶ್ವರ ಸಿಯೋನಿಗೆ ಮರಳಿಬರುತ್ತಿರುವುದನು ಕಣ್ಣಾರೆ ಕಂಡು ಕೂಡಿಹಾಡುತ್ತಿಹರು ಗೀತವನು. |
೯ |
ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ, ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು. |
೧೦ |
ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆ ಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು. |
೧೧ |
ಹೊರಡಿರಿ, ನೀವು ಹೊರಡಿರಿ ಬಾಬಿಲೋನಿನಿಂದ ಅಶುದ್ಧವಾದುವನ್ನು ಮುಟ್ಟದೆ ತೆರಳಿ ಅಲ್ಲಿಂದ. ಸರ್ವೇಶ್ವರನ ಆರಾಧನಾ ಉಪಕರಣಗಳನು ಹೊರುವವರೇ, ನಿಮ್ಮನು ನೀವೆ ಪರಿಶುದ್ಧವಾಗಿಸಿರಿಕೊಂಡು ತೆರಳಿ ಹೊರಗೆ. |
೧೨ |
ಅವಸರವಾಗಿ ನೀವು ಹೊರಡಬೇಕಿಲ್ಲ ನೆಗೆನೆಗೆದು ನೀವು ಓಡಬೇಕಿಲ್ಲ. ಹೋಗುವನು ಸರ್ವೇಶ್ವರ ನಿಮಗೆ ಮುಂಬಲವಾಗಿ, ನಿಮಗಿರುವನು ಇಸ್ರಯೇಲ್ ದೇವರು ಹಿಂಬಲವಾಗಿ. |
೧೩ |
ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ. |
೧೪ |
ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. |
೧೫ |
ಅಂತೆಯೇ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. |
Kannada Bible (KNCL) 2016 |
No Data |
ಯೆಶಾಯನ ೫೨:1 |
ಯೆಶಾಯನ ೫೨:2 |
ಯೆಶಾಯನ ೫೨:3 |
ಯೆಶಾಯನ ೫೨:4 |
ಯೆಶಾಯನ ೫೨:5 |
ಯೆಶಾಯನ ೫೨:6 |
ಯೆಶಾಯನ ೫೨:7 |
ಯೆಶಾಯನ ೫೨:8 |
ಯೆಶಾಯನ ೫೨:9 |
ಯೆಶಾಯನ ೫೨:10 |
ಯೆಶಾಯನ ೫೨:11 |
ಯೆಶಾಯನ ೫೨:12 |
ಯೆಶಾಯನ ೫೨:13 |
ಯೆಶಾಯನ ೫೨:14 |
ಯೆಶಾಯನ ೫೨:15 |
ಯೆಶಾಯನ 1 / ಯೆಶ 1 |
ಯೆಶಾಯನ 2 / ಯೆಶ 2 |
ಯೆಶಾಯನ 3 / ಯೆಶ 3 |
ಯೆಶಾಯನ 4 / ಯೆಶ 4 |
ಯೆಶಾಯನ 5 / ಯೆಶ 5 |
ಯೆಶಾಯನ 6 / ಯೆಶ 6 |
ಯೆಶಾಯನ 7 / ಯೆಶ 7 |
ಯೆಶಾಯನ 8 / ಯೆಶ 8 |
ಯೆಶಾಯನ 9 / ಯೆಶ 9 |
ಯೆಶಾಯನ 10 / ಯೆಶ 10 |
ಯೆಶಾಯನ 11 / ಯೆಶ 11 |
ಯೆಶಾಯನ 12 / ಯೆಶ 12 |
ಯೆಶಾಯನ 13 / ಯೆಶ 13 |
ಯೆಶಾಯನ 14 / ಯೆಶ 14 |
ಯೆಶಾಯನ 15 / ಯೆಶ 15 |
ಯೆಶಾಯನ 16 / ಯೆಶ 16 |
ಯೆಶಾಯನ 17 / ಯೆಶ 17 |
ಯೆಶಾಯನ 18 / ಯೆಶ 18 |
ಯೆಶಾಯನ 19 / ಯೆಶ 19 |
ಯೆಶಾಯನ 20 / ಯೆಶ 20 |
ಯೆಶಾಯನ 21 / ಯೆಶ 21 |
ಯೆಶಾಯನ 22 / ಯೆಶ 22 |
ಯೆಶಾಯನ 23 / ಯೆಶ 23 |
ಯೆಶಾಯನ 24 / ಯೆಶ 24 |
ಯೆಶಾಯನ 25 / ಯೆಶ 25 |
ಯೆಶಾಯನ 26 / ಯೆಶ 26 |
ಯೆಶಾಯನ 27 / ಯೆಶ 27 |
ಯೆಶಾಯನ 28 / ಯೆಶ 28 |
ಯೆಶಾಯನ 29 / ಯೆಶ 29 |
ಯೆಶಾಯನ 30 / ಯೆಶ 30 |
ಯೆಶಾಯನ 31 / ಯೆಶ 31 |
ಯೆಶಾಯನ 32 / ಯೆಶ 32 |
ಯೆಶಾಯನ 33 / ಯೆಶ 33 |
ಯೆಶಾಯನ 34 / ಯೆಶ 34 |
ಯೆಶಾಯನ 35 / ಯೆಶ 35 |
ಯೆಶಾಯನ 36 / ಯೆಶ 36 |
ಯೆಶಾಯನ 37 / ಯೆಶ 37 |
ಯೆಶಾಯನ 38 / ಯೆಶ 38 |
ಯೆಶಾಯನ 39 / ಯೆಶ 39 |
ಯೆಶಾಯನ 40 / ಯೆಶ 40 |
ಯೆಶಾಯನ 41 / ಯೆಶ 41 |
ಯೆಶಾಯನ 42 / ಯೆಶ 42 |
ಯೆಶಾಯನ 43 / ಯೆಶ 43 |
ಯೆಶಾಯನ 44 / ಯೆಶ 44 |
ಯೆಶಾಯನ 45 / ಯೆಶ 45 |
ಯೆಶಾಯನ 46 / ಯೆಶ 46 |
ಯೆಶಾಯನ 47 / ಯೆಶ 47 |
ಯೆಶಾಯನ 48 / ಯೆಶ 48 |
ಯೆಶಾಯನ 49 / ಯೆಶ 49 |
ಯೆಶಾಯನ 50 / ಯೆಶ 50 |
ಯೆಶಾಯನ 51 / ಯೆಶ 51 |
ಯೆಶಾಯನ 52 / ಯೆಶ 52 |
ಯೆಶಾಯನ 53 / ಯೆಶ 53 |
ಯೆಶಾಯನ 54 / ಯೆಶ 54 |
ಯೆಶಾಯನ 55 / ಯೆಶ 55 |
ಯೆಶಾಯನ 56 / ಯೆಶ 56 |
ಯೆಶಾಯನ 57 / ಯೆಶ 57 |
ಯೆಶಾಯನ 58 / ಯೆಶ 58 |
ಯೆಶಾಯನ 59 / ಯೆಶ 59 |
ಯೆಶಾಯನ 60 / ಯೆಶ 60 |
ಯೆಶಾಯನ 61 / ಯೆಶ 61 |
ಯೆಶಾಯನ 62 / ಯೆಶ 62 |
ಯೆಶಾಯನ 63 / ಯೆಶ 63 |
ಯೆಶಾಯನ 64 / ಯೆಶ 64 |
ಯೆಶಾಯನ 65 / ಯೆಶ 65 |
ಯೆಶಾಯನ 66 / ಯೆಶ 66 |
|
|
|
|
|